»   » ರಜನಿಕಾಂತ್ ಗೆ ಈ ಮೂರು ಜನ ಕ್ರಿಕೆಟಿಗರು ಅಂದ್ರೆ ಅಚ್ಚುಮೆಚ್ಚು

ರಜನಿಕಾಂತ್ ಗೆ ಈ ಮೂರು ಜನ ಕ್ರಿಕೆಟಿಗರು ಅಂದ್ರೆ ಅಚ್ಚುಮೆಚ್ಚು

Posted By:
Subscribe to Filmibeat Kannada
ರಜನಿಕಾಂತ್ ಕ್ರಿಕೆಟ್ ಆಡೋದನ್ನ ನೋಡಿದ್ದೀರಾ ? ಅವರ ನೆಚ್ಚಿನ ಆಟಗಾರ ಯಾರು ಗೊತ್ತಾ ? | Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾಗಳನ್ನ ನೋಡಿರ್ತಾರ. ಆದ್ರೆ, ತಲೈವಾ ಮೈದಾನದಲ್ಲಿ ಬ್ಯಾಟ್-ಬಾಲ್ ಹಿಡಿದು ಆಟ ಆಡಿರೋದನ್ನ ಯಾವತ್ತು ನೋಡಿರಲ್ಲ ಅನ್ಸುತ್ತೆ.

ಕ್ರಿಕೆಟ್ ಅಂದ್ರೆ ರಜನಿಕಾಂತ್ ಅವರಿಗೂ ತುಂಬ ಇಷ್ಟ. ಆಟದಲ್ಲಿ ರಜನಿಕಾಂತ್ ವೇಗದ ಬೌಲರ್ ಆಗಿದ್ದರು ಎನ್ನುವುದನ್ನ ಇತ್ತೀಚೆಗಷ್ಟೇ ತಲೈವಾ ಹೇಳಿಕೊಂಡಿದ್ದರು. ಅಷ್ಟೇ ಅಲ್ಲದೇ, ತಾನೊಬ್ಬ ಅದ್ಭುತ ಫೀಲ್ಡರ್ ಕೂಡ ಆಗಿದ್ದರಂತೆ.

ರಜನಿ ಇನ್ನು ಮುಂದೆ ಸಿನಿಮಾದಲ್ಲಿ ಅಭಿನಯಿಸುವುದಿಲ್ವಂತೆ

who is rajinikanth favorite cricketer

ಇನ್ನು ಕ್ರಿಕೆಟ್ ಆಟಗಾರರಲ್ಲಿ ರಜನಿಕಾಂತ್ ಅವರಿಗೆ ಈ ಮೂವರು ಆಟಗಾರರಂದ್ರೆ ಇಷ್ಟವಂತೆ. ರಜನಿ ಕ್ರಿಕೆಟ್ ನೋಡುವಾಗ ಮನ್ಸೂರ್ ಅಲಿ ಖಾನ್ ಪಟೌಡಿ ಫೆವರೇಟ್ ಆಗಿದ್ದರಂತೆ. ಈಗ ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ಇಷ್ಟವಂತೆ. ಆದ್ರೆ, ಆಲ್ ಟೈಮ್ ಫೆವರೇಟ್ ಎಂದು ತೆಗೆದುಕೊಂಡರೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ನೆಚ್ಚಿನ ಕ್ರಿಕೆಟಿಗ ಎಂದು ರಜನಿ ಬಹಿರಂಗಪಡಿಸಿದ್ದಾರೆ.

ರಾಜಕೀಯಕ್ಕೆ ಎಂಟ್ರಿ ಕೊಟ್ಟ ಸೂಪರ್ ಸ್ಟಾರ್ ರಜನಿಕಾಂತ್

who is rajinikanth favorite cricketer

ಸದ್ಯ, ರಜನಿಕಾಂತ್ ಅವರು '2.0' ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಅದಾದ ನಂತರ 'ಕಾಲ ಕರಿಕಾಳನ್' ಚಿತ್ರ ರಿಲೀಸ್ ಆಗಲಿದೆ. ಈ ಮಧ್ಯೆ ರಾಜಕೀಯಕ್ಕೆ ಕೂಡ ತಲೈವಾ ಅಧಿಕೃತವಾಗಿ ಪ್ರವೇಶ ಮಾಡಿದ್ದಾರೆ. ಮುಂದಿನ ತಮಿಳುನಾಡಿನ ಚುನಾವಣೆಯಲ್ಲಿ ರಜನಿಕಾಂತ್ ಹೊಸ ಪಕ್ಷದಿಂದ ಸ್ಪರ್ಧಿಸಲಿದ್ದಾರೆ.

English summary
God of cricket, little master sachin tendulkar is favorite cricketer of super star rajinikanth.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X