ನಿರ್ದೇಶಕ ರಾಜಮೌಳಿ ಹಿಂದೆ ಅವಿತುಕೊಂಡಿರುವ ಮಹಿಳೆ ಯಾರು?
ಟಾಲಿವುಡ್ ನಿರ್ದೇಶಕ ಎಸ್ ಎಸ್ ರಾಜಮೌಳಿ ನಿನ್ನೆ ರಾತ್ರಿ ಒಂದು ಫೋಟೋ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಲಂಡನ್ ನಲ್ಲಿ ಕ್ಲಿಕ್ ಮಾಡಿದ ಈ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.
ಈ ಫೋಟೋಗೆ ತಮಾಷೆಯ ಕಾಮೆಂಟ್ ಗಳು ಬರುತ್ತಿವೆ. ಅದಕ್ಕೆ ಕಾರಣ ರಾಜಮೌಳಿ ಹಿಂದೆ ನಿಂತಿರುವ ಒಬ್ಬ ಮಹಿಳೆ. ಹೌದು, ಈ ಫೋಟೋ ಸರಿಯಾಗಿ ಗಮನಿಸಿ ರಾಜಮೌಳಿ ಕಾಲ ಹಿಂದೆ ಮತ್ತೊಂದು ಕಾಲು ಕಾಣಿಸುತ್ತಿದೆ. ರಾಜಮೌಳಿ ಹಿಂದೆ ಇರುವ ವ್ಯಕ್ತಿ ದೇಹ ಬಚ್ಚಿಟ್ಟುಕೊಂಡರೂ ಕಾಲು ಮಾತ್ರ ಫೋಟೋದಲ್ಲಿ ಸೆರೆಯಾಗಿದೆ.
ಈ ಫೋಟೋದಲ್ಲಿ ನಟ ಪ್ರಭಾಸ್, ನಿರ್ದೇಶಕ ರಾಜಮೌಳಿ, ನಟಿ ಅನುಷ್ಕಾ ಶೆಟ್ಟಿ, ರಾಣಾ ದಗ್ಗುಬಾಟಿ, ನಿರ್ಮಾಪಕರಾದ ಶೋಭು ಯಾರ್ಲಗಡ್ಡ ಇದ್ದಾರೆ. ರಾಜಮೌಳಿ ಹಿಂದೆ ನಿಂತಿರುವವರು ಯಾರು ಎನ್ನುವ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಸೃಷ್ಟಿಯಾಗಿದೆ. ಹೀಗಾಗಿ ಫೋಟೋಗೆ ಫನ್ನಿ ಕಾಮೆಂಟ್ ಗಳು ಬರುತ್ತಿವೆ.

'ಬಾಹುಬಲಿ ದಿ ಬಿಗಿನಿಂಗ್' ಚಿತ್ರ ಲಂಡನ್‌ನ ಪ್ರತಿಷ್ಠಿತ ಆಲ್ಬರ್ಟ್ ಹಾಲ್‌ನಲ್ಲಿ ಪ್ರದರ್ಶಿಸಲಾಗುತ್ತಿದೆ. ಹೀಗಾಗಿ ಇಡೀ ಚಿತ್ರತಂಡ ಇದರಲ್ಲಿ ಭಾಗಿಯಾಗಿದೆ. ಈ ಸಂತಸ ಕ್ಷಣದ ಫೋಟೋ ಇದಾಗಿದೆ.
ಇಡೀ 'ಬಾಹುಬಲಿ' ತಂಡ ಈ ಫೋಟೋದಲ್ಲಿ ಇದ್ದು, ರಾಜಮೌಳಿ ಹಿಂದೆ ಇರುವುದು ನಟಿ ತಮನ್ನಾ ಭಾಟಿಯಾ ಇರಬಹುದು ಎಂದು ಕೆಲವರು ಊಹಿಸಿದ್ದಾರೆ. ಇನ್ನು ಕೆಲವರು ರಾಜಮೌಳಿ ಪತ್ನಿ ಇರಬಹುದು ಎಂದಿದ್ದಾರೆ. ಅದೇನೇ ಇದ್ದರೂ, ರಾಜಮೌಳಿ ಸಿನಿಮಾದ ರೀತಿ ಅವರ ಈ ಫೋಟೋ ಸಾಕಷ್ಟು ಟಾಕ್ ಶುರು ಮಾಡಿದೆ.


Click it and Unblock the Notifications











