ಆಗಲೂ ಈಗಲೂ ದರ್ಶನ್ ಗೆ ಆ ಒಬ್ಬ ಕ್ರಿಕೆಟರ್ ಮಾತ್ರ ಇಷ್ಟವಂತೆ

Recommended Video

ದರ್ಶನ್ ಗೆ ಈ ಕ್ರಿಕೆಟರ್ ಅಂದ್ರೆ ತುಂಬಾ ಇಷ್ಟವಂತೆ

ದರ್ಶನ್ ಅವರಿಗೆ ಕ್ರಿಕೆಟ್ ಅಂದ್ರೆ ಇಷ್ಟ. ಆಡೋದು ಸ್ವಲ್ಪ ಕಷ್ಟವಂತೆ. ಆದರೂ ಆತ್ಮೀಯರು, ಇಂಡಸ್ಟ್ರಿಗೋಸ್ಕರ ಕೆಲವು ಟೂರ್ನಿ ಆಡಿದ್ದಾರೆ. ಡಾ ರಾಜ್ ಕಪ್ ನಲ್ಲೂ ದರ್ಶನ್ ಕ್ರಿಕೆಟ್ ಆಡಿದ್ದರು. ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲೂ ಆತ್ಮೀಯರ ಒತ್ತಾಯದ ಮೆರೆಗೆ ಒಮ್ಮೆ ಭಾಗವಹಿಸಿದ್ದರು.

ಇದನ್ನ ಹೊರತು ಪಡಿಸಿ ದರ್ಶನ್ ಅಭಿಮಾನಿಗಳು ನಡೆಸುವ ಡಿ ಬ್ರದರ್ಸ್ ಕ್ರಿಕೆಟ್ ಲೀಗ್ ಗೆ ಪ್ರತಿ ವರ್ಷವೂ ಪ್ರೋತ್ಸಾಹ ಕೊಡುವ ಡಿ ಬಾಸ್ ಅತಿಥಿಯಾಗಿ ಬಂದು ಕಾರ್ಯಕ್ರಮವನ್ನ ಯಶಸ್ವಿಗೊಳಿಸಿದ್ದಾರೆ. ಇತ್ತೀಚಿಗಷ್ಟೆ ಡಿಪಿಎಲ್ ನಾಲ್ಕನೇ ಆವೃತ್ತಿ ಬೆಂಗಳೂರು ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ನಡೆಯಿತು.

ಈ ಟೂರ್ನಿಯನ್ನ ಉದ್ಘಾಟಿಸಿದ ಮಾತನಾಡಿದ ದರ್ಶನ್ ತಮ್ಮ ಮೆಚ್ಚಿನ ಕ್ರಿಕೆಟಿಗ ಯಾರೂ ಎಂದು ಹೇಳಿಕೊಂಡರು. ಕ್ರಿಕೆಟ್ ನಲ್ಲಿ ಆಗಲೂ ಈಗಲೂ ನನಗೆ ಸಚಿನ್ ತೆಂಡೂಲ್ಕರ್ ಒಬ್ಬರೇ ಇಷ್ಟ ಎಂದು ದರ್ಶನ್ ತಿಳಿಸಿದರು.

Who is Darshan favorite cricketer

ಸಚಿನ್ ತೆಂಡೂಲ್ಕರ್ ಈಗ ಕ್ರಿಕೆಟ್ ಆಡುತ್ತಿಲ್ಲ. ನಿವೃತ್ತಿ ಘೋಷಿಸಿರುವ ಸಚಿನ್ ಮುಂಬೈ ಇಂಡಿಯನ್ಸ್ ತಂಡದ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದ್ರೆ, ಅವರ ಅಭಿಮಾನಿಗಳು ಮಾತ್ರ ಈಗಲೂ ಸಚಿನ್ ನಮ್ಮ ಫೆವರೇಟ್ ಅಂತಾರೆ.

ಇನ್ನು ದರ್ಶನ್ ಅವರ ನೆಚ್ಚಿನ ಆಟ ಯಾವುದು ಎಂದು ನೋಡಿದ್ರೆ, ಹಾರ್ಸ್ ರೈಡಿಂಗ್ ನಮ್ಮ ಫೆವರೇಟ್ ಅಂತಾರೆ ಡಿ ಬಾಸ್. ಒಡೆಯ ಸಿನಿಮಾ ಮುಗಿಸಿ ಕುರುಕ್ಷೇತ್ರ ಬಿಡುಗಡೆಗಾಗಿ ಕಾಯುತ್ತಿರುವ ದರ್ಶನ್ ಈಗ ರಾಬರ್ಟ್ ಸಿನಿಮಾ ಮಾಡ್ತಿದ್ದಾರೆ.

More from Filmibeat

English summary
Challenging star darshan inaugurated D Brothers cricket league on last sunday (may 12th). and he revealed who is his favorite cricketer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X