ಮಾಯಾಂಗನೆ ಪವಿತ್ರಾ ಗೌಡ ಮೋಹದಲ್ಲಿ ಸಿಲುಕಿದ್ಹೇಗೆ ದಾಸ...?

By ಫಿಲ್ಮಿಬೀಟ್ ಡೆಸ್ಕ್

ಹೆಣ್ಣಿಂದ ರಾವಣ ಕೆಟ್ಟ .. ಮಣ್ಣಿಂದ ಕೌರವ ಕೆಟ್ಟ .. ಪೌರಾಣಿಕ ಪ್ರಸಂಗ ನೆನಪಿಸುವ ಈ ಗಾದೆಯಲ್ಲಿ ಅಡಗಿರುವ ಪಾಠವನ್ನ ದರ್ಶನ್ ಕಲಿತಿದ್ದರೆ ಇವತ್ತು ಮತ್ತೊಮ್ಮೆ ಪೊಲೀಸರ ಅತಿಥಿಯಾಗುವ ಪ್ರಮೇಯ ಬರುತ್ತಿರಲಿಲ್ಲ. ಹೆಣ್ಣಿಂದ ದರ್ಶನ್ ಕೆಟ್ಟ ಎಂಬ ಮಾತನ್ನೂ ಕೂಡ ಕನ್ನಡಿಗರು ಹೇಳ್ತಿರಲಿಲ್ಲ.

ಆದರೆ.. ದರ್ಶನ್ ಎಂಬ ವ್ಯಕ್ತಿಯ ಬದುಕು ಭಂಡ ಬಾಳು. ಯಶಸ್ಸನ್ನು ಸಾಧಿಸುವುದಕ್ಕಿಂತ ಅದನ್ನು ಕಾಪಾಡಿಕೊಳ್ಳುವುದು ಮುಖ್ಯ ಎನ್ನುವುದನ್ನ ಮರೆತು ಅಹಂಕಾರದಿಂದ ಮೆರೆದಾಡುತ್ತಿದ್ದ ದರ್ಶನ್‌ಗೆ ಮೊದಲಿಂದ ಪವಿತ್ರಾ ಗೌಡ ಮಗ್ಗಲದ ಮುಳ್ಳಾಗಿಯೇ ಕಾಡುತ್ತಿದ್ದಳು. ಆದರೆ.. ಪ್ರೇಮಕ್ಕೆ ಕಣ್ಣಿಲ್ಲ. ಕಾಮಕ್ಕೆ ಕಣ್ಣು ಕಿವಿ ಮೂಗು ಬಾಯಿ ಏನೂ ಇಲ್ಲ

who-is-pavithra-gowda-do-you-know-how-the-actress-met-darshan-and-how-they-fell-in-love

ಯಾರೀಕೆ ಪವಿತ್ರಾ?

ಪವಿತ್ರಾ ಗೌಡ ಅಂದಾಕ್ಷಣ ಯಾರಾಕೆ ಅನ್ನಿಸೋದ್ರಲ್ಲಿ ವಿಶೇಷವೇನಿಲ್ಲ. ಅಗಮ್ಯ ಎನ್ನುವ ಪರಮತೋಪು ಚಿತ್ರದಲ್ಲಿ ಒಂದು ಪಾತ್ರ ನಿರ್ವಹಿಸಿದ್ದ ಪವಿತ್ರಾ ಹೇಳಿಕೊಳ್ಳುವಂಥಾ ಯಶಸ್ವಿ ನಟಿಯೇನಲ್ಲ. ಕಾಲೇಜು ದಿನಗಳಲ್ಲೇ ಬಣ್ಣದ ಜಗತ್ತಿನ ಕ್ರೇಜು ಹತ್ತಿಸಿಕೊಂಡು ನಾಟಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಿಂಚಿದ್ದಳು. ಆ ನಂತರ ಆಕೆ ಹಚ್ಚಿಕೊಂಡಿದ್ದು ಮಾಡೆಲ್ ಆಗುವ ಕನಸನ್ನ.

ಬಿಷಪ್ ಕಾಟನ್ ಕಾಲೇಜಿನಲ್ಲಿ ಬಿಸಿಎ ಪದವಿ ಮುಗಿಸಿರುವ ಈಕೆ, ಮಾಡೆಲಿಂಗ್ನಿಂದ ಬಂದ ಚೆಲುವೆ. ಸಾಕಷ್ಟು ರ‍್ಯಾಂಪ್ ಶೋಗಳಲ್ಲಿ ಬೆಕ್ಕಿನ ನಡಿಗೆ ಮಾಡಿ ಅನುಭವ ಇದೆ. ಅಲ್ಲದೆ ಬೆಂಗಳೂರಿನಲ್ಲಿ ನಡೆದ ಮೂರು ಫ್ಯಾಷನ್ ಶೋಗಳಲ್ಲಿ ಮೂರು ಬಾರಿ ಶೋ ಟಾಪರ್ ಪಟ್ಟ ಗಿಟ್ಟಿಸಿಕೊಂಡ ಹುಡುಗಿ. ಈಕೆ ಮೂಲತಃ ಬೆಂಗಳೂರಿನ ಜೆಪಿ ನಗರದಾಕೆ. ಅವಕಾಶಕ್ಕಾಗಿ ಅಡ್ಡಾಡ್ತಿದ್ದ ಕಾಲದಲ್ಲಿಯೇ ಸ್ಕೋಡಾ ಕಾರಿನಲ್ಲೇ ಸವಾರಿ ಮಾಡುತ್ತಿದ್ದ ಪವಿತ್ರಳ ತಂದೆ ಬಿಲ್ಡರ್ ಎಂಬ ಮಾಹಿತಿಗಳಿವೆ.

who-is-pavithra-gowda-do-you-know-how-the-actress-met-darshan-and-how-they-fell-in-love

ಪದವಿ ಮುಗಿಯುತ್ತಲೇ ಮಾಡೆಲ್ ಆಗುವ ನಿಟ್ಟಿನಲ್ಲಿ ಪ್ರಯತ್ನ ಹಾಕಲಾರಂಭಿಸಿ ಮಾಡೆಲಿಂಗ್ ಜಗತ್ತಿಗೆ ಅಡಿಯಿರಿಸಿದಳು. ಆಕ್ಟೀವ್ ಆಗಿರುವ ಈ ಹುಡುಗಿ ಬಲು ಬೇಗನೆ ಆ ವಲಯದ ಎಲ್ಲರ ಗಮನ ಸೆಳೆದಳು. ಈ ಸುಂದರಿ ಅತೀ ಕಡಿಮೆ ಅವಧಿಯಲ್ಲೇ ಹಲವಾರು ಚಿನ್ನಾಭರಣ ಮಳಿಗೆಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡು ಮಾಡೆಲ್ ಲೋಕದಲ್ಲಿ ಮಿಸ್ ಬೆಂಗಳೂರು ಆಗಿಯೂ ಹೊರಹೊಮ್ಮಿದಳು.

ಆರಂಭದಿಂದಲೂ ಪವಿತ್ರಾಗೆ ಚಿತ್ರರಂಗದತ್ತ ಒಂದು ಸೆಳೆತವಿತ್ತಲ್ಲಾ? ಆಕೆಯಿದ್ದ ಮಾಡೆಲಿಂಗ್ ಜಗತ್ತು ಅದಕ್ಕೆ ಪೂರಕವಾಗಿದ್ದುದರಿಂದ ಆ ಸೆಳೆತ ಇನ್ನೂ ಬಲವಾಗುತ್ತಾ ಸಾಗಿತು. ಅಂತೂ ತಮ್ಮ ಸಿನಿಮಾ 'ಅಗಮ್ಯ'ಕ್ಕಾಗಿ ಹೀರೋಯಿನ್ನುಗಳ ತಲಾಶಿನಲ್ಲಿದ್ದ ನಿರ್ದೇಶಕ ಉಮೇಶ್ ಗೌಡರ ಕಣ್ಣಿಗೆ ಬಿದ್ದ ಪವಿತ್ರಾ ಸೆಲೆಕ್ಟ್ ಆದಳು. ಒಂದು ಕಾಲದಲ್ಲಿ ಬೆಂಗಳೂರು ಭೂಗತವನ್ನ ಆಳಿದ್ದ ಎಂ.ಪಿ ಜಯರಾಜ್ ಮಗ ನಾಯಕನಾಗಿದ್ದ ಈ ಸಿನಿಮಾದಲ್ಲಿ ಪವಿತ್ರಾ ಕೂಡಾ ನಾಯಕಿಯಾಗಿ ಕಂಗೊಳಿಸಿದ್ದಳು. ಆದರೆ ಸಿನಿಮಾ ರಿಲೀಸಾಗಿ ಒಂದು ಶೋ ಕೂಡಾ ನೆಟ್ಟಗೆ ನಡೆಯಲಿಲ್ಲ.

who-is-pavithra-gowda-do-you-know-how-the-actress-met-darshan-and-how-they-fell-in-love

ಅಷ್ಟೊತ್ತಿಗೆಲ್ಲ ಫಿಜ್ಜಾ' ಎಂಬ ಚಿತ್ರ ಮಾಡಿ ಗೆಲುವು ಕಂಡ ತಂಡ ತಮಿಳಿನಲ್ಲಿ ಇನ್ನೊಂದು ಚಿತ್ರಕ್ಕೆ ಕೈ ಹಾಕಿತ್ತು. ಅದಕ್ಕೆ 54312 ಎಂಬ ಹೆಸರನ್ನೂ ಇಟ್ಟಿತ್ತು. ಈ ಚಿತ್ರಕ್ಕೆ ಪವಿತ್ರಾ ನಾಯಕಿಯಾಗಿದ್ದಳು. ಆದರೆ ಆ ನಂತರ ಆ ಚಿತ್ರದ ಕಥೆ ಏನಾಯ್ತು ಅನ್ನುವುದು ಖುದ್ದು ಪವಿತ್ರಾಗೆ ಗೊತ್ತು.

ಪವಿತ್ರಾ ಗೌಡ ನಟನೆಯಲ್ಲಿ ವೀಕು. ಆ ಚೆಂದದ ಮುಖದಲ್ಲಿ ಭಾವನೆಗಳನ್ನೇ ಹೊಮ್ಮಿಸಲಾಗದ ಸ್ಥಿತಿ ಆಕೆಯದ್ದು. ಒಟ್ಟಾರೆಯಾಗಿ ಅವಕಾಶಗಳಿಗೇ ಬರ ಬಡಿದುಕೊಂಡಿತ್ತು. ಇಂಥಾ ಪವಿತ್ರಾ ಎಲ್ಲಿ..? ಛಾಲೆಂಜಿಂಗ್ ಸ್ಟಾರ್ ದರ್ಶನ್ ಎಲ್ಲಿ? ಇವರಿಬ್ಬರ ನಡುವೆ ಸಂಬಂಧ ಕುದುರೋದಾದರೂ ಹೇಗೆ ಸಾಧ್ಯ ಮುಂತಾದ ಪ್ರಶ್ನೆಗಳು ಸಹಜವೇ. ಇದಕ್ಕೆ ಉತ್ತರ ಮುಬ್ಬುಗತ್ತಲಿನಲ್ಲಿ ನಡೆಯುವ ಪಾರ್ಟಿಗಳು.

who-is-pavithra-gowda-do-you-know-how-the-actress-met-darshan-and-how-they-fell-in-love

ಹೌದು. ಈ ಪವಿತ್ರಾ ಮತ್ತು ಕನ್ನಡ ಚಿತ್ರರಂಗದಲ್ಲಿ ಕಾಸ್ಟೂಮ್ ಡಿಸೈನರ್ ಆಗಿ ಗುರುತಿಸಿಕೊಂಡಿರುವ ಮಹಿಳೆ. ಪೇಜ್ ಥ್ರೀ ಪಾರ್ಟಿಯ ಗೆಳತಿಯರು. ಇವರ ಗಂಡ ವೃತ್ತಿಯಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಕೊರಿಯೋಗ್ರಾಫರ್ ಮತ್ತು ನಿರ್ದೇಶಕ .ಒಂದು ಕಾಲದಲ್ಲಿ ದರ್ಶನ್‌ರ ಬಹುತೇಕ ಸಿನಿಮಾಗಳಿಗೆ ಕೋರಿಯೋಗ್ರಫಿ ಮಾಡುತ್ತಿದ್ದದ್ದು ಇದೇ ಕಾಸ್ಟೂಮ್ ಡಿಸೈನರ್ ಅವರ ಗಂಡ ಆದುದರಿಂದ ಅವರ ಹೆಂಡತಿ ಕೂಡಾ ದರ್ಶನ್ ಅವರಿಗೆ ಪರಿಚಿತರೇ. ಈ ಪರಿಚಯದಿಂದ ದರ್ಶನ್ ಗೆ ಪರಿಚಯವಾದ ಪವಿತ್ರಾ, ಆ ಕಾಲದಲ್ಲಿ ದರ್ಶನ್ ಜಗ್ಗು ದಾದಾ ಎಂಬ ಸಿನಿಮಾ ಮಾಡುತ್ತಿದ್ದನಲ್ಲ.. ಆಗಲೂ ಕೂಡ ನಾಯಕಿ ಪಾತ್ರಕ್ಕೆ ಆಡಿಷನ್ ಕೊಡಲು ಹೋಗಿದ್ದಳು ಎನ್ನುತ್ತೆ ಗಾಂಧಿನಗರ.

ಹೀಗೆ ಶುರುವಾದ ಸ್ನೇಹ ಆ ನಂತರ ಪ್ರೇಮಕ್ಕೆ ತಿರುಗಲು ಹೆಚ್ಚೇನು ಸಮಯ ಬೇಕಾಗಲಿಲ್ಲ. ಇದಕ್ಕೆ ಸಾಕ್ಷಿ ಎನ್ನುವಂತೆ 2016ರಲ್ಲಿ ಜಗ್ಗುದಾದಾ ತೆರೆಗೆ ಬಂದ ಬೆನ್ನಲ್ಲಿಯೇ, 2017ರಲ್ಲಿ ತಾರಕ್ ಚಿತ್ರದ ಬಿಡುಗಡೆಯ ಸಮಯದಲ್ಲಿ ಪವಿತ್ರಾ ಗೌಡ ತನ್ನ ಪ್ರಿಯಕರ ದರ್ಶನ್ ಜೊತೆ ಅತ್ಯಾಪ್ತವಾದ ಫೋಟೋವೊಂದನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಳು. ಮೊಟ್ಟ ಮೊದಲ ಬಾರಿ ವಿವಾದದ ಕಿಡಿಯನ್ನ ಹೊತ್ತಿಸಿ ದರ್ಶನ್ ದಾಂಪತ್ಯದಲ್ಲಿ ಮತ್ತೊಂದು ಸುತ್ತಿನ ಬಿರುಗಾಳಿಯನ್ನೂ ಎಬ್ಬಿಸಿದ್ದಳು.

who-is-pavithra-gowda-do-you-know-how-the-actress-met-darshan-and-how-they-fell-in-love

ವೈರಲ್ ಆದ ಆ ಪೋಟೋ ಬೆನ್ನಲ್ಲಿಯೇ ಒಂದು ವೇಳೆ ಹಳೇ ಸ್ನೇಹವನ್ನೆ ಮುಂದಿಟ್ಟುಕೊಂಡು ತಾರಕ್' ಬಿಡುಗಡೆಯ ಸಮಯದಲ್ಲೇ ಈಕೆ ದರ್ಶನ್ ಅವರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರಾ? ಎನ್ನುವ ಅನುಮಾನ ಅನೇಕರಲ್ಲಿತ್ತು. ಈ ಬಗ್ಗೆ ಚರ್ಚೆ ಕೂಡ ನಡೆದಿತ್ತು. ಹೀಗಾಗಿಯೇ ಅವತ್ತೇ ದರ್ಶನ್ ಗೆ ಅನೇಕರು ಕಿವಿ ಮಾತು ಹೇಳಿದ್ದರು. ಒಂದಲ್ಲಾ ಒಂದು ದಿನ ವಿಚಾರ ಹೊರಗೆ ಬರಲೇಬೇಕು. ಅದು ಇಲ್ಲಸಲ್ಲದ ರೆಕ್ಕೆ ಪುಕ್ಕ ಕಟ್ಟಿಕೊಂಡು ನೆಮ್ಮದಿ ಹಾಳಾಗೋ ಮುಂಚೆ ಪವಿತ್ರಾ ಜೊತೆಗಿನ ತಮ್ಮ ಸಂಬಂಧಕ್ಕೆ ಪೂರ್ಣ ವಿರಾಮ ಹಾಕಿ ಎಂದಿದ್ದರು. ಆದರೆ ಅಂಹಕಾರ ಎನ್ನುವುದು ಬೆಳೆಯುವ ಗಿಡಕ್ಕೆ ಹತ್ತುವ ರೋಗ. ಈ ರೋಗದಿಂದ ಇವತ್ತು ದರ್ಶನ್ ನೆಮ್ಮದಿಗೆ ಮತ್ತೊಂದು ರೌಂಡು ಕೊಳ್ಳಿ ಇಟ್ಟಿದೆ.

More from Filmibeat

English summary
Kannada actress Pavithra Gowda is in the news for all the wrong reasons again as actor Darshan is arrested in connection with a murder case. But Do You Know Who is Pavithra Gowda, how did this actress of Kannada film industry meet Darshan, how did the two fall in love?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X