ಗಾಂಧಿನಗರದಲ್ಲಿ ಸೌಂಡ್ ಮಾಡ್ತಿರುವ ಈ 'ರಾಜಣ್ಣನ ಮಗ' ಯಾರು.?

By Bharath Kumar

Recommended Video

ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡಲಿದ್ದಾನೆ ರಾಜಣ್ಣನ ಮಗ...!! | Filmibeat Kannada

ಕೆಲವೊಂದು ಸಿನಿಮಾಗಳು ಇವರೇ ಮಾಡಿದ್ರೆ ಚೆಂದ ಎಂಬ ಭಾವನೆ ಬರುವುದು ಸಹಜ. ಉದಾಹರಣೆಗೆ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ', 'ರಾಜಕುಮಾರ', 'ನಟಸಾರ್ವಭೌಮ' ಅಂತಹ ಚಿತ್ರಗಳನ್ನ ಡಾ ರಾಜ್ ಕುಮಾರ್ ಮಕ್ಕಳಾದ ಶಿವಣ್ಣ, ಪುನೀತ್ ರಾಜ್ ಕುಮಾರ್ ಅಥವಾ ಅವರ ಕುಟುಂಬದವರು ಮಾಡಿದ್ರೆ ಚೆಂದ.

'ಯಜಮಾನ', 'ಕೋಟಿಗೊಬ್ಬ' ಅಂತಹ ಚಿತ್ರಗಳನ್ನ ದರ್ಶನ್, ಸುದೀಪ್ ಅಂತವರು ಮಾಡಿದ್ರೆ ಚೆಂದ. ಇದು ಸಹಜವಾಗಿ ಚಿತ್ರಪ್ರೇಮಿಗಳ ಮನಸ್ಸಿನಲ್ಲಿ ಮೂಡಿಬರುವ ಭಾವನೆ.

ಇದೀಗ, ಇಲ್ಲೊಂದು ಚಿತ್ರ ಟೈಟಲ್ ನಿಂದ ಭಾರಿ ಸದ್ದು ಮಾಡುತ್ತಿದೆ. ಈ ಟೈಟಲ್ ನೋಡಿದ ಸಿನಿ ಅಭಿಮಾನಿಗಳು ಇದು ಯಾರ ಸಿನಿಮಾ ಎಂದು ತಲೆಕೆಡಸಿಕೊಂಡು ಯೋಚನೆ ಮಾಡುವಂತಾಗಿದೆ. ಆ ಚಿತ್ರವೇ 'ರಾಜಣ್ಣನ ಮಗ'. ಅಷ್ಟಕ್ಕೂ, ಈ ಸಿನಿಮಾ ಯಾರದು.? ಯಾರು ಡೈರೆಕ್ಟರ್, ಯಾರು ನಿರ್ದೇಶಕ.? ಎಂದು ತಿಳಿಯಲು ಮುಂದೆ ಓದಿ...

'ರಾಜಣ್ಣನ ಮಗ' ಫಸ್ಟ್ ಲುಕ್

'ರಾಜಣ್ಣನ ಮಗ' ಫಸ್ಟ್ ಲುಕ್

'ರಾಜಣ್ಣನ ಮಗ' ಚಿತ್ರದ ಪೋಸ್ಟರ್ ಮತ್ತು ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದೆ. ಈ ಪೋಸ್ಟರ್ ನೋಡಿದ ತಕ್ಷಣ ಇದು ಶಿವಣ್ಣ ಅಥವಾ ಪುನೀತ್ ಮಾಡ್ತಿರೋ ಸಿನಿಮಾ ಇರಬಹುದು ಎನ್ನಿಸದೇ ಇರಲ್ಲ. ಆದ್ರೆ, ಇದು ಹೊಸಬರ ಚಿತ್ರ.

ಕೋಲಾರ ಸೀನು ಸಿನಿಮಾ

ಕೋಲಾರ ಸೀನು ಸಿನಿಮಾ

ಈ ಹಿಂದೆ 'ಜಸ್ಟ್ ಮದ್ವೇಲಿ' ಎಂಬ ಸಿನಿಮಾ ಮಾಡಿದ್ದ ಕೋಲಾರ್ ಸೀನು ಅವರು ಈ ಚಿತ್ರವನ್ನ ನಿರ್ದೇಶನ ಮಾಡ್ತಿದ್ದಾರೆ. ಈ ಚಿತ್ರಕ್ಕೆ ಆಕ್ಷನ್ ಕಟ್​ ಹೇಳಿರುವುದರ ಜೊತೆಗೆ ಕಥೆ, ಚಿತ್ರಕಥೆಯನ್ನು ಕೋಲಾರ ಸೀನು ಅವರೇ ಬರೆದಿದ್ದಾರೆ.

ಯಾರು ಈ ರಾಜಣ್ಣನ ಮಗ.?

ಯಾರು ಈ ರಾಜಣ್ಣನ ಮಗ.?

ಅಂದ್ಹಾಗೆ, 'ರಾಜಣ್ಣನ ಮಗ' ಚಿತ್ರದಲ್ಲಿ ನಟಿಸಿರುವುದು ಯುವ ನಟ ಹರೀಶ್. ಈ ಚಿತ್ರವನ್ನ ನಿರ್ಮಾಣ ಮಾಡುತ್ತಿರುವುದು ಹರೀಶ್ ಜಲಗೆರೆ. ಬಹುಶಃ ಇವರೇ ಈ ಚಿತ್ರಕ್ಕೆ ನಾಯಕನಿರಬಹುದು. ಆದ್ರೆ, ನಾಯಕನ ಬಗ್ಗೆ ಹೆಚ್ಚೇನೂ ಬಿಟ್ಟುಕೊಡದ ಚಿತ್ರತಂಡ ಜಸ್ಟ್ ಫಸ್ಟ್ ಲುಕ್ ಪೋಸ್ಟರ್ ಮಾತ್ರ ರಿವಿಲ್ ಮಾಡಿದೆ. ಇದು ಸಹಜವಾಗಿ ಯಾರು ಈ ನಟ ಎಂಬ ಕುತೂಹಲಕ್ಕೆ ಕಾರಣವಾಗಿದೆ.

ಯೂಟ್ಯೂಬ್ ನಲ್ಲಿ ಹವಾ

ಯೂಟ್ಯೂಬ್ ನಲ್ಲಿ ಹವಾ

ಸದ್ಯ, ಯೂಟ್ಯೂಬ್ ನಲ್ಲಿ ಟೀಸರ್ ಬಿಡುಗಡೆಯಾಗಿದ್ದು, 10 ಲಕ್ಷಕ್ಕೂ ಹೆಚ್ಚು ಜನ ನೋಡಿದ್ದಾರೆ. ಇನ್ನುಳಿದಂತೆ ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಪ್ರಮೋದ್ ಆರ್​, ಛಾಯಾಗ್ರಹಣ ಹಾಗೂ ಹರೀಶ್ ಗೌಡ್​ ಅವರ ಸಂಕಲನವಿದೆ.

More from Filmibeat

English summary
'Just madveli' movie fame kolar seenu directional 'rajannana maga' movie teaser has released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X