ಯಾವ್ಯಾವ ಲೋಕಸಭಾ ಕ್ಷೇತ್ರದಲ್ಲಿ ಯಾವ ಸ್ಟಾರ್ ವೋಟ್ ಮಾಡ್ತಾರೆ?

ಏಪ್ರಿಲ್ 18ರಂದು ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯಲಿದೆ.

ಸ್ಯಾಂಡಲ್ ವುಡ್ ನ ಕೆಲವು ನಟರು ಪ್ರಚಾರದಲ್ಲಿ ತೊಡಗಿಕೊಂಡಿದ್ದು ತಮ್ಮ ಇಷ್ಟದ ಅಭ್ಯರ್ಥಿ ಪರ ಮತಯಾಚನೆ ಮಾಡುವಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೆ ಕೆಲವರು ಮತಚಲಾಯಿಸಲು ಸಜ್ಜಾಗಿದ್ದಾರೆ.

ಸಿನಿ ತಾರೆಯರು ಮತದಾನ ಮಾಡುವುದರಿಂದ ಅಭಿಮಾನಿಗಳಿಗೆ ಸ್ಫೂರ್ತಿಯಾಗುತ್ತೆ. ಇದರಿಂದ ಇನ್ನು ಹೆಚ್ಚು ಪ್ರಮಾಣದಲ್ಲಿ ಮತದಾನ ಆಗುತ್ತೆ ಎನ್ನುವುದು ನಂಬಿಕೆ. ಹಿಂದೆ ಪಿ ಎಂ ನರೇಂದ್ರ ಮೋದಿ ಕೂಡ ಮತದಾನದ ಬಗ್ಗೆ ಅರಿವು ಮೂಡಿಸುವಂತೆ ಸಿನಿತಾರೆಯರಿಗೆ ಕರೆಕೊಟ್ಟಿದ್ದರು. ಅದರಂತೆ ಸಾಕಷ್ಟು ನಟ ನಟಿಯರು ಮತದಾನ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

ಸ್ಯಾಂಡಲ್ ವುಡ್ ನ ಬಹುತೇಕ ನಟ ನಟಿಯ ಕೂಡ ಮತದಾನದ ಜಾಗೃತಿ ಮೂಡಿಸುತ್ತಿದ್ದಾರೆ. ಜೊತೆಗೆ ವೋಟ್ ಮಾಡುವ ಮೂಲಕ ಅಭಿಮಾನಿಗಳನ್ನು ಮತಚಲಾಯಿಸಲು ಪ್ರೇರೇಪಿಸುತ್ತಿದ್ದಾರೆ. ಸಾಕಷ್ಟು ಚಿತ್ರತಾರೆಯರು ವೋಟಿಂಗ್ ಬೆಂಗಳೂರಿನಲ್ಲೇ ಇದೇ ಹಾಗಾಗಿ ಸಾಕಷ್ಟು ನಟರು 18ರಂದೇ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಯಾರು, ಯಾವ ಕ್ಷೇತ್ರದಲ್ಲಿ ಮತ ಚಲಾಯಿಸಲಿದ್ದಾರೆ? ಮುಂದೆ ಓದಿ..

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸುದೀಪ್, ಯಶ್

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸುದೀಪ್, ಯಶ್

ಕಿಚ್ಚ ಸುದೀಪ್ ಮತ್ತು ರಾಕಿಂಗ್ ಯಶ್ ವೋಟ್ ಇರುವುದು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ. ಸುದೀಪ್ ಜೆಪಿ ನಗರದಲ್ಲಿ ತಮ್ಮ ಹಕ್ಕು ಚಲಾಯಿಸಿದ್ರೆ, ಯಶ್ ಹೊಸಕೆರೆಹಳ್ಳಿಯಲ್ಲಿ ಮತದಾನ ಮಾಡಲಿದ್ದಾರೆ. ಇನ್ನು, ರಮೇಶ್ ಅರವಿಂದ್, ಉಪೇಂದ್ರ ದಂಪತಿ, ಯೋಗರಾಜ್ ಭಟ್ ಬೆಂಗಳೂರು ದಕ್ಷಿಣ ಕ್ಷೇತ್ರವಾದ ಬನಶಂಕರಿಯಲ್ಲಿ ಮತದಾನ ಮಾಡಲಿದ್ದಾರೆ.

ದಕ್ಷಿಣ ಕ್ಷೇತ್ರದಲ್ಲೇ ರಚಿತಾ, ರಕ್ಷಿತಾ ಮತದಾನ

ದಕ್ಷಿಣ ಕ್ಷೇತ್ರದಲ್ಲೇ ರಚಿತಾ, ರಕ್ಷಿತಾ ಮತದಾನ

ರಚಿತಾ ರಾಮ್ ಮತ್ತು ದುನಿಯಾ ವಿಜಯ್ ಕತ್ರಿಗುಪ್ಪೆಯಲ್ಲಿ ತಮ್ಮ ಮತದಾನದ ಹಕ್ಕು ಚಲಾಯಿಸಲಿದ್ದಾರೆ. ಇನ್ನು ಸತೀಶ್ ನಿನಾಸಂ ಹೊಸಕೆರೆಹಳ್ಳಿಯಲ್ಲಿ ಮತದಾನ ಮಾಡುತ್ತಿದ್ದಾರೆ. ನೆನಪಿರಲಿ ಪ್ರೇಮ್ ಮತ್ತು ರಕ್ಷಿತಾ ಪ್ರೇಮ್ ಗೋವಿಂದರಾಜ್ ನಗರದಲ್ಲಿ ಮತ ಚಲಾಯಿಸಲಿದ್ದಾರೆ. ಇನ್ನು ಬಿಜೆಪಿ ಸದಸ್ಯೆ ನಟಿ ತಾರಾ ಕೂಡ ದಕ್ಷಿಣ ಕ್ಷೇತ್ರದಿಂದ ಜೆ ಪಿ ನಗರದಲ್ಲಿ ಮತದಾನ ಮಾಡಲಿದ್ದಾರೆ.

ಬೆಂಗಳೂರು ಉತ್ತರದಲ್ಲಿ ಡಾ.ರಾಜ್ ಫ್ಯಾಮಿಲಿ ಮತದಾನ

ಬೆಂಗಳೂರು ಉತ್ತರದಲ್ಲಿ ಡಾ.ರಾಜ್ ಫ್ಯಾಮಿಲಿ ಮತದಾನ

ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಡಾ. ರಾಜ್ ಕುಮಾರ್ ಕುಟುಂಬ ಮತದಾನ ಮಾಡಲಿದೆ. ಪುನೀತ್ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್, ಯುವ ರಾಜ್‌ಕುಮಾರ್ ಸದಾಶಿವ ನಗರದಲ್ಲಿ ಮತದಾನ ಮಾಡಲಿದ್ದಾರೆ. ಇನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೆಬ್ಬಾಳದ ಮಾನ್ಯತ ಟೆಕ್ ಪಾರ್ಕ್ ನಲ್ಲಿ ಮತದಾನ ಮಾಡುತ್ತಿದ್ದಾರೆ.

ಉತ್ತರ ಕ್ಷೇತ್ರದಲ್ಲಿ ರಾಧಿಕಾ ಪಂಡಿತ್, ಸುಧಾರಾಣಿ

ಉತ್ತರ ಕ್ಷೇತ್ರದಲ್ಲಿ ರಾಧಿಕಾ ಪಂಡಿತ್, ಸುಧಾರಾಣಿ

ನಟಿ ರಾಧಿಕ ಪಂಡಿತ್ ಬೆಂಗಳೂರಿನ ಉತ್ತರ ಕ್ಷೇತ್ರದಲ್ಲಿ ವೋಟ್ ಮಾಡುತ್ತಿದ್ದಾರೆ. ಇನ್ನು ನಟಿ ಸುಧಾರಾಣಿ ಮತ್ತು ನಟ ಜಗ್ಗೇಶ್ ಕೂಡ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಮತದಾನ ಮಾಡಲಿದ್ದಾರೆ.

ಬೆಂಗಳೂರು ಕೇಂದ್ರದಲ್ಲಿ ರವಿಚಂದ್ರನ್ ಫ್ಯಾಮಿಲಿ

ಬೆಂಗಳೂರು ಕೇಂದ್ರದಲ್ಲಿ ರವಿಚಂದ್ರನ್ ಫ್ಯಾಮಿಲಿ

ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಪತ್ನಿ ಹಾಗೂ ಮಕ್ಕಳು ಬೆಂಗಳೂರು ಕೇಂದ್ರ ಕ್ಷೇತ್ರವಾದ ರಾಜಾಜಿನಗರದಲ್ಲಿ ಮತದಾನ ಮಾಡುತ್ತಿದ್ದಾರೆ. ಇನ್ನು ನಟಿ ಶ್ರುತಿ ಮಾಗಡಿ ರೋಡ್ ನಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ರಕ್ಷಿತ್ ಶೆಟ್ಟಿ, ರಶ್ಮಿಕಾ, ಗಣೇಶ್ ವೋಟಿಂಗ್ ಎಲ್ಲಿದೆ?

ರಕ್ಷಿತ್ ಶೆಟ್ಟಿ, ರಶ್ಮಿಕಾ, ಗಣೇಶ್ ವೋಟಿಂಗ್ ಎಲ್ಲಿದೆ?

ರಕ್ಷಿತ್ ಶೆಟ್ಟಿ ಮತ್ತು ಗಣೇಶ್ ಬೆಂಗಳೂರು ಗ್ರಾಮಾಂತರ ಕ್ಷೇತ್ರವಾದ ಆರ್ ಆರ್ ನಗರದಲ್ಲಿ ಮತಚಲಾಯಿಸಲಿದ್ದಾರೆ. ಇನ್ನು ನಟಿ ರಶ್ಮಿಕಾ ಮಂದಣ್ಣ ವಿರಾಜಪೇಟೆಯಲ್ಲಿ ಮತದಾನ ಮಾಡುತ್ತಿದ್ದಾರೆ.

More from Filmibeat

English summary
Which lok sabha constituency will kannada film stars casting their vote for lok sabha election 2019. Most of the Kannada stars cast their Vote on April 18th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X