For Quick Alerts
  ALLOW NOTIFICATIONS  
  For Daily Alerts

  ಈ ಸ್ಟಾರ್ ನಟಿಯರ ಪೈಕಿ 'ಈ ವಾರದ ಸ್ಟೈಲಿಶ್ ಚೆಲುವೆ' ಯಾರು?

  |

  ಸಿನಿಮಾ ನಟಿಯರು ತೆರೆಮೇಲೆ ಕಾಣಿಸಿಕೊಳ್ಳುವುದಕ್ಕಿಂತ ತೆರೆ ಹಿಂದೆ ಹೆಚ್ಚು ಸ್ಟೈಲಿಶ್ ಆಗಿರುತ್ತಾರೆ. ಸಿನಿಮಾ ಕಾರ್ಯಕ್ರಮಗಳು, ಅವಾರ್ಡ್ ಕಾರ್ಯಕ್ರಮಗಳು ಅಥವಾ ಇನ್ನಿತರ ಕಾರ್ಯಕ್ರಮಗಳಲ್ಲಿ ನಟಿಮಣಿಯರು ಹೆಚ್ಚು ವಿಶೇಷವಾಗಿ ಇರ್ತಾರೆ. ಅದರಲ್ಲೂ ಇತ್ತೀಚಿನ ನಟಿಯರಂತೂ ಹೇರ್ ಸ್ಟೈಲ್, ಕಾಸ್ಟ್ಯೂಮ್, ಟ್ಯಾಟೂ ಹಾಗೂ ಅವರು ತೊಡುವ ಆಭರಣಗಳು ಎಲ್ಲದರಲ್ಲಿಯೂ ಸ್ಟೈಲಿಶ್ ಆಗಿರಲು ಬಯಸುತ್ತಾರೆ.

  ರಶ್ಮಿಕಾ ಮಂದಣ್ಣ, ಕೀರ್ತಿ ಸುರೇಶ್, ಪೂಜಾ ಹೆಗ್ಡೆ, ತಮನ್ನಾ ಭಾಟಿಯಾ ಹಾಗೂ ಹನ್ಸಿಕಾ ಮೊಟ್ವಾನಿ ಈ ವಾರದಲ್ಲಿ ಹೆಚ್ಚು ಸುದ್ದಿಯಲ್ಲಿದ್ದರು. ಸಿನಿಮಾಗಳ ಪ್ರಚಾರದಲ್ಲಿ ಈ ನಟಿಯರು ಕ್ಯಾಮೆರಾ ಮುಂದೆ ಕಾಣಿಸಿಕೊಂಡರು. ಈ ವೇಳೆ ಸ್ಟಾರ್ ನಟಿಯರ ಕಾಸ್ಟ್ಯೂಮ್‌ಗಳು ಹೆಚ್ಚು ಆಕರ್ಷಸಿವೆ. ಈ ಐವರಲ್ಲಿ ಈ ವಾರ ಸ್ಟೈಲಿಶ್ ನಟಿ ಪಟ್ಟ ಯಾರಿಗೆ ನೀಡಬಹುದು? ಈ ಫೋಟೋಗಳನ್ನು ನೋಡಿ ನಿಮ್ಮ ಆಯ್ಕೆ ತಿಳಿಸಿದೆ. ಮುಂದೆ ಓದಿ....

  ಮುಂಬೈನಲ್ಲಿ ಭೇಟಿಯಾದ ಜೋಡಿ: ರಶ್ಮಿಕಾ ಉಡುಪಿನ ಮೇಲೇಕೆ ನೆಟ್ಟಿಗರ ಕಣ್ಣು?ಮುಂಬೈನಲ್ಲಿ ಭೇಟಿಯಾದ ಜೋಡಿ: ರಶ್ಮಿಕಾ ಉಡುಪಿನ ಮೇಲೇಕೆ ನೆಟ್ಟಿಗರ ಕಣ್ಣು?

  ರಶ್ಮಿಕಾ ಮಂದಣ್ಣ

  ರಶ್ಮಿಕಾ ಮಂದಣ್ಣ

  ತಮಿಳು ನಟ ಕಾರ್ತಿ ಅಭಿನಯದ 'ಸುಲ್ತಾನ' ಸಿನಿಮಾದ ಪ್ರ-ರಿಲೀಸ್ ಕಾರ್ಯಕ್ರಮದಲ್ಲಿ ನಟಿ ರಶ್ಮಿಕಾ ಮಂದಣ್ಣ ಲುಕ್ ಗಮನ ಸೆಳೆದಿದೆ. ರೆಟ್ರೋ ಸ್ಟೈಲ್‌ನಲ್ಲಿ ಮಿಂಚಿದ್ದ ರಶ್ಮಿಕಾ ಮಂದಣ್ಣ ವಿಭಿನ್ನ ಹೇರ್ ಸ್ಟೈಲ್ ಮತ್ತು ಕೆಂಗುಲಾಬಿಯಿಂದ ಆಕರ್ಷಿತರಾಗಿದ್ದರು.

  ಕೀರ್ತಿ ಸುರೇಶ್

  ಕೀರ್ತಿ ಸುರೇಶ್

  ನಿತೀನ್ ಜೊತೆ ನಟಿಸಿರುವ 'ರಂಗ್‌ದೇ' ಸಿನಿಮಾ ಪ್ರಚಾರದಲ್ಲಿ ನಟಿ ಕೀರ್ತಿ ಸುರೇಶ್ ಭಾಗವಹಿಸಿದ್ದರು. ಈ ವೇಳೆ ಸಿಲ್ವರ್ ಬಣ್ಣದ ಸೀರೆಯಲ್ಲಿ ಕೀರ್ತಿ ಮಿಂಚಿದ್ದರು. ಶ್ರವ್ಯ ವರ್ಮಾ ಡಿಸೈನ್ ಮಾಡಿದ್ದ ಕಾಸ್ಟ್ಯೂಮ್ ಉಡುಗೆತೊಡುಗೆ ತೊಟ್ಟಿದ್ದ ಕೀರ್ತಿ ದೇವತೆಯಂತಿದ್ದರು.

  <br />ವಿಜಯ್ 65ನೇ ಚಿತ್ರಕ್ಕೆ ಕೊನೆಗೂ ನಾಯಕಿ ಪಕ್ಕಾ: ಪೂಜಾಗೆ ಒಲಿದ ಅದೃಷ್ಟ
  ವಿಜಯ್ 65ನೇ ಚಿತ್ರಕ್ಕೆ ಕೊನೆಗೂ ನಾಯಕಿ ಪಕ್ಕಾ: ಪೂಜಾಗೆ ಒಲಿದ ಅದೃಷ್ಟ

  ತಮನ್ನಾ ಭಾಟಿಯಾ

  ತಮನ್ನಾ ಭಾಟಿಯಾ

  ಮಿಲ್ಕಿಬ್ಯೂಟಿ ತಮನ್ನಾ ಭಾಟಿಯಾ ಖಾಸಗಿ ಕಾರ್ಯಕ್ರಮದಲ್ಲಿ ಗೌನ್ ತೊಟ್ಟು ಮಿಂಚಿದ್ದರು. ಸುಕೃತಿ ಅವರ ಮಾರ್ಗದರ್ಶನದಲ್ಲಿ ಪಿಂಕ್ ಬಣ್ಣದ ಗೌನ್ ತೊಟ್ಟು ಕಾಣಿಸಿಕೊಂಡಿದ್ದ ತಮನ್ನಾ ನೋಡುಗರ ಗಮನ ಸೆಳೆದಿದ್ದಾರೆ.

  ನಟಿ ಪೂಜಾ ಹೆಗ್ಡೆ

  ನಟಿ ಪೂಜಾ ಹೆಗ್ಡೆ

  ಡಿಸೈನರ್ ವರುಣ್ ಚಕ್ಕಿಲಮ್ ಅವರ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಪೂಜಾ ಹೆಗ್ಡೆ ಚೆಂದದ ಬೊಂಬೆಯಂತೆ ಮಿಂಚಿದರು. ನೀಲಿ ಮತ್ತು ಬಿಳ್ಳಿ ಬಣ್ಣ ಮಿಶ್ರಿತ ಲೆಹಾಂಗದಲ್ಲಿ ಪೂಜಾ ಹೆಜ್ಜೆ ಹಾಕಿದ್ದರು. ಕಾಸ್ಟ್ಯೂಮ್ ಔಟ್ ಫಿಟ್, ಮೇಕಪ್ ಹಾಗೂ ಸ್ಟೈಲ್ ವಿಚಾರದಲ್ಲಿ ಪೂಜಾಗೆ ಫುಲ್ ಮಾರ್ಕ್ಸ್.

  Smrithi Irani Marriage Story : ಆಪ್ತ ಗೆಳತಿಯ ಪತಿಯನ್ನೇ ಮದುವೆಯಾದ ಸ್ಮೃತಿ ಇರಾನಿ | Filmibeat Kannada
  ಹನ್ಸಿಕಾ ಮೊಟ್ವಾನಿ

  ಹನ್ಸಿಕಾ ಮೊಟ್ವಾನಿ

  ಸಹೋದರನ ಮದುವೆಯ ಮೆಹಂದಿ ಕಾರ್ಯಕ್ರಮದಲ್ಲಿ ನಟಿ ಹನ್ಸಿಕಾ ಮೊಟ್ವಾನಿ ಕೆಂಪು ಬಣ್ಣದ ಲೆಹಾಂಗ ತೊಟ್ಟು ಹೆಜ್ಜೆ ಹಾಕಿದ್ದಾರೆ. ಅಭಿನವ್ ಮಿಶ್ರಾ ಈ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದರು.

  English summary
  Rashmika mandanna, keerthy suresh, pooja hegde, tamanna bhatia who is the Best Dressed South Indian Actress?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X