For Quick Alerts
  ALLOW NOTIFICATIONS  
  For Daily Alerts

  'ಚಕ್ರವರ್ತಿ' ದರ್ಶನ್ ಗೆ ಮರ್ಮಾಘಾತ ಕೊಟ್ಟ ಮಲ್ಲಿಕಾರ್ಜುನ್ ಯಾರು.? ಆತನ ಹಿನ್ನಲೆ ಏನು.?

  By Harshitha
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಳಿ ಮ್ಯಾನೇಜರ್ ಆಗಿ ಮಲ್ಲಿಕಾರ್ಜುನ್ ಕೆಲಸ ಮಾಡುತ್ತಿದ್ದರು. ಆದ್ರೆ, ಮಲ್ಲಿಕಾರ್ಜುನ್ ರನ್ನ ದರ್ಶನ್ ಯಾವತ್ತೂ ಮ್ಯಾನೇಜರ್ ರೀತಿ ಟ್ರೀಟ್ ಮಾಡಿಲ್ಲ. ಸ್ವಂತ ತಮ್ಮನಿಗಿಂತ ಹೆಚ್ಚಾಗಿ ನೋಡಿಕೊಂಡಿದ್ದಾರೆ.

  ಕಷ್ಟ ಎಂದಾಗ ಮಲ್ಲಿಕಾರ್ಜುನ್ ಗೆ ದರ್ಶನ್ ಹಣ ಸಹಾಯ ಮಾಡಿದ್ದಾರೆ. ಬರೀ ದರ್ಶನ್ ಮಾತ್ರ ಅಲ್ಲ, ದಿನಕರ್ ಗೂ ಮಲ್ಲಿಕಾರ್ಜುನ್ ಆತ್ಮೀಯ. ದಿನಕರ್ ಕೂಡ ಮಲ್ಲಿಕಾರ್ಜುನ್ ಗೆ ಲಕ್ಷಾಂತರ ರೂಪಾಯಿ ಹಣ ಕೊಟ್ಟಿದ್ದಾರೆ. ಮಲ್ಲಿಕಾರ್ಜುನ್ ಮೇಲೆ ಅಪಾರ ನಂಬಿಕೆ ಇಟ್ಟಿದ್ದ ದರ್ಶನ್ ಹಾಗೂ ದಿನಕರ್ ಇಂದು ಅಕ್ಷರಶಃ ಶಾಕ್ ಆಗಿದ್ದಾರೆ.

  ಕೋಟ್ಯಾಂತರ ರೂಪಾಯಿ ಸಾಲ ಮಾಡಿಕೊಂಡು ಮಲ್ಲಿಕಾರ್ಜುನ್ ಇದ್ದಕ್ಕಿದ್ದಂತೆ ಮಂಗ ಮಾಯಾ ಆಗಿದ್ದಾರೆ. ಅಸಲಿಗೆ, ಈ ಮಲ್ಲಿಕಾರ್ಜುನ್ ಯಾರು.? ಯಾವ ಊರಿನವರು.? ಅವರಿಗೆ ದರ್ಶನ್ ಪರಿಚಯ ಆಗಿದ್ದು ಹೇಗೆ.? ತಮ್ಮ ಕ್ಯಾಂಪ್ ನೊಳಗೆ 'ಮಲ್ಲಿ' ಎಂಟ್ರಿ ಆಗಲು ದರ್ಶನ್ ಯಾಕೆ ಪರ್ಮಿಶನ್ ಕೊಟ್ಟರು.? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ. ಓದಿರಿ...

  ಮಲ್ಲಿಕಾರ್ಜುನ್ ಎಲ್ಲಿಯವರು.?

  ಮಲ್ಲಿಕಾರ್ಜುನ್ ಎಲ್ಲಿಯವರು.?

  ಮಲ್ಲಿಕಾರ್ಜುನ್.ಬಿ.ಸಂಕನಗೌಡರ್ ಮೂಲತಃ ಗದಗದವರು. ಗದಗ ಹಾಗೂ ಬಾಗಲಕೋಟೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ ಮಲ್ಲಿಕಾರ್ಜುನ್ ಗೆ ಕನ್ನಡ ಚಿತ್ರರಂಗ ಕೈಬೀಸಿ ಕರೆಯಿತು.

  ಮಹಾ ಮೋಸ: ಮ್ಯಾನೇಜರ್ 'ಮಲ್ಲಿ'ಯಿಂದ 'ದಾಸ' ದರ್ಶನ್ ಗೆ ದೋಖಾ.!ಮಹಾ ಮೋಸ: ಮ್ಯಾನೇಜರ್ 'ಮಲ್ಲಿ'ಯಿಂದ 'ದಾಸ' ದರ್ಶನ್ ಗೆ ದೋಖಾ.!

  ದಿನಕರ್ ಗೆ ಪರಿಚಯವಾದ ಮಲ್ಲಿಕಾರ್ಜುನ್

  ದಿನಕರ್ ಗೆ ಪರಿಚಯವಾದ ಮಲ್ಲಿಕಾರ್ಜುನ್

  ಊರು ಬಿಟ್ಟು ಬೆಂಗಳೂರಿಗೆ ಬಂದ ಮಲ್ಲಿಕಾರ್ಜುನ್ ಕೆಲ ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದರು. ಆಗಲೇ, ಮಲ್ಲಿಕಾರ್ಜುನ್ ಗೆ ದಿನಕರ್ ತೂಗುದೀಪ ಪರಿಚಯ ಆಗಿದ್ದು.

  'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ದರ್ಶನ್ ಮುಚ್ಚಿಟ್ಟ ರಹಸ್ಯವೇನು?'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ದರ್ಶನ್ ಮುಚ್ಚಿಟ್ಟ ರಹಸ್ಯವೇನು?

  ಹದಿನೈದು ವರ್ಷಗಳ ಹಿಂದೆ ಪರಿಚಯ

  ಹದಿನೈದು ವರ್ಷಗಳ ಹಿಂದೆ ಪರಿಚಯ

  ''2003 ಯಲ್ಲಿ ನನಗೆ ಮಲ್ಲಿಕಾರ್ಜುನ್ ಪರಿಚಯ ಆಯ್ತು. ನಾನು ಎಂ.ಎಸ್.ರಮೇಶ್ ಅವರಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದೆ. 'ವಾಲ್ಮೀಕಿ' ಸಿನಿಮಾಗೆ ಮಲ್ಲಿ ಕೂಡ ಬಂದ. ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದೇವೆ'' ಎನ್ನುತ್ತಾರೆ ದಿನಕರ್ ತೂಗುದೀಪ.

  ದಿನಕರ್ ಡೈರೆಕ್ಟರ್ ಕ್ಯಾಪ್ ತೊಟ್ಟಾಗ...

  ದಿನಕರ್ ಡೈರೆಕ್ಟರ್ ಕ್ಯಾಪ್ ತೊಟ್ಟಾಗ...

  ''2006 ರಲ್ಲಿ ನಾನು 'ಜೊತೆ ಜೊತೆಯಲಿ' ಚಿತ್ರ ಮಾಡಬೇಕಾದರೆ, ಅವನನ್ನೇ ಕೋ-ಡೈರೆಕ್ಟರ್ ಆಗಿ ತೆಗೆದುಕೊಂಡೆ. ಅದಾದ್ಮೇಲೆ 'ನವಗ್ರಹ'ಕ್ಕೂ ಕೆಲಸ ಮಾಡಿದ್ದ'' - ದಿನಕರ್ ತೂಗುದೀಪ

  ಚಿತ್ರ ನಿರ್ಮಾಣಕ್ಕೆ ಕೈಹಾಕಿದ ಮಲ್ಲಿಕಾರ್ಜುನ್

  ಚಿತ್ರ ನಿರ್ಮಾಣಕ್ಕೆ ಕೈಹಾಕಿದ ಮಲ್ಲಿಕಾರ್ಜುನ್

  ''ಟೆಕ್ಕಿಗಳ ಜೊತೆ ಸೇರಿಕೊಂಡು ಯಶ್ ರವರ 'ಮೊದಲ ಸಲ' ಚಿತ್ರ ನಿರ್ಮಾಣ ಮಾಡಿದ. ಅದರಿಂದ ಅವನಿಗೆ ಲಾಸ್ ಆಯ್ತು. ಅದಾದ್ಮೇಲೆ, ನಮ್ಮ ಹತ್ತಿರ ಬಂದ'' - ದಿನಕರ್ ತೂಗುದೀಪ

  ಮ್ಯಾನೇಜರ್ ಆದ 'ಮಲ್ಲಿ'

  ಮ್ಯಾನೇಜರ್ ಆದ 'ಮಲ್ಲಿ'

  ಚಿತ್ರ ನಿರ್ಮಾಣ ಮಾಡಿ ಕೈಸುಟ್ಟುಕೊಂಡ್ಮೇಲೆ ದರ್ಶನ್ ಹಾಗೂ ದಿನಕರ್ ಜೊತೆ ಮಲ್ಲಿಕಾರ್ಜುನ್ ಸೇರಿಕೊಂಡರು. ಮಲ್ಲಿಕಾರ್ಜುನ್ ಮೇಲೆ ನಂಬಿಕೆ ಇಟ್ಟು ದರ್ಶನ್ ತಮ್ಮ ಮ್ಯಾನೇಜರ್ ಪೋಸ್ಟ್ ಕೊಟ್ಟರು.

  ನಲವತ್ತು ಲಕ್ಷ ಸಾಲ

  ನಲವತ್ತು ಲಕ್ಷ ಸಾಲ

  ''ಬುಲ್ ಬುಲ್' ಚಿತ್ರ ಮಾಡುವಾಗ ಜೊತೆಗೆ ಸೇರಿಸಿಕೊಳ್ಳಿ ಅಂತ ಕೇಳಿದ. ಅದಾದ್ಮೇಲೆ ತೂಗುದೀಪ ಡಿಸ್ಟ್ರಿಬ್ಯೂಷನ್ಸ್ ಶುರು ಮಾಡಿದ್ವಿ. ಆಗ ನಾನೇ ಅವನಿಗೆ ನಲವತ್ತು ಲಕ್ಷ ಕೊಟ್ಟಿದ್ದೆ. ಆದ್ರೆ, ಅವನು ಹಳೇ ಸಾಲ ತೀರಿಸುತ್ತಿರಲಿಲ್ವಂತೆ. ಸಾಲ ಬೆಳೆದು ಬೆಳೆದು ಈಗ ಹೀಗಾಗಿದೆ. ಆಗಾಗ ಕಷ್ಟ ಇದೆ ಅಂತ ದುಡ್ಡು ತೆಗೆದುಕೊಳ್ಳುತ್ತಿದ್ದ'' ಅಂತಾರೆ ದಿನಕರ್ ತೂಗುದೀಪ

  ದಿನಕರ್ ಗೆ ವಿಷಯ ಗೊತ್ತಾಗಿದ್ದು ಯಾವಾಗ.?

  ದಿನಕರ್ ಗೆ ವಿಷಯ ಗೊತ್ತಾಗಿದ್ದು ಯಾವಾಗ.?

  ''ಮಲ್ಲಿ ನಾಪತ್ತೆ ಆಗಿದ್ದಾನೆ ಅಂತ ನನಗೆ ವಿಷಯ ಗೊತ್ತಾಗಿದ್ದೇ ನಾಲ್ಕೈದು ದಿನಗಳ ಹಿಂದೆ. ಅವನ ಹೆಂಡತಿ ಹಾಗೂ ಅಣ್ಣನಿಗೆ ಹದಿನೈದು ದಿನಗಳ ಹಿಂದೆ ವಿಷಯ ಗೊತ್ತಾಗಿದೆ ಅಷ್ಟೇ'' - ದಿನಕರ್ ತೂಗುದೀಪ

  ಯಾರಿಗೂ ಮೋಸ ಮಾಡಲ್ಲ

  ಯಾರಿಗೂ ಮೋಸ ಮಾಡಲ್ಲ

  ''ತುಂಬಾ ಬಾರಿ ಫೋನ್ ಮಾಡಿದ್ಮೇಲೆ, ''ಸಾರಿ ದಿನಕರ್, ನನ್ನಿಂದ ತೊಂದರೆ ಆಗಿದೆ. ನಾನು ಸಾಯಲ್ಲ. ಯಾರಿಗೂ ಮೋಸ ಮಾಡಲ್ಲ. ಸ್ವಲ್ಪ ಟೈಮ್ ತಗೊಂಡು ದುಡಿದು ತೀರಿಸುವೆ ಅಂತ ಹೇಳ್ತಿದ್ದಾನೆ'' ಅಂತಾರೆ ದಿನಕರ್ ತೂಗುದೀಪ

  English summary
  Who is Mallikarjun B Sankanagoudar.? How did he become Darshan's manager.? Read the article to know the answers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X