For Quick Alerts
  ALLOW NOTIFICATIONS  
  For Daily Alerts

  ಬ್ಯಾಂಕಾಕ್ ನಲ್ಲಿ ಸಿನಿಮಾದವರ ಪಾಲಿಗೆ ಈತನೇ ಭಜರಂಗಿ ಭಾಯಿಜಾನ್

  |

  ಸ್ಯಾಂಡಲ್ ವುಡ್ ಮಂದಿ ಸಿನಿಮಾ ಶೂಟಿಂಗ್ ಗಾಗಿ ರಾಜ್ಯ, ದೇಶ ಬಿಟ್ಟು ವಿದೇಶಕ್ಕೆ ಹೊರಡಲು ಆರಂಭಿಸಿ ಅದೆಷ್ಟೋ ಕಾಲವಾಯ್ತು. ಕಾರಣ ಹೊರ ಜಗತ್ತಿನ ಬಗೆಗೆ ಪ್ರೇಕ್ಷಕರಿಗೆ ಇರುವ ಕುತೂಹಲ ಅಷ್ಟಿಷ್ಟಲ್ಲ. ಹೀಗೆ ದೇಶ ಬಿಟ್ಟು ದೇಶಕ್ಕೆ ಹೋಗಿ ಅಲ್ಲಿ ಶೂಟಿಂಗ್ ಮಾಡಿಕೊಂಡು ಬರುವುದು ನಿಜಕ್ಕೂ ಅಷ್ಟು ಸುಲಭದ ಕೆಲಸವಲ್ಲ.

  ಆದ್ರೆ ನಮ್ಮ ಸ್ಯಾಂಡಲ್ ವುಡ್ ನವರು ಬ್ಯಾಂಕಾಕ್ ನಲ್ಲಿ ಶೂಟಿಂಗ್ ಮಾಡಬೇಕು ಅಂದುಕೊಂಡರೆ ಯೋಚನನೇ ಮಾಡಿಕೊಳ್ಳಲ್ಲ. ಕಾರಣ ಅಲ್ಲಿ ಕೇವಲ ಸ್ಯಾಂಡಲ್ ವುಡ್ ನವರಷ್ಟೇ ಅಲ್ಲ ಟಾಲಿವುಡ್, ಕಾಲಿವುಡ್, ಬಾಲಿವುಡ್ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸುವುದಕ್ಕೆ ಸದಾ ಸಜ್ಜಾಗಿರುತ್ತಾರೆ ಸ್ನೇಹಜೀವಿ ಬಾಬಿ.

  ಮೂಲತಃ ಪಂಜಾಬಿನವರಾದ ಬಾಬಿ ಸಿನಿಮಾ ಮಂದಿಗೆಲ್ಲಾ ಚಿರಪರಿಚಿತ ಹೆಸರು. ಬ್ಯಾಂಕಾಕ್ ನಲ್ಲಿ ಎಲ್ಲಿಯೇ ಶೂಟಿಂಗ್ ಮಾಡಬೇಕೆಂದರು ಬಾಬಿ ಕಣ್ಣುಮುಚ್ಚಿ ತೆಗೆಯೊದ್ರೊಳಗೆ ಎಲ್ಲ ವ್ಯವಸ್ಥೆ ಮಾಡಿಬಿಟ್ಟಿರುತ್ತಾರೆ. ನಮ್ಮವರು ನಿರಾಳವಾಗಿ ಶೂಟಿಂಗ್ ಮುಗಿಸಿಕೊಂಡು ಬರಬಹುದು. ಹೀಗಾಗಿ ಚಿತ್ರರಂಗದವರ ಪಾಲಿಗೆ ಬಾಬಿ ಜೀವದ ಗೆಳೆಯ. ಮುಂದೆ ಓದಿ...

  ಬೆಂಗಳೂರಿನಲ್ಲಿ ಬಾಬಿ ಪಾರ್ಟಿ

  ಬೆಂಗಳೂರಿನಲ್ಲಿ ಬಾಬಿ ಪಾರ್ಟಿ

  ಸಿನಿಮಾದವರ ಪಾಲಿನ ಕುಚುಕು ಗೆಳೆಯ ಬಾಬಿ ಇತ್ತೀಚಿಗೆ ಬೆಂಗಳೂರಿನಲ್ಲಿ ಭರ್ಜರಿ ಪಾರ್ಟಿ ನೀಡುವ ಮೂಲಕ ಮತ್ತಷ್ಟು ಹೊಸಬರೆಡೆಗೆ ತಮ್ಮ ಸ್ನೇಹ ಹಸ್ತ ಚಾಚಿದರು. ನಗರದ ಶಾಂಗ್ರಿಲಾ ಹೋಟೆಲ್ ನಲ್ಲಿ ಅದ್ಧೂರಿ ಪಾರ್ಟಿ ಆಯೋಜಿಸಿದ್ದ ಬಾಬಿ ನಿರ್ದೇಶಕ, ನಿರ್ಮಾಪಕರು ಸೇರಿದಂತೆ ಹಲವು ಟೆಕ್ನಿಷಿಯನ್ ಗಳನ್ನ ಪಾರ್ಟಿಗೆ ಆಹ್ವಾನಿಸಿದ್ದರು. ಸದಾ ನಮ್ಮವರೆ ಅಲ್ಲಿಗೆ ಹೋಗುವುದು ಸಾಮಾನ್ಯ ಸಂಗತಿ. ಅವರಿಗಾಗಿಯೇ ಬಾಬಿ ಖುದ್ದು ಬೆಂಗಳೂರಿಗೆ ಬಂದು ಎಲ್ಲರನ್ನ ಒಂದೆಡೆ ಸೇರಿಸಿ ಒಂದಷ್ಟು ಹೊತ್ತು ಸುಂದರ ಕ್ಷಣಗಳನ್ನ ಕಟ್ಟಿಕೊಟ್ಟಿದ್ದಾರೆ.

  ಸ್ಯಾಂಡಲ್ ವುಡ್ ಸ್ಟಾರ್ಸ್ ಭಾಗಿ

  ಸ್ಯಾಂಡಲ್ ವುಡ್ ಸ್ಟಾರ್ಸ್ ಭಾಗಿ

  ಬಾಬಿ ಆಯೋಜಿಸಿದ್ದ ಈ ಪಾರ್ಟಿಗೆ ಸ್ಯಾಂಡಲ್ ವುಡ್ಡಿನ ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್, ರಾಮು, ಶೈಲೇಂದ್ರ ಬಾಬು, ಯೋಗೇಶ್ ದ್ವಾರಕೀಶ್, ಕೊರಿಯಾಗ್ರಾಫರ್ ತ್ರಿಭುವನ್, ಅಕುಲ್ ಬಾಲಾಜಿ ಸೇರಿದಂತೆ ಸ್ಯಾಂಡಲ್ ವುಡ್ ನ ಹಲವು ನಿರ್ಮಾಪಕರು, ತಂತ್ರಜ್ಞರು, ಬಾಬಿ ಸ್ನೇಹಿತರು ಪಾಲ್ಗೊಂಡಿದ್ದರು.

  ಇಂಡಸ್ಟ್ರಿ ಪಾಲಿಗೆ ಈತ ನಿಜಕ್ಕೂ ಬಾಯಿಜಾನ್

  ಇಂಡಸ್ಟ್ರಿ ಪಾಲಿಗೆ ಈತ ನಿಜಕ್ಕೂ ಬಾಯಿಜಾನ್

  ದಿಲ್ಬಿರ್ ಸಿಂಗ್ ಸಾಹ್ನಿ ಉರ್ಫ್ ಬಾಬಿ ಮೂಲತಃ ಪಂಜಾಬಿನವರು. ತಂದೆಯ ಮರಣದ ನಂತರ ಬಾಬಿ ಬದುಕು ಕಟ್ಟಿಕೊಳ್ಳುವುದಕ್ಕೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅಕ್ಷರಶಃ ಬೀದಿಪಾಲಾಗಿದ್ದ ಬದುಕನ್ನ ಬಂಗಲೆ ಮಟ್ಟಕ್ಕೆ ಕಟ್ಟಿಕೊಳ್ಳುವಲ್ಲಿ ಬಾಬಿ ಹಗಲಿರಳೆನ್ನದೆ ಶ್ರಮಿಸಿದರು. ಆ ನಂತರ ಥೈಲ್ಯಾಂಡ್ ನಲ್ಲಿ ಟೂರ್ಸ್ ಆಂಡ್ ಟ್ರಾವೆಲ್ಸ್ ಆರಂಭಿಸುವ ಮೂಲಕ ಹೊಸ ಬದುಕಿನ ಮೊದಲ ಪುಟ ಆರಂಭವಾಯ್ತು. ಅದೇ ಮುಂದೆ ಯಶಸ್ಸಿನ ಪುಸ್ತಕಕ್ಕೆ ಮುನ್ನುಡಿಯಾಯ್ತು.

  ಸಿನಿಮಾ ಮಂದಿಗೆ ಬಾಬಿ ಆಪ್ತಮಿತ್ರ

  ಸಿನಿಮಾ ಮಂದಿಗೆ ಬಾಬಿ ಆಪ್ತಮಿತ್ರ

  ಆ ನಂತರ 2000ರಲ್ಲಿ ಇಂಡೋ ಬ್ಯಾಂಕಾಕ್ ಎಂಬ ಸಂಸ್ಥೆಯನ್ನ ಹುಟ್ಟು ಹಾಕಿದರು. ಆ ಮೂಲಕ ವೆಡ್ಡಿಂಗ್ ಇವೆಂಟ್, ಲಕ್ಸುರಿ ಪಾರ್ಟಿ ಜೊತೆಗೆ ಸಿನಿಮಾ ಶೂಟಿಂಗ್ ಗಳಿಗೆ ಲೋಕೇಷನ್ ಕೊಡಿಸುವ ಕಾರ್ಯವನ್ನು ಆರಂಭಿಸಿದರು. ಇಂದು ಭಾರತದಿಂದ ಬ್ಯಾಂಕಾಕ್ ಗೆ ಶೂಟಿಂಗ್ ಎಂದು ತೆರಳುವ ಬಹುಪಾಲು ನಿರ್ಮಾಪಕರ ಪಾಲಿಗೆ ಬಾಬಿ ಒಂದು ವಿಧದಲ್ಲಿ ಆಪತ್ ಬಾಂಧವ.

  ಈತ ಇರ್ತಾನೆ ಎಂಬ ಧೈರ್ಯ

  ಈತ ಇರ್ತಾನೆ ಎಂಬ ಧೈರ್ಯ

  ಶೂಟಿಂಗ್ ಗೆ ಸ್ಥಳ ಹುಡುಕಿಕೊಡುವುದು, ಅನುಮತಿ ಕೊಡಿಸುವುದು, ಯಾವುದೇ ರೀತಿಯ ಕಾನೂನು ತೊಂದರೆಗಳಾದರೆ ಖುದ್ದು ಮುಂದೆ ನಿಂತು ಪರಿಹರಿಸಿಕೊಡಿಸುವುದು, ಟೆಕ್ನಿಷಿಯನ್ಸ್, ಜೂನಿಯರ್ ಆರ್ಟಿಸ್ಟ್ ಅರೆಂಜ್ ಮಾಡಿಸುವುದು ಹೀಗೆ ಸಿನಿಮಾ ನಿರ್ಮಾಣಕ್ಕೆ ಸಹಾಯಕವಾಗುವ ಹಲವು ಕಾರ್ಯಗಳನ್ನ ಬಾಬಿ ಲೀಲಾಜಾಲವಾಗಿ ಮಾಡಿಸಿಕೊಡುತ್ತಾರೆ. ಥೈಲ್ಯಾಂಡ್ ಗೆ ಹೋಗಬೇಕೆಂದು ಯಾರೇ ನಿರ್ಧರಿಸಿದರು ಬಾಬಿ ಅವರ ಸಹಾಯಕ್ಕೆ ಅಲ್ಲಿ ಸದಾ ಸನ್ನದ್ಧರಾಗಿರುತ್ತಾರೆ. ಸರಳ ವ್ಯಕ್ತಿತ್ವ, ಸ್ನೇಹಪರ ಗುಣ, ಎಲ್ಲೆರೆಡೆಗೆ ನಿರಪೇಕ್ಷ ಕಾಳಜಿ ತೋರುವ ಬಾಬಿ ಅಪ್ಪಟ ಹೃದಯವಂತ.

  English summary
  Details about bhabhi, who is helping to indian filmmakers for shoot at Bangkok. he was from india. but now he settled in Bangkok.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X