ಅರುಣಾ ಕುಮಾರಿ ವೃತ್ತಾಂತ ಬಿಚ್ಚಿಟ್ಟ ನಾಗವರ್ಧನ್ ಯಾರು?

ಅರುಣಾ ಕುಮಾರಿ ವಂಚನೆ ಪ್ರಕರಣಕ್ಕೆ ಬೆಂಗಳೂರು ಮೂಲದ ಉದ್ಯಮಿ ನಾಗವರ್ಧನ್ ಟ್ವಿಸ್ಟ್ ಕೊಟ್ಟಿದ್ದಾರೆ. ನಟ ದರ್ಶನ್, ದರ್ಶನ್ ಆಪ್ತರು ಹಾಗೂ ರಾಬರ್ಟ್ ನಿರ್ಮಾಪಕ ಉಮಾಪತಿ ಹೆಸರನ್ನು ದುರ್ಬಳಕೆ ಮಾಡಿಕೊಂಡು 25 ಕೋಟಿ ರೂಪಾಯಿ ವಂಚಿಸಲು ಅರುಣಾ ಕುಮಾರಿ ಎನ್ನುವ ಮಹಿಳೆ ಪ್ರಯತ್ನಿಸಿದ್ದ ಘಟನೆ ಕಳೆದ ಎರಡು ದಿನದಿಂದ ಭಾರಿ ಕೋಲಾಹಲ ಸೃಷ್ಟಿಸಿದೆ.

Recommended Video

25 ಕೋಟಿ ವಂಚನೆ ಪ್ರಕರಣದಲ್ಲಿ ಡಿ ಬಾಸ್ ಬೆಂಬಲಕ್ಕೆ ನಿಂತ ನಾಗವರ್ಧನ್ ಯಾರು..? | Filmibeat Kannada

ಈ ವಿಚಾರಕ್ಕೆ ಈಗ ಉದ್ಯಮಿಯೊಬ್ಬರು ಎಂಟ್ರಿಯಾಗಿದ್ದು ಅರುಣಾ ಕುಮಾರಿ ಈ ಮೊದಲು ಸಹ ಇಂತಹ ವಂಚನೆ ಮಾಡಿದ್ದಾರೆ ಎಂಬ ಆಘಾತಕಾರಿ ವಿಷಯ ಬಹಿರಂಗಪಡಿಸಿದ್ದಾರೆ. ಅಷ್ಟಕ್ಕೂ, ಅರುಣಾ ಕುಮಾರಿಯಿಂದ ಈ ಹಿಂದೆ ವಂಚನೆಗೆ ಒಳಗಾಗಿದ್ದ ನಾಗವರ್ಧನ್ ಯಾರು? ಅವರ ಹಿನ್ನೆಲೆ ಏನು? ಮುಂದೆ ಓದಿ....

ಉದ್ಯಮಿ ನಾಗವರ್ಧನ್

ಉದ್ಯಮಿ ನಾಗವರ್ಧನ್

ಅರುಣಾ ಕುಮಾರಿ ಎನ್ನುವ ಮಹಿಳೆ ಈ ಮೊದಲು ನಂದಿತಾ ಹೆಸರಿನಲ್ಲಿ ನಾಗವರ್ಧನ್‌ಗೆ ಪರಿಚಯ ಆಗಿ ಲಕ್ಷಾಂತರ ರೂಪಾಯಿ ಮೋಸ ಮಾಡಿದ್ದಾರೆ ಎಂದು ದೂರಿದ್ದಾರೆ. ನಾಗವರ್ಧನ್ ಉದ್ಯಮಿ ಎಂದು ಹೇಳಲಾಗುತ್ತಿದೆ. ಗೀತರಚನೆಕಾರ ನಾಗೇಂದ್ರ ಪ್ರಸಾದ್ ಅವರ ಸ್ನೇಹಿತ ಸಹ ಹೌದು. ಇವರಿಬ್ಬರ ನಡುವೆ ಬಹಳ ವರ್ಷದ ಪರಿಚಯ ಇತ್ತು. ಅರುಣಾ ಕುಮಾರಿಯಿಂದಲೇ ಇವರಿಬ್ಬರ ಸ್ನೇಹದಲ್ಲಿ ಬಿರುಕು ಮೂಡಿತ್ತು ಎನ್ನುವ ವಿಚಾರವನ್ನು ಸ್ವತಃ ನಾಗವರ್ಧನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಜೆಡಿಎಸ್ ಪಕ್ಷದ ಕಾರ್ಯಕರ್ತ

ಜೆಡಿಎಸ್ ಪಕ್ಷದ ಕಾರ್ಯಕರ್ತ

ನಟ ವಿಷ್ಣುವರ್ಧನ್ ಅಭಿಮಾನಿ ಸಂಘದಲ್ಲಿ ಸಕ್ರಿಯನಾಗಿದ್ದ ನಾಗವರ್ಧನ್ ಕೆಲ ವರ್ಷಗಳಿಂದ ಸಕ್ರಿಯ ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಜೆಡಿಎಸ್ ಪಕ್ಷದ ಕಾರ್ಯಕರ್ತನಾಗಿರುವ ನಾಗವರ್ಧನ್, ಕುಮಾರಸ್ವಾಮಿ, ನಿಖಿಲ್ ಕುಮಾರ್ ಜೊತೆಗಿನ ಫೋಟೋಗಳನ್ನು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಚಿತ್ರಗಳಲ್ಲೂ ನಟಿಸಿರುವ ಬಗ್ಗೆ ಮಾಹಿತಿ

ಚಿತ್ರಗಳಲ್ಲೂ ನಟಿಸಿರುವ ಬಗ್ಗೆ ಮಾಹಿತಿ

'ಕೋಟೆ ಹೈದ' ಸಿನಿಮಾದ ಮುಹೂರ್ತದಲ್ಲಿ ನಾಗವರ್ಧನ್ ಪಾಲ್ಗೊಂಡಿದ್ದರು. ಸಿನಿಮಾ ಇಂಡಸ್ಟ್ರಿಯ ಜೊತೆ ಸಂಬಂಧ ಹೊಂದಿರುವ ನಾಗವರ್ಧನ್ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ ಎಂಬ ಮಾಹಿತಿ ಇದೆ. ಆದರೆ, ನಿಖರವಾಗಿ ಯಾವ ಸಿನಿಮಾಗಳು ಎಂದು ತಿಳಿದು ಬಂದಿಲ್ಲ. ಫೇಸ್ ಬುಕ್ ಪ್ರೊಫೈಲ್ ನಲ್ಲಿ ಆಕ್ಟರ್ ಅಂತ ಬರೆದುಕೊಂಡಿದ್ದಾರೆ.

ಸಿನಿಮಾ ಹೆಸರಿನಲ್ಲಿ ವಂಚನೆ

ಸಿನಿಮಾ ಹೆಸರಿನಲ್ಲಿ ವಂಚನೆ

ಸಿನಿಮಾ ಹೀರೋ ಆಗ್ಬೇಕು ಎಂಬ ಆಸೆ ಹೊಂದಿದ್ದ ನಾಗವರ್ಧನ್‌ಗೆ ಅರುಣಾ ಕುಮಾರಿ ಸಿನಿಮಾ ಮಾಡ್ತೇನೆ ಎಂದು ಹೇಳಿ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಚಿತ್ರದ ಮುಹೂರ್ತಕ್ಕೆ ಆಹ್ವಾನ ಪತ್ರಿಕೆಯೂ ಸಿದ್ದಪಡಿಸಲಾಗಿತ್ತಂತೆ. ಕೊನೆ ಘಳಿಗೆಯಲ್ಲಿ ಮುಹೂರ್ತ ರದ್ದಾಯಿತು ಎಂದು ನಾಗವರ್ಧನ್‌ಗೆ ಮಹಿಳೆ ಹೇಳಿದ್ದರಂತೆ.

More from Filmibeat

English summary
Who is Nagavardhan who revealed about Aruna Kumari Background.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X