ಶೂಟಿಂಗ್ ಮುಗಿದಿದೆ, ಬಿಡುಗಡೆ ಆಗ್ಬೇಕಿದೆ: ಯಾವ್ಯಾವ ಚಿತ್ರಗಳು.?
Recommended Video

ಸ್ಯಾಂಡಲ್ ವುಡ್ ನಲ್ಲಿ ಈ ವಾರ ಈ ಸಿನಿಮಾ ಸೆಟ್ಟೇರಿದೆ. ಈ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರದ ಫಸ್ಟ್ ಶೆಡ್ಯೂಲ್ ಮುಗಿತು. ಈ ಸಿನಿಮಾದ ಆಡಿಯೋ ರಿಲೀಸ್ ಈ ವಾರ ಆಗುತ್ತೆ....ಹೀಗೆ ಎಲ್ಲ ರೀತಿಯ ಸುದ್ದಿಗಳನ್ನ ನೋಡ್ತಿವಿ. ಆದ್ರೆ, ಯಾವ ಸಿನಿಮಾ ಶೂಟಿಂಗ್ ಮುಗಿಸಿ ರಿಲೀಸ್ ಗೆ ರೆಡಿಯಾಗಿದೆ ಎಂಬುದು ಅನೇಕರಿಗೆ ಗೊತ್ತಿರಲ್ಲ.
ಬರಿ, ದೊಡ್ಡ ನಟರ ಚಿತ್ರಗಳ ಗುಂಗಲ್ಲೇ ಇರುವ ಚಿತ್ರಪ್ರೇಮಿಗಳು ಹೊಸಬರ ಸಿನಿಮಾಗಳ ಬಗ್ಗೆ ಸ್ವಲ್ಪ ಗಮನಕೊಡಬೇಕಿದೆ. ಸಾಲು ಸಾಲು ಹೊಸಬರ ಸಿನಿಮಾ ಚಿತ್ರೀಕರಣ ಮುಗಿಸಿ, ಬಿಡುಗಡೆಗೆ ಸಜ್ಜಾಗಿದೆ.
ಹಾಗಿದ್ರೆ, ಯಾವೆಲ್ಲ ಸಿನಿಮಾಗಳು ಶೂಟಿಂಗ್ ಗೆ ಕುಂಬಳಕಾಯಿ ಹೊಡೆದಿದೆ. ಯಾವಾಗ ಬಿಡುಗಡೆಯಾಗುತ್ತೆ.? ಆ ಚಿತ್ರಗಳ ಸ್ಪೆಷಾಲಿಟಿಗಳೇನು.? ಎಂಬುದನ್ನ ತಿಳಿಯಲು ಮುಂದೆ ಓದಿ.....

ಮುಂದಿನ ತಿಂಗಳಲ್ಲಿ 'ವಾಸು'
ಅನೀಶ್ ತೇಜೆಶ್ವರ್ ಅಭಿನಯದ 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಚಿತ್ರದ ಮೊದಲ ಪ್ರತಿ ಸಿದ್ಧವಾಗಿದ್ದು, ಮುಂದಿನ ತಿಂಗಳು ಬಿಡುಗಡೆಗೆ ಸಿದ್ಧತೆಗೊಳ್ಳುತ್ತಿದೆ. ಅಜಿತ್ ವಾಸನ್ ಉಗ್ಗಿನ ನಿರ್ದೇಶನ ಮಾಡಿದ್ದು, ಅಜನೀಶ್ ಲೋಕನಾಥ ಸಂಗೀತ ನೀಡಿದ್ದಾರೆ. ಈ ಚಿತ್ರದಲ್ಲಿ ಅನೀಶ್ ತೇಜೇಶ್ವರ್, ನಿಶ್ವಿಕಾ ನಾಯ್ಡು, ಅವಿನಾಶ್, ಮಂಜುನಾಥ ಹೆಗಡೆ, ಅರುಣ ಬಾಲರಾಜ್, ಗಿರೀಶ್, ದೀಪಕ್ ಶೆಟ್ಟಿ ಮುಂತಾದವರಿದ್ದರೆ.

ಸದ್ಯದಲ್ಲೇ 'ಎಂ ಎಲ್ ಎ'
ವೆಂಕಟೇಶ್ ರೆಡ್ಡಿ ಅವರು ನಿರ್ಮಿಸಿರುವ 'ಎಂ ಎಲ್ ಎ' ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ. ಚಿತ್ರ ಸದ್ಯದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಮೌರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದ ನಾಯಕರಾಗಿ ಪ್ರಥಮ್ ಅಭಿನಯಿಸಿದ್ದಾರೆ. ಸೋನಾಲ್ ಮಾಂಟೆರೊ ಈ ಚಿತ್ರದ ನಾಯಕಿ. ಸ್ಪರ್ಷ ರೇಖಾ, ಕುರಿ ಪ್ರತಾಪ್, ರಾಜಶೇಖರ್, ನವೀನ್, ಚಂದ್ರಕಲಾ ಮೋಹನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಮಾಜಿ ಸಚಿವ ಎಚ್.ಎಂ.ರೇವಣ್ಣ ವಿಶೇಷಪಾತ್ರದಲ್ಲಿ ಅಭಿನಯಿಸಿದ್ದಾರೆ.

ಮುಂದಿನ ತಿಂಗಳು 'ಅಸತೋಮ ಸದ್ಗಮಯ'
ಅಶ್ವಿನ್ ಪಿರೇರಾರವರು ನಿರ್ಮಿಸಿ, ರಾಜೇಶ್ ವೇಣೂರ್ ನಿರ್ದೇಶನ ಮಾಡಿರುವ "ಅಸತೋಮ ಸದ್ಗಮಯ' ಸಿನಿಮಾ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ಟ್ರೈಲರ್ ಮತ್ತು ಹಾಡುಗಳ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಭರವಸೆ ಮೂಡಿಸಿರುವ ಈ ಚಿತ್ರ ಜುಲೈ 6 ರಂದು ಬಿಡುಗಡೆಯಾಗುತ್ತಿದೆ. ರಾಧಿಕಾ ಚೇತನ್ ಚೇತನ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದು, 'ಮಾರ್ಚ್ 22' ಚಿತ್ರದಲ್ಲಿ ನಟಿಸಿದ್ದ ಕಿರಣ್ ರಾಜ್ ಈ ಚಿತ್ರದ ನಾಯಕನಾಗಿದ್ದಾರೆ. 'ಬಿಗ್ ಬಾಸ್' ಖ್ಯಾತಿ ಲಾಸ್ಯ ಹಾಗೂ 'ಡ್ರಾಮಾ ಜೂನಿಯರ್ಸ್' ಖ್ಯಾತಿಯ ಚಿತ್ರಾಲಿ ಕೂಡ ಚಿತ್ರದಲ್ಲಿದ್ದಾರೆ.

'ಮೂರ್ಕಲ್ ಎಸ್ಟೇಟ್' ಮುಕ್ತಾಯ
ಶ್ರೀಭದ್ರಾವತಿ ಮೂವೀ ಮೇಕರ್ಸ್ ಲಾಂಛನದಲ್ಲಿ ಕುಮಾರ್ ಎನ್ ಭದ್ರಾವತಿ ಅವರು ನಿರ್ಮಿಸಿರುವ 'ಮೂರ್ಕಲ್ ಎಸ್ಟೇಟ್' ಎಂಬ ಹಾರಾರ್ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಮೈಸೂರು, ಚಿಕ್ಕಮಗಳೂರಿನಲ್ಲಿ ಚಿತ್ರಕ್ಕೆ 35ದಿನಗಳ ಚಿತ್ರೀಕರಣ ನಡೆದಿದೆ. ರವಿಚಂದ್ರನ್ ಹಾಗೂ ಫಣೀಶ್ ಅವರ ಜೊತೆ ಕೆಲಸ ಮಾಡಿದ್ದ ಪ್ರಮೋದ್ ಕುಮಾರ್ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಪ್ರವೀಣ್ ಈ ಚಿತ್ರದ ನಾಯಕನಾಗಿದ್ದು, ಪ್ರಕೃತಿ(ಡೇಸ್ ಆಫ್ ಬೋರಾಪುರ) ನಾಯಕಿಯಾಗಿ ಅಭಿನಯಿಸಿದ್ದಾರೆ

'ಅಭಯಹಸ್ತ' ಚಿತ್ರೀಕರಣ ಪೂರ್ಣ
ಡಾ||ಪಿ.ಸತೀಶ್ ಕುಮಾರ್ ಮೆಹ್ತ ಹಾಗೂ ನವೀನ್ ಪಿ.ಬಿ ಅವರು ನಿರ್ಮಿಸಿರುವ 'ಅಭಯಹಸ್ತ' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ನಿರ್ದೇಶಕ ನವೀನ್ ಅವರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಛಾಯಾಗ್ರಹಣ, ಸಂಕಲನದೊಂದಿಗೆ ಕಲಾ ನಿರ್ದೇಶನವನ್ನು ಮಾಡಿದ್ದಾರೆ. ಈ ಚಿತ್ರದ ನಾಯಕರಾಗಿ `ಪಾರು ಐ ಲವ್ ಯು` ಖ್ಯಾತಿಯ ರಂಜನ್ ನಟಿಸಿದ್ದು, ಅನಿರುದ್ಧ. ಮೀಸೆ ಆಂಜನಪ್ಪ, ನಾಗರಾಜಮೂರ್ತಿ, ಮಂಜು, ಮಂಡ್ಯ ಶ್ರೀಧರ್, ಸರು, ಖುಷಿ ಗೌಡ, ಪೂಜಾ, ಐಶ್ವರ್ಯ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

'ಗ್ರಾಮ' ಶೂಟಿಂಗ್ ಕಂಪ್ಲೀಟ್
ಹೇಮಂತಕುಮಾರ್ ನಿರ್ಮಿಸಿರುವ 'ಗ್ರಾಮ' ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಕರ್ನಾಟಕ- ಆಂದ್ರ ಪ್ರದೇಶ ಗಡಿಯ, ಚಿಂತಾಮಣಿ ಬಳಿಯ ಹಳ್ಳಿಯೊಂದರಲ್ಲೇ ಚಿತ್ರಕ್ಕೆ 23 ದಿನಗಳ ಚಿತ್ರೀಕರಣ ನಡೆದಿದೆ. ಹರಿ ಕಿರಣ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಲಿಖಿತ್ ಸೂರ್ಯ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಲಹರಿ. ಇನ್ನುಳಿದಂತೆ ಶಿಪ್ರ, ಸತ್ಯಪ್ರಕಾಶ್, ಸುಧಾರಾಣಿ, ಸುಮನ್, ಗಾಂಧಿ, ಸಾಧುಕೋಕಿಲ, ಗೋಟುರಿ, ಶ್ರೇಯಸ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಇದೇ ತಿಂಗಳಲ್ಲಿ 'ಕುಲ್ಫೀ'
'ಕುಲ್ಫೀ' ಚಿತ್ರದ ಪ್ರಥಮ ಪ್ರತಿ ಸಿದ್ದವಾಗಿದೆ. ಚಿತ್ರ ಇದೇ ತಿಂಗಳಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರಕ್ಕೆ ಚಿಕ್ಕಮಗಳೂರು ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ವಿಭಿನ್ನ ಕಥಾ ಹಂದರ ಹೊಂದಿರುವ ಈ ಹಾರರ್ ಚಿತ್ರವನ್ನು ಮಂಜು ಹಾಸನ್ ನಿರ್ದೇಶಿಸಿದ್ದಾರೆ. ನರಸಿಂಹ ಮೂರ್ತಿ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಅಭಿಷೇಕ್ ಸಂಗೀತ ನೀಡಿದ್ದಾರೆ. ಚಿತ್ರದ ತಾರಾಬಳಗದಲ್ಲಿ ಸಿನೋಲ್, ಲಾರೆರ್ಸ್, ಗಿರೀಶ್, ದಿಲೀಪ್, ರಮೇಶ್ ಭಟ್, ಹರ್ಷಿತ ಗೌಡ(ತರ್ಲೆ ವಿಲೇಜ್) ಮುಂತಾದವರಿದ್ದಾರೆ.

'ಕಾಲ ಬ್ರಹ್ಮ' ಸಂಪೂರ್ಣ
ಬಣ್ಣ ಬದುಕು ಕ್ರಿಯೆಟಿವ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ 'ಕಾಲ ಬ್ರಹ್ಮ' ಚಿತ್ರ ಮಾತಿನ ಭಾಗದ ಚಿತ್ರೀಕರಣ ಮಾಡಿಕೊಂಡಿದೆ. 33 ದಿವಸಗಳ ಕಾಲ ದೊಡ್ಡಬಳ್ಳಾಪುರ ಸುತ್ತ ಮುತ್ತ ಈ ಮೂಡ ನಂಬಿಕೆ ಹಾಗೂ ಇಂದಿನ ಸ್ಥಿತಿಗತಿ ಬಗ್ಗೆ ಒಳಗೊಂಡಿರುವ ಕಥಾವಸ್ತು ಚಿತ್ರದ ನಿರ್ದೇಶಕರು ಪ್ರತಾಪ್. ನಿರ್ದೇಶಕ ಪ್ರತಾಪ್ ಹಾಗೂ ರಂಗ ಧಾಮ ಕೊತ್ತುರು ನಿರ್ಮಾಪಕರುಗಳು. ನಟ ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಪ್ರತಾಪ್ ಕನ್ನಡ ಚಿತ್ರ ರಂಗಕ್ಕೆ ಪಾದ ಬೆಳಸಿದ್ದಾರೆ. ಪ್ರತಾಪ್ ಅವರಿಗೆ ನಾಯಕಿ ಆಗಿ ಸಹನಾ ಅಭಿನಯಿಸಿದ್ದಾರೆ.

'ಮಳೆ ಬಿಲ್ಲು' ಶೇ. 60 ರಷ್ಟು ಮುಕ್ತಾಯ
ನಾಗರಾಜ್ ಹಿರಿಯೂರು (ಎಲ್.ಎನ್.ಆರ್. ಬ್ರದರ್ಸ್) ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ರಚನೆ ಮಾಡುವುದರೊಂದಿಗೆ ನಿರ್ದೇಶನ ಕೂಡ ಮಾಡಿರುವ ಚಿತ್ರ ‘ಮಳೆ ಬಿಲ್ಲು' ಶೇ. 60 ರಷ್ಟು ಮುಕ್ತಾಯವಾಗಿದೆ. ಶರತ್, ಸಂಜನಾ, ಕಿರ್ಲೋಸ್ಕರ್ ಸತ್ಯ, ನಾರಾಯಣ್, ಮೈಕೋ ನಾಗರಾಜ್, ಮಹದೇವ್, ಚಂದನ್, ಮೀಸೆ ಅಂಜನಪ್ಪ, ಕೃಷ್ಣಮೂರ್ತಿ, ಡಿ.ಕೆ. ಯಶೋಧ, ರವಿತೇಜ, ಹರ್ಷಿತ, ಪ್ರಜ್ಬಲ್, ಸೌಮ್ಯ, ಲಾವಣ್ಯ, ಡಾ. ನಾಗೇಶ್, ಡಾ. ಪುನೀತ್, ಬಸವೇಶ, ಅಭಿಷೇಕ್, ನಿಂಗರಾಜು, ಭೂಪತಿ, ಪ್ರಶಾಂತ್, ಇನ್ನೂ ಮುಂತಾದವರ ತಾರಾಬಳಗವಿದೆ.


Click it and Unblock the Notifications











