»   » ಪುನೀತ್ 'ಅಂಜನಿಪುತ್ರ'ನ ಸೀಕ್ರೆಟ್ ಇನ್ನೂ ಬಹಿರಂಗ ಆಗಿಲ್ಲ.!

ಪುನೀತ್ 'ಅಂಜನಿಪುತ್ರ'ನ ಸೀಕ್ರೆಟ್ ಇನ್ನೂ ಬಹಿರಂಗ ಆಗಿಲ್ಲ.!

Posted By:
Subscribe to Filmibeat Kannada

'ಅಂಜನಿಪುತ್ರ'.... ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಸಿನಿಮಾ ತೆರೆಗೆ ಬರುವುದಕ್ಕೆ ಸಿದ್ಧವಾಗಿದೆ. ಇದೇ ತಿಂಗಳ (ನವೆಂಬರ್) 24 ರಂದು 'ಅಂಜನಿಪುತ್ರ' ಆಡಿಯೋ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.

ಆಡಿಯೋ ರಿಲೀಸ್ ದಿನಾಂಕ ಫಿಕ್ಸ್ ಮಾಡಿರುವ ಚಿತ್ರತಂಡ ಒಂದು ಸೀಕ್ರೆಟ್ ಮಾತ್ರ ರಿವೀಲ್ ಮಾಡ್ತಿಲ್ಲ.

ಅಂತಹ ಸೀಕ್ರೆಟ್ ಏನು ಅಂತೀರಾ.? 'ಅಂಜನಿಪುತ್ರ' ಸಿನಿಮಾದ ಆಡಿಯೋ ಯಾವ ಕಂಪನಿಯಿಂದ ಬಿಡುಗಡೆ ಮಾಡುತ್ತೆ ಅನ್ನೋದೇ ಈಗ ದೊಡ್ಡ ಸೀಕ್ರೆಟ್ ಆಗಿ ಉಳಿದುಕೊಂಡಿದೆ.

 which audio company release anjaniputra audio

ಪವರ್ ಸ್ಟಾರ್ ತಮ್ಮ ಸ್ವಂತ ಆಡಿಯೋ ಕಂಪನಿಯಲ್ಲೇ 'ಅಂಜನಿಪುತ್ರ' ಸಿನಿಮಾದ ಆಡಿಯೋ ಬಿಡುಗಡೆ ಮಾಡ್ತಾರೆ ಅನ್ನೋ ಸುದ್ದಿ ಚಂದನವನದ ತುಂಬ ಹರಿದಾಡಿತ್ತು. ನಂತರ 'ಟಗರು' ಸಿನಿಮಾದ ಟೀಸರ್ ಲಾಂಚ್ ಟೈಂ ನಲ್ಲಿ 'ಟಗರು' ಚಿತ್ರದ ಮೂಲಕ ಪವರ್ ಸ್ಟಾರ್ ಸ್ವಂತ ಆಡಿಯೋ ಸಂಸ್ಥೆ ಸ್ಟಾರ್ಟ್ ಮಾಡ್ತಾರೆ ಅನ್ನೋದನ್ನ ಸ್ಟೇಜ್ ಮೇಲೆ ಕಾರ್ಯಕ್ರಮದಲ್ಲಿ ಅನೌನ್ಸ್ ಮಾಡಲಾಗಿತ್ತು.

 which audio company release anjaniputra audio

'ಅಂಜನಿಪುತ್ರ' ಸಿನಿಮಾದ ಆಡಿಯೋ ಬಿಡುಗಡೆಗೆ ಇನ್ನು 7 ದಿನವಷ್ಟೇ ಬಾಕಿ ಇದೆ. ಆದ್ರೆ ಆಡಿಯೋ ಕಂಪನಿ ಯಾವುದು ಅನ್ನೋದು ಮಾತ್ರ ನಿಗದಿಯಾಗಿಲ್ಲ. ಕಳೆದ ತಿಂಗಳಲ್ಲಿ ಅಭಿಮಾನಿಗಳೆಲ್ಲಾ ಸೇರಿ 'ಅಂಜನಿಪುತ್ರ' ಚಿತ್ರಕ್ಕಾಗಿ ಮಾಡಿದ ಹಾಡು ಆನಂದ್ ಆಡಿಯೋದಲ್ಲಿ ಬಿಡುಗಡೆಯಾಗಿತ್ತು. ಈ ಹಾಡನ್ನ ನೋಡಿ ಎಲ್ಲರೂ ಆನಂದ್ ಆಡಿಯೋದಲ್ಲಿ ಸಿನಿಮಾ ಹಾಡುಗಳು ಬರುತ್ತೆ ಅನ್ನೋ ಕಲ್ಪನೆಯಲ್ಲಿದ್ರು.

ಆದ್ರೆ, ಪವರ್ ಸ್ಟಾರ್ ಇದಕ್ಕೆಲ್ಲಾ ಬ್ರೇಕ್ ಹಾಕಿ ತಮ್ಮ ಸ್ವಂತ ಕಂಪನಿಯಲ್ಲೇ 'ಅಂಜನಿಪುತ್ರ' ಚಿತ್ರದ ಹಾಡುಗಳನ್ನ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಳ್ತಿದ್ದಾರೆ.

English summary
Which Audio Company will release Anjaniputra Audio

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada