Just In
Don't Miss!
- News
ಗಡಿಯಲ್ಲಿ ಮತ್ತೆ ಶಿವಸೇನೆ ಪುಂಡಾಟ; ಕರ್ನಾಟಕ ಪ್ರವೇಶ ಯತ್ನ ವಿಫಲ
- Automobiles
ಐಷಾರಾಮಿ ಕಾರು ಚಾಲಕನ ನಿರ್ಲಕ್ಷ್ಯಕ್ಕೆ ಪ್ರಾಣ ತೆತ್ತ ಪೊಲೀಸ್ ಕಾನ್ಸ್ಟೆಬಲ್ಗಳು
- Sports
ಆಸ್ಟ್ರೇಲಿಯಾ ತಂಡದ ಬದ್ಧತೆ ಹಾಗೂ ಪೈನ್ ನಾಯಕತ್ವವನ್ನು ಪ್ರಶ್ನಿಸಿದ ಮಾಜಿ ಆಸಿಸ್ ಕ್ರಿಕೆಟಿಗ
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ರಾಬರ್ಟ್' ಬೈಕ್ ಹಿಂದಿನ ರೂವಾರಿ ಯಾರು, ಎಲ್ಲಿ ತಯಾರಾಯ್ತು ಗೊತ್ತಾ?
ಡಿ-ಬಾಸ್ ದರ್ಶನ್ ಮತ್ತು ತರುಣ್ ಸುಧೀರ್ ಜೋಡಿಯಲ್ಲಿ ಬರ್ತಿರುವ ರಾಬರ್ಟ್ ಸಿನಿಮಾ ರಂಜಾನ್ ಹಬ್ಬದ ಪ್ರಯುಕ್ತ ಜೂನ್ 6 ರಂದು ಥೀಮ್ ಪೋಸ್ಟರ್ ಬಿಡುಗಡೆ ಮಾಡಿದೆ. ದುಬಾರಿ ಬೈಕ್ ಮೇಲೆ ದರ್ಶನ್ ಬೆನ್ನು ತೋರಿಸಿ ನಿಂತಿರುವ ಲುಕ್ ಬಹಿರಂಗವಾಗಿದ್ದು ಅಭಿಮಾನಿ ಥ್ರಿಲ್ ಆಗಿದ್ದಾರೆ,
ರಾಬರ್ಟ್ ಥೀಮ್ ಪೋಸ್ಟರ್ ನಲ್ಲಿ ಡಿ ಬಾಸ್ ಎಂದು ಬರೆಸಿರುವ ನಂಬರ್ ಪ್ಲೇಟ್ ಮತ್ತು ಆ ಬೈಕ್ ಭಾರಿ ಗಮನ ಸೆಳೆಯುತ್ತಿದೆ. ಯಾವುದು ಈ ಬೈಕ್, ಯಾರು ತಯಾರು ಮಾಡಿದ್ದು ಎಂಬ ಕುತೂಹಲ ಎಲ್ಲರನ್ನ ಕಾಡುತ್ತಿದೆ.
''ರಾಬರ್ಟ್ ಪೋಸ್ಟರ್ ನಕಲಿ ಅಲ್ಲ'' - ತರುಣ್ ಸುಧೀರ್ ಸ್ಪಷ್ಟನೆ
ಇದಕ್ಕೆ ಸಂಬಂಧಪಟ್ಟಂತೆ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆ ಬೈಕ್ ಸಿದ್ಧ ಮಾಡುತ್ತಿರುವ ವ್ಯಕ್ತಿಯ ಫೋಟೋ ರಿಲೀಸ್ ಆಗಿದೆ. ಹಾಗಿದ್ರೆ, ರಾಬರ್ಟ್ ಬೈಕ್ ರೆಡಿ ಮಾಡಿದ್ದು ಯಾರು? ಎಲ್ಲಿ ಸಿದ್ಧ ಮಾಡಲಾಯ್ತು? ಮುಂದೆ ಓದಿ.....

ಡಿ-ಟೀಮ್ ಹುಬ್ಬಳ್ಳಿ ಖಾತೆಯಲ್ಲಿ ಫೋಟೋ ಲೀಕ್
ಡಿ-ಟೀಮ್ ಹುಬ್ಬಳ್ಳಿ ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ರಾಬರ್ಟ್ ಬೈಕ್ ನ ಮೇಕಿಂಗ್ ಫೋಟೋಗಳು ಪೋಸ್ಟ್ ಆಗಿದ್ದು, ಬೈಕ್ ಸಿದ್ಧ ಮಾಡ್ತಿರುವ ವ್ಯಕ್ತಿ ಮುಖಕ್ಕೆ ಮಾಸ್ಕ್ ಹಾಕಲಾಗಿದೆ. ಇದು ನಿಜಕ್ಕೂ ರಾಬರ್ಟ್ ಬೈಕ್ ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಇಲ್ಲವಾದರೂ ಅದೇ ರೀತಿ ಕಾಣುತ್ತಿರುವುದು ಗಮನ ಸೆಳೆಯುತ್ತಿದೆ.

ಈ ಹಿಂದೆ ದರ್ಶನ್ ಬೈಕ್ ಟೆಸ್ಟ್ ಡ್ರೈವ್ ಮಾಡಿದ್ದರು
ಈ ಹಿಂದೆಯೊಮ್ಮೆ ಡಿ ಬಾಸ್ ದರ್ಶನ್ ಭಾರಿ ಗಾತ್ರದ ಬೈಕ್ ಒಂದನ್ನ ಡ್ರೈವ್ ಮಾಡಿದ ವಿಡಿಯೋ ವೈರಲ್ ಆಗಿತ್ತು. ಅದೇ ಬೈಕ್ ಇದು ಎಂದು ಹೇಳಲಾಗುತ್ತಿದೆ. ಆಗ ಟೆಸ್ಟ್ ಡ್ರೈವ್ ಮಾಡಿದ್ದರು. ಅದನ್ನ ಈಗ ಸಿನಿಮಾಗಾಗಿ ರೆಡಿ ಮಾಡಿಸಿದ್ದಾರೆ ಎನ್ನಲಾಗುತ್ತಿದೆ.
ಅಭಿಮಾನಿಗಳ ಮುಂದೆ 'ರಾಬರ್ಟ್' ಥೀಮ್ ಪೋಸ್ಟರ್

ಇದೇ ನೋಡಿ ಆ ಬೈಕ್
500 ಸಿಸಿಯ ರಾಯಲ್ ಎನ್ ಫೀಲ್ಡ್ ಮಾಡೆಲ್ ನ ಬೈಕ್ ಇದಾಗಿದ್ದು, ರಾಬರ್ಟ್ ಸಿನಿಮಾಗೆ ಬೇಕಾದಂತೆ ಸಂಪೂರ್ಣವಾಗಿ ವಿನ್ಯಾಸ ಮಾಡಲಾಗಿದೆ. ಪೋಸ್ಟರ್ ನಲ್ಲಿ ಈ ಬೈಕ್ ನ ಹಿಂಭಾದ ಲುಕ್ ಕಾಣಿಸುತ್ತಿದೆ. ಪೂರ್ತಿ ಲುಕ್ ಇದೇ ನೋಡಿ.
ಚೆನ್ನೈನಲ್ಲಿ ಪುನೀತ್, ಮಂಗಳೂರಿನಲ್ಲಿ ಶಿವಣ್ಣ, ಬೆಂಗಳೂರಿನಲ್ಲಿ ಡಿ ಬಾಸ್.!

ಡಿ ಬಾಸ್ ಗಾಗಿಯೇ ಮೇಕಿಂಗ್
ಸದ್ಯಕ್ಕೆ ಈ ಬೈಕ್ ಎಲ್ಲಿ ರೆಡಿಯಾಗಿದೆ ಮತ್ತು ಯಾರು ರೆಡಿ ಮಾಡಿದ್ದು ಎಂಬುದರ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ರಾಬರ್ಟ್ ಸಿನಿಮಾಗಾಗಿ ದರ್ಶನ್ ಅವರಿಗೆ ಸೂಕ್ತವೆನಿಸುವಂತೆ ಈ ಬೈಕ್ ನ್ನ ಹೇಳಿ ಮಾಡಿಸಲಾಗಿದೆ. ಅದಕ್ಕೆ ಗತ್ತು ಹೆಚ್ಚಿಸುವಂತೆ ಡಿ ಬಾಸ್ ನಂಬರ್ ಪ್ಲೇಟ್ ಹಾಕಿ ಮತ್ತಷ್ಟು ಜೋಶ್ ತುಂಬಿದ್ದಾರೆ. ಸದ್ಯ ಬರಿ ಪೋಸ್ಟರ್ ನಿಂದಲೇ ಈ ಬೈಕ್ ಭಾರಿ ಸದ್ದು ಮಾಡುತ್ತಿದ್ದು, ಈ ಬೈಕ್ ಮಾಡಿದ ವ್ಯಕ್ತಿ ಮತ್ತು ಆ ಬೈಕ್ ಮತ್ತೆಷ್ಟು ಕ್ರೇಜ್ ಸೃಷ್ಟಿಸುತ್ತಾರೋ ಗೊತ್ತಿಲ್ಲ.