ಪುನೀತ್ ಸದ್ಯ ಏನ್ ಮಾಡ್ತಿದ್ದಾರೆ.. ಅವ್ರ ಮುಂದಿನ ಸಿನಿಮಾ ಯಾವ್ದು..?
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಸದ್ಯ ಇರುವ ಪ್ರಶ್ನೆ ಒಂದೇ. ಅದು ಪುನೀತ್ ಈಗ ಏನ್ ಮಾಡ್ತಿದ್ದಾರೆ.. ಅವ್ರ ಮುಂದಿನ ಸಿನಿಮಾ ಯಾವ್ದು..? ಎಂಬುದು. ಯಾಕೆಂದರೆ ಪುನೀತ್ ಈಗ ಯಾವ ಸಿನಿಮಾ ಮಾಡುತ್ತಾರೆ ಎನ್ನುವುದು ಎಲ್ಲರ ದೊಡ್ಡ ಕುತೂಹಲಕ್ಕೆ ಕಾರಣವಾಗಿದೆ.
'ರಾಜಕುಮಾರ' ಸೂಪರ್ ಹಿಟ್ ಆದ ಬಳಿಕ ಪುನೀತ್ ರಾಜ್ ಕುಮಾರ್ 'ಅಂಜನೀಪುತ್ರ' ಸಿನಿಮಾ ಮಾಡಿದರು. ಆದರೆ ಆ ಸಿನಿಮಾದ ಬಳಿಕ ಅಪ್ಪು ಯಾವ ಸಿನಿಮಾ ಮಾಡುತ್ತಿದ್ದಾರೆ ಎನ್ನುವುದು ಯಾರಿಗೂ ತಿಳಿಯದ ವಿಷಯವಾಗಿ ಬಿಟ್ಟಿದೆ. ಪುನೀತ್ ಜೊತೆ ಮುಂದೆ ಸಿನಿಮಾ ಮಾಡುವ ಸಾಲಿನಲ್ಲಿ ಮೂರ್ನಾಲ್ಕು ನಿರ್ದೇಶಕರ ಹೆಸರು ಇದ್ದು ಆ ಪೈಕಿ ಪುನೀತ್ ಯಾರ ಜೊತೆಗೆ ಸಿನಿಮಾ ಮಾಡುತ್ತಾರೆ ಎನ್ನುವ ಪ್ರಶ್ನೆ ಹುಟ್ಟಿದೆ. ಮುಂದೆ ಓದಿ....

ಶಶಾಂಕ್ ಸಿನಿಮಾ
ನಿರ್ದೇಶಕ ಶಶಾಂಕ್ ಜೊತೆಗೆ ಪುನೀತ್ ರಾಜ್ ಕುಮಾರ್ ಒಂದು ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಇತ್ತು. ಆದರೆ ಈವರೆಗೂ ಶಶಾಂಕ್ ಸಿನಿಮಾ ಸೆಟ್ಟೇರಿಲ್ಲ. ಪುನೀತ್ ಕೂಡ ಈ ಬಗ್ಗೆ ಅಧಿಕೃತವಾಗಿ ಮಾತನಾಡಿಲ್ಲ.

ಸಂತೋಷ್ ಆನಂದ್ ರಾಮ್ ಸಿನಿಮಾ
ಪುನೀತ್ 'ರಾಜಕುಮಾರ' ನಂತರ ಮತ್ತೆ ಈಗ ನಿರ್ದೇಶಕ ಸಂತೋಷ್ ಆನಂದ್ ರಾಮ್ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ಆದರೆ ಈ ಸಿನಿಮಾ ಕೂಡ ಯಾವಾಗ ಶುರು ಆಗುತ್ತದೆ ಎಂಬ ಬಗ್ಗೆ ಕ್ಲಾರಿಟಿ ಇಲ್ಲ.

ತಮಿಳು ಡೈರೆಕ್ಟರ್ ಸಿನಿಮಾ
ತಮಿಳಿನ ಖಾತ ನಿರ್ದೇಶಕ ವೆಟ್ರಿಮಾರನ್ ನಟ ಪುನೀತ್ ರಾಜ್ ಕುಮಾರ್ ಗೆ ಒಂದು ಸಿನಿಮಾ ನಿರ್ದೇಶನ ಮಾಡುವ ಮಾತು ಕೇಳಿ ಬಂದಿತ್ತು. ಅಲ್ಲದೆ ಪುನೀತ್ ನಿವಾಸಕ್ಕೆ ಈ ಹಿಂದೆ ಒಮ್ಮೆ ವೆಟ್ರಿಮಾರನ್ ಬೇಟಿ ನೀಡಿದ್ದರು.

ಹೊಸ ನಿರ್ದೇಶಕನ ಜೊತೆ
ದೊಡ್ಡ ನಿರ್ದೇಶಕ ಜೊತೆಗೆ ಪುನೀತ್ ಒಬ್ಬ ಹೊಸ ಡೈರೆಕ್ಟರ್ ಗೆ ಕಾಲ್ ಶೀಟ್ ನೀಡಿದ್ದಾರೆ ಎಂಬ ಸುದ್ದಿ ಇದೆ. ಆ ಬಗ್ಗೆಯೂ ಹೆಚ್ಚು ಸ್ಪಷ್ಟತೆ ಇಲ್ಲ.

ಪುನೀತ್ ಏನ್ ಮಾಡ್ತಿದ್ದಾರೆ?
ಸದ್ಯ ಪುನೀತ್ ರಾಜ್ ಕುಮಾರ್ ಯಾವುದೇ ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿಲ್ಲ. ಕಲರ್ಸ್ ಕನ್ನಡ ವಾಹಿನಿಯ 'ಫ್ಯಾಮಿಲಿ ಪವರ್' ಮತ್ತು ತಮ್ಮ ಪಿ.ಆರ್.ಕೆ ಪ್ರೋಡಕ್ಷನ್ ಕೆಲಸದಲ್ಲಿ ಅಪ್ಪು ಸದ್ಯ ಬಿಜಿ ಇದ್ದಾರೆ.


Click it and Unblock the Notifications











