ಸುದೀಪ್ ಗೆ 'ಎದುರಾಳಿ' ಬೇರೆ ಎಲ್ಲೂ ಇಲ್ಲ, ಅವರಲ್ಲೇ ಇದ್ದಾರೆ.!
Recommended Video

ಕಿಚ್ಚ ಸುದೀಪ್ ಕನ್ನಡದ ಸ್ಟಾರ್ ನಟ. ಸ್ಯಾಂಡಲ್ ವುಡ್ ನಲ್ಲಿ ಸದ್ಯ ಅತಿ ಹೆಚ್ಚು ಸಂಭಾವನೆ ಪಡೆಯುವ ಮತ್ತು ಅಭಿಮಾನಿ ಬಳಗ ಹೊಂದಿರುವ ನಟರ ಪೈಕಿ ಮೊದಲನೇ ಸಾಲಿನಲ್ಲಿದ್ದಾರೆ.
ಕೆಲವರು ಪ್ರಕಾರ, ಸುದೀಪ್ ಮತ್ತು ಇತರೆ ನಟರ ನಡುವೆ ಕಾಂಪಿಟೇಶನ್ ಇದೆ. ಸಿನಿಮಾ ವಿಚಾರಕ್ಕೆ ಬಂದ್ರೆ ಕಿಚ್ಚನಿಗೆ ಎದುರಾಳಿಗಳಿದ್ದಾರೆ ಎಂಬ ಮಾತಿದೆ. ಸಿನಿಮಾ ಅಂದ್ಮೇಲೆ ಅದು ಸಾಮಾನ್ಯ. ಇನ್ನು ಸುದೀಪ್ ಕನ್ನಡದಲ್ಲಿ ಮಾತ್ರವಲ್ಲ, ಪರಭಾಷೆಯಲ್ಲೂ 'ಸ್ಟಾರ್' ಪಟ್ಟ ಗಿಟ್ಟಿಸಿಕೊಂಡಿರುವ ಕನ್ನಡದ ಏಕೈಕ ನಟ.
ಸದ್ಯದ ಮಟ್ಟಿಗೆ ಸುದೀಪ್ ಗೆ ಯಾರೂ ವಿಲನ್ ಗಳಿಲ್ಲ. ಆದ್ರೆ, ಸ್ವಲ್ಪ ವಿಶೇಷವಾಗಿ ಗಮನಿಸುವುದಾರೇ ಸುದೀಪ್ ಗೆ ಸುದೀಪ್ ಅವರೇ ವಿಲನ್ ಆಗ್ತಿದ್ದಾರೆ. ಹೌದು, ಅಭಿನಯ ಚಕ್ರವರ್ತಿ ವರ್ಸಸ್ ಅಭಿನಯ ಚಕ್ರವರ್ತಿಯ ನಡುವೆಯೇ ಕಾಂಪಿಟೇಶನ್ ಉದ್ಬವವಾಗಿದೆ. ಅದು ಹೇಗೆ ಅಂತ ಮುಂದೆ ಓದಿ.....

ಒಟ್ಟು ನಾಲ್ಕು ಸಿನಿಮಾ ರೆಡಿ
ಸುದೀಪ್ ಅಭಿನಯದ ಒಟ್ಟು ನಾಲ್ಕು ಚಿತ್ರಗಳು ಈಗ ರೆಡಿಯಾಗ್ತಿದೆ. ಹೆಬ್ಬುಲಿ ಕೃಷ್ಣ ನಿರ್ದೇಶನದ 'ಪೈಲ್ವಾನ್', ಸೂರಪ್ಪ ಬಾಬು ನಿರ್ಮಾಣದ 'ಕೋಟಿಗೊಬ್ಬ-3, 'ತೆಲುಗಿನಲ್ಲಿ ಚಿರಂಜೀವಿ ಜೊತೆ 'ಸೈರಾ ನರಸಿಂಹ ರೆಡ್ಡಿ' ಹಾಗೂ ಅಂಬರೀಶ್ ಜೊತೆ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರಗಳಲ್ಲಿ ಕಿಚ್ಚ ನಟಿಸಿದ್ದಾರೆ.

ಟ್ರೆಂಡಿಗ್ ನಲ್ಲಿದೆ 'ಕೋಟಿಗೊಬ್ಬ-3'
ಸೂರಪ್ಪ ಬಾಬು ನಿರ್ಮಾಣದಲ್ಲಿ ತಯಾರಾಗುತ್ತಿರುವ 'ಕೋಟಿಗೊಬ್ಬ-3' ಚಿತ್ರದ ಟೀಸರ್, ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಗಿತ್ತು. ಕಳೆದ ಮೂರು ದಿನದಿಂದ ಈ ಟೀಸರ್ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ನಂಬರ್ ವನ್ ಸ್ಥಾನದಲ್ಲಿತ್ತು. ಈಗ ಮೂರನೇ ಸ್ಥಾನಕ್ಕೆ ಜಾರಿದೆ.

ಯಾವ ಚಿತ್ರಕ್ಕೆ ಅಭಿಮಾನಿಗಳು ಕಾಯ್ತಿದ್ದಾರೆ
ಹಾಗ್ನೋಡಿದ್ರೆ, ಸುದೀಪ್ ಅಭಿನಯಿಸುತ್ತಿರುವ ನಾಲ್ಕು ಚಿತ್ರಗಳ ಮೇಲೆ ನಿರೀಕ್ಷೆ ಹೆಚ್ಚಿದೆ. ಬಟ್, ಈ ನಾಲ್ಕು ಚಿತ್ರಗಳಲ್ಲಿ ಯಾವ ಚಿತ್ರದ ಮೇಲೆ ಅಭಿಮಾನಿಗಳು ಕಾಯ್ತಿದ್ದಾರೆ ಎಂಬುದು ಕುತೂಹಲ ಮೂಡಿಸಿದ್ದಾರೆ. ಒಂದಕ್ಕಿಂತ ಒಂದು ಪಾತ್ರ ವಿಭಿನ್ನವಾಗಿದ್ದು, ಯಾವ ಲುಕ್ ಗೆ ಫಿದಾ ಆಗಿದ್ದಾರೆ ಎಂಬುದು ಚರ್ಚೆಯಾಗುತ್ತಿದೆ.

'ಕೋಟಿಗೊಬ್ಬ' ವರ್ಸಸ್ 'ಪೈಲ್ವಾನ್'
ಸೋಶಿಯಲ್ ಮೀಡಿಯಾದಲ್ಲಿ ಸದ್ಯದ ಕ್ರೇಜ್ ನೋಡಿದ್ರೆ, 'ಕೋಟಿಗೊಬ್ಬ-3 'ಮತ್ತು ಪೈಲ್ವಾನ್ ಸಿನಿಮಾಗಳ ನಡುವೆ ಹೆಚ್ಚು ಕಾಂಪಿಟೇಶನ್ ಇದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಯಾಕಂದ್ರೆ, ಈ ಎರಡು ಸಿನಿಮಾಗಳ ಬಗ್ಗೆ ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಹೆಚ್ಚು ಜನ ಸರ್ಚ್ ಮಾಡುತ್ತಿದ್ದಾರೆ.

ಮೊದಲು ಯಾವುದು, ಆಮೇಲೆ ಯಾವುದು.?
ಸದ್ಯದ ಮಾಹಿತಿ ಪ್ರಕಾರ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರ ಮೊದಲು ಬಿಡುಗಡೆಯಾಗಲಿದೆ. ಈಗಾಗಲೇ ಸಂಪೂರ್ಣ ಶೂಟಿಂಗ್ ಮುಗಿಸಿರುವ ಚಿತ್ರತಂಡ ರಿಲೀಸ್ ಗಾಗಿ ಕಾಯುತ್ತಿದೆ. ಅದಾದ ಬಳಿಕ 'ಕೋಟಿಗೊಬ್ಬ' ಮತ್ತು 'ಪೈಲ್ವಾನ್' ಚಿತ್ರಗಳು ಬರುತ್ತೆ. ಆದ್ರೆ, ಎರಡು ಸಿನಿಮಾಗಳ ಚಿತ್ರೀಕರಣ ನಡೆಯುತ್ತಿರುವುದರಿಂದ ಯಾವ ಸಿನಿಮಾ ಮೊದಲು ಬರುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಮತ್ತೊಂದೆಡೆ ಕೋಟಿಗೊಬ್ಬ, ಪೈಲ್ವಾನ್ ಗೂ ಮುಂಚೆ ತೆಲುಗಿನ 'ಸೈರಾ' ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗಲಿದೆ. ಈ ಎಲ್ಲಾ ಚಿತ್ರಗಳ ಮಧ್ಯೆ 'ದಿ ವಿಲನ್' ಸಿನಿಮಾದ ಮೇಲೆ ಕೂಡ ದೊಡ್ಡ ಭರವಸೆ ಇದ್ದು, ಈ ಎಲ್ಲ ಚಿತ್ರಗಳಿಗೂ ಮೊದಲೇ ಈ ಸಿನಿಮಾ ಬಂದರೂ ಅಚ್ಚರಿಯಿಲ್ಲ.

ಫಿಲ್ಮಿಬೀಟ್ ಫಲಿತಾಂಶ
ಇನ್ನು ಕೋಟಿಗೊಬ್ಬ 3, ಪೈಲ್ವಾನ್, ಸೈರಾ, ಹಾಗೂ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರಗಳಲ್ಲಿ ಯಾವುದು ಚೆನ್ನಾಗಿದೆ ಎಂದು ಫಿಲ್ಮಿಬೀಟ್ ಹಾಗೂ ಒನ್ ಇಂಡಿಯಾ ಕನ್ನಡದಲ್ಲಿ ಪೋಲ್ ಕೇಳಲಾಗಿತ್ತು. ಇದಕ್ಕೆ ಅತಿ ಹೆಚ್ಚು ಜನ ಪೈಲ್ವಾನ್ ಚಿತ್ರದ ಬಗ್ಗೆ ಒಲವು ತೋರಿಸಿದ್ದಾರೆ. ಹಾಗಾಗಿ, ಈ ಸಿನಿಮಾಗಾಗಿ ಹೆಚ್ಚು ಕಾಯುತ್ತಿದ್ದಾರೆ. ನಂತರ ಸೈರಾ, ಕೋಟಿಗೊಬ್ಬ, ಅಂಬಿ ಸಿನಿಮಾಗೆ ಮೆಚ್ಚುಗೆ ಬಂದಿದೆ.


Click it and Unblock the Notifications











