ಯಾರೀ 'ಸೈಲೆಂಟ್ ಸುನೀಲ'..? ರಿಯಲ್ 'ರೌಡಿ' ಕಹಾನಿ

By ಹರಾ

ಅಗ್ನಿ ಶ್ರೀಧರ್ ಜೊತೆ ಸೇರಿ ದುನಿಯಾ ಸೂರಿ 'ರಿಯಲ್' ಸಿನಿಮಾ ಮಾಡುತ್ತಿರುವ ಬಗ್ಗೆ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೀವು ಓದಿದ್ರಿ. ಬೆಂಗಳೂರು ಭೂಗತ ಲೋಕದಲ್ಲಿ ಮುಂಚೂಣಿಯಲ್ಲಿರುವ ಪಾತಕಿ 'ಸೈಲೆಂಟ್ ಸುನೀಲ'ನ ನಿಜ ಜೀವನದ ಕರಾಳ ಅಧ್ಯಾಯವನ್ನ ಸೂರಿ ಬೆಳ್ಳಿ ತೆರೆಮೇಲೆ ತರುತ್ತಿದ್ದಾರೆ.

ಅದಕ್ಕಾಗಿ 'ರಿಯಲ್ ರೌಡಿ' ಸೈಲೆಂಟ್ ಸುನೀಲನಿಗೆ ಬಣ್ಣ ಹಚ್ಚಿಸಿ, ಅವರ ಮೂಲಕ ಅವರ ಕಥೆಯನ್ನೇ ಹೇಳಿಸುವ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದ್ದಾರೆ ನಿರ್ದೇಶಕ ಸೂರಿ. ರೌಡಿ ಶೀಟರ್ 'ಹೀರೋ' ಆಗಿ ತಮ್ಮದೇ ಪಾತ್ರವನ್ನ ತೆರೆಮೇಲೆ ನಿಭಾಯಿಸುತ್ತಿದ್ದಾರೆ ಅಂದ್ರೆ ಕೆಲ ಕುತೂಹಲಗಳು ಗರಿಗೆದರುವುದು ಸಹಜ. [ರೀಲ್ ಮೇಲೆ ಮತ್ತೊಬ್ಬ ರಿಯಲ್ ರೌಡಿಯ ಕರಾಳ ಅಧ್ಯಾಯ]

ಅಷ್ಟಕ್ಕೂ ಈ 'ಸೈಲೆಂಟ್ ಸುನೀಲ' ಯಾರು? ರೌಡಿಸಂಗೆ ಆತ ಎಂಟ್ರಿಕೊಟ್ಟಿದ್ದು ಯಾಕೆ? ನಟಿಸುವುದಕ್ಕೆ ಆತ ಒಪ್ಪಿಕೊಂಡಿದ್ದು ಹೇಗೆ? ಇಲ್ಲಿಯವರೆಗೂ ಸುನೀಲನ ಸೈಲೆಂಟ್ ಸ್ಕೆಚ್ ಗೆ ಬಲಿಯಾಗಿರುವವರು ಯಾರ್ಯಾರು? ಬೆಂಗಳೂರಲ್ಲಿ ಸುನೀಲನ 'ದಾದಾಗಿರಿಯ ದಿನಗಳ' ಬಗ್ಗೆ ಕಂಪ್ಲೀಟ್ ಆಗಿ ಹೇಳ್ತೀವಿ, ಮುಂದೆ ಓದಿ....

ಬಾಲಾಪರಾಧಿ ಆಗಿದ್ದ 'ಸೈಲೆಂಟ್ ಸುನೀಲ'

ಬಾಲಾಪರಾಧಿ ಆಗಿದ್ದ 'ಸೈಲೆಂಟ್ ಸುನೀಲ'

ಬೆಂಗಳೂರಿನ ಪ್ರಕಾಶ ನಗರದ ಅಡ್ಡದಲ್ಲಿ ಬೀಡು ಬಿಟ್ಟಿರುವ ಸೈಲೆಂಟ್ ಸುನೀಲ ಮೂಲತಃ ಕೇರಳಾದವನು. ಹತ್ತನೇ ತರಗತಿ ಓದುವಾಗಲೇ 'ಬಾಲಾಪರಾಧಿ'ಯಾಗಿ ಜೈಲುವಾಸ ಅನುಭವಿಸಿದಾತ ಈ ಸೈಲೆಂಟ್ ಸುನೀಲ.

'ನಾಗರಾಜ', 'ಪ್ರಸಾದಿ'ಯ ರೈಟ್ ಹ್ಯಾಂಡ್!

'ನಾಗರಾಜ', 'ಪ್ರಸಾದಿ'ಯ ರೈಟ್ ಹ್ಯಾಂಡ್!

ಜೈಲುವಾಸ ಅನುಭವಿಸಿದ ಬಳಿಕ ಪ್ರಕಾಶ್ ನಗರದ ಕುಖ್ಯಾತ ರೌಡಿ ಶೀಟರ್ ಗಳಾದ ನಾಗರಾಜ, ಒಂಟೆ ಮತ್ತು ಪ್ರಸಾದಿ ಗುಂಪಿಗೆ ಸುನೀಲ ಸೇರಿಕೊಳ್ಳುತ್ತಾನೆ. ಬಸವೇಶ್ವರನಗರದ ಪೊಲೀಸ್ ಒಬ್ಬರ ಮೇಲೆ ಅಟ್ಯಾಕ್ ಮಾಡಿದ ಆರೋಪದಲ್ಲಿ ಮತ್ತೆ ಅಂದರ್ ಆಗುತ್ತಾನೆ. ಅಲ್ಲಿಂದ ಒಂದೊಂದೇ ಪ್ರಕರಣದಲ್ಲಿ ನೋಟೆಡ್ ಆಗುವ ಸುನೀಲ 'ಮೋಸ್ಟ್ ವಾಂಟೆಡ್' ಲಿಸ್ಟ್ ಗೆ ಸೇರಿಕೊಳ್ಳುವುದು ಮರ್ಡರ್ ಕೇಸ್ ವೊಂದರಲ್ಲಿ ಸಿಕ್ಕಿಹಾಕಿಕೊಂಡ ಮೇಲೆ.

'ಬೆಕ್ಕಿನ ಕಣ್ಣು ರಾಜೇಂದ್ರ'ನ ಮರ್ಡರ್ ಕೇಸ್ ನಲ್ಲಿ ಶಾಮೀಲು

'ಬೆಕ್ಕಿನ ಕಣ್ಣು ರಾಜೇಂದ್ರ'ನ ಮರ್ಡರ್ ಕೇಸ್ ನಲ್ಲಿ ಶಾಮೀಲು

ಕೆಲ ವರ್ಷಗಳ ಹಿಂದೆ, ಬೆಂಗಳೂರಿನ ಚಾಲುಕ್ಯ ಸರ್ಕಲ್ ನಲ್ಲಿ ಒಂದ್ಕಾಲದ ರೌಡಿ ಬೆಕ್ಕಿನ ಕಣ್ಣು ರಾಜೇಂದ್ರನ ಹತ್ಯೆಯಾಯ್ತು. ರಾಜೇಂದ್ರನ ಮರ್ಡರ್ ಕೇಸ್ ನ ಪ್ರಮುಖ ಆರೋಪಿಯಾಗಿ ತಗಲಾಕೊಂಡು ಸುನೀಲ ಸೆರೆವಾಸ ಅನುಭಸಿದ್ದ. ಹಾಗೆ ನೋಡಿದ್ರೆ, ಈ ಮರ್ಡರ್ ಕೇಸ್ ನಲ್ಲಿ ಸುನೀಲ ಸಿಕ್ಕಿಬಿದ್ದ ಮೇಲೆ ಬೆಂಗಳೂರಿನ ಭೂಗತಲೋಕದಲ್ಲಿ ಸುನೀಲನ ಹವಾ ಶುರುವಾಗಿದ್ದು.

'ಸೈಲೆಂಟ್' ಸುನೀಲ ಅಂತ ಕರೆಯೋದು ಯಾಕೆ?

'ಸೈಲೆಂಟ್' ಸುನೀಲ ಅಂತ ಕರೆಯೋದು ಯಾಕೆ?

ಕೆಲಸದಲ್ಲಿ ಎಷ್ಟು ಪರ್ಫೆಕ್ಟೋ, ಸುನೀಲ ಮಾತಿನಲ್ಲಿ ಅಷ್ಟೇ ಕಮ್ಮಿ. ಯಾರಿಗೂ ಗೊತ್ತಾಗದ ಹಾಗೆ ಸುನೀಲ ಹಾಕುವ ಸ್ಕೆಚ್, ಮಿಸ್ ಆಗಿರುವ ಇತಿಹಾಸವೇ ಇಲ್ಲ. ಸೈಲೆಂಟಾಗಿ ಕೆಲಸ ಮಾಡಿ ಮುಗಿಸುವ ಸುನೀಲ, ಪಾತಕಲೋಕದಲ್ಲಿ 'ಸೈಲೆಂಟ್ ಸುನೀಲ' ಅಂತಲೇ ಫೇಮಸ್ಸು.

'ಸೈಲೆಂಟ್ ಸುನೀಲ'ನ ಹಿಸ್ಟ್ರಿ ಅಗ್ನಿ ಶ್ರೀಧರ್ ಕೈಯಲ್ಲಿ!

'ಸೈಲೆಂಟ್ ಸುನೀಲ'ನ ಹಿಸ್ಟ್ರಿ ಅಗ್ನಿ ಶ್ರೀಧರ್ ಕೈಯಲ್ಲಿ!

ಕಥೆಗಾಗಿ ಹುಡುಕಾಟ ನಡೆಸುತ್ತಿದ್ದಾಗ ದುನಿಯಾ ಸೂರಿಗೆ ಅಗ್ನಿ ಶ್ರೀಧರ್ ಹೇಳಿದ ಕಥೆ 'ಸೈಲೆಂಟ್ ಸುನೀಲ'ರದ್ದು. ಕಥೆ ಕೇಳಿ ಇಂಪ್ರೆಸ್ ಆದ ಸೂರಿ, ಚಿತ್ರಕಥೆ ರೆಡಿಮಾಡಿಟ್ಟುಕೊಂಡು ಅನೇಕ ಹೀರೋಗಳ ಬಳಿ ಮಾತುಕತೆ ನಡೆಸಿದ್ದರು. ಆದ್ರೆ ಯಾವುದೂ ಸರಿ ಬರದ ಕಾರಣ 'ರಿಯಲ್' ಸೈಲೆಂಟ್ ಸುನೀಲರನ್ನೇ ಸೂರಿ ಭೇಟಿ ಮಾಡುತ್ತಾರೆ. [ಅಗ್ನಿ ಶ್ರೀಧರ್ ಜೊತೆ ದುನಿಯಾ ಸೂರಿ 'ದಾದಾಗಿರಿ']

ಬಣ್ಣದ ಬದುಕಿಗೆ ಕಾಲಿಡೋಕೆ ಒಪ್ಪಿಕೊಂಡ ಸುನೀಲ!

ಬಣ್ಣದ ಬದುಕಿಗೆ ಕಾಲಿಡೋಕೆ ಒಪ್ಪಿಕೊಂಡ ಸುನೀಲ!

'ನಿಮ್ಮ ಕಥೆಯನ್ನ ನೀವೇ ಹೇಳಿದರೆ ಚೆನ್ನ' ಅಂತ ದುನಿಯಾ ಸೂರಿ ಸೈಲೆಂಟ್ ಸುನೀಲನಿಗೆ ಹಲವಾರು ಬಾರಿ ಭೋದನೆ ಮಾಡಿದ ಪರಿಣಾಮ, 'ಸೈಲೆಂಟ್ ಸುನೀಲ' ಬೆಳ್ಳಿತೆರೆಗೆ ಕಾಲಿಡುವುದಕ್ಕೆ ಒಪ್ಪಿಕೊಂಡನಂತೆ. ಅವರದ್ದೇ ಕಥೆ ಆಗಿರುವುದರಿಂದ ಅವರಿದ್ದ ಸ್ಥಳ, ಸ್ಕೆಚ್ ಹಾಕಿದ ಅಡ್ಡಗಳಲ್ಲೇ 'ರಿಯಲ್' ಆಗೇ ಶೂಟಿಂಗ್ ನಡೆಯಲಿದೆ. ಸೈಲೆಂಟ್ ಸುನೀಲನ ಜೊತೆ ಇನ್ನಷ್ಟು 'ರಿಯಲ್' ರೌಡಿಶೀಟರ್ ಗಳು ಚಿತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

'ಮೇಘ ಮೂವೀಸ್'ಕ್ಯಾಂಪ್ ನಲ್ಲಿ ದುನಿಯಾ ಸೂರಿ ಟೀಂ

'ಮೇಘ ಮೂವೀಸ್'ಕ್ಯಾಂಪ್ ನಲ್ಲಿ ದುನಿಯಾ ಸೂರಿ ಟೀಂ

ನಿಜವಾದ ರೌಡಿಗಳನ್ನೇ ಇಟ್ಟುಕೊಂಡು ಸಿನಿಮಾ ನಿರ್ಮಾಣ ಮಾಡುವ ಗುಂಡಿಗೆಯನ್ನ ತೋರಿರುವುದು ಅಗ್ನಿ ಶ್ರೀಧರ್. ತಮ್ಮ ಮೇಘ ಮೂವೀಸ್ ಬ್ಯಾನರ್ ನಡಿ ಅಗ್ನಿ ಶ್ರೀಧರ್ 'ಸೈಲೆಂಟ್ ಸುನೀಲ'ನಿಗೆ ಬಂಡವಾಳ ಹಾಕುತ್ತಿದ್ದಾರೆ. ಸುಮನಾ ಕಿತ್ತೂರ್ ಸಂಭಾಷಣೆ ಬರೆಯುತ್ತಿದ್ದಾರೆ. ದುನಿಯಾ ಸೂರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.

More from Filmibeat

English summary
Rowdysheeter Silent Sunila, who made headlines in Bekkina Kannu Rajendra murder case is making his onscreen debut with the movie in his name. Here is the complete report about the Rowdysheeter turned Actor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X