For Quick Alerts
  ALLOW NOTIFICATIONS  
  For Daily Alerts

  ಎಲ್ಲಾ ತಂದಿಟ್ಟು ಆಟ ನೋಡುತ್ತಿರುವ ಆ ನಿರ್ಮಾಪಕ ಎಲ್ಲಿದ್ದಾನೆ?

  By ಫಿಲ್ಮ್ ಡೆಸ್ಕ್
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ನವರಸನಾಯಕ ಜಗ್ಗೇಶ್ ವಿರುದ್ಧ ಕೆಂಡಕಾರುತ್ತಿದ್ದಾರೆ. ಚಿತ್ರೀಕರಣದಲ್ಲಿದ್ದ ಜಗ್ಗೇಶ್ ಅವರ ಮೇಲೆ ಮುತ್ತಿಗೆ ಹಾಕಿ ತರಾಟೆ ತೆಗೆದುಕೊಂಡ ಅಭಿಮಾನಿಗಳು ಸರಿಯಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಘಟನೆ ಇಡೀ ಚಿತ್ರರಂಗಕ್ಕೆ ಶಾಕ್ ನೀಡಿದೆ.

  ದರ್ಶನ್ ಅಭಿಮಾನಿಗಳು ಮಾಡಿದ್ದು ಎಷ್ಟು ಸರಿ

  ಇದೀಗ ಈ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಿದೆ. ಚಿತ್ರರಂಗದಲ್ಲಿ 40 ವರ್ಷಗಳಿಂದ ಕಲಾಸೇವೆ ಮಾಡಿಕೊಂಡು ಬಂದ ಒಬ್ಬ ಹಿರಿಯ ನಟನನ್ನು ಹೀಗೆ ಅವಮಾನಿಸಬಾರದು ಎನ್ನುವ ಮಾತುಗಳು ಕೇಳಿಬರುತ್ತಿದೆ. ಇಬ್ಬರ ನಡುವೆ ಏನೇ ಮನಸ್ತಾಪವಿದ್ದರು ಕುಳಿತು ಮಾತನಾಡಬಹುದಿತ್ತು, ಆದರೆ ಹೀಗೆಲ್ಲ ಅವಮಾನ ಮಾಡಬಾರದು ಎನ್ನುತ್ತಿದ್ದಾರೆ.

  ದರ್ಶನ್ ಫ್ಯಾನ್ಸ್-ಜಗ್ಗೇಶ್ ವಿವಾದ: ಫಿಲಂ ಚೇಂಬರ್‌ ಮೊರೆ ಹೋದ ಜಗ್ಗೇಶ್ ಅಭಿಮಾನಿಗಳು

  ಇಷ್ಟಕ್ಕೆಲ್ಲ ಕಾರಣವಾಗಿದ್ದು ಒಂದು ಆಡಿಯೋ ಕ್ಲಿಪ್. ಇನ್ಸಪೆಕ್ಟರ್ ವಿಕ್ರಂ ಸಿನಿಮಾದ ನಿರ್ಮಾಪಕ ವಿಖ್ಯಾತ್ ಎಂದು ಹೇಳಲಾಗುತ್ತಿರುವ ವ್ಯಕ್ತಿಯ ಜೊತೆ ನವರಸನಾಯಕ ಜಗ್ಗೇಶ್ ಮಾತನಾಡಿರುವ ಆಡಿಯೋ. ಅಷ್ಟಕ್ಕೂ ಇಬ್ಬರು ಮೊಬೈಲ್ ನಲ್ಲಿ ಮಾತನಾಡಿರುವ ಮಾತುಗಳು ಸೋರಿಕೆ ಆಗಿದ್ದು ಹೇಗೆ? ಆಡಿಯೋ ಕ್ಲಿಪ್ ಲೀಕ್ ಮಾಡಿ ವೈರಲ್ ಮಾಡಿದ್ದು ಯಾರು? ಎನ್ನುವ ಪ್ರಶ್ನೆ ಮೂಡಿದೆ. ಮುಂದೆ ಓದಿ..

  ಆಡಿಯೋ ಲೀಕ್ ಮಾಡಿದ್ದು ಯಾರು?

  ಆಡಿಯೋ ಲೀಕ್ ಮಾಡಿದ್ದು ಯಾರು?

  ಈ ಆಡಿಯೋವನ್ನು ಜಗ್ಗೇಶ್ ಲೀಕ್ ಮಾಡಿರೋಕೆ ಸಾಧ್ಯವಿಲ್ಲ. ಯಾಕೆಂದ್ರೆ ಅವರು ಈಗಾಗಲೇ ಹೇಳಿದ್ದಾರೆ, ಅಲ್ಲದೆ ತಾವೆ ಲೀಕ್ ಮಾಡಿ ಬುಡಕ್ಕೆ ಬೆಂಕಿ ಇಟ್ಟುಕೊಳ್ಳುವಂತವರಲ್ಲ. ಹಾಗೆಂದ ಮೇಲೆ ಆಡಿಯೋ ಲೀಕ್ ಆಗಿದ್ದು, ಜಗ್ಗೇಶ್ ಜೊತೆ ಮಾತನಾಡಿದ ನಿರ್ಮಾಪಕ ವಿಖ್ಯಾತ್ ಎಂದು ಹೇಳಲಾಗುತ್ತಿರುವ ವ್ಯಕ್ತಿಯೇ ಆಗಿರಬೇಕು. ಮತ್ಯಾರು ಮಾಡಲು ಸಾಧ್ಯವಿಲ್ಲ.

  ವಿಖ್ಯಾತ್ ಮೌನವಾಗಿರುವುದೇಕೆ?

  ವಿಖ್ಯಾತ್ ಮೌನವಾಗಿರುವುದೇಕೆ?

  ಆಡಿಯೋ ಲೀಕ್ ಆದಾಗಿನಿಂದ ವಿಖ್ಯಾತ್ ಹೆಸರು ಕೇಳಿಬರುತ್ತಿದ್ದರು, ಇದ್ಯಾವುದಕ್ಕೂ ಸಂಬಂಧನೆ ಇಲ್ಲ ಎನ್ನುವ ಹಾಗೆ ಸೈಲೆಂಟ್ ಆಗಿದ್ದಾರೆ. ಇದುವರೆಗೂ ಯಾರ ಕೈಗೂ ಸಿಗದೆ, ಯಾವುದೇ ಪ್ರತಿಕ್ರಿಯೆಯೂ ನೀಡಿದೆ ಭೂಗತರಾಗಿದ್ದಾರೆ. ಇಬ್ಬರು ಸ್ಟಾರ್ ನಟರ ನಡುವೆ ತಂದಿಟ್ಟು, ಹೊತ್ತಿ ಉರಿಯುತ್ತಿರುವ ಬೆಂಕಿಯಲ್ಲಿ ಮೈ ಕಾಯಿಸುತ್ತಾ ಆನಂದಿಸುತ್ತಿದ್ದಾರೆ.

  ಸ್ಟಾರ್ ನಟರ ನಡುವೆ ತಂದಿಟ್ಟು ಸಾಧಿಸಿದ್ದಾದರೂ ಏನು?

  ಸ್ಟಾರ್ ನಟರ ನಡುವೆ ತಂದಿಟ್ಟು ಸಾಧಿಸಿದ್ದಾದರೂ ಏನು?

  ಹಿರಿಯನಟ ಜಗ್ಗೇಶ್ ಏನೋ ಸಲಹೆ ನೀಡಲು ಹೋಗಿ, ರಾತ್ರಿ ಹೊತ್ತಲ್ಲಿ ಏನೇನೊ ಮಾತನಾಡಿರಬಹುದು, ಆದರೆ ಆ ಮಾತುಗಳನ್ನು ಲೀಕ್ ಮಾಡಿ ಇಷ್ಟೆಲ್ಲಾ ರಾದ್ದಾಂತ ಮಾಡುವ ಅವಶ್ಯಕತೆ ಇತ್ತಾ? ಶಾಂತವಾಗಿದ್ದ ಚಿತ್ರರಂಗಕ್ಕೆ ಬೆಂಕಿ ಇಟ್ಟು ಪಡೆದುಕೊಂಡಿದ್ದಾದರು ಏನು? ಎನ್ನುವ ಮಾತುಗಳು ಕೇಳಿಬರುತ್ತಿದೆ.

  ಕನ್ನಡ ಚಿತ್ರರಂಗ ಎತ್ತ ಸಾಗುತ್ತಿದೆ?

  ಕನ್ನಡ ಚಿತ್ರರಂಗ ಎತ್ತ ಸಾಗುತ್ತಿದೆ?

  ಕನ್ನಡ ಚಿತ್ರರಂಗ ಈಗ ಕೇವಲ ನಮ್ಮ ರಾಜ್ಯದಲ್ಲಿ ಮಾತ್ರವಲ್ಲ ಬೇರೆ ಭಾಷೆಯ ಸಿನಿಮಾರಂಗದ ವಿರುದ್ಧ ಹೋರಾಡಬೇಕಿದೆ. ಉತ್ತಮ ಸಿನಿಮಾಗಳನ್ನು ನೀಡದಿದ್ದರೆ ಪರಭಾಷೆಯ ಸಿನಿಮಾಗಳ ಅಲೆಯಲ್ಲಿ ಕೊಚ್ಚಿಹೋಗುವಂತ ಸ್ಥಿತಿ ಇದೆ. ಇಂಥ ಸಮಯದಲ್ಲಿ ಗುಣಮಟ್ಟ ಸಿನಿಮಾಗಳನ್ನು ನೀಡುವ ಬಗ್ಗೆ ಆಲೋಚಿಸುವ ಬದಲು ಇಬ್ಬರು ಸ್ಟಾರ್ ನಟರ ನಡುವೆ ತಂದಿಟ್ಟು, ಚಿತ್ರರಂಗದ ನೆಮ್ಮದಿ ಹಾಳು ಮಾಡಿ ಏನನ್ನು ಸಾಧಿಸುತ್ತಿದ್ದಾರೆ? ಕನ್ನಡ ಚಿತ್ರರಂಗ ಎತ್ತ ಸಾಗುತ್ತಿದೆ? ಎನ್ನುವ ಆತಂಕ ಶುರುವಾಗಿದೆ.

  ಇಂಥವರನ್ನು ಕನ್ನಡ ಪ್ರೇಕ್ಷಕರು ಬೆಳೆಸಬೇಕಾ? ಆಡಿಯೋ ಲೀಕ್ ಮಾಡಿ ಗಳಿಸಿದ್ದಾದರೂ ಏನು ಎನ್ನುವುದನ್ನು ಅವರೇ ಅರ್ಥಮಾಡಿಕೊಳ್ಳಬೇಕು.

  English summary
  Where is the producer who is the responsible for Jaggesh and Darshan Fans Controversy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X