For Quick Alerts
  ALLOW NOTIFICATIONS  
  For Daily Alerts

  ರಾಧಿಕಾ ಪಂಡಿತ್ ಬಿಟ್ಟು ಯಶ್ ಗೆ ಇಷ್ಟವಾಗಿದ್ದ ನಟಿ ಇವರಂತೆ.!

  |

  ರಾಕಿಂಗ್ ಸ್ಟಾರ್ ಯಶ್ ಜೊತೆ ಹಲವು ನಾಯಕಿಯರು ನಟಿಸಿದ್ದಾರೆ. ಅಷ್ಟು ನಾಯಕಿಯರ ಪೈಕಿ, ಯಾವ ಹೀರೋಯಿನ್ ಯಶ್ ಗೆ ಇಷ್ಟ ಎಂದು ಗೊತ್ತಿರಲಿಲ್ಲ.

  ಆದ್ರೀಗ, ಬಾಲಿವುಡ್ ಮಾಧ್ಯಮದ ಜೊತೆ ಮಾತನಾಡಿದ ಯಶ್, ನೆಚ್ಚಿನ ಸಹ ನಟಿ ಯಾರು ಎಂದು ಬಹಿರಂಗಪಡಿಸಿದ್ದಾರೆ. ರಮ್ಯಾ, ದೀಪಾ ಸನ್ನಿಧಿ, ಕೃತಿ ಕರಬಂಧ, ಮೇಘನಾ ರಾಜ್, ಅಮೂಲ್ಯ, ಶಾನ್ವಿ ಶ್ರೀವಾಸ್ತವ್ ಸೇರಿದಂತೆ ಹಲವರು ನಟಿಯರು ಯಶ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ.

  'ಕೆಜಿಎಫ್' ಬೆನ್ನಿಗೆ ವಿಶಾಲ್ ನಿಲ್ಲಲು ಕಾರಣ ಯಶ್ ಮಾಡಿದ್ದ 'ಆ' ದೊಡ್ಡ ಸಹಾಯ.!'ಕೆಜಿಎಫ್' ಬೆನ್ನಿಗೆ ವಿಶಾಲ್ ನಿಲ್ಲಲು ಕಾರಣ ಯಶ್ ಮಾಡಿದ್ದ 'ಆ' ದೊಡ್ಡ ಸಹಾಯ.!

  ಆದ್ರೆ, ರಾಧಿಕಾ ಪಂಡಿತ್ ಮೂರು ಸಿನಿಮಾದಲ್ಲಿ ಯಶ್ ಜೊತೆ ನಟಿಸಿದ್ದು, ಇವರಿಬ್ಬರ ಕಾಂಬಿನೇಷನ್ ಯಶಸ್ವಿ ಎನಿಸಿಕೊಂಡಿದೆ. ಬಟ್, ರಾಧಿಕಾ ಪಂಡಿತ್ ಈಗ ಯಶ್ ಅವರ ಪತ್ನಿ. ಹೀಗಾಗಿ, 'ರಾಧಿಕಾ ಪಂಡಿತ್ ಬಿಟ್ಟು ನಿಮ್ಮ ಚಿತ್ರಗಳಲ್ಲಿ ಅಭಿನಯಿಸಿದ್ದ ಬೇರೆ ಯಾವ ನಟಿ ನಿಮಗೆ ಇಷ್ಟ' ಎಂದು ಹಿಂದಿ ಪತ್ರಕರ್ತರು ಕೇಳಿದ್ದಾರೆ.

  ಕನ್ನಡ ನಟರಿಗೆ ಈ 'ಸ್ಟಾರ್'ಗಳು ಹೇಗೆ ಬರುತ್ತೆ: ಹಿಂದಿ ಮೀಡಿಯಾ ಪ್ರಶ್ನೆ.? ಕನ್ನಡ ನಟರಿಗೆ ಈ 'ಸ್ಟಾರ್'ಗಳು ಹೇಗೆ ಬರುತ್ತೆ: ಹಿಂದಿ ಮೀಡಿಯಾ ಪ್ರಶ್ನೆ.?

  ಇದಕ್ಕೆ ಉತ್ತರಿಸಿದ ಯಶ್ ''ರಾಧಿಕಾ ಪಂಡಿತ್ ನನಗೆ ಆಲ್ ಟೈಂ ಬೆಸ್ಟ, ಅವರನ್ನ ಬಿಟ್ಟು ಅಮೂಲ್ಯ' ಎಂದಿದ್ದಾರೆ. ಅಮೂಲ್ಯ ಮತ್ತು ಯಶ್ 'ಗಜಕೇಸರಿ' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು.

  ಇನ್ನು ಬಾಲಿವುಡ್ ನಲ್ಲಿ ನೀವು ಡೆಬ್ಯೂ ಮಾಡುವ ಆಗಿದ್ರೆ ಯಾವ ನಟಿಯನ್ನ ಆಯ್ಕೆ ಮಾಡಿಕೊಳ್ತೀರಾ ಎಂದು ಕೇಳಿದ್ದಕ್ಕೆ, ''ದೀಪಿಕಾ ಪಡುಕೋಣೆ, ಯಾಕಂದ್ರೆ, ಅವರು ನಮ್ಮ ಬೆಂಗಳೂರಿನ ಹುಡುಗಿ'' ಎಂದು ರಾಕಿಂಗ್ ಸ್ಟಾರ್ ಉತ್ತರಿಸಿದ್ದಾರೆ.

  Who is yash favorite female co star

  ಡಿಸೆಂಬರ್ 21ಕ್ಕೆ 'ಕೆಜಿಎಫ್' ಜೊತೆ 7 ದೊಡ್ಡ ಸಿನಿಮಾಗಳು ರಿಲೀಸ್ಡಿಸೆಂಬರ್ 21ಕ್ಕೆ 'ಕೆಜಿಎಫ್' ಜೊತೆ 7 ದೊಡ್ಡ ಸಿನಿಮಾಗಳು ರಿಲೀಸ್

  ಸದ್ಯ, 'ಕೆಜಿಎಫ್' ಚಿತ್ರದ ಪ್ರಚಾರಕ್ಕಾಗಿ ಮುಂಬೈ, ಹೈದಾರಬಾದ್ ಹಾಗೂ ತಮಿಳುನಾಡಿನಲ್ಲಿ ಸುತ್ತಾಡುತ್ತಿರುವ ಯಶ್ ತುಂಬಾ ಬ್ಯುಸಿಯಿದ್ದಾರೆ. ಅಂದ್ಹಾಗೆ, ಈ ಚಿತ್ರದಲ್ಲಿ ಯಶ್ ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಸಾಥ್ ನೀಡಿದ್ದಾರೆ.

  English summary
  Who is kannada actor yash's favorite female co star, apart from radhika pandith. whats he replied chect it.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X