twitter
    For Quick Alerts
    ALLOW NOTIFICATIONS  
    For Daily Alerts

    2016 ರ ಅತ್ಯುತ್ತಮ ನಿರ್ದೇಶಕ ಯಾರು? ವೋಟ್ ಮಾಡಿ

    2016 ರಲ್ಲಿ ವಿಭಿನ್ನವಾಗಿ ಹಲವು ಪ್ರಯೋಗಾತ್ಮಕ ಸಿನಿಮಾಗಳನ್ನು ನಿರ್ದೇಶಿಸಿದ ಹಲವು ಡೈರೆಕ್ಟರ್‌ ಗಳ ಪಟ್ಟಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ಅವರುಗಳಲ್ಲಿ ಉತ್ತಮ ಡೈರೆಕ್ಟರ್‌ ಯಾರು ಎಂದು ತಿಳಿದು, ನೀವು ವೋಟ್ ಮಾಡಿ.

    By Suneel
    |

    ಬೆಸ್ಟ್‌ ಸಿನಿಮಾ ಅಂದ್ರೆ ಬಾಕ್ಸಾಫೀಸ್ ತುಂಬಿಸೋದಾ? ಅಲ್ಲಾ.. ಆ ಕಾಲ ಬದಲಾಗುತ್ತಿದೆ. ಬೆಸ್ಟ್ ಸಿನಿಮಾ ಅಂದ್ರೆ ಗಲ್ಲಾ ಪೆಟ್ಟಿಗೆ ತುಂಬಿಸುವುದು ಅಲ್ಲಾ ಎನ್ನುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಅಲ್ವಾ?..[ಈ ವರ್ಷ ಬೆಳ್ಳಿತೆರೆಯಲ್ಲಿ ರಾರಾಜಿಸಿದ 'ಸಾರ್ವಕಾಲಿಕ' ಹಿಟ್ ಚಿತ್ರಗಳು!]

    ಈಗ ಡೈರೆಕ್ಟರ್ ಯಾರು ತಿಳಿದು ಸಿನಿಮಾಗೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸಿನಿಮಾ ಪ್ರೇಕ್ಷಕರು ಇಂದು ಕೇವಲ ಮನರಂಜನೆಗೆ ಮಾತ್ರವಲ್ಲದೇ, ಪ್ರಯೋಗಾತ್ಮಕ ಸಿನಿಮಾವೇ, ಒಳ್ಳೇ ಮೆಸೇಜ್‌ ಇದೆಯೇ, ಥ್ರಿಲ್ಲಿಂಗ್ ಆಗಿದೆಯೇ ಎಂಬ ಅಂಶಗಳ ಮೇಲೆ ಕಣ್ಣಾಡಿಸುತ್ತಿದ್ದಾರೆ. ಈ ಎಲ್ಲಾ ಅಂಶಗಳಲ್ಲಿ ಯಾವುದಾದರೂ ಒಂದು ಇದ್ದರೂ ತಾವು ಹೋಗುತ್ತಾರೆ. ಹಾಗೆ ಕುಟುಂಬವನ್ನು ಕರೆದೊಯ್ಯುತ್ತಾರೆ.[2016ರ ಅತ್ಯುತ್ತಮ ಚಿತ್ರ-ನಟ-ನಟಿ-ನಿರ್ದೇಶಕರನ್ನ ಆಯ್ಕೆ ಮಾಡಿ!]

    ಹಾಗಿದ್ರೆ ಮೇಲಿನ ಎಲ್ಲಾ ಅಂಶಗಳನ್ನು ಆಧಾರವಾಗಿಟ್ಟುಕೊಂಡು ನೋಡುವುದಾದರೇ 2016 ರಲ್ಲಿ ಅಂತಹ ಸಿನಿಮಾಗಳನ್ನು ಡೈರೆಕ್ಟ್‌ ಮಾಡಿದ ಬೆಸ್ಟ್‌ ಡೈರೆಕ್ಟರ್ ಯಾರು ಎಂಬ ಪ್ರಶ್ನೆ ಬರುತ್ತದೆ. ಹಾಗಿದ್ರೆ ಅವರು ಯಾರು? ಉತ್ತರ ನಾವು ಹೇಳುತ್ತೇವೆ. 2016 ರಲ್ಲಿ ವಿಭಿನ್ನವಾಗಿ ಹಲವು ಪ್ರಯೋಗಾತ್ಮಕ ಸಿನಿಮಾಗಳನ್ನು ನಿರ್ದೇಶಿಸಿದ ಹಲವು ಡೈರೆಕ್ಟರ್‌ ಗಳ ಪಟ್ಟಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ಅವರುಗಳಲ್ಲಿ ಉತ್ತಮ ಡೈರೆಕ್ಟರ್‌ ಯಾರು ಎಂದು ತಿಳಿದು, ನೀವು ವೋಟ್ ಮಾಡಿ.

    ಸುಮಾನಾ ಕಿತ್ತೂರು (ಕಿರಗೂರಿನ ಗಯ್ಯಾಳಿಗಳು)

    ಸುಮಾನಾ ಕಿತ್ತೂರು (ಕಿರಗೂರಿನ ಗಯ್ಯಾಳಿಗಳು)

    ಖ್ಯಾತ ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ 'ಕಿರಗೂರಿನ ಗಯ್ಯಾಳಿಗಳು' ಮೂಲ ಕಥೆ ಆಧಾರಿತ ಸಿನಿಮಾವನ್ನು ಕಥೆಗೆ ಜೀವ ತುಂಬಿದಂತೆಯೇ ಸುಮಾನಾ ಕಿತ್ತೂರು ನಿರ್ದೇಶಿಸಿ ಯಶಸ್ವಿಯಾದರು. ಗಂಡಸರು ಮಾಡುವ ಕೆಲಸವನ್ನು ಹೆಂಗಸರು ಮಾಡುತ್ತಾ, ಗಂಡಸರಿಗಿಂತ ಯಾವುದರಲ್ಲೂ ನಾವೇನೂ ಕಡಿಮೆ ಇಲ್ಲ ಎನ್ನುವ ಹೆಂಗಸರೇ ಇರುವ 'ಕಿರಿಗೂರು' ಎಂಬ ಚಿಕ್ಕ ಹಳ್ಳಿಯ ಕಥೆಯನ್ನು ಹಾಗೆ ಜೀವಂತಿಕೆ ನೀಡಿ ತೆರೆಮೇಲೆ ತರುವುದು ಸುಲಭದ ಮಾತಲ್ಲ. ಓದುವ ಕಥೆಯನ್ನು ಸಿನಿಮಾ ಮಾಡುವಲ್ಲಿ ಸುಮನಾ ಕಿತ್ತೂರು ನಿರೂಪಣೆ ಮಾಡಿ ಯಶಸ್ವಿ ಆದರು.['ಕಿರಗೂರಿನ ಗಯ್ಯಾಳಿಗಳು' ನನಗೆ ಚೊಚ್ಚಲ ಚಿತ್ರ ಎಂದ ನಟಿ ಯಾರು?]

    ನಾಗತಿಹಳ್ಳಿ ಚಂದ್ರಶೇಕರ್ (ಇಷ್ಟಕಾಮ್ಯ)

    ನಾಗತಿಹಳ್ಳಿ ಚಂದ್ರಶೇಕರ್ (ಇಷ್ಟಕಾಮ್ಯ)

    ನಾಗತಿಹಳ್ಳಿ ಚಂದ್ರಶೇಖರ್ ರವರು ಎರಡು ವರ್ಷಗಳ ಬಳಿಕ 2016 ರಲ್ಲಿ ಪಕ್ಕಾ ಫ್ಯಾಮಿಲಿ ಮನೋರಂಜನಾತ್ಮಕ ಚಿತ್ರವನ್ನು ಸ್ಯಾಂಡಲ್ ವುಡ್‌ ಗೆ ನೀಡಿದ್ದು ಒಂದು ವಿಶೇಷವೇ ಹೌದು. ಇತ್ತೀಚಿನ ದಿನಗಳಲ್ಲಿ ಕುಟುಂಬ ಸಮೇತ ಕುಳಿತು ನೋಡುವ ಸಿನಿಮಾಗಳು ಕಡಿಮೆ ಎಂಬ ಸಂದರ್ಭದಲ್ಲಿ 'ಮನಸ್ಸಿನ ಮೋಹ, ಅಭಿಲಾಷೆ, ಆಕಾಂಕ್ಷೆ, ಪಡೆದುಕೊಳ್ಳುವ ಆಸ ಎಂಬ ಅರ್ಥ ಹೊಂದಿರುವ 'ಇಷ್ಟಕಾಮ್ಯ' ಸಿನಿಮಾವನ್ನು ನಿರ್ದೇಶನ ಮಾಡಿ ಫ್ಯಾಮಿಲಿ ಕುಳಿತು ನೋಡುವ ಸಿನಿಮಾ ನೀಡಿದ್ದು ಸ್ಯಾಂಡಲ್‌ ವುಡ್‌ ಗೆ ಪ್ಲಸ್ ಪಾಯಿಂಟ್ ಆಗಿತ್ತು.[ವಿಮರ್ಶೆ: 'ಇಷ್ಟಕಾಮ್ಯ', ಕನ್ನಡ ಮಣ್ಣಿನ ರಮ್ಯ ಪ್ರೇಮಕಾವ್ಯ]

    ವಿ. ರವಿಚಂದ್ರನ್ (ಅಪೂರ್ವ)

    ವಿ. ರವಿಚಂದ್ರನ್ (ಅಪೂರ್ವ)

    ಫಿಲ್ಮ್ ಫ್ಲಾಪ್‌ ಆಗಬಹುದು. ಹಾಕಿರುವ ಬಂಡವಾಳವು ಸಹ ಬರದಿರಬಹುದು. ಹಾಗಂತ ಸಿನಿಮಾ ಉತ್ತಮವಾಗಿಲ್ಲ ಎಂದೆಲ್ಲ. ಚಂದನವನದ ರವಿಮಾಮ 2016 ರಲ್ಲಿ 'ಅಪೂರ್ವ' ಎಂಬ ಅಪರೂಪದ ಪ್ರಯೋಗಾತ್ಮಕ ಸಿನಿಮಾವನ್ನು ತಮ್ಮದೇ ನಿರ್ಮಾಣದಲ್ಲಿ, ಆಕ್ಷನ್‌ ಕಟ್ ಹೇಳಿದರು. ಆದರೆ ಪ್ರೇಕ್ಷಕರಿಗೆ ಈ ಸಿನಿಮಾ 'Heavy' ಅನಿಸಿಬಿಟ್ಟಿತು. ಆದ್ರೆ ಕ್ರೇಜಿಸ್ಟಾರ್‌ ಅಭಿಮಾನಿಗಳು ಅವರ ಪ್ರಯೋಗಾತ್ಮಕ ಸಿನಿಮಾ ನೋಡಬೇಕು ಎಂದು ಹೋಗಿದ್ದರೇ ಸಿನಿಮಾ ನೂರಕ್ಕೆ ನೂರು ಶೇ. ಮೆಚ್ಚುವಂತದ್ದು. 'ಅಪೂರ್ವ', ಸಿನಿಮಾ ಕ್ಷೇತ್ರದಲ್ಲೇ ಹೊಸ ಪ್ರಯೋಗ. ಶೇ.70 ಭಾಗ ಸಿನಿಮಾವನ್ನು ಕೇವಲ ಒಂದು ಲಿಫ್ಟ್‌ನಲ್ಲಿ ಚಿತ್ರಿಸಿ, 61 ವರ್ಷದ ಪುರುಷ ಮತ್ತು 19 ವರ್ಷದ ಯುವತಿಯ ನಡುವಿನ ಪ್ರೇಮ ಕಥೆಯ ಸನ್ನಿವೇಶಗಳನ್ನು ಹೆಣೆದ ಅಪರೂಪದ ಸಿನಿಮಾವನ್ನು ನಿರ್ದೇಶನದಲ್ಲಿ ನಿರೂಪಣೆ ಮಾಡಿದ್ದರು.[ಕ್ರೇಜಿಸ್ಟಾರ್ ರವಿಚಂದ್ರನ್ 'ಅಪೂರ್ವ' ಅಮೋಘ ದಾಖಲೆ]

    ಪವರ್‌ ಕುಮಾರ್ (ಯೂ ಟರ್ನ್)

    ಪವರ್‌ ಕುಮಾರ್ (ಯೂ ಟರ್ನ್)

    ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿ, ಥಿಯೇಟರ್‌ನಲ್ಲಿ ಹುಸಿಯಾದ ಸಿನಿಮಾಗಳು ಒಂದು ಕಡೆಯಾದರೇ, ಸಿನಿಮಾದ ಬಗ್ಗೆ ಯಾವುದೇ ಹೈಪ್‌ ಕ್ರಿಯೇಟ್ ಮಾಡದೇ ಪ್ರೇಕ್ಷಕರೇ ಸಿನಿಮಾ ನೋಡಬೇಕೆನ್ನುವಷ್ಟು ತಲೆ ಬಿಸಿ ಮಾಡಿಕೊಂಡ ಸಿನಿಮಾಗಳು ಒಂದು ಕಡೆ. ಅಂತಹ ಸಿನಿಮಾವೊಂದನ್ನು ನೀಡಿದವರು 'ಯೂ ಟರ್ನ್' ಪವರ್‌ ಕುಮಾರ್. ವಾಹನ ಸವಾರರ ಒಂದು ತಪ್ಪಿನಿಂದ ಎಷ್ಟೆಲ್ಲಾ ತಪ್ಪುಗಳು ಆಗುತ್ತವೆ ಎಂಬ ಅಂಶವನ್ನೇ ಆಧಾರವಾಗಿಟ್ಟುಕೊಂಡು ಸಿನಿಮಾದಲ್ಲಿ ತಮ್ಮ ನಿರ್ದೇಶನದ ಮೂಲಕ ನಿರೂಪಿಸಿ ಯಶಸ್ವಿ ಆದರು ಪವನ್ ಕುಮಾರ್. 2016 ರ ಅತ್ಯುತ್ತಮ ಡೈರೆಕ್ಟರ್ ಲೀಸ್ಟ್‌ನಲ್ಲಿ ಇವರು ಸಹ ಒಬ್ಬರಾಗಿದ್ದಾರೆ.[ಯೂ ಟರ್ನ್ ಚಿತ್ರಕ್ಕೆ ನಮ್ದುಕೆಯಿಂದ ಅರ್ಥಪೂರ್ಣ ಟ್ರಾಲ್]

    ರಾಮ್‌ ರೆಡ್ಡಿ (ತಿಥಿ)

    ರಾಮ್‌ ರೆಡ್ಡಿ (ತಿಥಿ)

    ತಮ್ಮ ಮೊದಲ ನಿರ್ದೇಶನದಲ್ಲೇ ವರ್ಲ್ಡ್‌ ವೈಡ್ ಹಿಟ್‌ ಸಿನಿಮಾವನ್ನು ನೀಡಿದವರು ರಾಮ್‌ ರೆಡ್ಡಿ. ರಾಮ್‌ ರೆಡ್ಡಿ ರವರ 'ತಿಥಿ' ಸಿನಿಮಾ 63 ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ, ಕರ್ನಾಟಕ ರಾಜ್ಯ ಸಿನಿಮಾ ಪ್ರಶಸ್ತಿ, ಶಾಂಘೈ ಅಂತರರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳು ಸೇರಿದಂತೆ ಈವರೆಗೆ 13 ಪ್ರತಿಷ್ಟಿತ ಸಿನಿಮಾ ಪ್ರಶಸ್ತಿಗಳನ್ನು ತಂದುಕೊಟ್ಟಿದೆ. ಅತ್ಯುತ್ತಮ ಪ್ರಾದೇಶಿಕ ಸಿನಿಮಾವಾಗಿ ತಮ್ಮ ನಿರ್ದೇಶನದಲ್ಲಿ ಉತ್ತಮ ನಿರೂಪಣೆ ನೀಡಿದ್ದಾರೆ.['ತಿಥಿ'ಯಲ್ಲಿ ಪಾಲ್ಗೊಂಡ ವಿಮರ್ಶಕರು ಹೇಳಿದ್ದೇನು?]

    ದುನಿಯಾ ಸೂರಿ 'ದೊಡ್ಮನೆ ಹುಡುಗ'

    ದುನಿಯಾ ಸೂರಿ 'ದೊಡ್ಮನೆ ಹುಡುಗ'

    ಸರಳ ಕಥೆಯನ್ನು ಸಿಂಪಲ್ಲಾಗೆ ಸಿನಿಮಾದಲ್ಲಿ ನಿರೂಪಣೆ ಮಾಡಿ ತಮ್ಮ ನಿರ್ದೇಶನದ ಮೂಲಕ ಅತ್ಯುತ್ತಮ ಸಿನಿಮಾಗಳನ್ನು ನೀಡುವವರು ದುನಿಯಾ ಸೂರಿ. ಅದಕ್ಕೆ ಉದಾಹರಣೆ ಆಗಿ ದುನಿಯಾ ಮತ್ತು ಕೆಂಡಸಂಪಿಗೆ ಸಿನಿಮಾಗಳು. ದಿನಿಯಾ ಸೂರಿ ರವರು 2016 ರಲ್ಲಿ ಕುಟಂಬ ಸಮೇತ ಕುಳಿತು ನೋಡುವ ಪವರ್ ಸ್ಟಾರ್ ಪುನೀತ್ ರಾಜ್‌ ಕುಮಾರ್ ಅಭಿನಯದ 'ದೊಡ್ಮನೆ ಹುಡುಗ' ಸಿನಿಮಾ ನಿರ್ದೇಶನ ಮಾಡಿದ್ದರು. ಈ ವರ್ಷದ ಫಿಲ್ಮಿಬೀಟ್ ಬೆಸ್ಟ್ ನಿರ್ದೇಶಕರ ಪಟ್ಟಿಯಲ್ಲಿ ಇವರು ಇದ್ದಾರೆ.[ವಿಮರ್ಶೆ: 'ದೊಡ್ಮನೆ' ಬಿರಿಯಾನಿ ರುಚಿ ಓಕೆ, 'ಪೀಸ್'ಗಳು ಕಮ್ಮಿ]

    ಲೋಹಿತ್ ಎಚ್‌ (ಮಮ್ಮಿ ಸೇವ್‌ ಮಿ)

    ಲೋಹಿತ್ ಎಚ್‌ (ಮಮ್ಮಿ ಸೇವ್‌ ಮಿ)

    ಸ್ಯಾಂಡಲ್‌ ವುಡ್‌ ನಲ್ಲಿ ಹಾಲಿವುಡ್‌ ರೇಂಜ್‌ ಸಿನಿಮಾ ನಿರ್ದೇಶನ ಮಾಡಿದ್ದು ಯುವ ನಿರ್ದೇಶಕ 'ಲೋಹಿತ್ ಎಚ್‌', ಸಿನಿಮಾ ಬೇರಾವುದು ಅಲ್ಲಾ ಥಿಯೇಟರ್‌ನಲ್ಲಿ ಯಶಸ್ವಿಯಾಗಿ ತೆರೆ ಕಾಣುತ್ತಿರುವ 'ಮಮ್ಮಿ ಸೇವ್ ಮಿ'. ನೈಜ ಘಟನೆಯನ್ನು ಆಧರಿಸಿ, ಫ್ರೇಮ್ ಟು ಫ್ರೇಮ್ ಬೆಚ್ಚಿ ಬೀಳುವ ರೀತಿಯಲ್ಲಿ ಕಥೆ ಹೆಣೆದು ನಿರ್ದೇಶನ ಮಾಡಿ ಇಪ್ಪತ್ತೆರಡರ ಹರೆಯದ ಲೋಹಿತ್.ಎಚ್, ನಟಿ ಪ್ರಿಯಾಂಕಾ ಉಪೇಂದ್ರ ರವರ ಮನಸ್ಸು ಗೆದ್ದವರು. ಲೋಹಿತ್‌ ಎಚ್‌ 2016 ರ ಅತ್ಯುತ್ತಮ ನಂ.1 ಡೈರೆಕ್ಟರ್‌ ಎಂದು ವೋಟ್ ಮಾಡುತ್ತಿರಾ? ನೀವೇ ಡಿಸೈಡ್ ಮಾಡಿ.[ಯುವ ನಿರ್ದೇಶಕನ ಪ್ರಯೋಗಕ್ಕೆ ಬೆಚ್ಚಿಬಿದ್ದ ಗಾಂಧಿನಗರ.!]

    ಯೋಗರಾಜ್‌ ಭಟ್ (ದನ ಕಾಯೋನು)

    ಯೋಗರಾಜ್‌ ಭಟ್ (ದನ ಕಾಯೋನು)

    ಯೋಗರಾಜ್‌ ಭಟ್‌ ರವರ ಡ್ರಾಮಾ, ದನ ಕಾಯೋದು, ಪರಮಾತ್ಮನ ಆಟಗಳು ಪಂಚರಂಗಿ ಹಾಡುಗಳು ಹಾಗೆ ಮನಸಾರೆಗಳು ಇವೆಲ್ಲಾ ಸಿನಿ ಪ್ರೇಮಿಗಳಿಗೆ ತಿಳಿದಿರೋದೆ. ಅಂದಹಾಗೆ 2016 ರಲ್ಲಿ ಯೋಗರಾಜ್‌ ಭಟ್‌'ರವರು ಆಕ್ಷನ್‌ ಕಟ್ ಹೇಳಿದ್ದು 'ದನ ಕಾಯೋನು' ಸಿನಿಮಾಗೆ. ಇವರು ಗೀತೆ ರಚನೆಗೂ ಸೈ, ನಿರ್ದೇಶನಕ್ಕೂ ಜೈ. 2016 ನಿಮ್ಮ ಬೆಸ್ಟ್‌ ಡೈರೆಕ್ಟರ್ ಇವರಾಗಬಹುದಾ? ವೋಡ್ ಮಾಡಿ.['ದನ ಕಾಯೋನು' ವಿವಾದ: ನಿರ್ಮಾಪಕ ಆರ್ ಶ್ರೀನಿವಾಸ್ ವಿರುದ್ಧ ಭಟ್ರ ಆಕ್ರೋಶ]

    English summary
    Here, we are giving an opportunity for our readers to choose the best Kannada movie director of the year 2016 from the list. Follow the slideshow to see the list and vote for your favourite director.
    Thursday, December 29, 2016, 9:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X