ದರ್ಶನ್ 'ಮದಕರಿ ನಾಯಕ' ಚಿತ್ರಕ್ಕೆ ನಾಯಕಿ ಇವರಾಗ್ಬೇಕಂತೆ
Recommended Video

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕ್ ಲೈನ್ ವೆಂಕಟೇಶ್ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ 'ಗಂಡುಗಲಿ ವೀರಮದಕರಿ ನಾಯಕ' ಸಿನಿಮಾದ ಬಗ್ಗೆ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಾಗ್ತಿದೆ.
ದರ್ಶನ್ 'ಮದಕರಿ ನಾಯಕ' ಚಿತ್ರಕ್ಕೆ ನಾಯಕಿ ಯಾರಾಗಬೇಕು.?
ಸದ್ಯ, 'ಮದಕರಿ ನಾಯಕ' ಚಿತ್ರವನ್ನ ನಮ್ಮ ಸಮುದಾಯದವರಾದ ಕಿಚ್ಚ ಸುದೀಪ್ ಅವರೇ ಮಾಡಬೇಕು ಎಂದಿರುವ ಪ್ರಸನ್ನಾನಂದ ಸ್ವಾಮೀಜಿಯ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಚಿತ್ರತಂಡ ಸಿನಿಮಾ ಮಾಡೋ ತಯಾರಿ ಮಾಡ್ತಿದೆ.
ಈ ಮಧ್ಯೆ 'ದರ್ಶನ್ ಮದಕರಿ ನಾಯಕ' ಚಿತ್ರಕ್ಕೆ ನಾಯಕಿ ಯಾರಾಗಬಹುದು ಎಂಬ ಕುತೂಹಲ ಕಾಡುತ್ತಿದೆ. ಈ ಐತಿಹಾಸಿಕ ಚಿತ್ರದಲ್ಲಿ ದರ್ಶನ್ ನಾಯಕನಾಗಿರುವುದರಿಂದ ನಾಯಕಿಯಾಗಿ ಸ್ಟಾರ್ ನಟಿಯ ಆಗಮನವಾಗುತ್ತೋ ಅಥವಾ ಹೊಸ ನಟಿಯ ಎಂಟ್ರಿ ಆಗುತ್ತೋ ಎಂಬ ನಿರೀಕ್ಷೆ ಹೆಚ್ಚಾಗಿದೆ. ಈ ಬಗ್ಗೆ ಜನಾಭಿಮತ ಏನಿದೆ ಎಂಬುದನ್ನ ಮುಂದೆ ಓದಿ......

ಜನಾಭಿಮತ ಏನಿದೆ.?
ದರ್ಶನ್ ಅಭಿನಯಿಸಲಿರುವ 'ಮದಕರಿ ನಾಯಕ' ಚಿತ್ರಕ್ಕೆ ನಾಯಕಿ ಯಾರಾಗಬೇಕು ಎಂದು ಪ್ರಶ್ನೆ ಕೇಳಿ ಫಿಲ್ಮಿಬೀಟ್ ಕನ್ನಡ ಪೋಲ್ ಆಯೋಜನೆ ಮಾಡಿತ್ತು. ಅದಕ್ಕೆ ರಮ್ಯಾ, ರಾಧಿಕಾ ಕುಮಾರಸ್ವಾಮಿ, ರಚಿತಾ ರಾಮ್ ಮತ್ತು ಹೊಸಬರು ಇರಲಿ ಎಂದು ಆಯ್ಕೆಗಳನ್ನ ನೀಡಲಾಗಿತ್ತು.

ಸ್ಟಾರ್ ನಟಿಯರಿಗೆ ಸಿಕ್ಕಿಲ್ಲ ಬಹುಮತ
ಫಿಲ್ಮಿಬೀಟ್ ಕನ್ನಡ ಆಯೋಜನೆ ಮಾಡಿದ್ದ ಈ ಪೋಲ್ ನಲ್ಲಿ ಅಚ್ಚರಿ ಫಲಿತಾಂಶ ಸಿಕ್ಕಿದೆ. ಸ್ಟಾರ್ ನಟಿಯರಿಗಿಂತ ಹೊಸಬರ ಮೇಲೆ ಪ್ರೇಕ್ಷಕರು ಮನಸ್ಸು ಇಟ್ಟಿದ್ದಾರೆ. ಹೌದು, ರಮ್ಯಾಗೆ ಶೇಕಡಾ 19.6 ರಷ್ಟು ಜನ ಮತ ಹಾಕಿದ್ರೆ, ರಾಧಿಕಾ ಕುಮಾರಸ್ವಾಮಿಗೆ ಶೇಕಡಾ 22.3 ರಷ್ಟು ಜನ ವೋಟ್ ಮಾಡಿದ್ದಾರೆ. ಇನ್ನು ರಚಿತಾ ರಾಮ್ ಗೆ ಶೇಕಡಾ 17.9 ರಷ್ಟು ಜನ ಆಯ್ಕೆ ಮಾಡಿದ್ದಾರೆ. ಇನ್ನುಳಿದಂತೆ ನಾಲ್ಕನೇಯ ಆಯ್ಕೆಯಾಗಿದ್ದ 'ಹೊಸಬರು ಇರಲಿ'ಗೆ ಶೇಕಡಾ 40 ರಷ್ಟು ಜನ ಮತ ನೀಡಿದ್ದಾರೆ.

ರಮ್ಯಾ ಹೆಸರು ಕೇಳಿಬರುತ್ತಿದೆ
ಸಿನಿಮಾ ಬಿಟ್ಟು ರಾಜಕೀಯ ಸೇರಿರುವ ನಟಿ ರಮ್ಯಾ ಮತ್ತೆ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಾರೆ ಎನ್ನುವ ಸುದ್ದಿ ಪದೇ ಪದೇ ಕೇಳಿ ಬರುತ್ತಿದೆ. ಈಗ ದರ್ಶನ್ ಜೊತೆಗೆ ರಮ್ಯಾ ಈಗ ನಟಿಸುತ್ತಾರೆ ಎನ್ನುವ ಸುದ್ದಿ ಕೇಳಿ ಬಂದಿದೆ. ಈ ಹಿಂದೆ 'ದತ್ತ' ಸಿನಿಮಾದಲ್ಲಿ ಈ ಜೋಡಿ ನಟಿಸಿದ್ದು, 12 ವರ್ಷಗಳ ಬಳಿಕ 'ಮದಕರಿ ನಾಯಕ' ಚಿತ್ರಕ್ಕಾಗಿ ಮತ್ತೆ ಬರ್ತಾರೆ ಎಂದು ಹೇಳಲಾಗ್ತಿದೆ.

ಹೊಸಬರು ಅಥವಾ ಪರಭಾಷಿಗರು
ಕನ್ನಡದವರಿಗೆ ಹೆಚ್ಚು ಅವಕಾಶ ಕೊಡಿ ಎನ್ನುವ ದರ್ಶನ್ ಈ ಸಿನಿಮಾದಲ್ಲಿ ಅಪ್ಪಟ ಕನ್ನಡ ಪ್ರತಿಭೆಗೆ ಅವಕಾಶ ಕೊಟ್ಟರೇ ಅಚ್ಚರಿಯಿಲ್ಲ. ಅಥವಾ ನಿರ್ಮಾಪಕ ರಾಕ್ ಲೈನ್ ಅವರಿಗೆ ಆಯ್ಕೆಯ ಅವಕಾಶ ಕೊಟ್ಟು, ಪರಭಾಷಿಗರನ್ನ ಕರೆತಂದರೂ ವಿಶೇಷವೇನೂ ಇಲ್ಲ. ಇದೆಲ್ಲದರ ಮಧ್ಯೆ ಯಾರಾದರೂ ಹೊಸ ನಟಿಯನ್ನ ಪರಿಚಯಿಸೋಣ ಎಂದು ಸರ್ಪ್ರೈಸ್ ಕೊಟ್ಟರೂ ಕೊಡಬಹುದು.

ರಾಜೇಂದ್ರ ಸಿಂಗ್ ಬಾಬು ನಿರ್ದೇಶನ
ದರ್ಶನ್ ನಾಯಕ, ರಾಕ್ ಲೈನ್ ವೆಂಕಟೇಶ್ ನಿರ್ಮಾಪಕನಾಗಿರುವ ಈ ಚಿತ್ರಕ್ಕೆ ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡಲಿದ್ದಾರೆ. ಬಿಎಲ್ ವೇಣು ಅವರು ಚಿತ್ರಕಥೆ ಮಾಡಲಿದ್ದಾರೆ. ಇನ್ನುಳಿದಂತೆ ಯಾವಾಗ ಈ ಸಿನಿಮಾ ಆರಂಭ ಎನ್ನುವುದರ ಬಗ್ಗೆ ಮಾಹಿತಿ ಇಲ್ಲ.


Click it and Unblock the Notifications











