'ನಿಮ್ಮ ರೋಲ್ ಮಾಡೆಲ್ ಯಾರು' ಎಂದಿದ್ದಕ್ಕೆ ಯಶ್ ಹೇಳಿದ್ದು ಮೂವರ ಹೆಸರು!

ಪ್ರತಿಯೊಬ್ಬರ ಸಿನಿಮಾ ನಟ ಹಾಗೂ ನಟಿಗೂ ತಮ್ಮ ಜೀವನದಲ್ಲಿ ಒಬ್ಬರಲ್ಲ ಒಬ್ಬರು ರೋಲ್ ಮಾಡೆಲ್ ಇದ್ದೆ ಇರ್ತಾರೆ. ರಾಕಿಂಗ್ ಸ್ಟಾರ್ ಯಶ್ ಜೀವನದಲ್ಲಿ ರೋಲ್ ಮಾಡೆಲ್ ಯಾರು ಎಂದು ತಿಳಿದುಕೊಳ್ಳುವ ಕುತೂಹಲ ಅವರ ಅಭಿಮಾನಿಗಳಲ್ಲಿ ಇತ್ತು.

ಇಂತಹ ಅವಕಾಶ ಸಿಕ್ಕಿದ್ದು, ಇತ್ತೀಚಿಗಷ್ಟೆ ಬಾಲಿವುಡ್ ನಲ್ಲಿ ನಡೆದ 'GQ ಇಂಡಿಯಾ' ಆಯೋಜಿಸಿದ್ದ ಅವಾರ್ಡ್ ಕಾರ್ಯಕ್ರಮದಲ್ಲಿ. 'GQ ಇಂಡಿಯಾ' ಶೋನಲ್ಲಿ ಭಾಗವಹಿಸಿದ್ದ ಯಶ್ ಅವರಿಗೆ, 'ನಿಮ್ಮ ರೋಲ್ ಮಾಡೆಲ್ ಯಾರು' ಎಂದು ಕೇಳಲಾಯಿತು.

ಈ ಪ್ರಶ್ನೆಗೆ ಉತ್ತರಿಸಿದ ರಾಕಿ ಭಾಯ್, ಒಬ್ಬರಲ್ಲ ಮೂವರ ಹೆಸರು ಹೇಳಿದರು. ಆ ಹೆಸರುಗಳು ನಿಮಗೆ ಅಚ್ಚರಿ ತಂದರೂ ತರಬಹುದು. ಯಾರದು? ಮುಂದೆ ಓದಿ....

ಮೊದಲು ಹೆಸರು ಹೇಳಲಿಲ್ಲ

ಮೊದಲು ಹೆಸರು ಹೇಳಲಿಲ್ಲ

''ಯಾರೋ ಒಬ್ಬರು ಹೆಸರು ಹೇಳಲು ಸಾಧ್ಯವಿಲ್ಲ. ಬಹಳ ಜನ ಇದ್ದಾರೆ. ಅವರೆಲ್ಲರಿಂದಲೂ ಒಂದೊಂದು ಅಂಶಗಳನ್ನ ಕಲಿತಿದ್ದೇನೆ'' ಎಂದು ಹೇಳಿದ ಯಶ್ ಮೊದಲು ಯಾರ ಹೆಸರು ಹೇಳಲಿಲ್ಲ. ನಂತರ, ಟಾಪ್ 3 ಹೇಳಬಹುದು ಅಲ್ವಾ ಎಂದು ಅದೇ ಪ್ರಶ್ನೆ ಮುಂದುವರಿಯಿತು. ಅದಕ್ಕೆ ಉತ್ತರಿಸಿದ ಯಶ್ ಮೂವರ ಹೆಸರು ಸೂಚಿಸಿದರು.

ಒಬ್ಬ ನಟ, ಮತ್ತೊಬ್ಬರು ಕ್ರಿಕೆಟರ್?

ಒಬ್ಬ ನಟ, ಮತ್ತೊಬ್ಬರು ಕ್ರಿಕೆಟರ್?

''ಕರ್ನಾಟಕದ ನಟ, ನಿರ್ದೇಶಕ ಶಂಕರ್ ನಾಗ್ ಅವರು ನಮಗೆ ಸ್ಫೂರ್ತಿ. ಅವರು ಈಗ ನಮ್ಮೊಂದಿಗೆ ಇಲ್ಲ. ಆದರೂ ಅವರಿಂದ ನಾವು ಹಲವು ವಿಷಯಗಳನ್ನ ಕಲಿಯುತ್ತಿದ್ದೇವೆ. ಎಂಎಸ್ ಧೋನಿ ಕೂಡ ಇಷ್ಟ. ಜೊತೆಗೆ ನಮ್ಮ ಪ್ರಧಾನಮಂತ್ರಿ ಮೋದಿ ಕೂಡ ಇಷ್ಟ'' ಎಂದು ಹೇಳಿದರು.

ಹತ್ತು ವರ್ಷದ ಬಳಿಕ ನೀವು ಎಲ್ಲಿರಬಹುದು?

ಹತ್ತು ವರ್ಷದ ಬಳಿಕ ನೀವು ಎಲ್ಲಿರಬಹುದು?

''ಭವಿಷ್ಯದ ಬಗ್ಗೆ ನಾನು ಯಾವುದೇ ಪ್ಲಾನ್ ಮಾಡಿಲ್ಲ. ಸದ್ಯಕ್ಕೆ ಈಗಿನ ಲೈಫ್ ನೋಡುತ್ತಿದ್ದೇವೆ. ಬಹುಶಃ ಇನ್ನು ಹತ್ತು ವರ್ಷದ ಬಳಿಕ, ನನ್ನ ವೃತ್ತಿಯನ್ನ ಈಗ ಇರುವುದಕ್ಕಿಂತ ಹೆಚ್ಚು ಎಂಜಾಯ್ ಮಾಡಬಹುದು'' ಎಂದು ರಾಕಿ ಭಾಯ್ ಹೇಳಿಕೊಂಡಿದ್ದಾರೆ.

ಕೆಜಿಎಫ್ ಮಾತ್ರ ಮಾಡುತ್ತಿದ್ದೇನೆ

ಕೆಜಿಎಫ್ ಮಾತ್ರ ಮಾಡುತ್ತಿದ್ದೇನೆ

ಸದ್ಯಕ್ಕೆ ಕೆಜಿಎಫ್ ಚಾಪ್ಟರ್ 2 ಬಿಟ್ಟರೇ ಬೇರೆ ಏನು ಇಲ್ಲ. ಮೊದಲ ಭಾಗ ಹಿಟ್ ಆಗಿದೆ. ಅದಕ್ಕಿಂತ ಚೆನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ ಕೆಲಸ ಮಾಡುತ್ತಿದ್ದೇವೆ'' ಎಂದು ಚಾಪ್ಟರ್ 2 ಬಗ್ಗೆ ತಿಳಿಸಿದರು.

More from Filmibeat

English summary
Who is the ideal person of kannada actor Yash? he told three names.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X