»   » ಸನ್ನಿಗೂ, ಪಾಂಡೆಗೂ ಯೋಗರಾಜ ಭಟ್ರರ ಸವಾಲು!

ಸನ್ನಿಗೂ, ಪಾಂಡೆಗೂ ಯೋಗರಾಜ ಭಟ್ರರ ಸವಾಲು!

Posted By: ಜೀವನರಸಿಕ
Subscribe to Filmibeat Kannada

ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು... ಆಚೆಗ್ಹಾಕೋಳೇ ವೈಫು. ಈ ಲಿರಿಕ್ಸ್ ಕೇಳಿ ಹೊಟ್ಟೆಯೊಳಗೆ ಚಿಟ್ಟೆ ಬಿಟ್ಟಂತೆ ನಕ್ಕಿದ್ರು ಸ್ಯಾಂಡಲ್ವುಡ್ನ ಸ್ಟಾರ್ಗಳು ಸೂಪರ್ಸ್ಟಾರ್ಗಳು. ಇನ್ನು ಪಡ್ಡೆಗಳು ಕುಡುಕರು ಅದನ್ನ ಇವತ್ತಿಗೂ ತಮ್ಮ ಮೊಬೈಲ್ನಲ್ಲಿ ಫೇವರಿಟ್ ಸಾಂಗ್ ಮಾಡ್ಕೊಂಡವ್ರೆ.

ಅನುಮಾನವೇ ಬೇಡ ಇಲ್ಲಿದ್ದ ಕಮಾಲ್ ಯೋಗರಾಜ್ ಭಟ್ರದ್ದು. ಈ ಟಿಪಿಕಲ್ ನಿರ್ದೇಶಕನ ಸಿನಿಮಾಗಳಿಗೆ ಮೋಡಿಯಾಗದವರಿಲ್ಲ. ಯೋಗರಾಜ್ ಭಟ್ರು ನಿರ್ದೇಶನಕ್ಕಿಂತ ಹೆಚ್ಚು ಪ್ರಸಿದ್ಧವಾಗಿರೋದು ತಮ್ಮ ವಿಶಿಷ್ಟ ಶೈಲಿಯ ಲಿರಿಕ್ಸ್ಗೆ. ಭಟ್ರು ತಮ್ಮ ಸಿನಿಮಾಗೆ ಲಿರಿಕ್ಸ್ ಬರೀಲಿ ಅಂತ ಅದೆಷ್ಟೋ ಸಿನಿಮಾ ಟೀಂಗಳು ಭಟ್ರ ಹಿಂದೆ ಬೀಳ್ತವೆ.

Who is earning more than lyricist Yogaraj Bhat

ಭಟ್ರು ಬರೆದಿರುವ ಕೆಲವೊಂದು ಹಾಡುಗಳನ್ನು ಹಾಗೆ ನೆನಪಿಗೆ ತಂದುಕೊಳ್ಳಿ... 'ಮುಂಗಾರು ಮಳೆಯೆ ಏನು ನಿನ್ನ ಹನಿಗಳ ಲೀಲೆ' ಹಾಡನ್ನು ಬರೆದವರೇ... 'ಹಳೆ ಪಾತ್ರೆ, ಹಳೆ ಕಬ್ಣ (ಜಂಗ್ಲಿ)', 'ಕತ್ಲಲ್ಲಿ ಕರಡೀಗೆ ಜಾಮೂನು ತಿನ್ಸೋಕೆ ಯಾವತ್ತು ಹೋಗ್ಬಾರ್ದು ರೀ' ಮುಂತಾದ ಹಾಡುಗಳನ್ನೂ ಬರೆದಿದ್ದಾರೆ. [ಟೆಕ್ಕಿ ಇಸ್ಟೈಲ್ ನಲ್ಲಿ ಖಾಲಿ ಕ್ವಾರ್ಟು ಸಾಂಗೂ..]

ಆದ್ರೆ ಭಟ್ರು ಹಾಡು ಬರೆಯೋಕೆ ಸಾಧ್ಯವಾಗೋದು ಕೆಲವೇ ಕೆಲವು ಸಿನಿಮಾಗಳಿಗೆ ಮಾತ್ರ. ಅಂದ ಹಾಗೆ ಭಟ್ರು ಒಂದು ಲಿರಿಕ್ಸ್ಗೆ ಯಾವುದೇ ಸ್ನೇಹ ಇಲ್ಲದೆ ಪಕ್ಕಾ ಕಮರ್ಷಿಯಲ್ಲಾಗಿ ಚಾರ್ಜ್ ಮಾಡೋದಾದ್ರೆ ಎರಡು ಲಕ್ಷ ಪಡೆದುಕೊಳ್ತಾರೆ. ಎಷ್ಟೋ ಸಿನಿಮಾ ತಂಡಗಳು ಅದಕ್ಕಿಂತ ಹೆಚ್ಚು ಕೊಡೋದಕ್ಕೂ ರೆಡಿ ಆದ್ರೆ ಬರೆಯೋದಕ್ಕೆ ಭಟ್ರಿಗೆ ಸಮಯ ಇಲ್ಲ ಅಷ್ಟೇ.

ಸ್ನೇಹಿತರಿಗೆ ಸದಾ ಹಾಡು ಬರೆಯೋದಕ್ಕೆ ಪ್ರಯತ್ನಿಸೋ ಭಟ್ಟರು ಕೆಲವೊಂದು ಹಾಡನ್ನ ಕೇವಲ ಐದು ನಿಮಿಷದಲ್ಲಿ ಬರೆದಿದ್ದಾರೆ. ನೀವೇ ಲೆಕ್ಕ ಹಾಕಿ, ಹಾಗೆ ನೋಡಿದ್ರೆ ನಿಮಿಷಕ್ಕೆ ಅತ್ಯಂತ ಹೆಚ್ಚು ಹಣ ಪಡೆಯೋದ್ರಲ್ಲಿ ನಮ್ಮ ಭಟ್ರು ಸನ್ನಿ ಲಿಯೋನ್, ಪೂನಂ ಪಾಂಡೆಗೂ ಸವಾಲೇ ತಾನೇ?

English summary
Who is earning more than lyricist Yogaraj Bhat? Bollywood stars Sunny Leone or Poonam Pandey? He can beat both of them. Do you know how? Yogaraj Bhat, who is known for funny lyrics, has been charging Rs. 2 lakh per song! Sometimes Bhat can write a song in 5 minutes too. So, calculate.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada