twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಚಿತ್ರರಂಗದ ಮೊಟ್ಟ ಮೊದಲ ರೀಮೇಕ್ ಚಿತ್ರ ಯಾವುದು?

    |

    ರೀಮೇಕ್ ಸಿನಿಮಾ, ಡಬ್ಬಿಂಗ್ ಸಿನಿಮಾ, ಸ್ವಮೇಕ್ ಸಿನಿಮಾ ಎನ್ನುವುದು ಸಿನಿಇಂಡಸ್ಟ್ರಿಗಳಲ್ಲಿ ಹೆಚ್ಚು ಚರ್ಚೆಯಾಗುತ್ತೆ. ಇತ್ತೀಚಿನ ದಿನಗಳಲ್ಲಿ ಈ ರೀಮೇಕ್ ಚಿತ್ರಗಳಿಗೆ ಭಾರಿ ವಿರೋಧವಿದೆ. ಆಗಾಗಲೇ ಒಂದು ಭಾಷೆಯಲ್ಲಿ ಬಂದ ಚಿತ್ರವನ್ನ ಇನ್ನೊಂದು ಭಾಷೆಯವರು ಯಥಾವತ್ತಾಗಿ ನಕಲು ಮಾಡುವುದನ್ನ ಅನೇಕರು ಖಂಡಿಸಿದ್ದಾರೆ.

    ರೀಮೇಕ್ ಚಿತ್ರಗಳು ಅಂದ್ರೆ ಪ್ರೇಕ್ಷಕರು ಕೂಡ ಥಿಯೇಟರ್ ಗೆ ಹೋಗುವ ಮನಸ್ಸು ಮಾಡುವುದಿಲ್ಲ. ಆದರೂ ನಮ್ಮ ಸಂಸ್ಕೃತಿಗೆ ತಕ್ಕ ಹಾಗೆ ಕಥೆ ಬದಲಾಯಿಸಿದ್ದೇವೆ ಎಂಬ ಮಾತನ್ನ ಹೇಳಿ ಸಿನಿಮಾ ಮಾಡ್ತಾರೆ. ಆದ್ರೆ, ಯಾವ ಬದಲಾವಣೆಯೂ ಕಾಣುವುದಿಲ್ಲ. ಕಾಪಿ ಪೇಸ್ಟ್ ಆಗಿರುವುದೇ ಹೆಚ್ಚು.

    ಈ ವರ್ಷ ರೀಮೇಕ್ ಚಿತ್ರಗಳಿಗೆ ಸೋಲು, ಗೆದ್ದಿದ್ದು ಒಂದೆರೆಡು ಮಾತ್ರ.! ಈ ವರ್ಷ ರೀಮೇಕ್ ಚಿತ್ರಗಳಿಗೆ ಸೋಲು, ಗೆದ್ದಿದ್ದು ಒಂದೆರೆಡು ಮಾತ್ರ.!

    ರೀಮೇಕ್ ಬಗ್ಗೆ ಇಷ್ಟೆಲ್ಲಾ ಮಾತನಾಡುವಾಗ ಕನ್ನಡದಲ್ಲಿ ಮೊಟ್ಟ ಮೊದಲ ಸಲ ರೀಮೇಕ್ ಆದ ಚಿತ್ರ ಯಾವುದು ಎಂಬ ಒಂದು ಸಣ್ಣ ಕುತೂಹಲ ಕಾಡುವುದು ಸಹಜ. ಅದಕ್ಕೆ ಕೆಲವರಿಗೆ ಉತ್ತರ ಗೊತ್ತಿರಬಹುದು. ಇನ್ನು ಕೆಲವರಿಗೆ ಗೊತ್ತಿರುವುದಿಲ್ಲ. ಆದರೂ, ಸಾಮಾನ್ಯ ಜ್ಞಾನಕ್ಕಾಗಿ ಈ ಬಗ್ಗೆ ತಿಳಿದಿರಲಿ. ಕನ್ನಡ ಚಿತ್ರರಂಗದಲ್ಲಿ ಮೊಟ್ಟ ಮೊದಲ ರೀಮೇಕ್ ಚಿತ್ರ ಯಾವುದು? ಮುಂದೆ ಓದಿ....

    'ಬೆಟ್ಟದ ಕಳ್ಳ' ಮೊಟ್ಟ ಮೊದಲ ರೀಮೇಕ್ ಸಿನಿಮಾ

    'ಬೆಟ್ಟದ ಕಳ್ಳ' ಮೊಟ್ಟ ಮೊದಲ ರೀಮೇಕ್ ಸಿನಿಮಾ

    1957ರಲ್ಲಿ ಬಿಡುಗಡೆಯಾಗಿದ್ದ 'ಬೆಟ್ಟದ ಕಳ್ಳ' ಸಿನಿಮಾ, ಕನ್ನಡ ಚಿತ್ರರಂಗದಲ್ಲಿ ಮೂಡಿ ಬಂದ ಮೊಟ್ಟ ಮೊದಲ ರೀಮೇಕ್ ಚಿತ್ರ. ಕಲ್ಯಾಣ್ ಕುಮಾರ್ ನಾಯಕನಾಗಿದ್ದ ಈ ಚಿತ್ರದಲ್ಲಿ ಮೈನಾವತಿ, ಆರ್.ನಾಗೇಂದ್ರ ರಾವ್, ಉದಯ್ ಕುಮಾರ್, ಜಿ.ವಿ ಅಯ್ಯರ್ ಸೇರಿದಂತೆ ಹಲವರು ನಟಿಸಿದ್ದರು.

    ಎಂ.ಜಿ.ಆರ್ ಚಿತ್ರದ ರೀಮೇಕ್

    ಎಂ.ಜಿ.ಆರ್ ಚಿತ್ರದ ರೀಮೇಕ್

    1954ರಲ್ಲಿ ತಮಿಳು ಭಾಷೆಯಲ್ಲಿ ತೆರೆಕಂಡಿದ್ದ 'ಮಲೈಕಳ್ಳನ್' ಸಿನಿಮಾ ಬಂದಿತ್ತು. ತಮಿಳು ಸೂಪರ್ ಸ್ಟಾರ್ ಎಂ.ಜಿ.ಆರ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರು. ಈ ಚಿತ್ರವನ್ನೇ 1957ರಲ್ಲಿ ಕನ್ನಡಕ್ಕೆ ತರಲಾಯಿತು. ಎಂ.ಜಿ.ಆರ್ ಮಾಡಿದ್ದ ಪಾತ್ರದಲ್ಲಿ ಕಲ್ಯಾಣ್ ಕುಮಾರ್ ನಟಿಸಿದ್ದರು. ಜುಲೈ 22 ರಂದೇ ಈ ಸಿನಿಮಾ ಬಿಡುಗಡೆಯಾಗಿತ್ತು.

    ಬಾಲಿವುಡ್ ಗೆ ಹೊರಟ 'ಬೆಲ್ ಬಾಟಮ್', ನಾಯಕ ಯಾರು?ಬಾಲಿವುಡ್ ಗೆ ಹೊರಟ 'ಬೆಲ್ ಬಾಟಮ್', ನಾಯಕ ಯಾರು?

    ಎರಡೂ ಚಿತ್ರಕ್ಕೆ ಒಬ್ಬರೇ ನಿರ್ದೇಶಕರು

    ಎರಡೂ ಚಿತ್ರಕ್ಕೆ ಒಬ್ಬರೇ ನಿರ್ದೇಶಕರು

    ಅಂದ್ಹಾಗೆ, ತಮಿಳಿನಲ್ಲಿ ಮಲೈಕಳ್ಳನ್ ಸಿನಿಮಾ ನಿರ್ದೇಶನ ಮಾಡಿದ್ದ ಎಸ್.ಎಂ ಶ್ರೀರಾಮಲು ನಾಯ್ಡು ಅವರೇ ಕನ್ನಡದಲ್ಲಿ 'ಬೆಟ್ಟದ ಕಳ್ಳ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ದಾಖಲೆಗಳ ಪ್ರಕಾರ, ಈ ಚಿತ್ರವೇ ಕನ್ನಡಕ್ಕೆ ಬಂದ ಮೊಟ್ಟ ಮೊದಲ ರೀಮೇಕ್ ಚಿತ್ರ ಆಗಿದೆ.

    ನಮ್ಮ ಚಿತ್ರಗಳು ಬೇರೆ ಕಡೆ ಹೋಗಿದ್ದವು

    ನಮ್ಮ ಚಿತ್ರಗಳು ಬೇರೆ ಕಡೆ ಹೋಗಿದ್ದವು

    1957ರಲ್ಲಿ ಕನ್ನಡಕ್ಕೆ ಮೊದಲ ರೀಮೇಕ್ ಸಿನಿಮಾ ಬಂದಿದೆ ಎಂದು ಇತಿಹಾಸ ಹೇಳುತ್ತಿದೆ. ವಿಶೇಷ ಏನಪ್ಪಾ ಅಂದ್ರೆ, ಅಷ್ಟರಲ್ಲಾಗಲೇ ಕನ್ನಡ ಸಿನಿಮಾಗಳು ಬೇರೆ ಭಾಷೆಗೆ ರೀಮೇಕ್ ಆಗಿತ್ತು. ಉದಾಹರಣೆಗೆ ಡಾ ರಾಜ್ ಕುಮಾರ್ ಅಭಿನಯದ ಬೇಡರ ಕಣ್ಣಪ್ಪ ಸಿನಿಮಾ 1954ರಲ್ಲಿ ಬಿಡುಗಡೆಯಾಯಿತು. ಈ ಚಿತ್ರ ತಮಿಳಿನಲ್ಲಿ ಡಬ್ ಆಯ್ತು. ತೆಲುಗಿನಲ್ಲಿ ಮತ್ತು ಹಿಂದಿಯಲ್ಲಿ ರೀಮೇಕ್ ಆಯ್ತು. ಇದೊಂದೆ ಸಿನಿಮಾ ಅಲ್ಲ, ಇನ್ನು ಹಲವು ಸಿನಿಮಾಗಳು ರೀಮೇಕ್ ಆಗಿರಬಹುದು.

    English summary
    Which is the first remake movie in kannada? 1957 Kannada movie Bettada Kalla starring Kalyan Kumar and Udaykumar was the first remake movie in Kannada. It was a remake of 1954 Tamil movie Malaikallan starring MGR.
    Tuesday, July 23, 2019, 16:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X