For Quick Alerts
  ALLOW NOTIFICATIONS  
  For Daily Alerts

  ಶಾರುಖ್ ಖಾನ್, ಸಲ್ಮಾನ್ ಖಾನ್, ಆಮಿರ್ ಖಾನ್: ಈ ಮೂವರಲ್ಲಿ ಶ್ರೀಮಂತರು ಯಾರು?

  |

  ಬಾಲಿವುಡ್‌ ಅಂದ್ರೆ ಖಾನ್ ಅನ್ನೋ ಜಮಾನವೊಂದಿತ್ತು. ಸಲ್ಮಾನ್ ಖಾನ್, ಶಾರುಖ್ ಖಾನ್ ಹಾಗೂ ಆಮಿರ್ ಖಾನ್ ಬಿಟ್ಟರೆ ಬೇರೆ ಸ್ಟಾರ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ್ದು ತೀರಾ ಕಡಿಮೆ. ಈಗಲೂ ಇವರ ರಾಜ್ಯಭಾರ ಮುಂದುವರೆದಿದೆ.

  ಸಲ್ಮಾನ್ ಖಾನ್, ಶಾರುಖ್ ಖಾನ್ ಹಾಗೂ ಆಮಿರ್ ಖಾನ್ ಸಿನಿಮಾಗಳು ಸೋತಿರಬಹುದು. ಆದರೆ, ಅವರಿಗೆ ಇರೋ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ. ಮೂವರು ಖಾನ್‌ಗಳೂ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ತಾವೇ ಸಿನಿಮಾವನ್ನು ನಿರ್ಮಾಣ ಕೂಡ ಮಾಡುತ್ತಿದ್ದಾರೆ. ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  'ಗುಟ್ಕಾ ಜಾಹೀರಾತಿನಲ್ಲಿ ಹಣ ಮಾಡ್ತಿರುವ ನಟರಿಗೆ ಸಿನಿಮಾ ಮಾಡಲು ಸಮಯವಿಲ್ಲ''ಗುಟ್ಕಾ ಜಾಹೀರಾತಿನಲ್ಲಿ ಹಣ ಮಾಡ್ತಿರುವ ನಟರಿಗೆ ಸಿನಿಮಾ ಮಾಡಲು ಸಮಯವಿಲ್ಲ'

  ಮೂವರು ಖಾನ್‌ಗಳೂ ಕೂಡ ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿಯೇ ಇದ್ದಾರೆ. ಪ್ರತಿದಿನ ಇವರ ಜೇಬಿಗೆ ಲಕ್ಷಗಳಲ್ಲಿ, ಕೋಟಿಗಳಲ್ಲಿ ಹಣ ಸೇರುತ್ತಲೇ ಇದೆ. ಹಾಗಿದ್ದರೆ, ಸಲ್ಮಾನ್ ಖಾನ್, ಶಾರುಖ್ ಖಾನ್ ಹಾಗೂ ಆಮಿರ್ ಖಾನ್ ಈ ಮೂವರಲ್ಲಿ ಯಾರು ಶ್ರೀಮಂತರು? ಯಾರ ಬಳಿ ಹೆಚ್ಚು ಹಣವಿದೆ? ಅನ್ನೋ ಡಿಟೈಲ್ಸ್ ಇಲ್ಲಿದೆ.

   ಹೇಗಿದೆ ಖಾನ್‌ಗಳ ದರ್ಬಾರ್?

  ಹೇಗಿದೆ ಖಾನ್‌ಗಳ ದರ್ಬಾರ್?

  ಬಾಲಿವುಡ್‌ ಖಾನ್‌ಗಳಿಗೆ ಬೇಡಿಕೆ ಕಮ್ಮಿಯಾಗಿಲ್ಲ. ಸಲ್ಮಾನ್ ಖಾನ್, ಶಾರುಖ್ ಖಾನ್ ಹಾಗೂ ಆಮಿರ್ ಖಾನ್ ಮೂವರೂ ಒಂದರ ಹಿಂದೊಂದು ಸಿನಿಮಾ ಮಾಡುತ್ತಲೇ ಇದ್ದಾರೆ. ಇತ್ತೀಚೆಗೆ ಬಿಡುಗಡೆಗೊಂಡ ಈ ಮೂವರ ಸಿನಿಮಾಗಳು ಸೋತಿರಬಹುದು. ಆದರೆ, ಬಾಲಿವುಡ್‌ನಲ್ಲಿ ಇವರಿಗೆ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ಇತ್ತೀಚೆಗೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಸದ್ದು ಮಾಡುತ್ತಿರುವ ಸ್ಟಾರ್ ಹೀರೊಗಳಿಗೂ ಕಾಂಪಿಟೇಷನ್ ಕೊಡುತ್ತಿದ್ದಾರೆ. ಇದೂವರೆಗೂ ಇವರು ಮಾಡಿರೋ ಸಂಪಾದನೆಗೆ ಇಂದಿನ ಸ್ಟಾರ್ ನಟರು ಪೈಪೋಟಿ ಕೊಡುವುದಕ್ಕೂ ಸಾಧ್ಯವಿಲ್ಲ.

  ಅಭಿಮಾನಿಗಳ ಮನವಿ ಪುರಸ್ಕರಿಸಿದ ಅಯಾನ್: 'ಅಸ್ತ್ರಾವರ್ಸ್'ನಲ್ಲಿ ಶಾರುಖ್ ಖಾನ್‌ಗಾಗಿ ದೊಡ್ಡ ಪ್ಲ್ಯಾನ್ಅಭಿಮಾನಿಗಳ ಮನವಿ ಪುರಸ್ಕರಿಸಿದ ಅಯಾನ್: 'ಅಸ್ತ್ರಾವರ್ಸ್'ನಲ್ಲಿ ಶಾರುಖ್ ಖಾನ್‌ಗಾಗಿ ದೊಡ್ಡ ಪ್ಲ್ಯಾನ್

   ಸಲ್ಮಾನ್ ಖಾನ್ ಒಂದು ದಿನದ ಸಂಪಾದನೆ

  ಸಲ್ಮಾನ್ ಖಾನ್ ಒಂದು ದಿನದ ಸಂಪಾದನೆ

  ಸಲ್ಮಾನ್ ಖಾನ್ ಬಾಲಿವುಡ್‌ ಬಾಕ್ಸಾಫೀಸ್‌ನ ಸುಲ್ತಾನ್. ಹೀಗಾಗಿ ಸಲ್ಮಾನ್ ಖಾನ್‌ಗೆ ಬೇಡಿಕೆ ಹೆಚ್ಚು. ಈ ಸೂಪರ್‌ಸ್ಟಾರ್ ಒಂದು ದಿನಕ್ಕೆ ಬರೋಬ್ಬರಿ 1.01 ಕೋಟಿ ಸಂಪಾದನೆ ಮಾಡುತ್ತಾರೆ. ನಟನಾಗಿ, ನಿರ್ಮಾಪಕನಾಗಿಯೂ ಗುರುತಿಸಿಕೊಂಡಿರೋ ಸಲ್ಮಾನ್ ಖಾನ್ ಅನೇಕ ಜಾಹೀರಾತುಗಳಲ್ಲೂ ನಟಿಸುತ್ತಿದ್ದಾರೆ. ಇವರ ಬಳಿಕ ಮುಂಬೈನಲ್ಲಿ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಇದೆ. ಇದರ ಬೆಲೆ ಸುಮಾರು 100 ಕೋಟಿ ರೂ. ಅಲ್ಲದೇ ಫಾರ್ಮ್ ಹೌಸ್ ಇದೆ. ಜೊತೆ 'ಬೀಯಿಂಗ್ ಹ್ಯೂಮನ್' ಮೂಲಕವೂ ಸಂಪಾದನೆ ಮಾಡುತ್ತಾರೆ. ಸಲ್ಮಾನ್ ಖಾನ್ ಬಳಿ ಇರುವ ಒಟ್ಟು ಆದಾಯ ಸುಮಾರು 2900 ಕೋಟಿ ರೂ. ಎಂದು ವರದಿಯಾಗಿದೆ.

   ಶಾರುಖ್ ಖಾನ್ ಸಂಪಾದನೆ ಎಷ್ಟು?

  ಶಾರುಖ್ ಖಾನ್ ಸಂಪಾದನೆ ಎಷ್ಟು?

  ಶಾರುಖ್ ಖಾನ್ ಕೇವಲ ನಟನಷ್ಟೇ ಅಲ್ಲ. ಬಾಲಿವುಡ್‌ನಲ್ಲಿ ಉದ್ಯಮಿ ಕೂಡ ಹೌದು. ರೆಡ್ ಚಿಲ್ಲೀಸ್ ಎಂಟರ್‌ಟೈನ್ಮೆಂಟ್ ಅನ್ನೋ ಸಂಸ್ಥೆಯ ಮಾಲೀಕರು. ಅಷ್ಟೇ ಅಲ್ಲದೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲೀಕರಲ್ಲಿ ಒಬ್ಬರು. ಕ್ರಿಕೆಟ್ ಹಾಗೂ ಸಿನಿಮಾ ಎರಡೂ ಕ್ಷೇತ್ರದಲ್ಲೂ ಶಾರುಖ್ ಖಾನ್ ಬಾದ್‌ಷಾ ಅನ್ನೋದನ್ನು ಈಗಾಗಲೇ ಸಾಬೀತು ಮಾಡಿದ್ದಾರೆ. ಭಾರತ ಅಷ್ಟೇ ಅಲ್ಲದೆ ದುಬೈನಲ್ಲೂ ಪ್ರಾಪರ್ಟಿಯನ್ನು ಹೊಂದಿದ್ದಾರೆ. ಇವೆಲ್ಲವುಗಳಿಂದ ಶಾರುಖ್ ಖಾನ್ ಪ್ರತಿದಿನ 1.40 ಕೋಟಿ ರೂ. ಗಳಿಸುತ್ತಾರೆ. ಕಿಂಗ್ ಖಾನ್ ಇದೂವರೆಗೂ 5593 ಕೋಟಿ ರೂ. ಸಂಪಾದನೆ ಮಾಡಿದ್ದಾರೆ.

  ಮಾಡಿದ ತಪ್ಪಿನಿಂದ ಬುದ್ಧಿಕಲಿತ ಚಿರಂಜೀವಿ: ಈ ಬಾರಿ ಎಚ್ಚರಿಕೆಯ ಹೆಜ್ಜೆಮಾಡಿದ ತಪ್ಪಿನಿಂದ ಬುದ್ಧಿಕಲಿತ ಚಿರಂಜೀವಿ: ಈ ಬಾರಿ ಎಚ್ಚರಿಕೆಯ ಹೆಜ್ಜೆ

   ಆಮಿರ್ ಖಾನ್ ಬಳಿ ಸಂಪತ್ತು ಎಷ್ಟಿದೆ?

  ಆಮಿರ್ ಖಾನ್ ಬಳಿ ಸಂಪತ್ತು ಎಷ್ಟಿದೆ?

  ಆಮಿರ್ ಖಾನ್ ಹೆಚ್ಚು ಸಿನಿಮಾಗಳಲ್ಲಿ ನಟಿಸುವುದಿಲ್ಲ. ಎರಡರಿಂದ ಮೂರು ವರ್ಷಗಳಿಗೊಮ್ಮೆ ಒಂದು ಸಿನಿಮಾ ಮಾಡುತ್ತಾರೆ. ಹೀಗಾಗಿ ಇವರ ಒಂದು ದಿನದ ಸಂಪಾದನೆ 33.47 ಕೋಟಿ ರೂ. ಆಮಿರ್ ಇದೂವರೆಗೂ ಸುಮಾರು 1800 ಕೋಟಿ ರೂ. ಗಳಿಸಿದ್ದಾರೆ ಎಂದು ವರದಿಯಾಗಿದೆ. ಸಲ್ಮಾನ್ ಖಾನ್, ಶಾರುಖ್ ಖಾನ್, ಆಮಿರ್ ಖಾನ್ ಈ ಮೂವರಲ್ಲಿ ಕಿಂಗ್ ಖಾನ್ ಬಾಲಿವುಡ್‌ನ ಅತೀ ಶ್ರೀಮಂತ ನಟ ಎಂದು ವರದಿಯಾಗಿದೆ.

  English summary
  Who Is Richest Khan? Salman Khan, Shah Rukh Khan Aamir Khan Their Net Worth, Know More.
  Wednesday, September 21, 2022, 14:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X