ದುನಿಯಾ ವಿಜಿ-ಪಾನಿಪುರಿ ಕಿಟ್ಟಿ ಮಧ್ಯೆ ಇರೋ ಈ 'ಪ್ರಸಾದ್' ಯಾರು.?
ಜಿಮ್ ಟ್ರೈನರ್ ಪಾನಿಪುರಿ ಕಿಟ್ಟಿಯ ಅಣ್ಣನ ಮಗ ಮಾರುತಿ ಗೌಡ ಅವರ ಮೇಲೆ ನಟ ದುನಿಯಾ ಮತ್ತು ಸ್ನೇಹಿತರು ಹಲ್ಲೆ ಮಾಡಿದ್ದಾರೆ ಎಂಬ ಆರೋಪದಲ್ಲಿ ವಿಜಿ ಬಂಧನವಾಗಿದ್ದಾರೆ.
ಒಂದು ಕಾಲದಲ್ಲಿ ವಿಜಿಗೆ ಜೀವದ ಗೆಳೆಯನಾಗಿದ್ದ ಕಿಟ್ಟಿ ಈಗ ಶತ್ರುವಾಗಿದ್ದಾರೆ ಎಂಬುದು ಈ ಘಟನೆ ನಡೆಯೋವರೆಗೂ ಯಾರಿಗೂ ಗೊತ್ತಿರಲಿಲ್ಲ. ಸರಿ ಈ ಘಟನೆಗೆ ಕಾರಣ ಏನು, ಯಾವ ದ್ವೇಷದ ಪರಿಣಾಮ ಎಂದು ಹುಡುಕುತ್ತಾ ಹೋದಾಗ 'ಪ್ರಸಾದ್' ಎಂಬ ಹೆಸರು ಹೆಚ್ಚು ಸದ್ದು ಮಾಡುತ್ತಿದೆ.
ಎಲ್ಲದಕ್ಕೂ ಈ ಪ್ರಸಾದ್ ಕಾರಣ ಎಂದು ಪಾನಿಪುರಿ ಕಿಟ್ಟಿ ಕೂಡ ಆರೋಪ ಮಾಡ್ತಿದ್ದಾರೆ. ಪ್ರಸಾದ್ ಅವರೇ ವಿಜಿಗೆ ಸಾಥ್ ನೀಡಿ ಈ ಹಲ್ಲೆ ಮಾಡಿಸಿದ್ದಾರೆ ಎಂದು ನೇರವಾಗಿ ಕಿಟ್ಟಿ ಆರೋಪ ಮಾಡಿದ್ದಾರೆ. ಅಂದ್ಹಾಗೆ, ವಿಜಿ ಜೊತೆ ಪ್ರಸಾದ್ ಕೂಡ ಬಂಧನವಾಗಿದ್ದಾರೆ. ಅಷ್ಟಕ್ಕೂ, ಈ ಪ್ರಸಾದ್ ಯಾರು.? ಮುಂದೆ ಓದಿ....

ದುನಿಯಾ ವಿಜಿ ಜಿಮ್ ಟ್ರೈನರ್
ಪಾನಿಪುರಿ ಕಿಟ್ಟಿ 'ಮಾಸ್ತಿಗುಡಿ' ಚಿತ್ರದವರೆಗೂ ನಟ ದುನಿಯಾ ವಿಜಯ್ ಅವರಿಗೆ ಪರ್ಸನಲ್ ಜಿಮ್ ಟ್ರೈನರ್ ಆಗಿದ್ದರು. ಸುಮಾರು 20 ವರ್ಷದಿಂದ ಕಿಟ್ಟಿ ಹಾಗೂ ವಿಜಿ ಅವರಿಗೆ ಪರಿಚಯವಿದೆ ಎಂದು ಸ್ವತಃ ವಿಜಯ್ ಅವರೇ ಹೇಳಿಕೊಂಡಿದ್ದರು. ಆದ್ರೆ, ಮಾಸ್ತಿಗುಡಿ ನಂತರ ಕಿಟ್ಟಿ ವಿಜಿಯಿಂದ ದೂರವಾದರು. ನಂತರ ವಿಜಿಗೆ ಜಿಮ್ ಟ್ರೈನರ್ ಆಗಿದ್ದೇ ಈ ಪ್ರಸಾದ್.

ಪ್ರಸಾದ್ ಮತ್ತು ಕಿಟ್ಟಿ ಕೂಡ ಸ್ನೇಹಿತರೇ
ಅಂದ್ಹಾಗೆ, ಈ ಪ್ರಸಾದ್ ಬೇರೆ ಯಾರು ಅಲ್ಲ. ಕಿಟ್ಟಿ ಹೇಳುವ ಪ್ರಕಾರ ಪ್ರಸಾದ್ ತಮ್ಮ ಜೊತೆಗೆ ಜಿಮ್ ನಲ್ಲಿ ವರ್ಕೌಟ್ ಮಾಡ್ತಿದ್ದಾರೆ ಜಿಮ್ ಪಾಟ್ನರ್. ಇಬ್ಬರು ಸೇರಿ ಜಿಮ್ ನಡೆಸುತ್ತಿದ್ದೇವು. 2013ರಲ್ಲಿ ನಮ್ಮಿಬ್ಬರ ಕೆಲವು ವಿಷ್ಯಗಳಿಗೆ ಮನಸ್ತಾಪ ಬಂತು. ಅಲ್ಲಿಂದ ಇಬ್ಬರು ಬೇರೆ ಬೇರೆಯಾದೆವು ಎಂದು ಕಿಟ್ಟಿ ಹೇಳಿದ್ದಾರೆ.

ಪ್ರಸಾದ್ ಸಹೋದರ ಹೇಳೋದೆ ಬೇರೆ
ಇನ್ನು ಈ ಬಗ್ಗೆ ಪ್ರಸಾದ್ ಅವರ ಸಹೋದರ ಪ್ರಮೋದ್ ಹೇಳುವುದೇ ಬೇರೆ. ಪಾನಿಪುರಿ ಕಿಟ್ಟಿಗೆ ಜಿಮ್ ಗುರುನೇ ಈ ಪ್ರಸಾದ್. ಆರಂಭದಲ್ಲಿ ಕಿಟ್ಟಿ ಪಾನಿಪುರಿ ಅಂಗಡಿ ಇಟ್ಟಿದ್ದರು. ಆಗ ಪ್ರಸಾದ್ ಅವರು ಬಾಡಿಬಿಲ್ಡಿಂಗ್ ನಲ್ಲಿ ಯಶಸ್ಸು ಕಂಡಿದ್ದರು. ಆಗ ಕಿಟ್ಟಿ ಸ್ವತಃ ಪ್ರಸಾದ್ ಬಳಿ ಬಂದು ನನಗೂ ನಿಮ್ಮ ರೀತಿ ಆಗ್ಬೇಕು ಅಂತ ಕೇಳಿಕೊಂಡರು.

ಕಿಟ್ಟಿಗೆ ಟ್ರೈನ್ ಮಾಡಿದ ಪ್ರಸಾದ್
ಹೀಗೆ, ಪ್ರಸಾದ್ ಬಳಿ ಬಂದ ಕಿಟ್ಟಿ ಅವರ ಜೊತೆಯಲ್ಲಿ ವರ್ಕೌಟ್ ಮಾಡಿದ. ಪ್ರಸಾದ್ ಅವರೇ ಕಿಟ್ಟಿಯನ್ನ ಟ್ರೈನಪ್ ಮಾಡಿದ್ರು. ಆದ್ರೆ, ಕಿಟ್ಟಿ ಪ್ರಸಾದ್ ಅವರಿಗೆ ಯಾವ ಗೌರವ ಕೂಡ ನೀಡಿಲ್ಲ. ಹಾಗಾಗಿ, ಪ್ರಸಾದ್ ಅವರಿಗೆ ಕಿಟ್ಟಿ ಮೇಲೆ ಬೇಸರವಾಯಿತು. ಅಲ್ಲಿಂದ ಕಿಟ್ಟಿಯನ್ನ ಪ್ರಸಾದ್ ದೂರುವಿಟ್ಟರು.

ವಿಜಿಗೆ ತಿಳಿಯಿತು
ಪಾನಿಪುರಿ ಕಿಟ್ಟಿಯ ಬಗ್ಗೆ ನಟ ದುನಿಯಾ ವಿಜಯ್ ಗೆ ಗೊತ್ತಾಯಿತು. ಸರಿಯಾಗಿ ಟ್ರೈನ್ ಮಾಡ್ತಿಲ್ಲ ಎಂಬ ಕಾರಣಕ್ಕೆ ಪ್ರಸಾದ್ ಅವರನ್ನ ಆಯ್ಕೆ ಮಾಡಿಕೊಂಡರು. ಪ್ರಸಾದ್ ಗೆ ಮೊದಲೇ ವಿಜಿಯ ಪರಿಚಯವಿತ್ತು. ಪ್ರಸಾದ್ ಟ್ರೈನಿಂಗ್ ಹೇಗೆ ಇದೆ ಎಂಬುದು ತಿಳಿದುಕೊಂಡ ವಿಜಿ ಅವರು ಕಿಟ್ಟಿಯನ್ನ ದೂರವಿಟ್ಟರು ಎಂದು ಪ್ರಸಾದ್ ಅವರ ಸಹೋದರ ಪ್ರಮೋದ್ ಹೇಳಿದ್ದಾರೆ.

ಪ್ರಸಾದ್-ಕಿಟ್ಟಿ ದ್ವೇಷಕ್ಕೆ ವಿಜಿ ಬಲಿಯಾದ್ರಾ.?
ಹೀಗೆ, ಜಿಮ್ ಟ್ರೈನರ್ ಗಳಾಗಿದ್ದ ಪ್ರಸಾದ್ ಮತ್ತು ಪಾನಿಪುರಿ ಕಿಟ್ಟಿಯ ನಡುವಿನ ದ್ವೇಷಕ್ಕೆ ನಟ ದುನಿಯಾ ವಿಜಯ್ ಬಲಿಯಾದ್ರಾ ಎಂಬ ಅನುಮಾನ ಈಗ ಕಾಡುತ್ತಿದೆ.


Click it and Unblock the Notifications











