ನೂರು ಕೋಟಿ ಕ್ಲಬ್ ಕಡೆ ಮುಖ ಮಾಡಿದ ಅಗ್ರಗಣ್ಯ ನಾಯಕರು.!

Recommended Video

ನೂರು ಕೋಟಿ ಕ್ಲಬ್ ಸೇರಲಿವೆಯಾ ಈ ಸಿನಿಮಾಗಳು..! | Filmibeat Kannada

ಕನ್ನಡ ಇಂಡಸ್ಟ್ರಿಯ ಮಾರುಕಟ್ಟೆ ಚಿಕ್ಕದು ಎಂಬ ಮಾತಿದೆ. ಇಲ್ಲಿ ಒಳ್ಳೆ ಸಿನಿಮಾಗಳು ತಯಾರಾದರೂ ಅದು ಎಲ್ಲ ಭಾಷೆಯ ಜನರಿಗೂ ತಲುಪಲ್ಲ ಎಂಬ ವಾದ. ಒಂದು ದಿಕ್ಕಿನಲ್ಲಿ ಯೋಚಿಸಿದ್ರೆ ಅದು ನಿಜ ಕೂಡ ಹೌದು. ಯಾಕಂದ್ರೆ, ಕನ್ನಡ ಸಿನಿಮಾಗಳಿಗೆ ಆದಾಯ, ಅಸ್ತಿತ್ವ ಎಲ್ಲವೂ ಕರ್ನಾಟಕ ಮಾತ್ರ.

ಬೇರೆ ರಾಜ್ಯಗಳಲ್ಲಿ ಕನ್ನಡ ಸಿನಿಮಾ ಪ್ರದರ್ಶನವಾದರೂ ಅದಕ್ಕೆ ಉಳಿಗಾಲವಿರಲ್ಲ. ಅದೇ ಪರಭಾಷೆಯ ಚಿತ್ರಗಳಿಗೆ ನಮ್ಮಲ್ಲಿ ಭಾರಿ ಬೇಡಿಕೆ ಇದೆ. ಈಗ ಕಾಲ, ಸಮಯ, ಕ್ರೇಜ್ ಎಲ್ಲವೂ ಬದಲಾಗುತ್ತಿದೆ. ಕನ್ನಡ ಸಿನಿಮಾಗಳ ಹವಾ, ಅಬ್ಬರ ಎಲ್ಲವೂ ಹೆಚ್ಚಾಗಿದೆ. ಬೇರೆ ರಾಜ್ಯದಲ್ಲಿ ಮಾತ್ರವಲ್ಲ, ಬೇರೆ ಬೇರೆ ದೇಶಗಳಲ್ಲಿಯೂ ಚಂದನವನದ ಕಂಪು ಪಸರಿಸುತ್ತಿದೆ.

ಈಗ ಸ್ಯಾಂಡಲ್ ವುಡ್ ನಲ್ಲಿ ತಯಾರಾಗುತ್ತಿರುವ ಈ ಮೂರು ಸಿನಿಮಾದ ಮೇಲೆ ಇಡೀ ದೇಶದ ಕಣ್ಣು ಬಿದ್ದಿದೆ. ಫಸ್ಟ್ ಲುಕ್, ಮೇಕಿಂಗ್, ಕಲೆಕ್ಷನ್ ಎಲ್ಲವನ್ನ ಗಮನಿಸುತ್ತಿರುವ ಪರಭಾಷಿಗರು ಈ ಚಿತ್ರಗಳ ಮೇಲೆ ಕಣ್ಣಾಕಿದ್ದಾರೆ. ಈ ಮೂರು ಸಿನಿಮಾಗಳ ಪೈಕಿ ಯಾವುದಾದರೂ ಒಂದು ಸಿನಿಮಾ 100 ಕೋಟಿ ಕ್ಲಬ್ ಸೇರುತ್ತೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದರಿಂದ ನಮ್ ಇಂಡಸ್ಟ್ರಿಯ ತಾಕತ್ತು ಹೆಚ್ಚಾಗಲಿದೆ. ಹಾಗಿದ್ರೆ, ಈ ಮೂರರಲ್ಲಿ ಆ ಒಂದು ಸಿನಿಮಾ ಯಾವುದು.? ಮುಂದೆ ಓದಿ....

ಪ್ರೇಮ್ 'ದಿ ವಿಲನ್'

ಪ್ರೇಮ್ 'ದಿ ವಿಲನ್'

ಶಿವರಾಜ್ ಕುಮಾರ್ ಮತ್ತು ಸುದೀಪ್ ಅಭಿನಯದ ಚಿತ್ರ ದಿ ವಿಲನ್. ಅಕ್ಟೋಬರ್ 18 ರಂದು ದೇಶಾದ್ಯಂತ 1000 ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಇದು ಕನ್ನಡದ ಮಟ್ಟಿಗೆ ದಾಖಲೆ. ಹೀಗಾಗಿ, ಕಲೆಕ್ಷನ್ ವಿಚಾರದಲ್ಲೂ ಈ ಸಿನಿಮಾ 100 ಕೋಟಿ ಗಳಿಸುತ್ತೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ.

ಬಹುಭಾಷೆಯಲ್ಲೂ ವಿಲನ್

ಬಹುಭಾಷೆಯಲ್ಲೂ ವಿಲನ್

'ದಿ ವಿಲನ್' ಸಿನಿಮಾ ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗು, ತಮಿಳಿನಲ್ಲೂ ತೆರೆಕಾಣುತ್ತಿದೆ. ಶಿವಣ್ಣ ಮತ್ತು ಸುದೀಪ್ ಗೆ ಸ್ಯಾಂಡಲ್ವುಡ್ ನಲ್ಲಿ ಮಾತ್ರವಲ್ಲ ಬೇರೆ ಇಂಡಸ್ಟ್ರಿಯಲ್ಲೂ ಫ್ಯಾನ್ಸ್ ಇದ್ದಾರೆ. ಹೀಗಾಗಿ, ಈ ಸಿನಿಮಾದ ಮೇಲೆ ಹೆಚ್ಚು ನಂಬಿಕೆ ಇದೆ. ಒಂದು ವೇಳೆ ಕಲೆಕ್ಷನ್ ನಲ್ಲಿ ನೂರು ಕೋಟಿ ಹೋದ್ರೆ, ಇಲ್ಲಿಂದ ಕನ್ನಡ ಇಂಡಸ್ಟ್ರಿಯ ಹೆಸರು ಇನ್ನೊಂದು ಹಂತಕ್ಕೆ ಹೋಗುವುದು ಖಚಿತ.

ಯಶ್ 'ಕೆಜಿಎಫ್'

ಯಶ್ 'ಕೆಜಿಎಫ್'

ರಾಕಿಂಗ್ ಸ್ಟಾರ್ ಅಭಿನಯದ 'ಕೆಜಿಎಫ್' ಸಿನಿಮಾ. ಸುಮಾರು ಎರಡು ವರ್ಷಗಳಿಂದ ಮೇಕಿಂಗ್ ಆಗ್ತಿರುವ ಈ ಚಿತ್ರದ ಮೇಲೆ ಸೌತ್ ಇಂಡಿಯಾ ಭರವಸೆ ಇಟ್ಟುಕೊಂಡಿದೆ. ಕನ್ನಡ, ತಮಿಳು, ತೆಲುಗು ಭಾಷೆಯಲ್ಲಿ 'ಕೆಜಿಎಫ್' ಸಿನಿಮಾ ಬರ್ತಿರುವುದು ಕೂಡ ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ವಿಚಾರ.

ಎರಡು ಅಧ್ಯಾಯ

ಎರಡು ಅಧ್ಯಾಯ

'ಕೆಜಿಎಫ್' ಸಿನಿಮಾ ಎರಡು ಅಧ್ಯಾಯಗಳಾಗಿ ಬರ್ತಿದೆ. ನವೆಂಬರ್ 16 ರಂದು ಮೊದಲ ಭಾಗ ಬಿಡುಗಡೆಯಾಗಲಿದೆ. ಇದೇ ಮೊದಲ ಸಲ ಯಶ್ ಸಿನಿಮಾ ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ಏಕಕಾಲದಲ್ಲಿ ರಿಲೀಸ್ ಆಗ್ತಿದೆ. ಇನ್ನು ಕನ್ನಡದ ಮಟ್ಟಿಗೆ ಅತಿ ಹೆಚ್ಚು ಬಜೆಟ್ ನಲ್ಲಿ ಸಿದ್ಧವಾಗಿದೆ ಎಂಬ ಹೆಗ್ಗಳಿಕೆ ಈ ಸಿನಿಮಾ ಪಾತ್ರವಾಗಿದ್ದು, ಕಲೆಕ್ಷನ್ ನಲ್ಲಿ ಈ ಚಿತ್ರವೂ ನೂರು ಕೋಟಿ ಮಾಡಬಹುದು ಎಂದು ಅಂದಾಜಿಸಲಾಗಿದೆ.

ಮೆಗಾಮೂವಿ 'ಕುರುಕ್ಷೇತ್ರ'

ಮೆಗಾಮೂವಿ 'ಕುರುಕ್ಷೇತ್ರ'

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಪೌರಾಣಿಕ ಸಿನಿಮಾ 'ಕುರುಕ್ಷೇತ್ರ'. ಇದು ಪೌರಾಣಿಕ ಸಿನಿಮಾ ಎಂಬ ವಿಚಾರಕ್ಕೆ ಇಡೀ ಭಾರತದ ಗಮನ ಸೆಳೆದಿದೆ. ಇದು ಕೂಡ ದೊಡ್ಡ ಬಜೆಟ್ ನಲ್ಲಿ ನಿರ್ಮಾಣವಾಗಿದ್ದು, ದೊಡ್ಡ ಕಲಾವಿದರ ಬಳಗವನ್ನ ಹೊಂದಿದೆ. ದರ್ಶನ್, ಅಂಬರೀಶ್, ರವಿಚಂದ್ರನ್, ಅರ್ಜುನ್ ಸರ್ಜಾ, ಸೋನು ಸೂದ್, ಸ್ನೇಹಾ, ಹರಿಪ್ರಿಯಾ, ಮೇಘನಾ ರಾಜ್, ಡ್ಯಾನಿಶ್ ಅಂತಹವರು ಅಭಿನಯಿಸಿದ್ದಾರೆ.

ಕಲೆಕ್ಷನ್ ಮೇಲೆ ಕಣ್ಣು

ಕಲೆಕ್ಷನ್ ಮೇಲೆ ಕಣ್ಣು

ಇಷ್ಟು ದೊಡ್ಡ ಸಿನಿಮಾ, ಇಷ್ಟು ದೊಡ್ಡ ಕಲಾವಿದರ ಬಳಗ ಹೊಂದಿರುವ ಈ ಸಿನಿಮಾದ ಗಳಿಕೆ ಮೇಲೂ ಕುತೂಹಲವಿದೆ. ನೂರು ಕೋಟಿ ಕ್ಲಬ್ ಗೆ ಸೇರುತ್ತಾ ಎಂಬ ಕಾತುರ ಕಾಡುತ್ತಿದೆ. ಒಟ್ನಲ್ಲಿ, 'ದಿ ವಿಲನ್', 'ಕೆಜಿಎಫ್' ಹಾಗೂ 'ಕುರುಕ್ಷೇತ್ರ' ಚಿತ್ರಗಳು ಸ್ಯಾಂಡಲ್ ವುಡ್ ಮಾರ್ಕೆಟ್ ಮತ್ತು ಬೇಡಿಕೆಯನ್ನ ರಾಷ್ಟ್ರಮಟ್ಟದಲ್ಲಿ ಹೆಚ್ಚಿಸಲಿದೆ ಮತ್ತು ಹೆಚ್ಚಿಸುತ್ತಿದೆ ಎಂಬುದು ಖುಷಿಯ ವಿಚಾರ.

More from Filmibeat

English summary
I think Darshan kurukshetra, yash kgf, prems thi villain movies will enter the 100-crore club, and many more Kannada movies will follow suit.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X