For Quick Alerts
ALLOW NOTIFICATIONS  
For Daily Alerts

2017ರಲ್ಲಿ ಒಂದಾದ ಮತ್ತು ಬೇರ್ಪಟ್ಟ ಸಿನಿಮಾ ತಾರೆಯರು

By Pavithra
|

ಬಿಗ್ ಸ್ಕ್ರೀನ್ ಮೇಲೆ ತುಂಬಾ ಚೆನ್ನಾಗಿ ಕಾಣಿಸಿಕೊಳ್ಳುವ ಸಿನಿ ತಾರೆಯರ ನಿಜ ಜೀವನ ಹಾಗೂ ಸಿನಿಮಾ ಜೀವನದಲ್ಲಿ ತುಂಬ ವ್ಯತ್ಯಾಸಗಳಿರುತ್ತೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ತಾರಾ ಜೋಡಿಗಳು ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿರುವ ಸಾಕಷ್ಟು ಉದಾಹರಣೆಗಳು ನೋಡೋದಕ್ಕೆ ಸಿಗುತ್ತೆ.

ಇನ್ನು ಕೆಲ ಜೋಡಿಗಳು ಚಿತ್ರರಂಗದಲ್ಲೇ ಇದ್ದುಕೊಂಡು ಸಾಕಷ್ಟು ವರ್ಷ ಸುಖವಾಗಿ ದಾಂಪತ್ಯ ಜೀವನ ನಡೆಸಿದ್ದಾರೆ. ಮತ್ತಷ್ಟು ಸೆಲಬ್ರೆಟಿಗಳು ಕೆಲದಿನಗಳ ಕಾಲ ಚೆನ್ನಾಗಿ ಜೊತೆಯಲ್ಲೇ ಓಡಾಡಿ, ಇನ್ನೇನು ಮದುವೆ ಆಗ್ತಾರೆ ಅಂದುಕೊಳ್ಳುವಷ್ಟರಲ್ಲಿ ಇಬ್ಬರಿಗೂ ಸಂಬಂಧವೇ ಇಲ್ಲದಂತೆ ಬೇರ್ಪಟ್ಟವರು ಕೂಡ ಇಂಡಷ್ಟ್ರಿಯಲ್ಲಿ ಸಿಗ್ತಾರೆ.

2017ರಲ್ಲಿ ಹವಾ ಸೃಷ್ಟಿಸಿದ ಕನ್ನಡ ಚಿತ್ರರಂಗದ ಸ್ಟಾರ್ ನಟರು

ಹಾಗಿದ್ರೆ, ಮುನಿಸನ್ನ ಮರೆತು ಒಂದಾದ ಜೋಡಿ ಯಾವುದು? ದಶಕಗಳ ಕಾಲ ದಾಂಪತ್ಯ ಜೀವನ ನಡೆಸಿ ಸಾಕಷ್ಟು ವರ್ಷಗಳ ಸಂಸಾರದ ಪಯಣಕ್ಕೆ ಎಳ್ಳು-ನೀರು ಬಿಟ್ಟ ಸೆಲಬ್ರೆಟಿಗಳು ಯಾರು? ಈ ವರ್ಷ ಒಂದಾದ ಹಾಗೂ ಬೇರ್ಪಟ್ಟ ಸ್ಟಾರ್ ಗಳು ಯಾರು ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ.....

ಗೌರಿ ಹಬ್ಬಕ್ಕೆ ಸಿಹಿ ಸುದ್ದಿಕೊಟ್ಟ ಸುದೀಪ್ ದಂಪತಿ

ಗೌರಿ ಹಬ್ಬಕ್ಕೆ ಸಿಹಿ ಸುದ್ದಿಕೊಟ್ಟ ಸುದೀಪ್ ದಂಪತಿ

ಕೌಟುಂಬಿಕ ನ್ಯಾಯಾಲಯಕ್ಕೆ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನ ಗೌರಿ-ಗಣೇಶ ಹಬ್ಬದ ಶುಭ ಸಂದರ್ಭದಂದು ಸುದೀಪ್ ದಂಪತಿ ವಾಪಸ್ ಪಡೆದರು. ಎರಡು ವರ್ಷಗಳಿಂದ ನಡೆಯುತ್ತಿದ್ದ ಸುದೀಪ್-ಪ್ರಿಯಾ ವಿಚ್ಛೇದನ ಪ್ರಕರಣ ಸುಖಾಂತ್ಯ ಕಂಡಿತು. ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಚೇದನ ಕೋರಿ ಎರಡು ವರ್ಷಗಳ ಹಿಂದೆ ಕೌಟುಂಬಿಕ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯನ್ನ ನಟ ಸುದೀಪ್ ಹಾಗೂ ಪತ್ನಿ ಪ್ರಿಯಾ ವಾಪಸ್ ಪಡೆದು ಸುಖಿ ಜೀವನಕ್ಕೆ ಮತ್ತೆ ಕಾಲಿಟ್ಟರು. ಮುದ್ದು ಮಗಳಾದ ಸಾನ್ವಿ ಮನಸ್ಸಿಗೆ ನೋವಾಗಬಾರದು ಎಂಬ ಕಾರಣಕ್ಕೆ ಕಿಚ್ಚ-ಪ್ರಿಯಾ ದಂಪತಿ ಮತ್ತೆ ಒಂದಾಗಲು ನಿರ್ಧರಿಸಿ ಲಕ್ಷಾಂತರ ಅಭಿಮಾನಿಗಳಿಗೆ ಮಾದರಿಯಾದರು.

ಚೊಚ್ಚಲ ನಿರ್ದೇಶನದಲ್ಲಿ ಜೈಕಾರ ಹಾಕಿಸಿಕೊಂಡ ಡೈರೆಕ್ಟರ್ಸ್

ವಿಚ್ಛೇದನ ಪಡೆದ ರಜನಿಕಾಂತ್ ಪುತ್ರಿ ಸೌಂದರ್ಯ

ವಿಚ್ಛೇದನ ಪಡೆದ ರಜನಿಕಾಂತ್ ಪುತ್ರಿ ಸೌಂದರ್ಯ

ಸೂಪರ್ ಸ್ಟಾರ್ ರಜನಿಕಾಂತ್ ಅವರ ಎರಡನೇ ಪುತ್ರಿ ಸೌಂದರ್ಯ ಮತ್ತು ಪತಿ ಅಶ್ವಿನ್ ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ಪರಸ್ಪರ ಒಪ್ಪಿಗೆ ಮೆರೆಗೆ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. (ಜುಲೈ 4) ಅರ್ಜಿ ವಿಚಾರಣೆ ನಡೆಸಿದ ಕೌಟುಂಬಿಕ ನ್ಯಾಯಾಲಯ ಅಧಿಕೃತವಾಗಿ ವಿಚ್ಛೇದನಕ್ಕೆ ಒಪ್ಪಿಗೆ ಸೂಚಿಸಿತು. ಈ ಮೂಲಕ ಸೌಂದರ್ಯ ಅಶ್ವಿನ್ ಅವರ 7 ವರ್ಷಗಳ ಸುಂದರ ದಾಂಪತ್ಯ ಅಂತ್ಯವಾಯ್ತು. ಸುಮಾರು 4 ವರ್ಷಗಳ ಕಾಲ ಪ್ರೀತಿಸಿ, 2010ರಲ್ಲಿ ಕುಟುಂಬದವರ ಸಮ್ಮುಖದಲ್ಲಿ ಸೌಂದರ್ಯ ಮತ್ತು ಅಶ್ವಿನ್ ಅವರು ಮದುವೆಯಾಗಿದ್ದರು.

'ಹೆಬ್ಬುಲಿ' ನಟಿಯ ವೈವಾಹಿಕ ಬದುಕು ಅಂತ್ಯ

'ಹೆಬ್ಬುಲಿ' ನಟಿಯ ವೈವಾಹಿಕ ಬದುಕು ಅಂತ್ಯ

ಕಾಲಿವುಡ್, ಮಾಲಿವುಡ್ ಮತ್ತು ಟಾಲಿವುಡ್ ನಲ್ಲಿ ಖ್ಯಾತಿ ಗಳಿಸಿ 'ಹೆಬ್ಬುಲಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೂ ಕಾಲಿಟ್ಟಿದ್ದ ನಟಿ ಅಮಲಾ ಪೌಲ್ ಹಾಗೂ ನಿರ್ದೇಶಕ ಎ.ಎಲ್.ವಿಜಯ್ ವೈವಾಹಿಕ ಜೀವನ ಫೆಬ್ರವರಿಯಲ್ಲಿ ಅಂತ್ಯ ಕಂಡಿತು. ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಕೋರಿ ಎ.ಎಲ್.ವಿಜಯ್ ಮತ್ತು ಅಮಲಾ ಪೌಲ್ ಚೆನ್ನೈನ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿ ಡಿವೋರ್ಸ್ ಪಡೆದುಕೊಂಡರು. ಮದುವೆ ಆದ ಬಳಿಕ ಅಮಲಾ ಪೌಲ್ ನಟಿಸುವುದು ವಿಜಯ್ ಕುಟುಂಬಕ್ಕೆ ಇಷ್ಟವಿರಲಿಲ್ಲ. ಇದರಿಂದ ಇಬ್ಬರ ನಡುವೆ ಮನಸ್ತಾಪ ಹೆಚ್ಚಾಗಿ ವಿಚ್ಛೇದನ ಪಡೆದಿದ್ದೇವೆ ಎಂದು ಕಾರಣ ನೀಡಿ ಇಬ್ಬರೂ ದೂರವಾದರು.

ವಿಚ್ಛೇದನ ಪಡೆದ ಹಿಮೇಶ್ ರೇಶ್ಮಿಯಾ

ವಿಚ್ಛೇದನ ಪಡೆದ ಹಿಮೇಶ್ ರೇಶ್ಮಿಯಾ

ಬಾಲಿವುಡ್ ಗಾಯಕ, ಸಂಗೀತ ಸಂಯೋಜಕ ಹಿಮೇಶ್ ರೇಶ್ಮಿಯಾ ಮತ್ತು ಪತ್ನಿ ಕೋಮಲ್ ಅವರ 22 ವರ್ಷದ ಸುದೀರ್ಘ ದಾಂಪತ್ಯ ಜೀವನವನ್ನ ಅಂತ್ಯ ಮಾಡಿಕೊಂಡರು. ಪರಸ್ಪರ ಒಪ್ಪಿಗೆ ಮೆರೆಗೆ ದಂಪತಿಗಳು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಮುಂಬೈ ಹೈ ಕೋರ್ಟ್ ನಲ್ಲಿ ವಿಚ್ಛೇದನ ಪಡೆದುಕೊಂಡರು. "ಇಬ್ಬರ ಮಧ್ಯೆ ಹೊಂದಾಣಿಕೆಯಿಲ್ಲ, ಹಾಗಾಗಿ ವಿಚ್ಛೇದನ ಪಡೆದಿದ್ದೇವೆ, ತಾವಿಬ್ಬರೂ ಪರಸ್ಪರ ಈಗಲೂ ಗೌರವಿಸುತ್ತೇವೆ". ಅನ್ನುವ ಕಾರಣ ನೀಡಿ ಡಿವೋರ್ಸ್ ಪಡೆದುಕೊಂಡರು.

ನಿಶ್ಚಿತಾರ್ಥದಲ್ಲೇ ಸಂಬಂಧ ಮುರಿದುಕೊಂಡ ಅಖಿಲ್ ಅಕ್ಕಿನೇನಿ

ನಿಶ್ಚಿತಾರ್ಥದಲ್ಲೇ ಸಂಬಂಧ ಮುರಿದುಕೊಂಡ ಅಖಿಲ್ ಅಕ್ಕಿನೇನಿ

ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಟಾಲಿವುಡ್ ಸೂಪರ್ ಸ್ಟಾರ್ ನಟ ನಾಗಾರ್ಜುನ ಪುತ್ರ ಅಖಿಲ್ ಅಕ್ಕಿನೇನಿ ಮತ್ತು ಡಿಸೈನರ್ ಶ್ರಿಯಾ ಭೂಪಾಲ್ ಇಬ್ಬರ ವಿವಾಹ ರದ್ದಾಯ್ತು. ಮೇ ತಿಂಗಳಲ್ಲಿ ಅಖಿಲ್ ಅಕ್ಕಿನೇನಿ ಮತ್ತು ಶ್ರಿಯಾ ಭೂಪಾಲ್ ವಿವಾಹ ಇಟಲಿಯಲ್ಲಿ ಅದ್ಧೂರಿಯಾಗಿ ನಡೆಯಬೇಕಿತ್ತು. ಆದ್ರೆ, ಕಾರಣಾಂತರಗಳಿಂದ ಈ ಮದುವೆ ನಿಂತು ಹೋಯಿತು.

English summary
2017 year end special, himesh reshammiya, actress amala paul, rajinikanth's daughter soundarya got divorced, actor kiccha sudeep divorce case solved, after engagement akhil akkineni wedding called off.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more