ಈ ವಿಚಾರದಲ್ಲಿ 'ಯುವರತ್ನ' ಕಿಂಗ್: ಈ ದಾಖಲೆ ಬ್ರೇಕ್ ಮಾಡೋದು ಕಷ್ಟ!
ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಸದ್ಯ ಟೀಸರ್ ಗಳ ಹವಾ ಸ್ವಲ್ಪ ಜೋರಾಗಿದೆ. ಡಿ-ಬಾಸ್ ನಟನೆಯ ಒಡೆಯ, ಸುದೀಪ್ ನಟಿಸಿರುವ ಪೈಲ್ವಾನ್, ಧ್ರುವ ಸರ್ಜಾ ನಟನೆಯ ಪೊಗರು, ಹಾಗೂ ದಿ ವಿಲನ್, ಕೆಜಿಎಫ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಯುವರತ್ನ ಚಿತ್ರಗಳ ನಡುವೆ ಟೀಸರ್ ಲೆಕ್ಕಾಚಾರ ನಡೆಯುತ್ತಿದೆ.
ವೀಕ್ಷಣೆ, ಲೈಕ್ಸ್, ಡಿಸ್ ಲೈಕ್ಸ್ ಹಾಗೂ ಕಾಮೆಂಟ್ ಗಳ ವಿಚಾರದಲ್ಲಿ ಯಾವ ಟೀಸರ್ ಮುಂದೆ, ಯಾವ ಟೀಸರ್ ಹಿಂದೆ ಇದೆ ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.
ಈಗಾಗಲೇ ಸುದ್ದಿಯಾಗಿರುವಂತೆ ಅತಿ ಹೆಚ್ಚು ಲೈಕ್ಸ್ ಪಟ್ಟಿಯಲ್ಲಿ ಒಡೆಯ ಸಿನಿಮಾ ದಾಖಲೆ ಬರೆದಿದೆ. ಆದರೆ, ಯುವರತ್ನ ಸಿನಿಮಾದ ಟೀಸರ್ ನಿರ್ಮಿಸಿರುವ ಈ ವಿಶೇಷವಾದ ದಾಖಲೆ ಬ್ರೇಕ್ ಮಾಡಲು ಸದ್ಯಕ್ಕೆ ಕಷ್ಟ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ, ಯುವರತ್ನನ ಹೆಸರಿನಲ್ಲಿರುವ ದಾಖಲೆ ಯಾವುದು? ಮುಂದೆ ಓದಿ....

ಕಾಮೆಂಟ್ನಲ್ಲಿ ಯುವರತ್ನ ಕಿಂಗ್
ವೀಕ್ಷಣೆ, ಲೈಕ್ಸ್ ಬಿಟ್ಟರೆ ಕಾಮೆಂಟ್ಸ್ ಕೂಡ ಈಗ ಪ್ರತಿಷ್ಠೆಯಾಗಿದೆ. ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಕಾಮೆಂಟ್ ಪಡೆದು ಟೀಸರ್ ಯಾವುದು ಎಂದು ಹುಡುಕುತ್ತಾ ಹೋದಾಗ ಪುನೀತ್ ರಾಜ್ ಕುಮಾರ್ ಅವರ ಯುವರತ್ನ ಸಿನಿಮಾ ಟೀಸರ್ ಹೆಸರಿನಲ್ಲಿ ಈ ದಾಖಲೆ ಹೊಂದಿದೆ.

ಎಷ್ಟಿದೆ ಯುವರತ್ನನ ಕಾಮೆಂಟ್ಸ್?
ಅಕ್ಟೋಬರ್ 7 ರಂದು ಹೊಂಬಾಳೆ ಫಿಲಂಸ್ ಯೂಟ್ಯೂಬ್ ನಲ್ಲಿ ಯುವರತ್ನ ಟೀಸರ್ ಬಿಡುಗಡೆಯಾಗಿತ್ತು. ಇದುವರೆಗೂ 136K ಲೈಕ್ಸ್ ಹೊಂದಿರುವ ಈ ಟೀಸರ್ ಬರೋಬ್ಬರಿ 1 ಲಕ್ಷಕ್ಕೂ ಅಧಿಕ (104,909) ಕಾಮೆಂಟ್ ಹೊಂದಿದೆ. ಇಷ್ಟು ದೊಡ್ಡ ಸಂಖ್ಯೆಯ ಕಾಮೆಂಟ್ ಹೊಂದಿರುವ ಇನ್ನೊಂದು ಟೀಸರ್ ಕನ್ನಡ ಇಂಡಸ್ಟ್ರಿಯಲ್ಲಿಲ್ಲ.

'ಒಡೆಯ' ಟೀಸರ್ ಎಷ್ಟಿದೆ?
ನವೆಂಬರ್ 1 ರಂದು ಬಿಡುಗಡೆಯಾಗಿದ್ದ ಒಡೆಯ ಚಿತ್ರದ ಟೀಸರ್ ಗೆ 80 ಸಾವಿರಕ್ಕೂ ಅಧಿಕ (80,470) ಕಾಮೆಂಟ್ ಬಂದಿದೆ. ಈ ಹಿಂದೆ ರಿಲೀಸ್ ಆಗಿದ್ದ ಕುರುಕ್ಷೇತ್ರ ಚಿತ್ರದ ಎರಡು ಟೀಸರ್ ಗಳಿಗೆ ಬಂದಿರುವ ಕಾಮೆಂಟ್ ಒಂದಕ್ಕೆ 2.5 ಸಾವಿರ, ಇನ್ನೊಂದಕ್ಕೆ 3.5 ಸಾವಿರ ಇದೆ.

ಪೈಲ್ವಾನ್ ಟೀಸರ್ ಕಥೆ ಏನು?
ಈ ಹಿಂದೆ ತೆರೆಕಂಡಿದ್ದ ಪೈಲ್ವಾನ್ ಚಿತ್ರದ ಟೀಸರ್ ಗೆ ಅತಿ ಹೆಚ್ಚು ಲೈಕ್ಸ್ ಸಿಕ್ಕಿತ್ತು. ಆಮೇಲೆ ಈ ದಾಖಲೆಯನ್ನ ಒಡೆಯ ಟೀಸರ್ ಬ್ರೇಕ್ ಮಾಡಿದೆ. ಕಾಮೆಂಟ್ ಲೆಕ್ಕಾಚಾರದಲ್ಲಿ ನೋಡಿದ್ರೆ ಪೈಲ್ವಾನ್ ಚಿತ್ರಕ್ಕೆ 19 ಸಾವಿರ ಇದೆ. ದಿ ವಿಲನ್ ಚಿತ್ರದ ಟೀಸರ್ (ಸುದೀಪ್ ವರ್ಷನ್) ಗೆ 7.4 ಸಾವಿರ ಕಾಮೆಂಟ್ ಬಂದಿದೆ.

'ಪೊಗರು' ಟೀಸರ್ ಗೆ ಬಂದಿರುವ ಕಾಮೆಂಟ್?
ಪೊಗರು ಡೈಲಾಗ್ ಟ್ರೈಲರ್ ಮೂಲಕ ಸಖತ್ ಸದ್ದು ಮಾಡುತ್ತಿರುವ ಪೊಗರು ಸಿನಿಮಾ, ಟೀಸರ್ ನಲ್ಲೂ ಹವಾ ಮಾಡಿತ್ತು. ಆದರೆ, ಕಾಮೆಂಟ್ ವಿಚಾರದಲ್ಲಿ ಪೊಗರು ಟೀಸರ್ ಕೂಡ ಹಿಂದೆ ಬಿದ್ದಿದೆ. ಪೊಗರು ಟೀಸರ್ ಗೆ 5.5 ಸಾವಿರ ಕಾಮೆಂಟ್ ಸಿಕ್ಕಿದೆ.

ಕೆಜಿಎಫ್ ಟೀಸರ್ ಲೆಕ್ಕ?
ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಬಹುದೊಡ್ಡ ಯಶಸ್ಸು ಗಳಿಸಿದ ಚಿತ್ರ ಕೆಜಿಎಫ್. ಟ್ರೈಲರ್ 20 ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಕಂಡಿದೆ. ಆದರೆ, ಟೀಸರ್ ನಲ್ಲಿ ಕಾಮೆಂಟ್ ಅಷ್ಟು ದೊಡ್ಡ ಸಂಖ್ಯೆಯಲ್ಲಿಲ್ಲ. ಯೂಟ್ಯೂಬ್ ನಲ್ಲಿ ಕೆಜಿಎಫ್ ಮೇಕಿಂಗ್ ಟೀಸರ್ ಗೆ ಸಿಕ್ಕಿರುವ ಕಾಮೆಂಟ್ 11 ಸಾವಿರ.


Click it and Unblock the Notifications









