»   » ಉಪೇಂದ್ರ 'ಉತ್ತಮ ಪ್ರಜಾ ಪಕ್ಷ'ದ ಚಿಹ್ನೆ ಇದಾದ್ರೆ ಹೇಗೆ.?

ಉಪೇಂದ್ರ 'ಉತ್ತಮ ಪ್ರಜಾ ಪಕ್ಷ'ದ ಚಿಹ್ನೆ ಇದಾದ್ರೆ ಹೇಗೆ.?

Posted By:
Subscribe to Filmibeat Kannada

ಪ್ರಜಾಕೀಯ, ಪ್ರಜಾಕಾರಣ, ಪ್ರಜಾನೀತಿ ಬಗ್ಗೆ ಮಾತನಾಡುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಪಕ್ಷಕ್ಕೆ 'ಉತ್ತಮ ಪ್ರಜಾ ಪಕ್ಷ' ಎಂದು ಹೆಸರಿಟ್ಟಿದ್ದಾರೆ ಎನ್ನಲಾಗಿದೆ.

ಸದಾ ವಿಭಿನ್ನವಾಗಿ ಯೋಚಿಸುವ ಉಪೇಂದ್ರ, ತಮ್ಮ ಪಕ್ಷಕ್ಕೆ ಯಾವ ಚಿಹ್ನೆಯನ್ನ ಆಯ್ಕೆ ಮಾಡಿಕೊಳ್ಳಬಹುದು ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಹೀಗಿರುವಾಗಲೇ, 'ಉತ್ತಮ ಪ್ರಜಾ ಪಕ್ಷ'ದ ಚಿಹ್ನೆ 'ಕೀ' ಆಗಿರಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.

Which symbol should Upendra choose for his 'Uttama Praja Party'.?

''ರಾಜನ ಕೈಯಲ್ಲಿ 'ಕೀ' ಕೊಡುವುದು 'ರಾಜಕಾರಣ', ಆದ್ರೆ, ಪ್ರಜೆಗಳ ಕೈಯಲ್ಲಿ 'ಕೀ' ಕೊಡುವುದೇ 'ಪ್ರಜಾಕಾರಣ'' ಎಂದು 'ಪ್ರಜೆ' ಹಾಗೂ 'ಕೀ'ಗಳ ಬಗ್ಗೆ ಉಪೇಂದ್ರ ಮಾತನಾಡಿರುವ ಕಾರಣ, ''ಉತ್ತಮ ಪ್ರಜಾ ಪಕ್ಷ'ಕ್ಕೆ 'ಕೀ' ಚಿಹ್ನೆ' ಸೂಕ್ತ'' ಎಂದು ಶ್ರೀಕಾಂತ್ ಎಂಬ ಅಭಿಮಾನಿ ಟ್ವೀಟ್ ಮಾಡಿದ್ದಾರೆ.

ಶ್ರೀಕಾಂತ್ ರವರ ಆಲೋಚನೆ, ಆಶಾಭಾವನೆಗೆ 'ಸೂಪರ್' ಎಂದು ಉಪೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ಇಡೀ ವ್ಯವಸ್ಥೆಯನ್ನ ಬದಲಾಯಿಸಲು ಹೊರಟಿರುವ ಉಪೇಂದ್ರ ರವರ 'ಉತ್ತಮ ಪ್ರಜಾ ಪಕ್ಷ'ಕ್ಕೆ ಸೂಕ್ತ ಚಿಹ್ನೆ ಯಾವುದು ಎಂದು ನೀವು ಕೂಡ ಆಲೋಚಿಸಿ, ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ...

English summary
Which symbol should Upendra choose for his 'Uttama Praja Party'.?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada