ದರ್ಶನ್ ಪತ್ನಿ ವಿಜಯಲಕ್ಷ್ಮಿ ಟ್ಯಾಗ್ ಮಾಡಿದ ಸಂಜಯ್ ಸಿಂಗ್ ಯಾರು? ಪವಿತ್ರಾ ಗೌಡಗೆ ಏನು ಸಂಬಂಧ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂಸಾರದ ವಿಷಯ ಮತ್ತೆ ಚರ್ಚೆಗೆ ಬಂದಿದೆ. ಪವಿತ್ರಾ ಗೌಡ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ದರ್ಶನ್ ಜೊತೆಗಿನ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದಂತೆ ಎಲ್ಲೆಡೆ ವೈರಲ್ ಆಗುತ್ತಿದೆ. ಇದೇ ಬೆನ್ನಲ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಈ ಫೋಟೊಗಳಿಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಕಾನೂನು ಹೋರಾಟ ಕೈಗೊಳ್ಳುವುದಾಗಿ ಪವಿತ್ರಾ ಗೌಡಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಪವಿತ್ರಾ ಗೌಡ ಫೋಟೊಗಳನ್ನು ಹಂಚಿಕೊಂಡ ತಕ್ಷಣವೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಪ್ರತಿಕ್ರಿಯೆ ನೀಡಿದ್ದರು. "ಈ ಮಹಿಳೆಗೆ ಪ್ರಜ್ಞೆ ಅನ್ನೋದು ಇದ್ದಿದ್ದರೆ ಮತ್ತೊಬ್ಬರ ಪತಿಯ ಫೋಟೊಗಳನ್ನು ಹೀಗೆ ಹಂಚಿಕೊಳ್ಳುತ್ತಿರಲಿಲ್ಲ. ಇಂತಹ ಕೆಲಸ ಆಕೆಯ ನೈತಿಕತೆ ಹಾಗೂ ಆದರ್ಶ ಎಂಥಹದ್ದು ಅನ್ನೋದನ್ನು ತೋರಿಸುತ್ತದೆ. ವ್ಯಕ್ತಿಯೊಬ್ಬ ವಿವಾಹಿತನೆಂದು ತಿಳಿದಿದ್ದರೂ ಕೂಡ ಈಕೆ ತನ್ನ ವೈಯಕ್ತಿಕ ಅಗತ್ಯಗಳಿಗಾಗಿ ಹಾಗೂ ಲಾಭಕ್ಕಾಗಿ ಆತನಿಗೆ ಹತ್ತಿರವಾಗುತ್ತಾಳೆ. ಪವಿತ್ರಾ ಮತ್ತು ಸಂಜಯ್ ಸಿಂಗ್ ಅವರ ಮಗಳು ಖುಷಿ ಗೌಡ ಎಂಬುದನ್ನು ಈ ಫೋಟೊಗಳು ಸ್ಪಷ್ಟವಾಗಿ ಸಾಬೀತು ಮಾಡುತ್ತವೆ." ಎಂದು ಪ್ರತಿಕ್ರಿಯೆ ನೀಡಿದ್ದರು.

ಇಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿಶೇಷವಾಗಿ ಸಂಜಯ್ ಸಿಂಗ್ ಅನ್ನೋ ವ್ಯಕ್ತಿಯ ಹೆಸರನ್ನು ಪವಿತ್ರಾ ಗೌಡ ಜೊತೆ ತಳುಕು ಹಾಕಿದ್ದಾರೆ. ಅಷ್ಟೇ ಅಲ್ಲದೆ, ಪವಿತ್ರಾ ಗೌಡ ಹಾಗೂ ಸಂಜಯ್ ಸಿಂಗ್ ಎಂದು ಹೇಳಲಾಗುತ್ತಿರುವ ಹಳೆಯ ಪೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೊಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಒಳಪಟ್ಟಿವೆ. ಹಾಗಿದ್ದರೆ ಸಂಜಯ್ ಸಿಂಗ್ ಯಾರು? ಅವರ ಹಿನ್ನೆಲೆಯೇನು?
ವಿಜಯಲಕ್ಷ್ಮಿ ತಮ್ಮ ಪೋಸ್ಟ್‌ನಲ್ಲಿ ಹೆಸರಿಸಿದ ಸಂಜಯ್ ಸಿಂಗ್ ಯಾರು? ಅನ್ನೋ ಬಗ್ಗೆ ಚರ್ಚೆ ಶುರುವಾಗಿದೆ. ಇಲ್ಲಿ ವಿಜಯಲಕ್ಷ್ಮಿ ಹೇಳಿರುವ ಪ್ರಕಾರ, ಪ್ರವಿತ್ರಾ ಗೌಡ ಹಾಗೂ ಸಂಜಯ್ ಸಿಂಗ್ ಪುತ್ರಿ ಖುಷಿ ಗೌಡ. ಹಾಗಿದ್ದರೆ, ಪವಿತ್ರಾ ಗೌಡ ಹಾಗೂ ಸಂಜಯ್ ಸಿಂಗ್ ಯಾವಾಗ ಮದುವೆ ಆಗಿದ್ದರು? ಈಗಲೂ ಇಬ್ಬರೂ ಒಟ್ಟಿಗೆ ಸಂಸಾರ ನಡೆಸುತ್ತಿದ್ದಾರೆಯೇ? ಇಲ್ಲ ಇಬ್ಬರ ನಡುವೆ ವಿಚ್ಛೇದನ ಆಗಿದೆಯೇ? ಈಗ ಸಂಜಯ್ ಸಿಂಗ್ ಎಲ್ಲಿದ್ದಾರೆ? ಇಂತಹ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಇನ್ನೊಂದು ಕಡೆ ಕಳೆದ ಹತ್ತು ವರ್ಷಗಳಿಂದ ದರ್ಶನ್ ಜೊತೆ ರಿಲೇಷನ್‌ಶಿಪ್‌ನಲ್ಲಿರುವುದಾಗಿ ಪವಿತ್ರಾ ಗೌಡ ಹೇಳಿಕೊಂಡಿದ್ದಾರೆ. ಹಾಗಿದ್ದರೆ, 10 ವರ್ಷಗಳಿಂದ ಸಂಜಯ್ ಸಿಂಗ್‌ಗೆ ಈ ವಿಷಯ ಗೊತ್ತಿಲ್ಲವೇ? ಗೊತ್ತಿದ್ದರೂ ಯಾಕೆ ಸುಮ್ಮನಿದ್ದಾರೆ? ಈ ಎಲ್ಲಾ ಪ್ರಶ್ನೆಗಳಿಗೂ ಸಂಜಯ್ ಸಿಂಗ್ ಉತ್ತರ ಕೊಡುವರೇ? ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
ವಿಜಯಲಕ್ಷ್ಮಿ ಕೋಪಕ್ಕೆ ಪವಿತ್ರಾ ಗೌಡ ಫೋಟೊಗಳನ್ನು ಶೇರ್ ಮಾಡಿದ್ದಷ್ಟೇ ಕಾರಣವಲ್ಲ ಎನ್ನಲಾಗುತ್ತಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಪವಿತ್ರಾ ಗೌಡ ಪುತ್ರ ಖುಷಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಆ ವೇಳೆ ದರ್ಶನ್ ಆ ಹುಟ್ಟುಹಬ್ಬದ ಸಂದರ್ಭದಲ್ಲಿ ಭಾಗಿಯಾಗಿದ್ದರು. ಆ ವೇಳೆ ಕೂಡ ಪವಿತ್ರಾ ಗೌಡ ಫೋಟೊ ಹಾಗೂ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು. ಪ್ರತಿ ಬಾರಿ ಫೋಟೊಗಳನ್ನು ಶೇರ್ ಮಾಡಿಕೊಂಡಾಗಲೂ, ಪುತ್ರಿ ದರ್ಶನ್ ಜೊತೆಗಿರುವ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದು ಇದೆ. ಹೀಗಾಗಿ ವಿಜಯಲಕ್ಷ್ಮಿ ಕೋಪಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಜಯಲಕ್ಷ್ಮಿ ಇದೇ ಪೋಸ್ಟ್‌ನಲ್ಲಿ "ಸಾಮಾನ್ಯವಾಗಿ ನಾನು ವೈಯಕ್ತಿಕ ವಿಷಯಗಳ ಬಗ್ಗೆ ಮಾತನಾಡಲು ಸೋಶಿಯಲ್ ಮೀಡಿಯಾವನ್ನು ಬಳಸುವುದಿಲ್ಲ. ಆದರೆ, ನನ್ನ ಕುಟುಂಬದ ಹಿತದೃಷ್ಟಿಯಿಂದ ಈಗ ಧ್ವನಿ ಎತ್ತುವ ಸಮಯ ಬಂದಿದೆ. ಸಮಾಜಕ್ಕೆ ತಪ್ಪು ಚಿತ್ರಣ ನೀಡಲು ಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ" ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ ಖಡಕ್ ಸಂದೇಶ ರವಾನೆ ಮಾಡಿದ್ದಾರೆ. ಹೀಗಾಗಿ ಇದು ಇನ್ಯಾವ ಹಂತಕ್ಕೆ ಹೋಗಿ ನಿಲ್ಲುತ್ತೋ ಕಾದು ನೋಡಬೇಕು.


Click it and Unblock the Notifications











