ಇವರು 'ಕನ್ನಡದ ರಣ್ಬೀರ್ ಕಪೂರ್' ಎಂದ ತರುಣ್ ಸುಧೀರ್, ಯಾರು ಆ ನಟ.?

ಕನ್ನಡ ನಟರನ್ನ ಬಾಲಿವುಡ್ ನಟರಿಗೆ ಹೋಲಿಸುವುದು ಸಾಮಾನ್ಯ. ಅವರು ಕನ್ನಡದ ಸಲ್ಮಾನ್ ಖಾನ್, ಇವರು ಕನ್ನಡದ ಶಾರೂಖ್ ಖಾನ್, ಅವರು ಕನ್ನಡದ ರಜನಿಕಾಂತ್, ಇವರು ಕನ್ನಡದ ಅಮಿತಾಭ್ ಬಚ್ಚನ್ ಎಂದೆಲ್ಲಾ ಹೇಳುವುದನ್ನ ನೋಡಿದ್ದೇವೆ.

ಆದ್ರೀಗ, ಕನ್ನಡದಲ್ಲೊಬ್ಬ ರಣ್ಬೀರ್ ಕಪೂರ್ ಹುಟ್ಟಿಕೊಳ್ಳುವ ಸೂಚನೆ ಸಿಕ್ಕಿದೆ. ಕನ್ನಡದಲ್ಲಿ ಯಾರು ರಣ್ಬೀರ್ ಕಪೂರ್ ಎಂದು ಸ್ಟಾರ್ ನಿರ್ದೇಶಕ ತರುಣ್ ಸುಧೀರ್ ಭವಿಷ್ಯ ನುಡಿದಿದ್ದಾರೆ.

ಧರ್ಮ ಕೀರ್ತಿರಾಜ್ ಅಭಿನಯದ 'ಚಾಣಕ್ಷ' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಮರಿ ಟೈಗರ್ ವಿನೋದ್ ಪ್ರಭಾಕರ್, ತರುಣ್ ಸುಧೀರ್, ಯಶಸ್ ಸೂರ್ಯ ಆಗಮಿಸಿದ್ದರು. ಈ ವೇಳೆ ಮಾತನಾಡಿದ ತರುಣ್ ಇವರು ಕನ್ನಡದ ರಣ್ಬೀರ್ ಕಪೂರ್ ಆಗಬಹುದು ಎಂದು ಭರವಸೆ ವ್ಯಕ್ತಪಡಿಸಿದ್ರು. ಅಷ್ಟಕ್ಕೂ, ತರುಣ್ ಹೇಳಿದ್ದು ಯಾರಿಗೆ.? ಮುಂದೆ ಓದಿ....

ಧರ್ಮ 'ಕನ್ನಡದ ರಣ್ಬೀರ್ ಕಪೂರ್'.?

ಧರ್ಮ 'ಕನ್ನಡದ ರಣ್ಬೀರ್ ಕಪೂರ್'.?

ಧರ್ಮ ಕೀರ್ತಿರಾಜ್ ಅವರ ಡೆಡಿಕೇಷನ್, ಸಿನಿಮಾದ ಮೇಲಿನ ಪ್ರೀತಿಯ ಬಗ್ಗೆ ಮಾತನಾಡಿದ ತರುಣ್ ಸುಧೀರ್ ''ಒಂದೊಳ್ಳೆ ಸ್ಕ್ರಿಪ್ಟ್ ಸಿಕ್ಕರೇ ಧರ್ಮ ಕನ್ನಡದ ರಣ್ಬೀರ್ ಕಪೂರ್ ಆಗ್ತಾನೆ ಎಂಬ ಭರವಸೆ ನನಗಿದೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸ್ಕ್ರಿಪ್ಟ್ ಆಯ್ಕೆಯಲ್ಲಿ ತಪ್ಪು ಮಾಡಿದ

ಸ್ಕ್ರಿಪ್ಟ್ ಆಯ್ಕೆಯಲ್ಲಿ ತಪ್ಪು ಮಾಡಿದ

'ಧರ್ಮ ಕೀರ್ತಿರಾಜ್ ಸ್ಕ್ರಿಪ್ಟ್ ಆಯ್ಕೆಯಲ್ಲಿ ಮಾಡಿದ ತಪ್ಪಿನಿಂದ ಅವರಿಗೆ ದೊಡ್ಡ ಯಶಸ್ಸು ಸಿಗಲಿಲ್ಲ' ಎಂದು ತರುಣ್ ಅಭಿಪ್ರಾಯಪಟ್ಟರು. 'ನವಗ್ರಹ' ಸಿನಿಮಾ ಮೂಲಕ ಎಂಟ್ರಿ ಕೊಟ್ಟ ಧರ್ಮಕೀರ್ತಿರಾಜ್, 'ಮುಮ್ತಾಜ್', 'ಒಲವೇ ವಿಸ್ಮಯ', 'ಬಿಂದಾಸ್ ಗೂಗ್ಲಿ' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

'ನವಗ್ರಹ' ಸಮಯದಲ್ಲಿ ಧರ್ಮ ಪರಿಚಯ

'ನವಗ್ರಹ' ಸಮಯದಲ್ಲಿ ಧರ್ಮ ಪರಿಚಯ

2006-07 ರಿಂದ ಧರ್ಮ ಕೀರ್ತಿರಾಜ್ ಪರಿಚಯ. 'ನವಗ್ರಹ' ಸಿನಿಮಾ ಮಾಡಬೇಕಾದರೇ ನಾನು ಮತ್ತೆ ಧರ್ಮ ಒಂದೇ ರೂಂನಲ್ಲಿ ಇದ್ವಿ. ಆಗ ನಾಳೆ ಶೂಟಿಂಗ್ ಇದೆ ಅಂದ್ರೆ, ಹಿಂದಿನ ದಿನವೇ ಒಂದು ಟ್ರಯಲ್ ಮಾಡಿ ತೋರಿಸ್ತಿದ್ದ. ಈಗಲೂ ಅದೇ ಮುಗ್ದತೆ, ಅದೇ ಸಿನಿಮಾ ಪ್ರೀತಿ ಅವರಲ್ಲಿದೆ'' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

'ಚಾಣಕ್ಷ' ಸಿನಿಮಾದ ಬಗ್ಗೆ

'ಚಾಣಕ್ಷ' ಸಿನಿಮಾದ ಬಗ್ಗೆ

ಧರ್ಮಕೀರ್ತಿರಾಜ್ ಅಭಿನಯದ ಈ ಚಿತ್ರದಲ್ಲಿ ಅರ್ಚನಾ ರಾವ್ ಮತ್ತು ಸುಶ್ಮಿತಾ ಗೌಡ ನಾಯಕಿಯಾಗಿಯರಾಗಿ ಕಾಣಿಸಿಕೊಂಡಿದ್ದಾರೆ. ಮಹೇಶ್ ಚಿಣ್ಮಯ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅಭಿಮಾನ್ ರಾಯ್ ಸಂಗೀತ ನೀಡಿದ್ದು, ಈಗಾಗಲೇ ಟ್ರೈಲರ್ ಮತ್ತು ಹಾಡುಗಳು ಬಿಡುಗಡೆಯಾಗಿದೆ..

More from Filmibeat

English summary
Kannada Director Tarun Sudhir said Dharma Keerthiraj is Ranbir Kapoor of Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X