For Quick Alerts
  ALLOW NOTIFICATIONS  
  For Daily Alerts

  ಶಾಸಕ ಜಮೀರ್ ಅಹ್ಮದ್ 50ನೇ ಬರ್ತಡೇಯಲ್ಲಿ ಯಾವೆಲ್ಲ ಬಾಲಿವುಡ್ ಸ್ಟಾರ್ಸ್ ಇದ್ದರು?

  |

  ಡ್ರಗ್ಸ್ ಪ್ರಕರಣದಲ್ಲಿ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಹೆಸರು ತಳುಕು ಹಾಕಿಕೊಂಡಿದೆ. ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ ಡ್ರಗ್ಸ್ ಜಾಲದ ಜೊತೆ ಜಮೀರ್ ಅಹ್ಮದ್‌ಗೆ ನಂಟಿದೆ ಹಾಗೂ ನಟಿ ಸಂಜನಾ ಜೊತೆ ಶ್ರೀಲಂಕಾದ ಕ್ಯಾಸಿನೋಗೆ ಹೋಗಿದ್ದರು ಎಂದು ಆರೋಪಿಸಿದ್ದಾರೆ.

  ಜಮೀರ್ ಅಹ್ಮದ್ ಖಾನ್ ಅವರ 50ನೇ ವರ್ಷದ ಹುಟ್ಟುಹಬ್ಬವನ್ನು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಬಾಲಿವುಡ್ ಖ್ಯಾತ ನಟರು ಭಾಗಿಯಾಗಿದ್ದರು. ಇವರ ಜೊತೆ ಮುಂಬೈನ ಡ್ರಗ್ಸ್ ಕಿಂಗ್ ಪಿನ್ ಇಮ್ತಿಯಾಜ್ ಅಲಿ ಸಹ ಇದ್ದರು ಎಂದು ಸಂಬರ್ಗಿ ದೂರಿದ್ದಾರೆ. ಈ ಸಂಬಂಧ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಾಗಾದ್ರೆ, ಜಮೀರ್ ಅಹ್ಮದ್ ಅವರ 50ನೇ ಹುಟ್ಟುಹಬ್ಬದಲ್ಲಿ ಯಾವೆಲ್ಲ ಬಾಲಿವುಡ್ ಸ್ಟಾರ್ಸ್ ಪಾಲ್ಗೊಂಡಿದ್ದರು? ಮುಂದೆ ಓದಿ....

  ಸಂಜನಾ ಜೊತೆ ಶಾಸಕ ಜಮೀರ್ ಶ್ರೀಲಂಕಾ ಪ್ರವಾಸ ಆರೋಪ: ಪ್ರಶಾಂತ್ ಸಂಬರ್ಗಿ ವಿರುದ್ಧ ಎಫ್‌ಐಆರ್ಸಂಜನಾ ಜೊತೆ ಶಾಸಕ ಜಮೀರ್ ಶ್ರೀಲಂಕಾ ಪ್ರವಾಸ ಆರೋಪ: ಪ್ರಶಾಂತ್ ಸಂಬರ್ಗಿ ವಿರುದ್ಧ ಎಫ್‌ಐಆರ್

  ಸಂಜಯ್ ದತ್ ಬಂದಿದ್ದರು

  ಸಂಜಯ್ ದತ್ ಬಂದಿದ್ದರು

  ಬಾಲಿವುಡ್ ನಟ ಸಂಜಯ್ ದತ್ ಅವರು ಜಮೀರ್ ಅಹ್ಮದ್ ಬರ್ತಡೇಗೆ ಶುಭಕೋರಲು ಬೆಂಗಳೂರಿಗೆ ಆಗಮಿಸಿದ್ದರು. ಜಮೀರ್ ಆಯೋಜಿಸಿದ್ದ ರೋಡ್‌ಶೋನಲ್ಲಿ ಭಾಗವಹಿಸಿದ್ದರು. ದತ್ ಅವರನ್ನು ಶಾಸಕರು ಸನ್ಮಾನಿಸಿದ್ದರು.

  ನಟ ಗೋವಿಂದು ಇದ್ದರು

  ನಟ ಗೋವಿಂದು ಇದ್ದರು

  ಹಿಂದಿ ಚಿತ್ರರಂಗದ ಹಿರಿಯ ನಟ ಗೋವಿಂದು ಸಹ ಜಮೀರ್ ಅಹ್ಮದ್ ಅವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮುಂಬೈನಿಂದ ಬೆಂಗಳೂರಿಗೆ ಆಗಮಿಸಿ ಶುಭಕೋರಿದ ಗೋವಿಂದು ಅವರಿಗೆ ಜಮೀರ್ ಅವರು ಗೌರವಿಸಿದ್ದರು.

  ಶಕ್ತಿ ಕಪೂರ್ ಭಾಗಿ!

  ಶಕ್ತಿ ಕಪೂರ್ ಭಾಗಿ!

  ಬಾಲಿವುಡ್ ಹಿರಿಯ ನಟ ಶಕ್ತಿ ಕಪೂರ್ ಅವರು ಸಹ ಜಮೀರ್ ಅಹ್ಮದ್ ಖಾನ್ ಅವರ ಜನುಮದಿನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಜಗಜೀವನರಾಂ ನಗರದಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದರು.

  ಜಾಕಿ ಶ್ರಾಫ್-ಅಫ್ತಾಬ್ ಶಿವದಾಸನಿ

  ಜಾಕಿ ಶ್ರಾಫ್-ಅಫ್ತಾಬ್ ಶಿವದಾಸನಿ

  ಬಿಟೌನ್ ಇಂಡಸ್ಟ್ರಿಯ ಹಿರಿಯ ನಟ ಜಾಕಿ ಶ್ರಾಫ್ ಹಾಗೂ ಯುವ ನಟ ಅಫ್ತಾಬ್ ಶಿವದಾಸನಿ ಸಹ ಚಾಮರಾಜಪೇಟೆ ಶಾಸಕ ಜಮೀರ್ ಅವರ 50ನೇ ಬರ್ತಡೇಯಲ್ಲಿ ಪಾಲ್ಗೊಂಡಿದ್ದರು. ಜೊತೆಗೆ ಮತ್ತೊಬ್ಬ ಬಟ ಚಂಕಿ ಪಾಂಡೆ ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

  Recommended Video

  ಪತ್ನಿ Revathi ಕಾಲೆಳೆದ Nikhil Kumaraswamy | Oneindia Kannada
  51ನೇ ಹುಟ್ಟುಹಬ್ಬದಲ್ಲಿ ಯಾರೆಲ್ಲ ಭಾಗಿಯಾಗಿದ್ದರು

  51ನೇ ಹುಟ್ಟುಹಬ್ಬದಲ್ಲಿ ಯಾರೆಲ್ಲ ಭಾಗಿಯಾಗಿದ್ದರು

  ಜಮೀರ್ ಅಹ್ಮದ್ ಖಾನ್ ಅವರ 51 ನೇ ಹುಟ್ಟುಹಬ್ಬಕ್ಕೂ ಬಾಲಿವುಡ್ ತಾರೆಯರು ಬಂದಿದ್ದರು. ಸಲ್ಮಾನ್ ಖಾನ್ ಸಹೋದರ ಸೊಹೈಲ್ ಖಾನ್, ಅರ್ಬಾಜ್ ಖಾನ್, ನಟ ಸೋನು ಸೂದ್, ಗುಲ್ಶನ್ ಗ್ರೋವರ್ ಹಾಗೂ ತೆಲುಗು ನಟ ಅಲಿ ಅವರು ಜಮೀರ್ ಜೊತೆ ರೋಡ್ ಶೋನಲ್ಲಿ ಭಾಗವಹಿಸಿದ್ದರು.

  English summary
  Bollywood star Sanjay Dutt, jackie shroff, Chunky Pandey, Shakti Kapoor and Aftab shivdasani were participated in Zameer Ahmed's 50th birthday.
  Saturday, September 12, 2020, 16:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X