ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ, ಅಗ್ನಿಪರೀಕ್ಷೆ!
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ತಮ್ಮ ಅಭಿನಯದ 'ಕಿಲ್ಲಿಂಗ್ ವೀರಪ್ಪನ್' ಹಾಗೂ 'ಶಿವಲಿಂಗ' ಎಂಬ ಎರಡು ಸಿನಿಮಾಗಳ ಶೂಟಿಂಗ್ ಮುಗಿಸಿದ್ದಾರೆ. ಇದೀಗ ವಿಷ್ಯಾ ಏನಪ್ಪಾ ಅಂದ್ರೆ ಯಾವ ಸಿನಿಮಾ ಮೊದಲು ರಿಲೀಸ್ ಆಗುತ್ತೆ ಅನ್ನೋದು ಗಾಂಧಿನಗರದ ಮಂದಿಯ ಪ್ರಶ್ನೆ.
ಈ ಮೊದಲು 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಬಿಡುಗಡೆ ದಿನಾಂಕ ಪಕ್ಕಾ ಆಗಿದ್ರು, ಕೂಡ ತಡೆಯಾಜ್ಞೆ ಆಗಿರುವುದರಿಂದ ಬಿಡುಗಡೆ ಕೊಂಚ ಡಿಲೇ ಆಗುತ್ತಿದೆ. ಈ ನಡುವೆ ಶಿವಣ್ಣ ಅವರು 'ಶಿವಲಿಂಗ' ಚಿತ್ರವನ್ನು ಕೂಡ ಸದ್ದಿಲ್ಲದೇ ಮುಗಿಸಿದ್ದು, ಯಾವ ಸಿನಿಮಾ ಫಸ್ಟ್ ರಿಲೀಸ್ ಆಗುತ್ತೆ ಅನ್ನೋದು ಅಭಿಮಾನಿಗಳ ಪ್ರಶ್ನೆ.
ಹಿರಿಯ ನಿರ್ದೇಶಕ ಪಿ.ವಾಸು ಅವರು ಆಕ್ಷನ್-ಕಟ್ ಹೇಳಿರುವ 'ಶಿವಲಿಂಗ' ಚಿತ್ರದಲ್ಲಿ ಶಿವಣ್ಣ ಅವರಿಗೆ ನಾಯಕಿಯಾಗಿ ವೇದಿಕಾ ಕಾಣಿಸಿಕೊಂಡಿದ್ದಾರೆ. ಇನ್ನು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಆಕ್ಷನ್-ಕಟ್ ಹೇಳಿರುವ 'ಕಿಲ್ಲಿಂಗ್ ವೀರಪ್ಪನ್' ಚಿತ್ರದಲ್ಲಿ ಬಹುತಾರಾಗಣವಿದ್ದು, ಕುಖ್ಯಾತ ಕಾಡುಗಳ್ಳ ವೀರಪ್ಪನ್ ನಿಜ ಜೀವನಚರಿತ್ರೆಯಾಧರಿತ ಕಥೆಯಾಗಿದೆ.['ಕಿಲ್ಲಿಂಗ್ ವೀರಪ್ಪನ್' ಚಿತ್ರ ಬಿಡುಗಡೆಗೆ ತಡೆಯಾಜ್ಞೆ]
ಅಂದಹಾಗೆ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ನಂತರ ಸೆಟ್ಟೇರಿದ 'ಶಿವಲಿಂಗ' ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸೆನ್ಸಾರ್ ಮಂಡಳಿಯ ಅರ್ಹತಾ ಪ್ರಮಾಣಪತ್ರಕ್ಕಾಗಿ ಕಾಯುತ್ತಿದೆ.
ಇದೀಗ ಎರಡು ಚಿತ್ರಗಳು ರಿಲೀಸ್ ಗೆ ರೆಡಿಯಾಗಿದ್ದು, ಯಾವ ಚಿತ್ರ ಮೊದಲು ತೆರೆ ಕಾಣಲಿದೆ ಅನ್ನೋದು ಕುತೂಹಲದ ವಿಷಯ. ಒಟ್ನಲ್ಲಿ ಶಿವಣ್ಣ ಅವರು ಒಟ್ಟೊಟ್ಟಿಗೆ ಎರಡು ಅಗ್ನಿಪರೀಕ್ಷೆ ಎದುರಿಸಲಿದ್ದಾರೆ, ಅಂತಾಯ್ತು.


Click it and Unblock the Notifications












