'ಜೇಮ್ಸ್' ನಾಯಕಿಗಾಗಿ ಕನ್ನಡ-ಪರಭಾಷಿಗರ ನಡುವೆ ಫೈಟ್! ನಿಮ್ಮ ಆಯ್ಕೆ ಯಾರು?
Recommended Video
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಬಹುದ್ದೂರ್ ಚೇತನ್ ಕುಮಾರ್ ಕಾಂಬಿನೇಷನ್ ನಲ್ಲಿ ಸೆಟ್ಟೇರಿರುವ ಜೇಮ್ಸ್ ಚಿತ್ರ ಭಾರಿ ಕುತೂಹಲ ಮೂಡಿಸಿದೆ. ಬಹಳ ದಿನದಿಂದ ಈ ಚಿತ್ರ ಆರಂಭವಾಗಲಿ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಈಗ ನಿರೀಕ್ಷೆಯಂತೆ ಮುಹೂರ್ತ ಮಾಡಿಕೊಂಡು ಚಿತ್ರಕ್ಕೆ ಚಾಲನೆ ನೀಡಲಾಗಿದೆ.
ಇದೀಗ, ಜೇಮ್ಸ್ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ನಾಯಕಿ ಯಾರಾಗಬಹುದು ಎಂಬ ವಿಷಯದ ಮೇಲೆ ದೊಡ್ಡ ಚರ್ಚೆ ನಡೆಯುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಕನ್ನಡದ ಮೂವರು ಮತ್ತು ತೆಲುಗಿನ ಇಬ್ಬರು ನಟಿಯರ ಜೊತೆ ನಿರ್ದೇಶಕರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಹಾಗಿದ್ರೆ, ಈ ಐವರ ಪೈಕಿ ಜೇಮ್ಸ್ ಚಿತ್ರಕ್ಕೆ ನಾಯಕಿ ಯಾರಾಗಬಹುದು? ಕನ್ನಡದ ಆ ಮೂರು ನಟಿಯರು ಯಾರು? ತೆಲುಗಿನ ಆ ಇಬ್ಬರು ನಟಿಯರು ಯಾರು? ಮುಂದೆ ಓದಿ....

ಪೂಜಾ ಹೆಗ್ಡೆ ಹೆಸರು!
ಮೂಲತಃ ಕರ್ನಾಟಕದವರಾದರೂ ತೆಲುಗು ಇಂಡಸ್ಟ್ರಿಯಲ್ಲಿ ಹೆಚ್ಚು ಸಕ್ಸಸ್ ಕಂಡಿರುವ ನಟಿ ಪೂಜಾ ಹೆಗ್ಡೆಯನ್ನು ಕನ್ನಡಕ್ಕೆ ಕರೆತರಲು ಮುಂದಾಗಿದ್ದಾರಂತೆ. ಅಲ್ಲು ಅರ್ಜುನ್ ನಟನೆಯ ಅಲಾ ವೈಕುಂಠಪುರಂಲೋ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಸದ್ಯ ಟಾಲಿವುಡ್ ಬಹುಬೇಡಿಕೆಯ ನಟಿ ಪೂಜಾ ಹೆಗ್ಡೆ. ಕರ್ನಾಟಕದ ಈ ಬೆಡಗಿ ಜೇಮ್ಸ್ ಗೆ ಸಾಥ್ ಕೊಡ್ತಾರಾ?

ನಿಧಿ ಅಗರ್ವಾಲ್!
ಮಿಸ್ಟರ್ ಮಜ್ನೂ, ಇಸ್ಮಾರ್ಟ್ ಶಂಕರ್ ಸಿನಿಮಾಗಳಲ್ಲಿ ನಟಿಸಿದ್ದ ನಿಧಿ ಅಗರ್ ವಾಲ್ ಅವರು ಹೆಸರು ಕೂಡ ಕೇಳಿ ಬರುತ್ತಿದೆ. ಜೇಮ್ಸ್ ಚಿತ್ರಕ್ಕೆ ನಾಯಕಿಯನ್ನಾಗಿಸಲು ನಿಧಿ ಜೊತೆಯಲ್ಲೂ ನಿರ್ದೇಶಕರ ತಂಡ ಮಾತನಾಡಿದೆ ಎಂದು ಫಿಲ್ಮಿಬೀಟ್ ಗೆ ಮಾಹಿತಿ ಲಭ್ಯವಾಗಿದೆ. ಆದರೆ, ಇನ್ನೂ ಅಂತಿಮವಾಗಿಲ್ಲ.

ಕನ್ನಡ ನಟಿಯರ ಬಳಿಯೂ ಚರ್ಚೆ
ಪೂಜಾ ಹೆಗ್ಡೆ ಮತ್ತು ನಿಧಿ ಅಗರ್ ವಾಲ್ ಅವರನ್ನು ಮಾತ್ರವಲ್ಲ, ಕನ್ನಡದ ಮೂವರು ನಟಿಯರ ಜೊತೆಯೂ ಜೇಮ್ಸ್ ಸಿನಿಮಾಗೆ ಸಂಬಂಧಪಟ್ಟಂತೆ ಚರ್ಚಿಸಲಾಗಿದೆಯಂತೆ. ಈ ಹಿಂದೆ ಪುನೀತ್ ಜೊತೆ ಅಂಜನಿಪುತ್ರ ಸಿನಿಮಾ ಮಾಡಿದ್ದ ರಶ್ಮಿಕಾ ಮಂದಣ್ಣ ಅವರ ಹೆಸರು ಕೂಡ ಜೇಮ್ಸ್ ನಾಯಕಿ ಪಟ್ಟಿಯಲ್ಲಿದೆ.

ಶ್ರೀಲೀಲಾ ಅದೃಷ್ಟ ಕೈಹಿಡಿಯುತ್ತಾ?
ಇನ್ನು ಕನ್ನಡದಲ್ಲಿ ಕಿಸ್ ಮತ್ತು ಭರಾಟೆ ಚಿತ್ರಗಳಲ್ಲಿ ನಟಿಸಿದ್ದ ಯುವ ನಟಿ ಶ್ರೀಲೀಲಾ ಹೆಸರು ಕೂಡ ಜೇಮ್ಸ್ ನಾಯಕಿಯರ ಪಟ್ಟಿಯಲ್ಲಿದೆ ಎಂಬ ವಿಷಯ ಬಹಿರಂಗವಾಗಿದೆ. ಬಹುಶಃ ಶ್ರೀಲೀಲಾಗೆ ಈ ಸಿನಿಮಾ ಸಿಕ್ಕರೆ ಅದೃಷ್ಟ ಕೈಹಿಡಿಯಬಹುದು.

ನಭಾ ನಟೇಶ್ ಸರ್ಪ್ರೈಸ್!
ವಜ್ರಕಾಯ ಸಿನಿಮಾ ಬಳಿಕ ಟಾಲಿವುಡ್ ಗೆ ಜಿಗಿದ ನಭಾ ನಟೇಶ್ ಈಗ ಅಲ್ಲಿ ಸಕ್ಸಸ್ ಫುಲ್ ನಾಯಕಿಯಾಗಿದ್ದಾರೆ. ಇತ್ತೀಚಿಗಷ್ಟೆ ಇಸ್ಮಾರ್ಟ್ ಶಂಕರ್ ಚಿತ್ರದಲ್ಲಿ ನಟಿಸಿದ್ದ ನಭಾ ನಟೇಶ್ ಗಮನ ಸೆಳೆದಿದ್ದರು. ಜೇಮ್ಸ್ ಚಿತ್ರಕ್ಕಾಗಿ ನಭಾ ಅವರನ್ನು ಕೂಡ ಸಂಪರ್ಕಿಸಲಾಗಿದೆಯಂತೆ. ಇಷ್ಟೆಲ್ಲಾ ನಟಿಯರನ್ನು ಸಂಪರ್ಕಿಸಿರುವುದನ್ನು ಗಮಿಸಿದರೆ ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಬಹುದು ಎಂಬ ಕುತೂಹಲ ಕಾಡುತ್ತಿದೆ. ಜೊತೆ ಪುನೀತ್ ಹೊಸ ಚಿತ್ರದಲ್ಲಿ ನಾಯಕಿಯಾಗಿ ಕನ್ನಡದವರೇ ಇರ್ತಾರಾ ಅಥವಾ ಪರಭಾಷೆ ತಾರೆಯರು ಬರ್ತಾರಾ ಎಂಬುದು ಕಾದುನೋಡಬೇಕಿದೆ.


Click it and Unblock the Notifications











