ಧ್ರುವ ಸರ್ಜಾ ಜೀವನದಲ್ಲಿ ಇವರೇ 'ಜಂಟಲ್ ಮ್ಯಾನ್' ಅಂತೆ!

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಜಂಟಲ್ ಮ್ಯಾನ್ ಸಿನಿಮಾದ ಟ್ರೈಲರ್ ಇಂದು ಬಿಡುಗಡೆಯಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜಂಟಲ್ ಮ್ಯಾನ್ ಟ್ರೈಲರ್ ರಿಲೀಸ್ ಮಾಡಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿದ್ದ ಧ್ರುವ ಸರ್ಜಾ ತಮ್ಮ ಜೀವನದಲ್ಲಿ ಜಂಟಲ್ ಮ್ಯಾನ್ ಅಂದ್ರೆ ಯಾರು ಎಂಬ ಪ್ರಶ್ನೆ ಉತ್ತರಿಸಿದರು. ಈ ಪ್ರಶ್ನೆ ಎದುರಾಗುತ್ತಿದ್ದಂತೆ ಉತ್ತರವೂ ಬಹುತೇಕ ನಿರೀಕ್ಷಿತವಾಗಿತ್ತು. ನಿರೀಕ್ಷೆಯಂತೆ ಅದೇ ಹೆಸರು ಧ್ರುವ ಸರ್ಜಾ ಹೇಳಿದರು.

ಹೌದು, ಧ್ರುವ ಸರ್ಜಾ ಜೀವನದಲ್ಲಿ ಜಂಟಲ್ ಮ್ಯಾನ್ ಅಂತಂದ್ರೆ ಅರ್ಜುನ್ ಸರ್ಜಾ ಎಂದು ಹೇಳಿಕೊಂಡರು. ಧ್ರುವ ಜೀವನದಲ್ಲಿ ಮಾತ್ರವಲ್ಲ, ಸ್ಯಾಂಡಲ್ ವುಡ್ ಅಥವಾ ಸೌತ್ ಇಂಡಸ್ಟ್ರಿಯಲ್ಲಿ ಜಂಟಲ್ ಮ್ಯಾನ್ ಅಂದ್ರೆ ಬಹುತೇಕರು ಅರ್ಜುನ್ ಸರ್ಜಾ ಅವರನ್ನು ನೆನಪಿಸಿಕೊಳ್ಳುತ್ತಾರೆ.

Who Is The Gentleman For Dhruva Sarja?

ಅಂದ್ಹಾಗೆ, ಪ್ರಜ್ವಲ್ ದೇವರಾಜ್ ನಟಿಸಿರುವ ಜಂಟಲ್ ಮ್ಯಾನ್ ಸಿನಿಮಾದ ಕಥೆ ಬಹಳ ವಿಭಿನ್ನವಾಗಿದೆ. ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್‌ (ನಿದ್ರೆ ಮಾಡುವ ಕಾಯಿಲೆ) ಎಂಬ ರೋಗದಿಂದ ನಾಯಕ ಬಳಲುತ್ತಿದ್ದು, 18 ಗಂಟೆ ನಿದ್ದೆ ಮಾಡುವುದು ಹಾಗೂ 6 ಗಂಟೆ ಮಾತ್ರ ಎಚ್ಚರ ಆಗಿರುವ ವ್ಯಕ್ತಿತ್ವ ಹೊಂದಿರುತ್ತಾರೆ. ಅವನ ಜೀವನದಲ್ಲಿ ಏನೆಲ್ಲಾ ಆಗುತ್ತೆ ಎಂಬುದು ಕಥೆ.

ಜಡೇಶ್ ಕುಮಾರ್ ಹಂಪಿ ನಿರ್ದೇಶನ ಮಾಡುತ್ತಿರುವ ಈ ಚಿತ್ರವನ್ನ ಗುರುದೇಶ ಪಾಂಡೆ ನಿರ್ಮಿಸಿದ್ದಾರೆ. ನಿಶ್ವಿಕಾ ನಾಯ್ಡು ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸಂಚಾರಿ ವಿಜಯ್, ಬೇಬಿ ಆರಾಧ್ಯ, ಭರತ್ ಕಲ್ಯಾಣ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Who Is The Gentleman For Dhruva Sarja?

ಸುಧಾಕರ್ ಶೆಟ್ಟಿ ಅವರ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಅವರ ಸಂಗೀತ, ವೆಂಕಟೇಶ್ ಯುಡಿವಿ ಅವರ ಸಂಕಲನ ಚಿತ್ರಕ್ಕಿದ್ದು, ಮುರಳಿ ಮಾಸ್ಟರ್ ಮತ್ತು ಗುಂಗುಮ್ ರಾಜು ಅವರ ನೃತ್ಯ ಸಂಯೋಜನೆ ಒಳಗೊಂಡಿದೆ.

ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಧನಂಜಯ್, ಕಿನ್ನಲ್ ರಾಜ್ ಅವರ ಸಾಹಿತ್ಯವಿದ್ದು, ಸಂಚಿತ್ ಹೆಗ್ಡೆ, ವಿಜಯ್ ಪ್ರಕಾಶ್, ವಸಿಷ್ಠ ಸಿಂಹ ಅವರ ಧ್ವನಿಯಲ್ಲಿ ಹಾಡುಗಳು ಮೂಡಿಬಂದಿದೆ. ಪ್ರಜ್ವಲ್ ನಟನೆಯ ನಿರೀಕ್ಷೆಯ ಚಿತ್ರಗಳಲ್ಲಿ ಜಂಟಲ್ ಮ್ಯಾನ್ ಪ್ರಮುಖವಾಗಿದ್ದು, ಈ ವರ್ಷದಲ್ಲಿ ತೆರೆಗೆ ಬರಲಿದೆ.

More from Filmibeat

English summary
Action prince Dhruva Sarja revealed who is the Gentleman for him in his life.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X