"ನಾನು ಸಾಕಿದ ನಾಯಿ ದರ್ಶನ್, ನನ್ನನ್ನೇ ಕಚ್ಚೋಕೆ ಬಂದಿದ್ದಾನೆ" ಎಂದವರು ಯಾರು?

By ಫಿಲ್ಮಿಬೀಟ್ ಡೆಸ್ಕ್

ನಟ ದರ್ಶನ್ ಜೈಲಿ ಸೇರಿ 100 ದಿನ ಕಳೆದಿದೆ. ಜಾಮೀನು ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ನೆಚ್ಚಿನ ನಟನ ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ನಟ ದರ್ಶನ್ ಬಳಿಕ ಆಪ್ತರಾಗಿದ್ದ ನಿರ್ಮಾಪಕ ಮುನಿರತ್ನ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅತ್ಯಾಚಾರ ಆರೋಪ ಪ್ರಕರಣದಲ್ಲಿ ಶಾಸಕರು ಆಗಿರುವ ಮುನಿರತ್ನ ಬಂಧನವಾಗಿದೆ.

'ಕುರುಕ್ಷೇತ್ರ' ಚಿತ್ರದಲ್ಲಿ ಕೆಲಸ ಮಾಡಿದವರೆಲ್ಲಾ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎನ್ನುವ ಚರ್ಚೆಯೂ ನಡೆಯುತ್ತಿದೆ. ಆ ಚಿತ್ರವನ್ನು ಮುನಿರತ್ನ ನಿರ್ಮಿಸಿದ್ದರು. ಇನ್ನು ದರ್ಶನ್ ಹಾಗೂ ಮುನಿರತ್ನ ನಡುವೆ ಉತ್ತಮ ಬಾಂಧವ್ಯ ಕೂಡ ಇದೆ. ಇನ್ನು ಶೀಘ್ರ ದರ್ಶನ್ ಬಿಡುಗಡೆಗೆ ಆಗ್ರಹಿಸಿ ಇತ್ತೀಚೆಗೆ ವಕೀಲರಾದ ಜಗದೀಶ್ ಕುಮಾರ್ ಪ್ರತಿಭಟನೆ ನಡೆಸಿದ್ದರು.

who called darshan dog lawyer Jagadish kumar words goes viral

ಫ್ರೀಡಂ ಪಾರ್ಕ್‌ನಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಕೆಲವರು ಜಗದೀಶ್‌ ಅವರಿಗೆ ಸಾಥ್ ಕೊಟ್ಟಿದ್ದರು. ಈ ವೇಳೆ ನಿರ್ಮಾಪಕ ಮುನಿರತ್ನ ವಿರುದ್ಧ ವಕೀಲ ಜಗದೀಶ್ ಸಾಕಷ್ಟು ಆರೋಪಗಳನ್ನು ಮಾಡಿದ್ದರು. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ನಿರಪರಾಧಿ ಎಂದು ನನಗೆ ಅನಿಸುತ್ತಿದೆ ಎಂದು ಜಗದೀಶ್ ಹೇಳಿದ್ದಾರೆ.

ರೇಣುಕಾಸ್ವಾಮಿನ ಹೊಡೆದು ಸಾಯಿಸುವ ಉದ್ದೇಶ ದರ್ಶನ್‌ಗೆ ಇರಲಿಲ್ಲ ಎನಿಸುತ್ತದೆ. ಆದರೆ ಮುನಿರತ್ನ ಅಕ್ಕನ ಮಗ ದೀಪುಗೆ ಕೊಲೆ ಮಾಡಿ ದರ್ಶನ್ ತಲೆಗೆ ಮೆತ್ತಬೇಕು ಎನ್ನುವ ಆಲೋಚನೆ ಇತ್ತು ಎಂದು ನಮಗೆ ಅನ್ನಿಸುತ್ತದೆ. ದರ್ಶನ್‌ಗೂ- ಮುನಿರತ್ನಗೂ ಏನು ವೈಷಮ್ಯ? ದರ್ಶನ್ ಮೇಲೆ ಮುನಿರತ್ನಗೆ ಯಾಕೆ ಕೋಪ ಎನ್ನುವುದು ಗೊತ್ತಿಲ್ಲ ಎಂದಿದ್ದರು.

ಮಂಡ್ಯದಲ್ಲಿ ಕುಮಾರಸ್ವಾಮಿ ಚುನಾವಣೆಗೆ ಸ್ಪರ್ಧಿಸಿದ್ದಾಗ ಸ್ಟಾರ್ ಚಂದ್ರು ಪರ ಪ್ರಚಾರಕ್ಕೆ ಹೋಗಬೇಡ ಎಂದು ದರ್ಶನ್‌ಗೆ ಮುನಿರತ್ನ ಹೇಳಿದ್ದರಂತೆ. ಆದರೂ ಕೇಳದೇ ಹೋಗಿ ದರ್ಶನ್ ಪ್ರಚಾರ ಮಾಡಿದ್ದರು. ಈ ವೇಳೆ ಮುನಿರತ್ನ ಯಾರ ಬಳಿಯೋ ಮಾತನಾಡುತ್ತಾ "ನಾನು ಸಾಕಿದ ನಾಯಿ, ನನಗೆ ಕಚ್ಚುವ ರೀತಿ ಆಗಿದೆ" ಎಂದು ಹೇಳಿದ್ದರಂತೆ. ಇದನ್ನು ನಾನು ನೋಡಿಲ್ಲ. ಯಾರೋ ಹೇಳಿದ್ದನ್ನು ಕೇಳಿದ್ದೇನೆ. ಇದು ಸತ್ಯ ಕೂಡ ಇರಬಹುದು, ಸುಳ್ಳು ಕೂಡ ಇರಬಹುದು. ಆದರೆ ಮುನಿರತ್ನ ಆ ರೀತಿ ಹೇಳಿರು ಸಾಧ್ಯತೆಯಿದೆ. ಯಾಕಂದರೆ ದುಹಂಕಾರ ಜಾಸ್ತಿ ಎಂದು ವಕೀಲರಾದ ಜಗದೀಶ್ ಮಾಧ್ಯಮಗಳ ಮುಂದೆ ಹೇಳಿದ್ದರು.

ವಕೀಲ ಜಗದೀಶ್ ಅವರ ಈ ಹೇಳಿಕೆ ವೈರಲ್ ಆಗುತ್ತಿದೆ. ಇನ್ನು ರೇಣುಕಾಸ್ವಾಮಿ ಪ್ರಕರಣದಲ್ಲಿ ಈಗಾಗಲೇ 3 ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ದರ್ಶನ್- ಪವಿತ್ರಾ ಗೌಡ ಸೇರಿ ಕೆಲವರು ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಶೀಘ್ರದಲ್ಲೇ ಜಾಮೀನು ಸಿಕ್ಕಿ ದರ್ಶನ್ ಬಿಡುಗಡೆ ಆಗುವ ಲೆಕ್ಕಾಚಾರ ಶುರುವಾಗಿದೆ. ದರ್ಶನ್ ಪರ ವಕೀಲರು ಸಹ ಈ ಬಗ್ಗೆ ಭರವಸೆಯಿಂದ ಇದ್ದಾರೆ.

ಇಂದು(ಸೆಪ್ಟೆಂಬರ್ 27) ದರ್ಶನ ಜಾಮೀುನು ಅರ್ಜಿಯ ವಿಚಾರಣೆ ನಡೆಯಿತು. ಆದರೆ ದರ್ಶನ್ ಪರ ವಕೀಲರು ಕಾಲಾವಕಾಶ ಕೇಳಿದ್ದಾರೆ. ಹಾಗಾಗಿ ವಿಚಾರಣೆಯನ್ನು ಸೆಪ್ಟೆಂಬರ್ 30ಕ್ಕೆ ಮುಂದೂಡಲಾಗಿದೆ. 2 ದಿನಗಳ ಹಿಂದೆ(ಸೆಪ್ಟೆಂಬರ್ 21) ದರ್ಶನ್ ವಕೀಲರ ಮೂಲಕ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ಇನ್ನು ದರ್ಶನ್ ಬಿಡುಗಡೆ ಆದರೆ ಬಳ್ಳಾರಿಯಿಂದ ಹೆಲಕಾಪ್ಟರ್‌ನಲ್ಲಿ ಬೆಂಗಳೂರಿಗೆ ಕರೆತರುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಈಗಾಗಲೇ ಹೆಲಿಕಾಪ್ಟರ್ ಬುಕ್ ಮಾಡುವ ಬಗ್ಗೆ ಆಪ್ತರ ಆಲೋಚಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಖಚಿತ ಮಾಹಿತಿ ಇಲ್ಲ.

ಆರೋಪ, ಪ್ರತ್ಯಾರೋಪ ಹಾಗೂ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿ ಆಗುತ್ತಿರುವ ವಕೀಲರಾದ ಜಗದೀಶ್ ಈ ಬಾರಿ ಬಿಗ್‌ಬಾಸ್ ಮನೆ ಪ್ರವೇಶಿಸುತ್ತಿದ್ದಾರೆ. ಬಿಗ್‌ಬಾಸ್ ಕನ್ನಡ ಸೀಸನ್ 11ರ 4 ಜನ ಸ್ಪರ್ಧಿಗಳ ಹೆಸರು ಬಹಿರಂಗವಾಗಿದೆ. 2ನೇ ಸ್ಪರ್ಧಿಯಾಗಿ ಜಗದೀಶ್ ದೊಡ್ಮನೆ ಒಳಗೆ ಹೋಗಲಿದ್ದಾರೆ.

More from Filmibeat

English summary
Renukaswamy case; Court to hear Darshan's bail plea on september 30th;
Read more about: darshan munirathna sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X