ಪ್ರಶಾಂತ್ ಸಂಬರಗಿ ಯಾರು? ಚಿತ್ರೋದ್ಯಮದ ಜೊತೆಗೆ ಇರುವ ನಂಟೇನು?

'ಪ್ರಶಾಂತ್ ಸಂಬರಗಿಯನ್ನು ಚಿತ್ರೋದ್ಯಮಿ ಎನ್ನಬೇಡಿ. ಆತನಿಗೆ ಚಿತ್ರೋದ್ಯಮಕ್ಕೆ ನಂಟು ಏನೂ ಇಲ್ಲ, ಆತನಿಗೂ ಚಿತ್ರೋದ್ಯಮಕ್ಕೂ ನಂಟಿಲ್ಲ' ಎಂದು ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ನಿನ್ನೆ ಹೇಳಿದ್ದರು.

Recommended Video

Ragini ಹಾಗು Sanjana ಬಗ್ಗೆ ಹೊಸ ಬಾಂಬ್ ಸಿಡಿಸಿದ Prashanth Sambargi | Filmibeat Kannada

ಸಾ.ರಾ.ಗೋವಿಂದು ಆರೋಪಕ್ಕೆ ಪ್ರತಿಕ್ರಿಯಿಸಲು ಇಂದು (ಸೆಪ್ಟೆಂಬರ್ 03) ಸುದ್ದಿಗೋಷ್ಠಿ ಕರೆದಿದ್ದ ಪ್ರಶಾಂತ್ ಸಂಬರಗಿ, ತಮಗೂ ಚಿತ್ರೋದ್ಯಮಕ್ಕು ಇರುವ ನಂಟು ಏನು, ಎಷ್ಟುವರ್ಷದಿಂದ ಚಿತ್ರೋದ್ಯಮದಲ್ಲಿದ್ದೇನೆ. ಚಿತ್ರೋದ್ಯಮಕ್ಕೆ ತಮ್ಮ ಕೊಡುಗೆ ಏನು ಎಂಬುದನ್ನು ವಿವರವಾಗಿ ಹೇಳಿದರು.

ಚಿತ್ರೋದ್ಯಮದ ಜೊತೆಗೆ ನನ್ನದು ಹಳೆಯ ನಂಟು, ಚಿತ್ರೋದ್ಯಮದಲ್ಲಿ ವಿತರಕನಾಗಿ, ಬ್ರಾಂಡ್ ಬಿಲ್ಡರ್ ಆಗಿ, ಜಾಹೀರಾತು ತಂತ್ರಜ್ಞನಾಗಿ ಕೆಲಸ ಮಾಡಿದ್ದೇನೆ ಎಂದ ಸಂಬರಗಿ ಚಿತ್ರೋದ್ಯಮದೊಂದಿಗೆ ತಮ್ಮ ನಂಟನ್ನು ಬಹು ವಿಸ್ತಾರವಾಗಿಯೇ ಹೇಳಿದರು.

ಸುದೀಪ್, ಉಪೇಂದ್ರ ಜೊತೆಗೆ ಕೆಲಸ

ಸುದೀಪ್, ಉಪೇಂದ್ರ ಜೊತೆಗೆ ಕೆಲಸ

ಸುದೀಪ್ ಜೊತೆಗೆ ಸಾಹಸಮಯ ಜಾಹೀರಾತು ಮಾಡಿದ್ದು, ಉಪೇಂದ್ರ ಅವರನ್ನು ಬಿಗ್‌ ಎಫ್‌ಎಂ ಗೆ ರಾಯಭಾರಿ ಮಾಡಿದ್ದು, ಉಪೇಂದ್ರ ಕೈಯಲ್ಲಿ ರೆಡಿಯೋಗೆ ಕಾರ್ಯಕ್ರಮ ಮಾಡಿಸಿದ್ದು ಇವುಗಳ ಮೂಲಕ ಚಿತ್ರೋದ್ಯಮದ ನಂಟು ಸಂಬರಗಿಗೆ ಆರಂಭದಲ್ಲಿಯಾಯಿತು.

ರಿಲಯನ್ಸ್‌ ನ ಸಿನಿಮಾಗಳ ಬಿಡುಗಡೆ

ರಿಲಯನ್ಸ್‌ ನ ಸಿನಿಮಾಗಳ ಬಿಡುಗಡೆ

ನಂತರ ರಿಲಯನ್ಸ್ ಸಂಸ್ಥೆಗೆ ಸೇರಿಕೊಂಡ ಪ್ರಶಾಂತ್ ಸಂಬರಗಿ, ರಿಲಯನ್ಸ್‌ನ ಮನೊರಂಜನಾ ವಿಭಾಗ ನಿರ್ಮಿಸುವ ಸಿನಿಮಾಗಳನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುವ ಕಾರ್ಯವನ್ನು ಮಾಡಿದ್ದಾರೆ. ಕೈಟ್ಸ್, ಸಿಂಗಂ, ರಾವಣ್ ಹೀಗೆ ಹಲವು ಸಿನಿಮಾಗಳ ವಿತರಣೆಯನ್ನು ಪ್ರಶಾಂತ್ ಸಂಬರಗಿ ಮಾಡಿದ್ದಾರೆ.

'ಆಡಿಯೋ ಕಂಪೆನಿಗಳೊಂದಿಗೆ ರಿಂಗ್‌ಟೋನ್ ಡೀಲ್ ಮಾಡಿದ್ದೇನೆ'

'ಆಡಿಯೋ ಕಂಪೆನಿಗಳೊಂದಿಗೆ ರಿಂಗ್‌ಟೋನ್ ಡೀಲ್ ಮಾಡಿದ್ದೇನೆ'

ಮೊಬೈಲ್ ಜಮಾನಾ ಪ್ರಾರಂಭವಾದಾಗ ರಿಂಗ್‌ಟೋನ್ ಡೀಲ್ ಅನ್ನು ಪ್ರಶಾಂತ್ ಸಂಬರಗಿ ಮಾಡಿದ್ದರಂತೆ. ಲಹರಿ, ಆನಂದ್ ಆಡಿಯೋ ಮತ್ತಿತರೆ ಸಂಸ್ಥೆಗಳಿಗೆ ದೊಡ್ಡ ಮಟ್ಟದ ಲಾಭವನ್ನು ಆ ಮೂಲಕ ಸಂಗೀತ ನಿರ್ದೇಶಕರಿಗೆ, ಸಿನಿಮಾಕ್ಕೆ ಲಾಭ ಮಾಡಿಕೊಟ್ಟಿದ್ದೇನೆ ಎಂದಿದ್ದಾರೆ ಸಂಬರಗಿ.

'ಹಾಡುಗಳಿಂದ ಸಿನಿಮಾಕ್ಕೆ ಲಾಭವಾಗುವಂತೆ ಮಾಡಿದ್ದೇನೆ'

'ಹಾಡುಗಳಿಂದ ಸಿನಿಮಾಕ್ಕೆ ಲಾಭವಾಗುವಂತೆ ಮಾಡಿದ್ದೇನೆ'

ಎಫ್‌ಎಂ ವಾಹಿನಿಗಳನ್ನು ಹಾಡುಗಳು ಪ್ರಸಾರವಾದಾಗ ಅದರಿಂದ ಸಿನಿಮಾಕ್ಕೆ ಲಾಭ ಹೋಗುವಂತೆ ನಿಯಮ (ಡ್ರಾಫ್ಟ್) ಮಾಡಿದ್ದು ನಾನು. ಸಿನಿಮಾಗಳ ಹಾಡುಗಳ ಡಿಸ್ಕ್‌ಗಳು ಎಲ್ಲೋ ಬಿದ್ದಿದ್ದವು. ಅವುಗಳಿಂದ ಆದಾಯ ಬರುವಂತೆ ಮಾಡಿಕೊಟ್ಟಿದ್ದು ನಾನು ಪತ್ರಿಕೋಷ್ಠಿಯಲ್ಲಿ ಹೇಳಿದರು ಪ್ರಶಾಂತ್ ಸಂಬರಗಿ.

ಬೇರೆ ವ್ಯವಹಾರಗಳಲ್ಲಿಯೂ ತೊಡಗಿಕೊಂಡಿದ್ದೇನೆ: ಸಂಬರಗಿ

ಬೇರೆ ವ್ಯವಹಾರಗಳಲ್ಲಿಯೂ ತೊಡಗಿಕೊಂಡಿದ್ದೇನೆ: ಸಂಬರಗಿ

ನಾನು ಬೇರೆ ಕೆಲವು ವ್ಯವಹಾರಗಳಲ್ಲಿಯೂ ತೊಡಗಿಕೊಂಡಿದ್ದೇನೆ. ನಾನು ಬಿಲ್ಡರ್ ಸಹ ಹೌದು, ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡುತ್ತೇನೆ ಜೊತೆಗೆ ಸಿನಿಮಾ ಉದ್ಯಮದಲ್ಲಿಯೂ ನಾನು ಹಣ ಹೂಡಿದ್ದೇನೆ. ಕೆಲವು ಸಿನಿಮಾಗಳನ್ನು ನೇರ ವಿತರಣೆ ಮಾಡಿದ್ದೇನೆ ಎಂದಿದ್ದಾರೆ ಪ್ರಶಾಂತ್ ಸಂಬರಗಿ.

ನಮ್ಮ ಸಿನಿಮಾದ ರೀಲು ಸುಟ್ಟುಹಾಕಿದ್ದರು: ಪ್ರಶಾಂತ್

ನಮ್ಮ ಸಿನಿಮಾದ ರೀಲು ಸುಟ್ಟುಹಾಕಿದ್ದರು: ಪ್ರಶಾಂತ್

ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿರುವ ಕೆಲವರು ನನ್ನ ವಿರುದ್ಧ ಮೊದಲಿನಿಂದಲೂ ಪಿತೂರಿಗಳನ್ನು ಮಾಡಿ, ಬಿಗ್‌ ಎಂಟರ್ಟೈನ್‌ಮೆಂಟ್‌ ಸಂಸ್ಥೆ ವತಿಯಿಂದ ನಾನು ಬಿಡುಗಡೆ ಮಾಡುತ್ತಿದ್ದ ಸಿನಿಮಾಗಳಿಗೆ ಸಮಸ್ಯೆ ಕೊಡುತ್ತಲೇ ಬಂದಿದ್ದರು. ನಿರ್ಮಾಪಕ ಕೊಬ್ರಿ ಮಂಜು, ನಮ್ಮ ಸಿನಿಮಾದ ರೀಲ್ ಸಹ ಸುಟ್ಟುಹಾಕಿದ್ದರು. ಅವರುಗಳ ಮೇಲೆಲ್ಲಾ ನಾನು ಪ್ರಕರಣಗಳನ್ನು ದಾಖಲಿಸಿದ್ದೇನೆ. ಹಾಗಾಗಿ ಸಾ.ರಾ.ಗೋವಿಂದು ಮತ್ತು ತಂಡ ನನ್ನ ವಿರುದ್ಧ ಕಿಡಿಕಾರುತ್ತಾರೆ ಎಂದರು ಸಂಬರಗಿ.

More from Filmibeat

English summary
Who is Prashant Sambaragi and what is contribution to Kannada Movie industry. He only talked about this.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X