»   » 'ಶಿವಲಿಂಗ'ದಲ್ಲಿ ರಹೀಂ ಪಾತ್ರ ಮಾಡಿದವರು ಯಾರು ಗೊತ್ತಾ?

'ಶಿವಲಿಂಗ'ದಲ್ಲಿ ರಹೀಂ ಪಾತ್ರ ಮಾಡಿದವರು ಯಾರು ಗೊತ್ತಾ?

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಥ್ರಿಲ್ಲರ್ ನಿರ್ದೇಶಕ ಪಿ.ವಾಸು ಅವರ ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದ 'ಶಿವಲಿಂಗ' ಸಿನಿಮಾ ಕಳೆದ ವಾರ (ಫೆಬ್ರವರಿ 12) ತೆರೆಕಂಡು ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

'ಆಪ್ತಮಿತ್ರ', 'ಆಪ್ತರಕ್ಷಕ'ದಂತಹ ಹಿಟ್ ಸಿನಿಮಾಗಳನ್ನು ನೀಡಿದ್ದ ನಿರ್ದೇಶಕ ಪಿ.ವಾಸು ಅವರು ಈ ಬಾರಿ 'ಶಿವಲಿಂಗ' ಎಂಬ ಭರ್ಜರಿ ಫ್ಯಾಮಿಲಿ ಎಂರ್ಟಟೈನರ್ ಸಿನಿಮಾವನ್ನು ಪ್ರೇಕ್ಷಕರಿಗೆ ನೀಡಿದರು.[ಅಂದು ಸೌಂದರ್ಯ; ಇಂದು ವೇದಿಕಾ.! 'ಶಿವಲಿಂಗ' ಅಚ್ಚರಿ.!]


Who Plays Raheem In Shiva Rajkumar's 'Shivalinga'

ಅಂದಹಾಗೆ 'ಶಿವಲಿಂಗ' ಚಿತ್ರ ನೋಡಿದವರು ಚಿತ್ರದಲ್ಲಿ ಬರುವ 'ರಹೀಂ' ಎಂಬ ಪಾತ್ರವನ್ನು ನೋಡಿರುತ್ತೀರಿ ಅಲ್ವಾ?. ಚಿತ್ರದಲ್ಲಿ ದೆವ್ವದ ಪಾತ್ರ ವಹಿಸಿದ್ದ ರಹೀಂ ಅವರು ಯಾರು ಗೊತ್ತಾ? ಬೇರಾರು ಅಲ್ಲ 'ಶಿವಲಿಂಗ' ಚಿತ್ರದ ನಿರ್ದೇಶಕ ಪಿ.ವಾಸು ಅವರ ಮಗ ತಮಿಳು ಚಿತ್ರರಂಗದ ಖ್ಯಾತ ನಟ ಶಕ್ತಿ.


Who Plays Raheem In Shiva Rajkumar's 'Shivalinga'

ನಟ ಶಕ್ತಿ ಅವರು 'ಶಿವಲಿಂಗ' ಚಿತ್ರದಲ್ಲಿ ಸಖತ್ ಆಗಿರೋ ಪರ್ಫಾಮೆನ್ಸ್ ನೀಡಿದ್ದು, ಪ್ರೇಕ್ಷಕರನ್ನು ಭಯಂಕರ ಥ್ರಿಲ್ಲಾಗಿಸಿದ್ದಾರೆ. ಚಿತ್ರದಲ್ಲಿ ಶಿವಣ್ಣ ಅವರು ಸಿ.ಐ.ಡಿ ಪಾತ್ರದಲ್ಲಿ ಕಾಣಿಸಿಕೊಂಡು ಅದ್ಭುತ ನಟನೆ ನೀಡಿದ್ದರು.['ಶಿವಲಿಂಗ' ವಿಮರ್ಶೆ; ಪಿ.ವಾಸು ನಿರ್ದೇಶನದ ಮತ್ತೊಂದು 'ಆಪ್ತಮಿತ್ರ']


Who Plays Raheem In Shiva Rajkumar's 'Shivalinga'

ರಹೀಂ (ಶಕ್ತಿ) ಕೊಲೆ ಕೇಸಿನ ಹಿಂದೆ ಬೀಳುವ ಸಿ.ಐ.ಡಿ ಆಫೀಸರ್ ಶಿವರಾಜ್ ಕುಮಾರ್ ಅವರ ಪತ್ನಿ ವೇದಿಕಾ ಅವರ ಮೈಮೇಲೆ ರಹೀಂನ ದೆವ್ವ ಮೆಟ್ಟಿಕೊಳ್ಳುತ್ತದೆ. ಯಾಕೆ ರಹೀಂ, ವೇದಿಕಾ ಮೈಮೇಲೆ ಹೊಕ್ಕುತ್ತಾನೆ. ಕಾರಣ ಏನು ಎಂಬುದನ್ನು ಖುದ್ದು ನೀವೇ ಥಿಯೇಟರ್ ನಲ್ಲಿ ನೋಡಬೇಕು.[ಶಿವಣ್ಣನ 'ಶಿವಲಿಂಗ' ಏಕೆ ನೋಡಬೇಕು ಇಲ್ಲಿದೆ ಟಾಪ್ 5 ಕಾರಣಗಳು]


Who Plays Raheem In Shiva Rajkumar's 'Shivalinga'

ಇಡೀ ಸಿನಿಮಾದಲ್ಲಿ ಕೇಂದ್ರ ಬಿಂದುವೇ ನಟ ಶಕ್ತಿ ಅವರು. ಅವರ ಕೊಲೆಯ ಸುತ್ತ ನಡೆಯುವ ಕಥೆ. ಒಟ್ನಲ್ಲಿ ಸಸ್ಪೆನ್ಸ್-ಥ್ರಿಲ್ಲರ್ ಕಥೆಯಾಧರಿತ 'ಶಿವಲಿಂಗ' ಚಿತ್ರವನ್ನು ನೋಡಿ ಪ್ರೇಕ್ಷಕರು ಥ್ರಿಲ್ಲಾಗಿದ್ದಂತೂ ಸತ್ಯ.

English summary
Kannada Movie 'Shivalinga' gathers an amazing response from audiences. Directed by P Vasu. Apart from the Hatrick Hero, Shivalinga includes three other important characters. Firstly, Sakti, son of director P Vasu plays Raheem (ghost) in the movie and the actor needs huge appreciation. The elder son of P Vasu, has delivered eye-catching performance in his Kannada debut, Shivalinga.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada