ಡಾ. ರಾಜ್‌ಕುಮಾರ್ ಬಯೋಪಿಕ್ ಚಿತ್ರದಲ್ಲಿ ನಟಿಸೋಕೆ ಸೂಕ್ತ ನಟ ಯಾರು?

ನಟಸಾರ್ವಭೌಮ ಡಾ. ರಾಜ್‌ಕುಮಾರ್. ಕನ್ನಡ ಕಣ್ಮಣಿ.. ವರ ನಟ, ಗಾನಗಂಧರ್ವ.. ಅಣ್ಣಾವ್ರು ಮಾಡದ ಪಾತ್ರಗಳಿಲ್ಲ.. ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಬಾಂಡ್ ಹೀಗೆ ಎಲ್ಲಾ ರೀತಿಯ ಪಾತ್ರಗಳಲ್ಲಿ ನಟಿಸಿ ಗೆದ್ದವರು ಮುತ್ತುರಾಜ್.. ಕರ್ನಾಟಕ ಸಾಂಸ್ಕೃತಿಕ ರಾಯಭಾರಿ ಡಾ. ರಾಜ್ ಅವರನ್ನು ಕನ್ನಡಿಗರು ಮರೆಯೋಕೆ ಸಾಧ್ಯವಿಲ್ಲ.

ತಮ್ಮ ಸಿನಿಮಾಗಳು, ಆದರ್ಶ ವ್ಯಕ್ತಿತ್ವದಿಂದ ಅಣ್ಣಾವ್ರು ಇಂದಿಗೂ ಸಿನಿರಸಿಕರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಸಂಪಾದಿಸಿದ್ದಾರೆ. ಬರೀ ಸಿನಿಮಾ ಅಲ್ಲ, ಕನ್ನಡ ನಾಡು, ನುಡಿಗೆ ಅವರ ಕೊಡುಗೆ ಅಪಾರ. 3ನೇ ತರಗತಿವರೆಗೆ ಮಾತ್ರ ಓದಿದ್ದ ಮುತ್ತುರಾಜ್ ತಂದೆ ಜೊತೆ ರಂಗಭೂಮಿ ಪ್ರವೇಶಿಸಿದ್ದರು. ಅಲ್ಲೇ ನಟನೆಯ ಪಟ್ಟುಗಳನ್ನು ಕಲಿತು ಮುಂದೆ ಚಿತ್ರರಂಗ ಪ್ರವೇಶಿಸಿ ರಾಜಕುಮಾರಂತೆ ಮೆರೆದರು. 200 ಕ್ಕೂ ಅಧಿಕ ಸಿನಿಮಾ ನಟಿಸಿ ಜನರನ್ನು ರಂಜಿಸಿದರು, ತಿದ್ದಿ ತೀಡಿ ಪಾಠ ಕಲಿಸಿದರು.

Who Can Portray Dr Rajkumar on Screen netizens Debate the Perfect Choice for Annavru s Biopic

ಎಲ್ಲಾ ಕಡೆ ಈಗ ಬಯೋಪಿಕ್ ಸಿನಿಮಾಗಳ ಬಗ್ಗೆ ಚರ್ಚೆ ನಡೀತಿದೆ. ಕನ್ನಡದಲ್ಲಿ ಡಾ. ರಾಜ್‌ಕುಮಾರ್ ಬಯೋಪಿಕ್ ಸಿನಿಮಾ ಮಾಡಿದ್ರೆ ಯಾರು ನಾಯಕನಾಗಿ ಸೂಕ್ತ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ತೆರೆಮೇಲೆ ಅಣ್ಣಾವ್ರ ಪಾತ್ರ ಯಾರು ಮಾಡಬಹುದು ಎಂದು Kannada Film Community ಟ್ವಿಟ್ಟರ್(X) ಖಾತೆಯಲ್ಲಿ ಒಂದು ಪೋಸ್ಟ್ ಮಾಡಲಾಗಿದೆ. ಅದಕ್ಕೆ ನಾನಾ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗ್ತಿದೆ.

ಅಣ್ಣಾವ್ರ ಬಯೋಪಿಕ್ ಮಾಡದೇ ಇರುವುದು ಒಳಿತು ಎಂದು ಸಾಕಷ್ಟು ಜನ ಕಾಮೆಂಟ್ ಮಾಡಿದ್ದಾರೆ. ಧನಂಜಯ್, ರಿಷಬ್ ಶೆಟ್ಟಿ ಅಥವಾ ಶಿವಣ್ಣ ತೆರೆಮೇಲೆ ಡಾ. ರಾಜ್ ಆಗಿ ನಟಿಸಬಹುದು ಎಂದು ಮತ್ತೆ ಕೆಲವರು ರಿಪ್ಲೇ ಮಾಡಿದ್ದಾರೆ. 'ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ', ಅದು ಸಿನಿಮಾ, ಕನ್ನಡ ನಾಡು ಅಥವಾ ಕನ್ನಡ ಚಿತ್ರರಂಗ ಎಲ್ಲೇ ಆದರೂ ಯಾರಿಂದಲೂ ಅವರ ಸ್ಥಾನ ತುಂಬಲು ಸಾಧ್ಯವಿಲ್ಲ ಎನ್ನುವುದು ಬಹುತೇಕರ ಅಭಿಪ್ರಾಯ. ಅದು ನಿಜ ಕೂಡ ಹೌದು.

ಅಣ್ಣಾವ್ರ ಬಯೋಪಿಕ್ ಸಿನಿಮಾ ಬಗ್ಗೆ ಆಗೊಮ್ಮೆ ಈಗೊಮ್ಮೆ ಚರ್ಚೆ ನಡೆಯುತ್ತದೆ. ಶಿವಣ್ಣ ಹಾಗೂ ಅಪ್ಪು ಬಳಿ ಕೂಡ ಇಂತಹ ಪ್ರಶ್ನೆಗಳನ್ನು ಕೇಳಿದ್ದ ಉದಾಹರಣೆಗಳಿವೆ. ಆದರೆ ಡಾ. ರಾಜ್ ಜೀವನವನ್ನಾಧರಿಸಿ ಸಿನಿಮಾ ಮಾಡುವುದು ಅಷ್ಟು ಸುಲಭವಲ್ಲ. ಕೆಲವರ ಪ್ರಕಾರ ಅಣ್ಣಾವ್ರ ಕಥೆಯನ್ನು ಸಿನಿಮಾ ಮಾಡಿ ಗೆಲ್ಲುವುದು ಕಷ್ಟ. ಕಾರಣ ಅವರದ್ದು ಯಶಸ್ಸಿನ ತುತ್ತತುದಿಗೆ ಏರಿದ ಸಾಧನೆಯ ಕಥೆ. ಒಂದು ಕಮರ್ಷಿಯಲ್ ಬಯೋಪಿಕ್ ಸಿನಿಮಾ ಮಾಡಲು ಕೇವಲ ಗೆಲುವಿನ ಕಥೆ ಇದ್ದರೆ ಸಾಲದು ಎನ್ನುವ ವಾದ ಕೆಲವರದ್ದು. ಗೆದ್ದು ಸೋತ, ಬಳಿಕ ಸೋತು ಗೆದ್ದಿರುವ ಕಥೆಗಳು ಬಯೋಪಿಕ್ ಸಿನಿಮಾಗಳಿಗೆ ಸೂಕ್ತ ಎನ್ನುವ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸುತ್ತಾರೆ. ಇದೇ ಕಾರಣಕ್ಕೆ ಕೆಲ ಮಹಾನ್ ನಾಯಕರ ಕಥೆಯನ್ನು ಬಯೋಪಿಕ್ ಸಿನಿಮಾ ರೂಪದಲ್ಲಿ ತೆರೆಗೆ ತರಲು ಫಿಲ್ಮ್ ಮೇಕರ್ಸ್ ಭಯಪಡುತ್ತಾರೆ. ಕೆಲ ಸಾಧಕರ ಕಥೆಗಳು ಸಿನಿಮಾ ರೂಪ ತಾಳಿ ಸೋತಿವೆ.

ಅಣ್ಣಾವ್ರ ಜೀವನ ಕಥೆಯನ್ನು ಡಾಕ್ಯುಮೆಂಟರಿ ಮಾಡಬಹುದು. ಪುಸ್ತಕ ಬರೆಯಬಹುದು. ಸಿನಿಮಾ ಮಾಡುವುದು ಕಷ್ಟ, ಅಣ್ಣಾವ್ರ ಪಾತ್ರವನ್ನು ಬೇರೊಬ್ಬರು ನಿಭಾಯಿಸುವುದು ಸಾಧ್ಯವಿಲ್ಲ. ಅಭಿಮಾನಿಯೊಬ್ಬರು ಅಣ್ಣಾವ್ರ ಗೆಟಪ್‌ಗಳಲ್ಲಿ ನಟ ಧನಂಜಯ್ ಅವರ ಎಐ ಫೋಟೊಗಳನ್ನು ಸೃಷ್ಟಿಸಿದ್ದಾರೆ. ಡಾಲಿ ಮಾತ್ರ ಅಣ್ಣಾವ್ರ ಪಾತ್ರ ಮಾಡೋಕೆ ಸಾಧ್ಯ ಎಂದಿದ್ದು ಆ ಫೋಟೊಗಳು ವೈರಲ್ ಆಗುತ್ತಿದೆ. ಇನ್ನು ಎಐ ತಂತ್ರಜ್ಞಾನ ಬಳಸಿ ಅಣ್ಣಾವ್ರನ್ನು ತೆರೆಮೇಲೆ ಮರಸೃಷ್ಟಿಸಬಹುದು ಎನ್ನುವ ವಾದ ಕೆಲವರದ್ದು. ಅಂದಹಾಗೆ 'ಅಟ್ಟಹಾಸ' ಚಿತ್ರದಲ್ಲಿ ಅಣ್ಣಾವ್ರ ಪಾತ್ರದಲ್ಲಿ ಸುರೇಶ್ ಒಬೆರಾಯ್ ಕಾಣಿಸಿಕೊಂಡಿದ್ದರು. ನಿಮ್ಮ ಪ್ರಕಾರ ತೆರೆಮೇಲೆ ಡಾ. ರಾಜ್‌ಕುಮಾರ್ ಪಾತ್ರ ಮಾಡಲು ಯಾವ ನಟ ಸೂಕ್ತ ಕಾಮೆಂಟ್ ಮಾಡಿ.

More from Filmibeat

Read more about: rajkumar dhananjay
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X