ಅಕ್ಟೋಬರ್ 15ಕ್ಕೆ ಥಿಯೇಟರ್ ಓಪನ್: ಯಾವ ಸ್ಟಾರ್ಸ್ ಚಿತ್ರಗಳು ರೆಡಿಯಿದೆ?

ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ಕಾಯುತ್ತಿದ್ದವರಿಗೆ ಕೊನೆಗೂ ಆ ದಿನ ಬಂದೆ ಬಿಡ್ತು. ಸುಮಾರು ಆರು ತಿಂಗಳ ನಂತರ ಈಗ ಸಿನಿಮಾ ಥಿಯೇಟರ್‌ ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಶೇಕಡಾ 50ರಷ್ಟು ಸಿಬ್ಬಂದಿ ಹಾಗೂ ಪ್ರೇಕ್ಷಕರನ್ನೊಳಗೊಂಡಂತೆ ಕಾರ್ಯ ಆರಂಭಿಸಲು ಸೂಚಿಸಲಾಗಿದೆ. ಇದು ಪ್ರೇಕ್ಷಕರಿಗೆ ಖುಷಿ ಕೊಟ್ಟಿದ್ದರೆ ನಿರ್ಮಾಪಕರಿಗೆ ಸವಾಲಾಗಿದೆ.

ಅಕ್ಟೋಬರ್ 15 ರಿಂದ ಚಿತ್ರಮಂದಿರದ ಬಾಗಿಲು ತೆರೆಯಬಹುದು. ಆದ್ರೆ, ಸಿನಿಮಾಗಳು ರಿಲೀಸ್ ಆಗುತ್ತಾ ಎಂಬ ಪ್ರಶ್ನೆ ಮೂಡಿದೆ. ಮೊದಲಿನಂತೆ ಜನ ಥಿಯೇಟರ್‌ಗೆ ಬರ್ತಾರಾ, ಜನರ ಬಗ್ಗೆ ಯೋಚಿಸದೆ ಚಿತ್ರಗಳನ್ನು ಬಿಡುಗಡೆ ಮಾಡ್ತಾರಾ ನಿರ್ಮಾಪಕರು? ಸದ್ಯಕ್ಕೆ ಯಾವ ಚಿತ್ರಗಳು ಶೂಟಿಂಗ್ ಮುಗಿಸಿ ತೆರೆಗೆ ಬರಲು ಸಜ್ಜಾಗಿದೆ? ಮುಂದೆ ಓದಿ...

ದರ್ಶನ್ 'ರಾಬರ್ಟ್'

ದರ್ಶನ್ 'ರಾಬರ್ಟ್'

ಎಲ್ಲ ಅಂದುಕೊಂಡಂತೆ ಆಗಿದ್ದರೆ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗಬೇಕಿತ್ತು. ಸಂಪೂರ್ಣ ಶೂಟಿಂಗ್ ಸಹ ಮುಗಿದಿತ್ತು. ತರುಣ್ ಸುಧೀರ್ ನಿರ್ದೇಶನದ ಈ ಚಿತ್ರವನ್ನು ಉಮಾಪತಿ ಶ್ರೀನಿವಾಸ್ ನಿರ್ಮಿಸಿದ್ದರು. ಇದೀಗ, ಚಿತ್ರಮಂದಿರ ತೆರೆಯಲು ಅನುಮತಿ ನೀಡಿದ ಬಳಿಕ ಈ ಚಿತ್ರದ ಮೇಲೆ ಹೆಚ್ಚು ನಿರೀಕ್ಷೆ ಇದೆ.

ಸುದೀಪ್ 'ಕೋಟಿಗೊಬ್ಬ-3'

ಸುದೀಪ್ 'ಕೋಟಿಗೊಬ್ಬ-3'

ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರೀಕರಣ ಸಹ ಲಾಕ್‌ಡೌನ್ ಮುಂಚಿತವಾಗಿಯೇ ಮುಗಿದಿದೆ. ರಿಲೀಸ್ ಪಟ್ಟಿಯಲ್ಲಿ ಈ ಚಿತ್ರವೂ ಇದೆ. ಸೂರಪ್ಪ ಬಾಬು ಈ ಚಿತ್ರ ನಿರ್ಮಿಸಿದ್ದಾರೆ.

ವಿಜಯ್ 'ಸಲಗ'

ವಿಜಯ್ 'ಸಲಗ'

ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ಸಲಗ ಸಿನಿಮಾ ಚಿತ್ರೀಕರಣ ಬಹುತೇಕ ಮುಗಿದಿದೆ. ಇತ್ತೀಚಿಗಷ್ಟೆ ಹಾಡಿನ ಚಿತ್ರೀಕರಣವೂ ಮುಗಿಸಿದೆ ಚಿತ್ರತಂಡ. ಆಡಿಯೋ, ಪೋಸ್ಟ್ ಪ್ರೊಡಕ್ಷನ್ ಕೆಲಸ ಬಾಕಿಯಿರುವ ಕಾರಣ ಸಲಗ ಇನ್ನು ಸ್ವಲ್ಪ ದಿನ ಕಾಯಬಹುದು.

ಶಿವಣ್ಣನ 'ಭಜರಂಗಿ 2'

ಶಿವಣ್ಣನ 'ಭಜರಂಗಿ 2'

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸುತ್ತಿರುವ ಭಜರಂಗಿ 2 ಸಿನಿಮಾ, ಕಳೆದ ತಿಂಗಳಿನಿಂದ ಮತ್ತೆ ಚಿತ್ರೀಕರಣ ಪ್ರಾರಂಭಿಸಿದೆ. ಇನ್ನೂ ಶೂಟಿಂಗ್ ಹಂತದಲ್ಲಿರುವ ಈ ಚಿತ್ರ ತೆರೆಗೆ ಬರಲು ಸಮಯ ಬೇಕಿದೆ.

ಪುನೀತ್ 'ಯುವರತ್ನ'

ಪುನೀತ್ 'ಯುವರತ್ನ'

ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾದ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಹಾಡುಗಳು ಮುಗಿದರೆ ಈ ಚಿತ್ರೀಕರಣವೂ ಮಗಿದಂತೆ. ಹಾಗ್ನೋಡಿದ್ರೆ, ಈ ಚಿತ್ರದ ಬಿಡುಗಡೆಗೂ ಸಮಯ ಬೇಕಾಗಿದೆ.

ಧ್ರುವ 'ಪೊಗರು'

ಧ್ರುವ 'ಪೊಗರು'

ಸುಮಾರು ಎರಡು ವರ್ಷದಿಂದ ಭಾರಿ ಕುತೂಹಲ ಮೂಡಿಸಿರುವ ಪೊಗರು ಸಿನಿಮಾ ಅಂತಿಮ ಹಂತದಲ್ಲಿದೆ. ಹಾಡುಗಳು ಭರ್ಜರಿ ಹಿಟ್ ಆಗಿದೆ. ಚಿತ್ರೀಕರಣ ಬಹುತೇಕ ಮುಗಿದಿದೆ. ಆದರೆ, ರಿಲೀಸ್ ಬಗ್ಗೆ ಮಾಹಿತಿ ಇಲ್ಲ.

'ಅವತಾರ್ ಪುರುಷ'

'ಅವತಾರ್ ಪುರುಷ'

ನಟ ಶರಣ್ ಅಭಿನಯದ ಅವತಾರ್ ಪುರುಷ ಸಿನಿಮಾ ಸಹ ಚಿತ್ರೀಕರಣದ ಹಂತದಲ್ಲಿದೆ. ಕೊನೆಯ ಹಂತದ ಶೂಟಿಂಗ್ ಇದಾಗಿದ್ದು, ಆದಷ್ಟೂ ಬೇಗ ತೆರೆಗೆ ಬರಲು ತಯಾರಾಗುತ್ತಿದೆ.

ಶೂಟಿಂಗ್‌ನಲ್ಲಿ 'ಕೆಜಿಎಫ್'

ಶೂಟಿಂಗ್‌ನಲ್ಲಿ 'ಕೆಜಿಎಫ್'

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಸಹ ಪುನರಾರಂಭವಾಗಿದೆ. ಕೆಜಿಎಫ್ ಈ ವರ್ಷದಲ್ಲಿ ಬರುವುದು ಬಹುತೇಕ ಅನುಮಾನ. ಮುಂದಿನ ವರ್ಷದ ಆರಂಭದಲ್ಲಿ ಈ ಚಿತ್ರ ನಿರೀಕ್ಷಿಸಬಹುದು.

Recommended Video

SPB Last wish: ನನ್ನ ಸಮಾಧಿಯ ಮೇಲೆ ಹೀಗೆ ಬರೆಸಿ ಅಂತ ಮೊದಲೇ ಹೇಳಿದ್ರು SPBalasubrahmanyam | Filmibeat Kannada
ಶಿವಾರ್ಜುನ-100

ಶಿವಾರ್ಜುನ-100

ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಬೇಕಿದ್ದ ಚಿತ್ರಗಳಿಗೆ ಮೊದಲ ಆಧ್ಯತೆ ನೀಡಲಾಗುವುದು. ಈ ನಡುವೆ ನೂರಾರು ಚಿತ್ರಗಳು ಸೆನ್ಸಾರ್ ಮಂಡಳಿಯಲ್ಲಿದೆ. ಸೆನ್ಸಾರ್ ಮುಗಿಸಿರುವ ಚಿತ್ರಗಳು ಹಲವಿದೆ. ಚಿರಂಜೀವಿ ಸರ್ಜಾ ಅಭಿನಯದ ಶಿವಾರ್ಜುನ ಹಾಗೂ ರಮೇಶ್ ಅರವಿಂದ್ ನಟನೆಯ 100 ಚಿತ್ರಗಳು ಸೆನ್ಸಾರ್ ಮುಗಿಸಿದೆ ಎನ್ನಲಾಗಿದೆ.

More from Filmibeat

English summary
From october 15th film theaters will open. but, which kannada movies are ready to release this year?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X