»   » 'ಪ್ರಥಮ್'ಗೆ ಚಿತ್ರಹಿಂಸೆ ನೀಡುತ್ತಿದ್ದ ಎನ್ನಲಾಗುತ್ತಿರುವ ಲೋಕೇಶ್ ಯಾರು?

'ಪ್ರಥಮ್'ಗೆ ಚಿತ್ರಹಿಂಸೆ ನೀಡುತ್ತಿದ್ದ ಎನ್ನಲಾಗುತ್ತಿರುವ ಲೋಕೇಶ್ ಯಾರು?

Posted By:
Subscribe to Filmibeat Kannada

'ಒಳ್ಳೆ ಹುಡುಗ' ಪ್ರಥಮ್ ಆತ್ಮಹತ್ಯೆಗೆ ಯತ್ನಿಸಿದ್ದರು. ಸದ್ಯ ಪ್ರಥಮ್ ಆರೋಗ್ಯವಾಗಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಪ್ರಥಮ್ ಆತ್ಮಹತ್ಯೆಗೆ ಯತ್ನಿಸುವ ಮುನ್ನ ಫೇಸ್ ಬುಕ್ ಲೈವ್ ನಲ್ಲಿ ಕೆಲವು ಗಂಭೀರ ಆರೋಪಗಳನ್ನ ಮಾಡಿದ್ದು, ಸ್ನೇಹಿತ ಲೋಕೇಶ್ ಈ ಎಲ್ಲದಕ್ಕು ನೇರ ಕಾರಣವೆಂದು ಹೇಳಿಕೊಂಡಿದ್ದರು.[ಒಳ್ಳೆ ಹುಡುಗ ಪ್ರಥಮ್ ಆತ್ಮಹತ್ಯೆಗೆ ಯತ್ನ!]

ಪ್ರಥಮ್ ಅವರು ಲೈವ್ ನಲ್ಲಿ ಹೇಳಿರುವ ಪ್ರಕಾರ, ಲೋಕೇಶ್ ಅವರು ಪ್ರಥಮ್ ಗೆ ಹಿಂಸೆ ನೀಡುತ್ತಿದ್ದರಂತೆ. ಲೋಕೇಶ್ ಅವರ ಹಿಂಸೆ ತಾಳಲಾರದೆ ಪ್ರಥಮ್ ಆತ್ಮಹತ್ಯೆಗೆ ಯತ್ನಿಸಿದ್ದರಂತೆ!

ಅಷ್ಟಕ್ಕೂ, ಈ ಲೋಕೇಶ್ ಯಾರು? ಈ ಲೋಕೇಶ್ ಗೂ ಮತ್ತು ಪ್ರಥಮ್ ಗೂ ಏನ್ ಸಂಬಂಧ. ಇವರಿಬ್ಬರ ಮಧ್ಯೆ ಮನಸ್ತಾಪ ಉಂಟಾಗಿದ್ದು ಎಲ್ಲಿ? ಈ ಎಲ್ಲದಕ್ಕೂ ಉತ್ತರ ಮುಂದೆ ಓದಿ.....

ಲೋಕೇಶ್ ಯಾರು!

ಲೋಕೇಶ್ ಸ್ಯಾಂಡಲ್ ವುಡ್ ನ ಲಿರಿಕ್ ರೈಟರ್. ಇಲ್ಲಿಯವರೆಗೂ ಸುಮಾರು 70 ಕ್ಕೂ ಅಧಿಕ ಚಿತ್ರಗೀತೆಗಳಿಗೆ ಸಾಹಿತ್ಯ ಬರೆದಿದ್ದಾರೆ.[ನಿದ್ರೆ ಮಾತ್ರೆ ಸೇವಿಸಿದ್ಯಾಕೆ.? 'ಕೊನೆಯ' ಲೈವ್ ನಲ್ಲಿ ಪ್ರಥಮ್ ಬಾಯ್ಬಿಟ್ಟ ಸತ್ಯವೇನು.?]

ನಿರ್ದೇಶಕರೂ ಹೌದು?

ಲೋಕೇಶ್ ಕೇವಲ ಲಿರಿಕ್ ರೈಟರ್ ಮಾತ್ರವಲ್ಲ. ಚಿತ್ರ ನಿರ್ದೇಶಕರು ಹೌದು. 'ಕೇಳದೆ ನಿಮಗೀಗ' ಎಂಬ ಚಿತ್ರವನ್ನ ಕಥೆ-ಚಿತ್ರಕಥೆ-ಸಾಹಿತ್ಯ ಬರೆದು ನಿರ್ದೇಶನ ಕೂಡ ಮಾಡುತ್ತಿದ್ದಾರೆ.

ಪ್ರಥಮ್-ಲೋಕೇಶ್ ಸ್ನೇಹಿತರು!

ಒಳ್ಳೆ ಹುಡುಗ ಪ್ರಥಮ್ ಮತ್ತು ಲೋಕೇಶ್ ಅವರದ್ದು ಮೂರುವರೆ ವರ್ಷದ ಸ್ನೇಹ. ಪ್ರಥಮ್ ನಿರ್ದೇಶನ ಮಾಡುತ್ತಿದ್ದ 'ದೇವ್ರವ್ನೆ ಬುಡು ಗುರು' ಚಿತ್ರದ 5 ಹಾಡಿಗೆ ಲೋಕೇಶ್ ಸಾಹಿತ್ಯ ಬರೆದಿದ್ದಾರೆ. ಅಲ್ಲಿಂದ ಇಲ್ಲಿಯವರೆಗೂ ಇಬ್ಬರ ಮಧ್ಯೆ ಉತ್ತಮ ಬಾಂಧವ್ಯವಿದೆ.[ಯಾರೀ 'ತಲೆಕೆಟ್ಟ ತಂಗಳಿಟ್ಟು' ಪ್ರಥಮ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

ಪ್ರಥಮ್ 'ಬಿಗ್ ಬಾಸ್'ಗೆ ಹೋದಾಗ ಲೋಕೇಶ್ ಸಹಾಯ

ಪ್ರಥಮ್ 'ಬಿಗ್ ಬಾಸ್ ಕನ್ನಡ 4 'ಕಾರ್ಯಕ್ರಮಕ್ಕೆ ಹೋದಾಗ ಲೋಕೇಶ್ ಅವರು ಪ್ರಥಮ್ ಗೆ ಸಹಾಯ ಮಾಡಿದ್ದರು. ಪ್ರಥಮ್ 'ಬಿಗ್ ಬಾಸ್' ಮನೆಯೊಳಗೆ ಇರಬೇಕಾದರೆ, ಪ್ರಥಮ್ ಅವರನ್ನ ಗೆಲ್ಲಿಸಿ ಎಂದು ಪ್ರಚಾರ ಮಾಡಿದ್ದರು.

ಪ್ರಥಮ್ 'ಫೇಸ್ ಬುಕ್' ನಿರ್ವಹಣೆ!

ಪ್ರಥಮ್ 'ಬಿಗ್ ಬಾಸ್' ಮನೆಯಲ್ಲಿದ್ದಾಗ, ಒಳ್ಳೆ ಹುಡುಗನ ಫೇಸ್ ಬುಕ್ ಅಕೌಂಟ್ ನ್ನ ನಿರ್ವಹಣೆ ಮಾಡಿದ್ದು ಇದೇ ಲೋಕೇಶ್. ಪ್ರಥಮ್ ಹೆಸರಲ್ಲಿ ಪೋಸ್ಟ್ ಗಳನ್ನ ಹಾಕಿ 'ಬಿಗ್ ಬಾಸ್' ಗೆಲ್ಲಿಸುವಂತೆ ಪ್ರಚಾರ ಮಾಡಿದ್ದರು.

'ಪ್ರಥಮ್'ಗಾಗಿ ಹುಚ್ಚ ವೆಂಕಟ್ ಜೊತೆ ಜಗಳ!

'ಬಿಗ್ ಬಾಸ್' ಮನೆಯಲ್ಲಿ ಪ್ರಥಮ್ ಅವರ ಮೇಲೆ ಹುಚ್ಚ ವೆಂಕಟ್ ದೈಹಿಕ ಹಲ್ಲೆ ಮಾಡಿ ಬಂದಿದ್ದರು. ಈ ಸಂದರ್ಭದಲ್ಲಿ ಹುಚ್ಚ ವೆಂಕಟ್ ವಿರುದ್ಧ ಲೋಕೇಶ್ ಜಗಳ ಮಾಡಿದ್ದರು. ಪ್ರಥಮ್ ಮತ್ತು ವೆಂಕಟ್ ಅವರ ಫೋನ್ ಸಂಭಾಷಣೆಯನ್ನ ಬಹಿರಂಗ ಮಾಡಿ ಪ್ರಥಮ್ ಪರವಾಗಿ ನಿಂತಿದ್ದರು.

ಅಂದು ಸ್ನೇಹಿತರು-ಇಂದು ಶತ್ರುಗಳು!

ಹೀಗೆ, ಪ್ರಥಮ್ ಅವರ ಪ್ರತಿಯೊಂದು ವಿಚಾರದಲ್ಲಿ, ಪ್ರತಿಯೊಂದು ವಿಷ್ಯದಲ್ಲೂ ತೊಡಗಿಸಿಕೊಂಡಿದ್ದ ಲೋಕೇಶ್ ಈಗ ಪ್ರಥಮ್ ಗೆ ವೈರಿಯಾಗಿದ್ದಾರೆ.

ಪ್ರಥಮ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ತಿಳಿದುಕೊಳ್ಳಲು ಮುಂದೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ....[ಪ್ರಥಮ್ ಆತ್ಮಹತ್ಯೆ ಯತ್ನ ಬಳಿಕ ಲೋಕೇಶ್ ಬಿಚ್ಚಿಟ್ಟ ಸ್ಪೋಟಕ ಸುದ್ದಿ!]

English summary
Who is Pratham Freind Lokesh? He is Lyric Writer and Director of kannada Industry. And Best Freind Of Olle Huduga Pratham From last 3 and half Years. here is the Complete details...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada