For Quick Alerts
  ALLOW NOTIFICATIONS  
  For Daily Alerts

  ದರ್ಶನ್-ಸುದೀಪ್ ಗೂ ಮುಂಚೆ 'ಮದಕರಿ ನಾಯಕ'ನಾಗಿ ಮಿಂಚಿದ್ದ ದಿಗ್ಗಜರು

  |
  ಈ ಹಿಂದೆ ಯಾರೆಲ್ಲಾ ಮದಕರಿ ನಾಯಕನಾಗಿ ಬಣ್ಣ ಹಚ್ಚಿದ್ದರು ನೋಡಿ..! | FILMIBEAT KANNAD

  'ಮದಕರಿ ನಾಯಕ' ಚಿತ್ರವನ್ನ ದರ್ಶನ್ ಮಾಡಲಿ, ಸುದೀಪ್ ಮಾಡಲಿ ಎಂಬ ವಿಷ್ಯ ದೊಡ್ಡ ಮಟ್ಟದ ಚರ್ಚೆಯಾಗ್ತಿದೆ. ಈ ಮಧ್ಯೆ ವಾಲ್ಮೀಕಿ ಸಮುದಾಯದವರು ಕಿಚ್ಚ ಸುದೀಪ್ ಅವರೇ ಮಾಡಲಿ ಎಂದು ಒತ್ತಾಯ ಮಾಡ್ತಿದ್ದಾರೆ.

  ಈ ಕಡೆ ಸಿನಿಮಾರಂಗದಲ್ಲಿ ಜಾತಿ ಇಲ್ಲ. ಇದನ್ನ ತರಬೇಡಿ ಎಂದು ಚಿತ್ರಪ್ರೇಮಿಗಳು ಹಾಗೂ ಕೆಲವು ನಿರ್ಮಾಪಕ, ನಿರ್ದೇಶಕರು ಮನವಿ ಮಾಡ್ತಿದ್ದಾರೆ.

  ಸುದೀಪ್-ದರ್ಶನ್ ಗೂ ಮೊದಲೇ ಈ ನಟ 'ಮದಕರಿ ನಾಯಕ' ಆಗಬೇಕಿತ್ತಂತೆ.! ಸುದೀಪ್-ದರ್ಶನ್ ಗೂ ಮೊದಲೇ ಈ ನಟ 'ಮದಕರಿ ನಾಯಕ' ಆಗಬೇಕಿತ್ತಂತೆ.!

  ಇಲ್ಲಿ ಗಮನಿಸಬೇಕಾದ ವಿಚಾರ ಅಂದ್ರೆ, ದರ್ಶನ್ ಮತ್ತು ಸುದೀಪ್ ಗೂ ಮುಂಚೆಯೇ ಕನ್ನಡ ಚಿತ್ರರಂಗದ ದಿಗ್ಗಜರು 'ಮದಕರಿ ನಾಯಕ'ನ ಪಾತ್ರ ನಿರ್ವಹಿಸಿದ್ದಾರೆ. ಈ ವೇಳೆ ಎಲ್ಲಿಯೂ ಈ ವಿವಾದ, ಚರ್ಚೆ ಉಂಟಾಗಿರಲಿಲ್ಲ. ಅಷ್ಟಕ್ಕೂ, ಈ ಹಿಂದೆ ಮದಕರಿ ನಾಯಕ ಪಾತ್ರ ಮಾಡಿದ್ದು ಯಾರು.? ಯಾವ ಚಿತ್ರದಲ್ಲಿ ನಟಿಸಿದ್ದರು.? ಮುಂದೆ ಓದಿ......

  ವಿಷ್ಣುವರ್ಧನ್ ಮಾಡಿದ್ರು

  ವಿಷ್ಣುವರ್ಧನ್ ಮಾಡಿದ್ರು

  ಮದಕರಿ ನಾಯಕನ ಕುರಿತು ಸಿನಿಮಾ ಮಾಡಬೇಕು ಎಂಬುದು ದಿವಂಗತ ಡಾ ವಿಷ್ಣುವರ್ಧನ್ ಅವರ ಆಸೆಯಾಗಿತ್ತು. ಆದ್ರೆ, ಪೂರ್ಣ ಪ್ರಮಾಣದ ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ. ಆದ್ರೆ, 'ದೇವ' ಚಿತ್ರದ ಸನ್ನಿವೇಶವೊಂದರಲ್ಲಿ ವಿಷ್ಣುದಾದಾ ಮದಕರಿನಾಯಕನ ಪಾತ್ರ ನಿಭಾಯಿಸಿದ್ದರು.

  ದರ್ಶನ್-ಸುದೀಪ್ ಸುಮ್ಮನಿದ್ರೂ 'ಜಾತಿವಾದಿ'ಗಳು ಸುಮ್ಮನಾಗುತ್ತಿಲ್ಲ.!ದರ್ಶನ್-ಸುದೀಪ್ ಸುಮ್ಮನಿದ್ರೂ 'ಜಾತಿವಾದಿ'ಗಳು ಸುಮ್ಮನಾಗುತ್ತಿಲ್ಲ.!

  ಅಂಬರೀಶ್ ಕೂಡ ಮಾಡಿದ್ರು

  ಅಂಬರೀಶ್ ಕೂಡ ಮಾಡಿದ್ರು

  ವಿಷ್ಣುವರ್ಧನ್ ಮಾತ್ರವಲ್ಲ, ರೆಬೆಲ್ ಸ್ಟಾರ್ ಅಂಬರೀಶ್ ಕೂಡ 'ಮದಕರಿ ನಾಯಕ'ನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಟಿ.ಎಸ್ ನಾಗಾಭರಣ ನಿರ್ದೇಶನದಲ್ಲಿ ಮೂಡಿಬಂದಿದ್ದ 'ಕಲ್ಲರಳಿ ಹೂವಾಗಿ' ಚಿತ್ರದಲ್ಲಿ ಅಂಬರೀಶ್ ಮದಕರಿ ನಾಯಕನಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ವಿಜಯರಾಘವೇಂದ್ರ ಹೀರೋ ಆಗಿದ್ದರು.

  'ಮದಕರಿ ನಾಯಕ'ನ ನಂತರ ಮತ್ತೊಬ್ಬ ವೀರನ ಬಗ್ಗೆ ಸುದೀಪ್ ಸಿನಿಮಾ.!'ಮದಕರಿ ನಾಯಕ'ನ ನಂತರ ಮತ್ತೊಬ್ಬ ವೀರನ ಬಗ್ಗೆ ಸುದೀಪ್ ಸಿನಿಮಾ.!

  ಸಾಯಿ ಕುಮಾರ್ ಮಾಡಿದ್ರು

  ಸಾಯಿ ಕುಮಾರ್ ಮಾಡಿದ್ರು

  ಇನ್ನು ಡೈಲಾಗ್ ಕಿಂಗ್ ಸಾಯಿಕುಮಾರ್ 'ದುರ್ಗದ ಹುಲಿ' ಎಂಬ ಸಿನಿಮಾ ಮಾಡಿದ್ದರು. ಈ ಚಿತ್ರದಲ್ಲಿ ಸಾಯಿಕುಮಾರ್ ಮದಕರಿ ನಾಯಕನ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಸಿನಿಮಾದಲ್ಲಿ ಮದಕರಿ ನಾಯಕನ ಚರಿತ್ರೆಯನ್ನ ಬಿಂಬಿಸಲಾಗಿತ್ತು.

  'ಮದಕರಿ' ಚಿತ್ರಕ್ಕಾಗಿ ಸುದೀಪ್ ಮತ್ತು ರಾಕ್ ಲೈನ್ ನಡುವೆ ಆಯ್ತು ಒಪ್ಪಂದ.!'ಮದಕರಿ' ಚಿತ್ರಕ್ಕಾಗಿ ಸುದೀಪ್ ಮತ್ತು ರಾಕ್ ಲೈನ್ ನಡುವೆ ಆಯ್ತು ಒಪ್ಪಂದ.!

  ಈಗ ದರ್ಶನ್-ಸುದೀಪ್

  ಈಗ ದರ್ಶನ್-ಸುದೀಪ್

  ಇಂತಹ ದಿಗ್ಗಜ ನಟರು ಮದಕರಿ ನಾಯಕನ ಪಾತ್ರದಲ್ಲಿ ಈಗಾಗಲೇ ಅಭಿನಯಿಸಿದ್ದಾರೆ. ಅದರ ಝಲಕ್ ನೋಡಿದ್ದೇವೆ. ಈಗ ದರ್ಶನ್ ಮತ್ತು ಸುದೀಪ್ ಇಬ್ಬರು ಈ ನಾಯಕನ ಬಗ್ಗೆ ಸಿನಿಮಾ ಮಾಡೋಕೆ ಹೊರಟಿರುವುದು ಅಭಿಮಾನಿಗಳಿಗೆ ಟ್ರೀಟ್ ಆಗಿದೆ.

  'ಮದಕರಿ' ಗೊಂದಲಕ್ಕೆ ಬ್ರೇಕ್ ಹಾಕಿದ ಸುದೀಪ್: ರಾಕ್ಲೈನ್-ದರ್ಶನ್ ಚಿತ್ರಕ್ಕೆ ನೋ ಪ್ರಾಬ್ಲಂ.!'ಮದಕರಿ' ಗೊಂದಲಕ್ಕೆ ಬ್ರೇಕ್ ಹಾಕಿದ ಸುದೀಪ್: ರಾಕ್ಲೈನ್-ದರ್ಶನ್ ಚಿತ್ರಕ್ಕೆ ನೋ ಪ್ರಾಬ್ಲಂ.!

  English summary
  Who has played Madakari Nayaka role in Kannada movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X