For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್ ವುಡ್ ಪವರ್ ಫುಲ್ ಪೊಲೀಸ್ ಯಾರು?

  By ಜೀವನರಸಿಕ
  |

  ತಮ್ಮ ವೃತ್ತಿ ಬದುಕಿನಲ್ಲಿ ಒಮ್ಮೆಯಾದರೂ ಖಾಕಿ ಖದರ್ ತೋರಿಸಬೇಕೆಂದು ಸಾಮಾನ್ಯವಾಗಿ ಎಲ್ಲ ನಟರಷ್ಟೇ ಅಲ್ಲ ನಟಿಯರು ಬಯಸುತ್ತಾರೆ. ಈ ಸ್ಟಾರ್ ಗಳಿಗೂ ಖಾಕಿ ಡ್ರೆಸ್ ಗೂ ಬಹಳ ನಂಟು. ಖಾಕಿ ಡ್ರೆಸ್ ಮೈಮೇಲೆ ಬಂದರೆ ನಮ್ಮ ಸ್ಟಾರ್ ಗಳು ಡೈಲಾಗ್ ನಲ್ಲೇ ಲಾಠಿ ಚಾರ್ಚ್, ಮಾತಿನಲ್ಲೇ ಗುಂಡು ಸಿಡಿಸುತ್ತಾರೆ.

  ಪೊಲೀಸ್ ಧಿಮಾಕು ತೋರಿಸಲು ಎಲ್ಲ ನಟರು ಹಾತೊರೆಯುತ್ತಾರೆ. ನಟ ಸಾರ್ವಭೌಮ ರಾಜ್ ಕುಮಾರ್, ಸಾಹಸಸಿಂಹ ವಿಷ್ಣುವರ್ಧನ್, ಅನಂತ್ ನಾಗ್, ಪ್ರಣಯ ರಾಜ ಶ್ರೀನಾಥ್, ಶಂಕರ್ ನಾಗ್ ಅದರಲ್ಲೂ ಸಾಯಿಕುಮಾರ್ ಅವರಂತೂ ಪೊಲೀಸ್ ಪಾತ್ರಗಳಿಂದಲೇ ಜನಪ್ರಿಯತೆ ಗಳಿಸಿದವರು.

  ಬಹಳಷ್ಟು ನಟರು ಪೊಲೀಸ್ ಪಾತ್ರಗಳಿಗೆ ಜೀವತುಂಬಿದ್ದಾರೆ. ಈಗ ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ರಿಯಲ್ ಸ್ಟಾರ್ ಉಪೇಂದ್ರ, ಲವ್ಲಿ ಸ್ಟಾರ್ ಪ್ರೇಮ್, ದುನಿಯಾ ವಿಜಯ್ ಪೊಲೀಸ್ ಖದರ್ ತೋರಿಸಿದ್ದಾರೆ. ['ರಣ ವಿಕ್ರಮ' ಥ್ರಿಲ್ಲಿಂಗ್ ಡೀಟೇಲ್ಸ್]

  ಈ ಪಟ್ಟಿಗೆ ಇತ್ತೀಚೆಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೊಸ ಸೇರ್ಪಡೆ ಅನ್ನಬಹುದು. ಪವನ್ ಒಡೆಯರ್ ನಿರ್ದೇಶಿಸುತ್ತಿರುವ 'ಧೀರ ರಣವಿಕ್ರಮ' ಚಿತ್ರದಲ್ಲಿ ಅವರು ಖಡಕ್ ಪೊಲೀಸ್ ಆಫೀಸರ್ ಆಗಿ ಮಿಂಚಲಿದ್ದಾರೆ. ಪೊಲೀಸ್ ಪಾತ್ರಗಳಲ್ಲಿ ಮಿಂಚಿದ ನಟರ ಮೇಲೊಂದು ಮಿಂಚಿನ ನೋಟ...

  ಕಿಚ್ಚನ ಕೆಂಪೇಗೌಡನ ಖದರ್

  ಕಿಚ್ಚನ ಕೆಂಪೇಗೌಡನ ಖದರ್

  ಪೊಲೀಸ್ ಪಾತ್ರಕ್ಕೆ ಹೇಳಿ ಮಾಡಿಸಿದ ಸ್ಟಾರ್ ಅಂದ್ರೆ ಅದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಅದ್ರಲ್ಲೂ ಡೈಲಾಗ್ ಡೆಲಿವರಿಯಲ್ಲಿ ಕಿಚ್ಚನಂತಹಾ ಪವರ್ ಮತ್ಯಾರಿಗೂ ಇರೋಕೆ ಸಾಧ್ಯವಿಲ್ಲ.

  ಚಾಲೆಂಜಿಂಗ್ ಸ್ಟಾರ್ ಪೊಲೀಸ್ ಅಯ್ಯ

  ಚಾಲೆಂಜಿಂಗ್ ಸ್ಟಾರ್ ಪೊಲೀಸ್ ಅಯ್ಯ

  ದರ್ಶನ್ ಗೆ ಇರೋ ಪರ್ಸನಾಲಿಟಿ ಮತ್ತು ಹೈಟ್ ಗೆ ಪೊಲೀಸ್ ಡ್ರೆಸ್ ಹಾಕಿದ್ರೆ ಅದನ್ನ ನೋಡೋದೇ ಒಂದು ಮಜಾ. ಇನ್ನು ಪೊಲೀಸ್ ಡ್ರೆಸ್ ನಲ್ಲಿ ದರ್ಶನ್ ಹೆಜ್ಜೆ ಇಡ್ತಿದ್ರೆ ಎದುರು ನಿಂತವರ ಎದೆಯಲ್ಲಿ ಭೂಕಂಪನ

  ಪೊಲೀಸ್ ಗೆ ಮಾಧರಿಯಾದ ಡೈಲಾಗ್ ಕಿಂಗ್

  ಪೊಲೀಸ್ ಗೆ ಮಾಧರಿಯಾದ ಡೈಲಾಗ್ ಕಿಂಗ್

  ಕನ್ನಡದಲ್ಲಿ ಪೊಲೀಸ್ ಪಾತ್ರ ಯಾರೇ ಮಾಡಿದ್ರೂ ಅದ್ರ ಹಿಂದೆ ಸಾಯಿಕುಮಾರ್ ಅನ್ನೋ ಡೈಲಾಗ್ ಕಿಂಗ್ ಛಾಯೆ ಇರುತ್ತೆ. ಯಾಕಂದ್ರೆ ಪೊಲೀಸ್ ಪಾತ್ರಕ್ಕೆ ಟ್ರೆಂಡ್ ಸೆಟ್ ಮಾಡಿದ್ದೇ ಈ ಸಾಯಿಕುಮಾರ್.

  ಶಂಕರ್ ಐಪಿಎಸ್ ದುನಿಯಾ

  ಶಂಕರ್ ಐಪಿಎಸ್ ದುನಿಯಾ

  ದುನಿಯಾ ವಿಜಯ್ ಶಂಕರ್ ಐಪಿಎಸ್ ಪಾತ್ರದ ಮೂಲಕ ಸಿಕ್ಸ್ ಪ್ಯಾಕ್ ಶೋ ಕೊಟ್ರು. ಆಕ್ಷನ್ ಹಬ್ಬವನ್ನೇ ಮಾಡಿದ್ರು. ಆದರೆ ವಿಜಿಗೆ ಅಷ್ಟಾಗಿ ಸೂಟಾಗಲಿಲ್ಲ ಪೊಲೀಸ್ ಖದರ್.

  ಲವ್ಲಿ ಸ್ಟಾರ್ ಪೊಲೀಸ್ ಆಗಿ ಭ್ರಷ್ಟರಿಗೆ ಶತ್ರು

  ಲವ್ಲಿ ಸ್ಟಾರ್ ಪೊಲೀಸ್ ಆಗಿ ಭ್ರಷ್ಟರಿಗೆ ಶತ್ರು

  ಲವ್ಲಿ ಸ್ಟಾರ್ ಕೂಡ ಸಿಕ್ಸ್ ಪ್ಯಾಕ್ ಮಾಡಿ ಮೈಕಟ್ಟು ಹುರಿ ಮಾಡ್ಕೊಂಡು ಪವರ್ ಫುಲ್ ಪೊಲೀಸ್ ಆಫೀಸರ್ ಆಗಿ ಮೀಸೆ ತಿರುವಿದ್ರು. ಆದ್ರೆ ಶತ್ರು ಅಷ್ಟಾಗಿ ಸದ್ದು ಮಾಡಲಿಲ್ಲ.

  ಅಣ್ಣಾವ್ರು ಶಬ್ಧವೇದಿ ಪೊಲೀಸ್

  ಅಣ್ಣಾವ್ರು ಶಬ್ಧವೇದಿ ಪೊಲೀಸ್

  ಕನ್ನಡಿಗರ ಕಣ್ಮಣಿ ಡಾ. ರಾಜ್ ಕೊನೆಯ ಸಿನಿಮಾ 'ಶಬ್ಧವೇದಿ'ಯಲ್ಲಿ ಪೊಲೀಸ್ ಆಫೀಸರ್ ಆಗಿ ಮಿಂಚಿದ್ದು ಕರ್ತವ್ಯ ನಿಷ್ಠೆಗೆ ಮಾಧರಿಯಾಗಿದ್ದು ಅಭಿಮಾನಿಗಳಿಗೆ ಇವತ್ತಿಗೂ ಥ್ರಿಲ್ಲಿಂಗ್ ಅನುಭವ.

  ವಿಷ್ಣುದಾದಾಗೂ ಪೊಲೀಸ್ ಪವರ್

  ವಿಷ್ಣುದಾದಾಗೂ ಪೊಲೀಸ್ ಪವರ್

  ಮೇರು ನಟ ವಿಷ್ಣು ಕೂಡ ಪೊಲೀಸ್ ಪಾತ್ರಗಳಲ್ಲಿ ಮೋಡಿ ಮಾಡಿದ ಕನ್ನಡಿಗರ ಕಣ್ಮಣಿ. ಪೊಲೀಸ್ ಪಾತ್ರಕ್ಕೆ ತಕ್ಕ ಘರ್ಜನೆ ಮಾಡ್ತಿದ್ದ ಸಿಂಹ ಎಂತಹ ಪಾತ್ರಕ್ಕೂ ಹೊಂದಿಕೊಳ್ತಿದ್ದ ನಟ.

  ರಿಯಲ್ ಸ್ಟಾರ್ ಉಪ್ಪಿ ಆರಕ್ಷಕ

  ರಿಯಲ್ ಸ್ಟಾರ್ ಉಪ್ಪಿ ಆರಕ್ಷಕ

  ಆರಕ್ಷಕನಾಗಿ ಥ್ರಿಲ್ ಕೊಟ್ಟ ರಿಯಲ್ ಸ್ಟಾರ್ ಉಪ್ಪಿ ಕೂಡ ಪೊಲೀಸ್ ಪಾತ್ರಗಳನ್ನ ಎಂಜಾಯ್ ಮಾಡಿದ ನಟ. ಉಪ್ಪಿಯ ಟಿಪಿಕಲ್ ಸ್ಟೈಲ್ ಗೆ ಪೊಲೀಸ್ ಪಾತ್ರಕ್ಕಿಂತ ಬೇರೆ ಪಾತ್ರಗಳೇ ಸೂಪರ್ ಅಂತಾರೆ ಸಿನಿ ಪಂಡಿತರು.

  ಪುನೀತ್ ಗೂ ರಣ ವಿಕ್ರಮ ಪೊಲೀಸ್ ಪವರ್

  ಪುನೀತ್ ಗೂ ರಣ ವಿಕ್ರಮ ಪೊಲೀಸ್ ಪವರ್

  ಈಗ ಪವರ್ ಸ್ಟಾರ್ ಕೂಡ ಖದರ್ ಖಾಕಿ ಹಾಕ್ತಿದ್ದಾರೆ. ಈ ಎಲ್ಲರನ್ನ ಪೊಲೀಸ್ ಪಾತ್ರಗಳಾಗಿ ನೋಡಿರೋ ಚಿತ್ರಪ್ರೇಮಿಗಳಿಗೆ ಪುನೀತ್ ರನ್ನ ಪೊಲೀಸ್ ಆಫಿಸರ್ ಆಗಿ ನೋಡೋ ಕಾತುರವಿರೋದು ಸಹಜ.

  English summary
  Who looks powerful Khaki clad in Sandalwood? Here are the best Sandalwood actors who have played the role of a police officers in their films. Which actor looks best? 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X