ದರ್ಶನ್ ಸೀನ್ ನೋಡಿ ಬಿದ್ದು ಬಿದ್ದು ನಗ್ತಾನೆ; ಡಿ ಬಾಸ್ ಫ್ಯಾನ್ಸ್ ನಿದ್ದೆ ಕೆಡಿಸಿದ ನೈಜೀರಿಯಾದ 'ಚಿಕಾ ಡಿಬ್ಜ್' ಯಾರು?
ಕೆಲವು ತಿಂಗಳಿಂದ ದರ್ಶನ್ ಅಭಿಮಾನಿಗಳು ಆತಂಕದಲ್ಲಿದ್ದರು. ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಆರೋಪಿಯಾಗಿ ಜೈಲು ಸೇರಿದ್ದ ದರ್ಶನ್ ಭವಿಷ್ಯದ ಬಗ್ಗೆ ಚಿಂತೆಗೆ ಒಳಗಾಗಿದ್ದರು. ಜಾಮೀನು ಸಿಗದೇ ಒದ್ದಾಡಿದ್ದಾಗ ಫ್ಯಾನ್ಸ್ ಕೂಡ ಟೆನ್ಷನ್ ಆಗಿದ್ದರು. ಇಂತಹ ಸಂದರ್ಭದಲ್ಲಿ ನೈಜೀರಿಯಾದ ಇನ್ಫ್ಯೂಯೆನ್ಸರ್ ಬೆಂಕಿಗೆ ತುಪ್ಪ ಸುರಿದಿದ್ದ. ದರ್ಶನ್ ಸಿನಿಮಾದ ವಿಡಿಯೋಗಳನ್ನು ಇಟ್ಕೊಂಡು ಕಾಮಿಡಿ ಮಾಡಿದ್ದ.
ದರ್ಶನ್ ನಟಿಸಿದ ಬಹುತೇಕ ಆಕ್ಷನ್ ಸಿನಿಮಾಗಳಲ್ಲೇ ನಟಿಸಿದ್ದಾರೆ. ಅಭಿಮಾನಿಗಳನ್ನು ರಂಜಿಸುವುದಕ್ಕೆ ಭರ್ಜರಿ ಆಕ್ಷನ್ ಸೀಕ್ವೆನ್ಸ್‌ನಲ್ಲಿ ನಟಿಸಿದ್ದು ಇದೆ. ಇದೂವರೆಗೂ ನಟಿಸಿದ ಬಹುತೇಕ ಸಿನಿಮಾಗಳಲ್ಲಿ ಒಂದಾದರೂ ಇಂತಹ ಆಕ್ಷನ್ ಸೀನ್‌ಗಳು ಇದ್ದೇ ಇರುತ್ತವೆ. ಅದನ್ನು ನೋಡಿ ದರ್ಶನ್ ಅಭಿಮಾನಿಗಳು ಎಂಜಾಯ್ ಮಾಡುತ್ತಿದ್ದಾರೆ. ಥಿಯೇಟರ್‌ನಲ್ಲಿ ಈ ಸೀನ್‌ಗಳಿಗೇ ಶಿಳ್ಳೆಗಳು ಬೀಳುತ್ತವೆ.

ಕೆಲವು ವರ್ಷಗಳ ಹಿಂದೆ ದರ್ಶನ್ ನಟಿಸಿದ ಸಿನಿಮಾ ದೃಶ್ಯಗಳನ್ನು ಮುಂದಿಟ್ಟುಕೊಂಡು ನೈಜೀರಿಯಾದ ಇನ್ಫ್ಯೂಯೆನ್ಸರ್ ಚಿಕಾ ಡಿಬ್ಜ್ ಕಾಮಿಡಿ ಮಾಡುತ್ತಿದ್ದಾನೆ. ಇದನ್ನು ನೋಡಿ ದರ್ಶನ್ ಅಭಿಮಾನಿಗಳು ಕೆಂಡಾಮಂಡಲವಾಗುತ್ತಿದ್ದರೆ. ಡಿ ಬಾಸ್ ಅಭಿಮಾನಿಗಳನ್ನು ಕಾಡುತ್ತಿರುವ ಚಿಕಾ ಡಿಬ್ಜ್ ಯಾರು? ಆತನ ಹಿನ್ನೆಲೆಯೇನು? ದರ್ಶನ್ ಇಟ್ಟುಕೊಂಡು ಕಾಮಿಡಿ ಮಾಡುತ್ತಿರೋದ್ಯಾಕೆ? ದರ್ಶನ್ ಒಬ್ಬರೇನಾ? ಬೇರೆ ನಟರು ಇದ್ದಾರಾ? ತಿಳಿಯಲು ಮುಂದೆ ಓದಿ.
ದರ್ಶನ್ ಸ್ಯಾಂಡಲ್‌ವುಡ್‌ನ ಬಹುಬೇಡಿಕೆಯ ನಟ. ಸ್ಯಾಂಡಲ್‌ವುಡ್‌ನ ಬಾಕ್ಸಾಫೀಸ್ ಸುಲ್ತಾನ್ ಅಂತಾನೇ ಅಭಿಮಾನಿಗಳು ಕರೆಯುತ್ತಾರೆ. ಆದರೆ, ರೇಣುಕಾಸ್ವಾಮಿ ಹತ್ಯೆ ಬಳಿಕ ದರ್ಶನ್ ಜನಪ್ರಿಯತೆ ಹೇಗಿದೆ ಅನ್ನೋದನ್ನು ಅವರ ಸಿನಿಮಾಗಳು ರಿಲೀಸ್ ಆದಾಗಲೇ ಗೊತ್ತಾಗುತ್ತೆ. ರೇಣುಕಾಸ್ವಾಮಿ ಕೇಸ್, ಜಾಮೀನು ಅಂತಿರುವಾಗಲೇ ನೈಜೀರಿಯಾದ ಇನ್ಫ್ಯೂಯೆನ್ಸರ್ ದರ್ಶನ್ ಆಕ್ಷನ್ ಸೀನ್‌ಗಳನ್ನು ಇಟ್ಟುಕೊಂಡು ಕಾಮಿಡಿ ಮಾಡಿದ್ದಾನೆ. ಇದು ದರ್ಶನ್ ಅಭಿಮಾನಿಗಳ ನಿದ್ದೆ ಕೆಡಿಸಿದೆ.
ಚಿಕಾ ಡಿಬ್ಜ್ ವಿಶ್ವದ ಜನಪ್ರಿಯ ಇನ್ಫ್ಯೂಯೆನ್ಸರ್‌ಗಳಲ್ಲಿ ಒಬ್ಬ. ಸುಮಾರು 1.3 ಮಿಲಿಯನ್‌ಗೂ ಅಧಿಕ ಮಂದಿ ಟಿಕ್‌ಟಾಕ್‌ನಲ್ಲಿ ಈತನನ್ನು ಫಾಲೋ ಮಾಡುತ್ತಾರೆ. 4 ಲಕ್ಷ ಮಂದಿ ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಾರೆ. ಯೂಟ್ಯೂಬ್‌ನಲ್ಲಿ 60 ಸಾವಿರ ಮಂದಿ ಫಾಲೋ ಮಾಡುತ್ತಿದ್ದಾರೆ. ಜಗತ್ತಿನ ದೊಡ್ಡ ದೊಡ್ಡ ಬ್ರ್ಯಾಂಡ್‌ಗಳು ಈತನ ವಿಡಿಯೋಗಳಿಗೆ ಫಿದಾ ಆಗಿವೆ. ಈತನ ವಿಡಿಯೋಗಳಿಗೆ ವಿಶ್ವದಾದ್ಯಂತ ಅಭಿಮಾನಿಗಳು ಇದ್ದಾರೆ.
ಈಗ ಭಾರತದಲ್ಲಿ ನಿರ್ಮಾಣ ಆಗುವ ಸಿನಿಮಾಗಳನ್ನು ಕಾಮಿಡಿ ಮಾಡುವ ಮೂಲಕ ಹಣ ಸಂಪಾಧನೆ ಮಾಡುತ್ತಿದ್ದಾನೆ. ಅದರಲ್ಲೂ ದರ್ಶನ್ ಸಿನಿಮಾದ ಆಕ್ಷನ್ ದೃಶ್ಯಗಳನ್ನು ಕಾಮಿಡಿ ಮಾಡುವ ಮೂಲಕ ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈತನ ವಿಡಿಯೋಗಳನ್ನು ನೋಡಿ ಕಿಡಿಕಾರುತ್ತಿದ್ದಾರೆ. ನೆಟ್ಟಿಗರೊಬ್ಬರು
"ಶಡ್ಡಿಗೆ ಕಳಿಸ್ರೋ ಇವುನ್ನ" ಅಂತ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ನನಗೆ ಯಾಕೋ ರೇಣುಕಾಸ್ವಾಮಿ ನೆನಪು ಆಗ್ತಾ ಇದೆ" ಇನ್ನೊಬ್ಬರು ಅಭಿಮಾನಿ ಕಾಮೆಂಟ್ ಮಾಡಿದ್ದಾನೆ. "ಥೂ ಈ ನನ್ ಮಗ ಮತ್ತೆ.. ವಿಡಿಯೋ ಮಾಡುದ್ನಾ... ಜೈ ಡಿ ಬಾಸ್.. ಐರಾವತ" ಅಂತ ಇಬ್ಬರು, "ಅಣ್ಣಾ ಅವನು ಯೂಟ್ಯೂಬ್ ದುಡ್ಡಿಗೋಸ್ಕರ ಚಾನೆಲ್‌ನಲ್ಲಿ ಎಲ್ಲಾ ಇಂಡಿಯಾ ಆಕ್ಷನ್ ಸಿನಿಮಾಗಳ ವಿಡಿಯೋ ಮಾಡ್ತಾನೆ. ಇಂಡಿಯಾದವರು ಇವನ ವಿಡಿಯೋ ನೋಡಿ ಅವನ ದೇಶದಲ್ಲಿ ಸಿನಿಮಾ ಮಾಡೋರಿಲ್ಲ ಅದನ್ನ ಹೇಳು" ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಹಾಗಂತ ಕೇವಲ ದರ್ಶನ್ ಅಷ್ಟೇ ಅಲ್ಲ ಚಿಕಾ ಡಿಬ್ಜ್ ಭಾರತದ ಆಕ್ಷನ್ ಹೀರೋಗಳನ್ನು ಬಿಟ್ಟಿಲ್ಲ. ಮಾಲಾಶ್ರೀ, ಚಿರಂಜೀವಿ, ಜೂ.ಎನ್‌ಟಿಆರ್, ಪ್ರಭಾಸ್, ದಳಪತಿ ವಿಜಯ್, ಮಿಥುನ್ ಚಕ್ರವರ್ತಿ, ಸಲ್ಮಾನ್ ಖಾನ್ ನಟಿಸಿದ ಸಿನಿಮಾಗಳ ಆಕ್ಷನ್ ದೃಶ್ಯಗಳನ್ನು ಮುಂದಿಟ್ಟಿಕೊಂಡು ಹೊಟ್ಟೆ ಹಿಡಿದುಕೊಂಡು ಹೊರಳಾಡಿದ್ದಾನೆ.


Click it and Unblock the Notifications











