'ಕೆಜಿಎಫ್ ಚಾಪ್ಟರ್ 1'ರಲ್ಲಿ ಬಚ್ಚಿಟ್ಟಿದ್ದ ಪಾತ್ರಗಳು ಇವರೇನಾ?

Recommended Video

KGF Kannada Movie: ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದ ಯಶ್ | Oneindia Kannada

ಕೆಜಿಎಫ್ ಚಿತ್ರದ ಮೇನ್ ವಿಲನ್ ಆಗಿದ್ದ ಗರುಡ ಕೊಲೆಯಾದ. ಅಲ್ಲಿಗೆ ಮೊದಲ ಅಧ್ಯಾಯ ಮುಗಿದಿತ್ತು. ಈಗ ಎರಡನೇ ಅಧ್ಯಾಯಕ್ಕೆ ಹೊಸ ವಿಲನ್ ಗಳು ಎಂಟ್ರಿಯಾಗಲಿದ್ದಾರೆ. ಇದರ ಸುಳಿವನ್ನ ಚಾಪ್ಟರ್ 1ರಲ್ಲೇ ನೀಡಲಾಗಿದೆ.

ಮೊದಲನೇ ವಿಲನ್ ಗರುಡನ ಚಿಕ್ಕಪ್ಪ ಅಧೀರ. ಗರುಡನ ತಂದೆ ಸೂರ್ಯದೇವನಿಗೆ ಅಧೀರ ಮಾತು ಕೊಟ್ಟಿದ್ದ. ಗರುಡ ಇರೋವರೆಗೂ ಕೆಜಿಎಫ್ ಅಧಿಕಾರ ನನಗೆ ಬೇಡ ಅಂತ. ಈಗ ಗರುಡ ಅಂತ್ಯವಾಗಿದ್ದಾನೆ. ಹೀಗಾಗಿ, ಅಧೀರನ ಆಗಮನ ಆಗುತ್ತೆ. ಆದ್ರೆ, ಆ ಪಾತ್ರ ಮಾಡೋದು ಯಾರು?

ಎರಡನೇ ವಿಲನ್ ದುಬೈನಲ್ಲಿ ಇನಾಯತ್ ಖಲೀಲ್. ಭಾರತದಲ್ಲಿ ತನ್ನ ಅಧಿಪತ್ಯ ಸಾಧಿಸಲು ಸಂಚು ಹಾಕಿ ಕಾಯ್ತಿರೋ ಡಾನ್. ಗರುಡನ ಕೊಲೆಯ ನಂತರ ಭಾರತದ ಮೇಲೆ ಕಣ್ಣಿಟ್ಟಿದ್ದಾನೆ. ಚಾಪ್ಟರ್ 2ನಲ್ಲಿ ಬರೋ ಇನಾಯತ್ ಖಲೀಲ್ ಯಾರು? ಕೊನೆಯದಾಗಿ ಅಂದಿನ ಪ್ರಧಾನಮಂತ್ರಿ ರಿಮಿಕಾ ಸೇನ್. ರಾಕಿ ಭಾಯ್ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ ಮಾಡಿದ್ದಾರೆ. ಈ ಪಾತ್ರ ನಿರ್ವಹಿಸೋದು ಯಾರು? ಇದಕ್ಕೆಲ್ಲಾ ಸುಳಿವು ಸಿಕ್ಕಿದೆ.? ಮುಂದೆ ಓದಿ.....

ರಮ್ಯಾಕೃಷ್ಣ ಎಲ್ಲೋದ್ರು?

ರಮ್ಯಾಕೃಷ್ಣ ಎಲ್ಲೋದ್ರು?

ಕೆಜಿಎಫ್ ಚಿತ್ರದ ಬಹುಭಾಷಾ ನಟಿ ರಮ್ಯಾಕೃಷ್ಣ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಆದ್ರೆ, ಚಾಪ್ಟರ್ 1ರಲ್ಲಿ ರಮ್ಯಾಕೃಷ್ಣ ಕಾಣಿಸಿಲ್ಲ. ಇದೀಗ, ಕೆಜಿಎಫ್ ಚಿತ್ರದಲ್ಲಿ ತೋರಿಸಿರುವಂತೆ ಅಂದಿನ ಪ್ರಧಾನಮಂತ್ರಿ ರಿಮಿಕಾ ಸೇನ್ ಪಾತ್ರವನ್ನ ಬಹುಶಃ ರಮ್ಯಾಕೃಷ್ಣ ನಿರ್ವಹಿಸಬಹುದು ಎಂಬ ನಿರೀಕ್ಷೆ ಇದೆ.

ಅಧೀರ ಯಾರಾಗಬಹುದು?

ಅಧೀರ ಯಾರಾಗಬಹುದು?

ಕೆಜಿಎಫ್ ಮೊದಲನೇ ಚಾಪ್ಟರ್ ನಲ್ಲಿ ಹೀಗೆ ಬಂದು ಹಾಗೆ ಹೋಗಿದ್ದ ಪಾತ್ರ ಅಧೀರ. ಆದ್ರೆ, ಅಧೀರನ ಮುಖಪರಿಚಯ ಮಾಡಿಕೊಟ್ಟಿರಲಿಲ್ಲ. ಈಗ ಎರಡನೇ ಚಾಪ್ಟರ್ ನಲ್ಲಿ ಅಧೀರ ಪ್ರಮುಖ ಪಾತ್ರ ವಹಿಸಲಿದ್ದಾನೆ. ಬಟ್, ಈ ಅಧೀರನ ಪಾತ್ರ ಮಾಡ್ತಿರೋದು ಯಾರು ಎಂಬ ಕುತೂಹಲ ಕಾಡ್ತಿದೆ. ಈ ಪಾತ್ರಕ್ಕಾಗಿ ರವಿಶಂಕರ್, ಶರತ್ ಲೋಹಿತಾಶ್ವ, ಸಂಪತ್ ಕುಮಾರ್, ಮಧು ಗುರುಸ್ವಾಮಿ ಹೆಸರು ಚರ್ಚೆಯಾಗ್ತಿದೆ.

ಇನಾಯತ್ ಖಲೀಲ್?

ಇನಾಯತ್ ಖಲೀಲ್?

ಇನ್ನು ದುಬೈ ಡಾನ್ ಪಾತ್ರವೂ ಎರಡನೇ ಚಾಪ್ಟರ್ ನಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಗರುಡನನ್ನು ಕೊಂದ ರಾಕಿ ಭಾಯ್ ಈಗ ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ದಾನೆ. ಹಾಗಾಗಿ, ರಾಕಿ ಭಾಯ್ ನ ಹೊಡೆದ್ರೆ ಭಾರತದ ಅಂಡರ್ ವರ್ಲ್ಡ್ ವಶಪಡಿಸಿಕೊಳ್ಳಬಹುದು ಎಂಬುದು ಇನಾಯತ್ ಖಲೀಲ್ ಗೆ ಗೊತ್ತಿದೆ. ಬಟ್, ಈ ಪಾತ್ರ ಯಾರು ಮಾಡಬಹುದು?

ಸಂಜಯ್ ದತ್ ಪಾತ್ರವೇನು?

ಸಂಜಯ್ ದತ್ ಪಾತ್ರವೇನು?

ಈ ಮೂರು ಪಾತ್ರಗಳು ಕೆಜಿಎಫ್ ಎರಡನೇ ಚಾಪ್ಟರ್ ನಲ್ಲಿ ಅಬ್ಬರಿಸಲಿವೆ. ಈ ಮಧ್ಯೆ ಬಾಲಿವುಡ್ ನಟ ಸಂಜಯ್ ದತ್ ಅವರನ್ನ ಕರೆತರುವ ಪ್ಲಾನ್ ನಡೆಯುತ್ತಿದೆ. ಒಂದು ವೇಳೆ ಸಂಜಯ್ ದತ್ ಬಂದ್ರು, ಅವರಿಂದ ಯಾವ ಪಾತ್ರವನ್ನ ಮಾಡಿಸಲಿದ್ದಾರೆ? ಅಧೀರ ಅಥವಾ ಇನಾಯತ್ ಖಲೀಲ್ ಆಗಬಹುದಾ. ಇಲ್ಲ ಅಂದ್ರೆ, ದತ್ ಗಾಗಿ ಹೊಸ ಪಾತ್ರವನ್ನ ಹುಟ್ಟುಹಾಕಬಹುದಾ?

More from Filmibeat

English summary
There are 3 unrevealed characters at the end of K.G.F: Chapter 1. First is Adhira, uncle of the slain villain Garuda, Next is Dubai-based don Inayat Khaleel. And, finally, Rimika Sen, the Indian prime minister. wh are playing thease roles.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X