'ಬಿಲ್ಲ ರಂಗ ಬಾಷಾ' ಚಿತ್ರದಲ್ಲಿ ಸುದೀಪ್ ಗೆ ನಾಯಕಿ ಆಗುವ ಅವಕಾಶ ಯಾರಿಗೆ?
ಕಿಚ್ಚ ಸುದೀಪ್ ಮತ್ತು ಅನೂಪ್ ಭಂಡಾರಿ ಕಾಂಬಿನೇಷನ್ ನಲ್ಲಿ ಸೆಟ್ಟೇರಲಿರುವ 'ಬಿಲ್ಲ ರಂಗ ಬಾಷಾ' ಸಿನಿಮಾ ಸೌತ್ ಇಂಡಸ್ಟ್ರಿಯಲ್ಲಿ ಬಹುದೊಡ್ಡ ಹೈಪ್ ಕ್ರಿಯೆಟ್ ಮಾಡಿದೆ. ಟೈಟಲ್ ಪೋಸ್ಟರ್ ರಿಲೀಸ್ ಮಾಡಿರುವ ಚಿತ್ರತಂಡ, ಬಜೆಟ್ ವಿಚಾರದಲ್ಲಿ ಈಗ ಎಲ್ಲ ಹುಬ್ಬೇರಿಸುವಂತೆ ಮಾಡಿದೆ.
'ಬಿಲ್ಲ ರಂಗ ಬಾಷಾ' ಅಂತ ಹೆಸರು ನೋಡಿದ್ಮೇಲೆ ಬಹುಶಃ ಈ ಚಿತ್ರದಲ್ಲಿ ಸುದೀಪ್ ತ್ರಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರಬಹುದು ಅಥವಾ ಒಬ್ಬರೇ ತ್ರಿಬಲ್ ಶೇಡ್ ನಲ್ಲಿ ಅಭಿನಯಿಸುತ್ತಿರಬಹುದು ಎಂಬ ಲೆಕ್ಕಾಚಾರ ನಡೆಯುತ್ತಿದೆ.

ಈ ಮಧ್ಯೆ 'ಬಿಲ್ಲ ರಂಗ ಬಾಷಾ' ಚಿತ್ರಕ್ಕೆ ನಾಯಕಿ ಯಾರಾಗಬಹುದು ಎಂಬುದು ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ. ಈ ಚಿತ್ರಕ್ಕೆ ನಾಯಕಿ ಒಬ್ಬರಾ, ಇಬ್ಬರಾ ಅಥವಾ ಮೂವರಾ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಈ ಬಗ್ಗೆ ನಿರ್ದೇಶಕ ಅನೂಪ್ ಭಂಡಾರಿ ಮಾತನಾಡಿದ್ದು, ''ಸದ್ಯಕ್ಕೆ ಸ್ಕ್ರಿಪ್ಟ್ ಆಗಿದೆ. ಪಾತ್ರಗಳ ಮೇಲೆ ಕೆಲಸ ಮಾಡಿದ್ದೀವಿ. ಯಾರು ನಾಯಕಿ ಎಂದು ನಾವು ಅಂತಿಮ ಮಾಡಿಲ್ಲ. ನಮ್ಮ ತಲೆಯಲ್ಲಿ ಸದ್ಯದವರೆಗೂ ಯಾರೂ ಇಲ್ಲ. ಕಾದುನೋಡೋಣ'' ಎಂದಿದ್ದಾರೆ.
ಇನ್ನೊಂದೆಡೆ ಪೈಲ್ವಾನ್ ಸಿನಿಮಾ ಮುಗಿಸಿ ಕೋಟಿಗೊಬ್ಬ 3 ಚಿತ್ರೀಕರಣ ಮಾಡ್ತಿರುವ ಸುದೀಪ್, ದಬಾಂಗ್ 3 ಚಿತ್ರದಲ್ಲಿ ನಟಿಸಬೇಕಿದೆ. ಇದಾದ ಬಳಿಕ ಬಿಲ್ಲ ರಂಗ ಬಾಷಾ ಸಿನಿಮಾ ಆರಂಭವಾಗಬಹುದು.


Click it and Unblock the Notifications











