For Quick Alerts
  ALLOW NOTIFICATIONS  
  For Daily Alerts

  ಅಂದು ರಮ್ ಕುಡಿದು ಹುಲಿ ಜೊತೆ ಅಂಬಿ ಫೈಟ್: ಇಂದು ಕಿಚ್ಚ ಸುದೀಪ್!

  |

  'ವಿಕ್ರಾಂತ್ ರೋಣ' ರಿಲೀಸ್‌ಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೇ ಕಿಚ್ಚ ಸುದೀಪ್ ಒಂದೊಂದೇ ಇಂಟ್ರೆಸ್ಟಿಂಗ್ ವಿಷಯಗಳನ್ನು ರಿವೀಲ್ ಮಾಡುತ್ತಿದ್ದಾರೆ. 'ವಿಕ್ರಾಂತ್ ರೋಣ' ತನ್ನ ಕರಿಯರ್‌ನ ಅದ್ಭುತ ಸಿನಿಮಾ ಯಾಕೆ? ಸಿನಿಮಾ ಮೇಕಿಂಗ್ ಯಾಕೆ ಅಷ್ಟು ಕಷ್ಟ ಅಂತ ಅನಿಸಿತ್ತು? ಅನ್ನೋದನ್ನು ಸುದೀಪ್ ರಿವೀಲ್ ಮಾಡಿದ್ದಾರೆ.

  ಸಿನಿಮಾ ಅಂತ ಬಂದಾಗ ತಾರೆಯರು ಡೇಂಜರಸ್ ಸಾಹಸಗಳನ್ನು ಮಾಡುತ್ತಾರೆ. ಒಂದು ಚಿಕ್ಕ ಸೀನ್‌ಗಾಗಿ ಹರಸಾಹಸ ಪಡುತ್ತಾರೆ. ಹಿಂದಿನಿಂದಲೂ ಇಂತಹದ್ದೊಂದು ವಿಭಿನ್ನ ಪ್ರಯತ್ನ ನಡೆಯುತ್ತಲೇ ಇದೆ. ಹಿಂದೆ ಅಂಬರೀಶ್ ಸಿನಿಮಾವೊಂದರಲ್ಲಿ ಹುಲಿಯೊಂದಿಗೆ ಸೆಣೆಸಾಡುವ ದೃಶ್ಯದಲ್ಲಿ ರಮ್ ಸೇವಿಸಿದ್ದಾಗಿ ಹೇಳಿಕೊಂಡಿದ್ದರು. ಈಗ 'ವಿಕ್ರಾಂತ್ ರೋಣ' ಸಿನಿಮಾದ ಕ್ಲೈಮ್ಯಾಕ್ಸ್ ಸೀನ್‌ಗಾಗಿ ಕಿಚ್ಚ ಸುದೀಪ್ ಕಷ್ಟ ಪಟ್ಟ ಸಂಗತಿಯನ್ನು ರಿವೀಲ್ ಮಾಡಿದ್ದಾರೆ.

  ಪಾಕಿಸ್ತಾನದಲ್ಲೂ ರಿಲೀಸ್ ಆಗುತ್ತಾ 'ವಿಕ್ರಾಂತ್ ರೋಣ'? ನಿರ್ಮಾಪಕರು ಹೇಳಿದ್ದೇನು?ಪಾಕಿಸ್ತಾನದಲ್ಲೂ ರಿಲೀಸ್ ಆಗುತ್ತಾ 'ವಿಕ್ರಾಂತ್ ರೋಣ'? ನಿರ್ಮಾಪಕರು ಹೇಳಿದ್ದೇನು?

  'ವಿಕ್ರಾಂತ್ ರೋಣ' ಕ್ಲೈಮ್ಯಾಕ್ ಸೀನ್‌ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. 7 ನಿಮಿಷದ ಕ್ಲೈಮ್ಯಾಕ್ಸ್ ದೃಶ್ಯವನ್ನು 15 ದಿನ ಶೂಟ್ ಮಾಡಿದ್ದು ಅಭಿಮಾನಿಗಳಿಗೆ ಕಿಕ್ ಕೊಟ್ಟಿದೆ. ಈ ಬೆನ್ನಲೇ ಸುದೀಪ್ ಕ್ಲೈಮ್ಯಾಕ್ಸ್ ದೃಶ್ಯ ಚಿತ್ರೀಕರಣದ ಕೊನೆಯ ದಿನ ಸೆಟ್ಟಿನಲ್ಲಿ ರಮ್ ಸೇವಿಸಿದ್ದಲ್ಲದೆ. ಇಡೀ ತಂಡಕ್ಕೂ ನೀಡಿದರ ಬಗ್ಗೆ ರಿವೀಲ್ ಮಾಡಿದ್ದಾರೆ.

  15 ದಿನ ಶೂಟಿಂಗ್ ಕ್ಲೈಮ್ಯಾಕ್ಸ್ ಶೂಟ್

  15 ದಿನ ಶೂಟಿಂಗ್ ಕ್ಲೈಮ್ಯಾಕ್ಸ್ ಶೂಟ್

  'ವಿಕ್ರಾಂತ್ ರೋಣ' ಸಿನಿಮಾ ಹೈಲೈಟ್ ಕ್ಲೈಮ್ಯಾಕ್ಸ್ಸ ಸೀನ್. ಇದು ಪ್ರೇಕ್ಷಕರ ಕಣ್ಣುಗಳಿಗೆ ಅದ್ಭುತ ಅನುಭವ ನೀಡಲಿದೆ. ಈ ಭರವಸೆಯನ್ನು ಈಗಾಗಲೇ ಚಿತ್ರತಂಡ ನೀಡಿದೆ. ಸಿನಿಪ್ರಿಯರಿಗೆ ಈ ಅನುಭವವನ್ನು ನೀಡಲೆಂದೇ 15 ದಿನಗಳ ಕಾಲ ಶೂಟ್ ಮಾಡಲಾಗಿದೆ. 7 ನಿಮಿಷದ ಕ್ಲೈಮ್ಯಾಕ್ಸ್ ಸೀನ್‌ನಲ್ಲಿ ಬರುವ ಪ್ರತಿಯೊಂದು ದೃಶ್ಯವನ್ನೂ ಸಿಂಗ್ ಶಾಟ್‌ನಲ್ಲಿಯೇ ಶೂಟ್ ಮಾಡಲಾಗಿದೆ. ಹೀಗಾಗಿ ಇಡೀ ತಂಡ ಸತತ 15 ದಿನಗಳ ಕಾಲ ಇದೊಂದು ಸೀನ್‌ಗಾಗಿ ತುಂಬಾನೇ ಕಷ್ಟ ಪಟ್ಟಿತ್ತು.

  'ವಿಕ್ರಾಂತ್ ರೋಣ' 3Dಯಲ್ಲಿ ರಿಲೀಸ್ ಆಗಲ್ಲ ಅಂದೋರಿಗೆ ಜಾಕ್ ಮಂಜು ತಿರುಗೇಟು!'ವಿಕ್ರಾಂತ್ ರೋಣ' 3Dಯಲ್ಲಿ ರಿಲೀಸ್ ಆಗಲ್ಲ ಅಂದೋರಿಗೆ ಜಾಕ್ ಮಂಜು ತಿರುಗೇಟು!

  ಕಾಫಿ ಮಗ್‌ನಲ್ಲಿ ರಮ್ ಸೇವಿಸಿದ್ದ ಕಿಚ್ಚ ಅಂಡ್ ಟೀಮ್

  ಕಾಫಿ ಮಗ್‌ನಲ್ಲಿ ರಮ್ ಸೇವಿಸಿದ್ದ ಕಿಚ್ಚ ಅಂಡ್ ಟೀಮ್

  ನಿರಂತರ ಶೂಟಿಂಗ್ ಮಾಡಿ ಸುಸ್ತಾಗಿದ್ದ ಕಿಚ್ಚ ಸುದೀಪ್ ತನ್ನ ಟೀಮ್ ಅನ್ನು ಮತ್ತೆ ಆಕ್ಟಿವ್ ಮಾಡಲು ರಮ್ ನೀಡಿದ್ದನ್ನು ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ. "ಕೊನೆಯ ದಿನ ನಾನು ಶೂಟ್‌ಗೆ ಹೋದಾಗ, ನನ್ನ ಭುಜ, ಕಾಲು ಎಲ್ಲಾ ಕಡೆ ನೋವಿತ್ತು. ನಾನು ಸೆಟ್‌ನಲ್ಲಿ ಇದ್ದವರನ್ನೆಲ್ಲಾ ನೋಡಿದೆ. ನಮ್ಮ ಹುಡುಗರನ್ನು ಕಾಫಿ ಮಗ್ ತರುವಂತೆ ಕೇಳಿದೆ. ಅದರಲ್ಲಿ ರಮ್ ಅನ್ನು ಹಾಕಿದೆ. ಯಾರಿಗೂ ಹೇಳಬೇಡ ಅಂತ ಹೇಳಿದ್ದೆ. ಒಂದು ಸೆಂಟಿಮೆಂಟ್ ಇದೆ. ನೀವು ಶೂಟ್ ಮಾಡುವಾಗ ಮಧ್ಯ ಸೇವನೆ ಮಾಡುವುದಿಲ್ಲ. ನಾವು ಇಲ್ಲಿ ಆ ಕಲ್ಚರ್ ಅನ್ನು ಫಾಲೋ ಮಾಡುತ್ತೇವೆ. ಆ ದಿನ ನನಗೆ ಇದು ರಮ್ ಅನ್ನುವುದಕ್ಕಿಂತ ಮೆಡಿಸಿನ್ ಆಗಿ ಕಂಡಿತ್ತು. ಆಗ ನಾನೊಬ್ಬ ಯಾಕೆ ಕುಡಿಬೇಕು ಅಂತ ಎಲ್ಲರಿಗೂ ಕುಡಿಸಿದ್ದೆ." ಎಂದು ಸುದೀಪ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

  ಡೂಪ್ ಇಲ್ಲ.. ಸ್ಲೋ ಮೋಷನ್ ಇಲ್ಲ

  ಡೂಪ್ ಇಲ್ಲ.. ಸ್ಲೋ ಮೋಷನ್ ಇಲ್ಲ

  "ಮುಖದ ಮುಂದೆ ಧೂಳು ಬರುತ್ತಿತ್ತು. ಪಿಲ್ಲರ್‌ಗಳ ಮಧ್ಯೆ ಓಡುವಂತಹ ದೃಶ್ಯ ವಿದೆ. ಐದು ಎಪಿಸೋಡ್‌ಗಳ ದೃಶ್ಯವನ್ನು ಒಂದು ಶಾಟ್‌ನಲ್ಲಿ ಶೂಟ್‌ ಮಾಡಲಾಗಿತ್ತು. ಕಟ್ ಇಲ್ಲದೆ 15 ದಿನಗಳ ಕಾಲ ಶೂಟ್ ಮಾಡಿದ್ದೇವೆ. ಇಲ್ಲಿ ಯಾವುದೇ ಸ್ಲೋ ಮೋಷನ್ ಶಾಟ್ ಇಲ್ಲ. ಒಂದೇ ಕ್ಯಾಮರಾ ಚಲಿಸುತ್ತಾ ಇರುತ್ತೆ. ಅದರ ಅರ್ಥ ಇದರಲ್ಲಿ ಡೂಪ್ ಇರಲಿಲ್ಲ. ತಕ್ಷಣ ಕಲ್ಲುಗಳು ಎದುರಾಗುತ್ತವೆ. ತಕ್ಷಣ ಬೀಳುವುದು ಏಳುವುದು ಎಲ್ಲಾ ಇತ್ತು. ಈ ಪ್ರೋಸಸ್‌ನಲ್ಲಿ ಒಬ್ಬರು ಮಿಸ್ ಆದರೆ, ಮತ್ತೆ ಹೊಸದಾಗಿ ಶೂಟ್ ಮಾಡಬೇಕಿತ್ತು." ಎಂದು ಆ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.

  ಬ್ಲಡ್ ಕ್ಲಾಟ್ ಆಗಿತ್ತು.

  ಬ್ಲಡ್ ಕ್ಲಾಟ್ ಆಗಿತ್ತು.

  ಬೆಳ್ಳಂಬೆಳಗ್ಗೆ ಶೂಟಿಂಗ್ ಮುಗಿಸಿ ಮನೆ ಹೋದಾಗ ಕಿಚ್ಚ ಸುದೀಪ್ ಪಕ್ಕೆಯಲ್ಲಿ ಬ್ಲಾಡ್ ಕ್ಲಾಟ್ ಆಗಿತ್ತು. ಇದು ಹೇಗೆ ಆಯ್ತು ಅನ್ನೋದು ಸುದೀಪ್‌ಗೂ ಗೊತ್ತಿರಲಿಲ್ಲ. ಆಗ ಅನುಪ್ ಭಂಡಾರಿಗೆ ಕೇಳಿದಾಗ, "ಕೊನೆಯ ಸೀನ್‌ನಲ್ಲಿ ವಿಲನ್‌ಗೆ ಎರಡೂ ಕಾಲುಗಳಲ್ಲಿ ಕಿಕ್ ಮಾಡಿದಾಗ ನೆಲಕ್ಕೆ ಬಿದ್ದಿದ್ದರು. ಅದು ಆಗ ಪೆಟ್ಟಾಗಿತ್ತು. ಆದರೂ ಎರಡನೇ ಬಾರಿ ಶೂಟ್ ಮಾಡೋಣ ಎಂದು ಹೇಳಿದ್ದಾಗಿ ಅನೂಪ್ ಹೇಳಿದ್ದರು. ಆದರೆ ನನಗೆ ಅದು ನೆನಪಿರಲಿಲ್ಲ. ಕಾಫಿ ಮಗ್‌ನಲ್ಲಿ ಮೆಡಿಸಿನ್ ತೆಗೆದುಕೊಳ್ಳದೆ ಇದ್ದಿದ್ದರೆ, ನಾನು ಆ ಶಾಟ್ ಮಾಡುತ್ತಿರಲಿಲ್ಲ" ಎಂದು ಸುದೀಪ್ ಹೇಳಿದ್ದರು.

  Recommended Video

  ಸುದೀಪ್ is fantastic ಎಂದ ಸಲ್ಲು | Vikrant Rona | Kiccha Sudeep | Salman Khan | *Press Meet |
  English summary
  While Shooting Vikrant Rona Climax Scene Sudeep Take Rum As Medicine, Know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X