For Quick Alerts
  ALLOW NOTIFICATIONS  
  For Daily Alerts

  ಇಶಾನ್ ಎರಡನೇ ಚಿತ್ರದ ನಿರ್ದೇಶಕರು ಯಾರು?

  |

  ನಟ ಇಶಾನ್ 'ರೋಗ್' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಈ ಸಿನಿಮಾದ ನಂತರ ಈಗ ಅವರು ತಮ್ಮ ಎರಡನೇ ಸಿನಿಮಾಗೆ ಸಿದ್ಧರಾಗುತ್ತಿದ್ದಾರೆ.

  ಅಂದಹಾಗೆ, ಈ ಸಿನಿಮಾವನ್ನು ಸಹ ಅವರ ಸಹೋದರ ಸಿ ಆರ್ ಮನೋಹರ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ. 'ದಿ ವಿಲನ್' ನಂತರ ಮನೋಹರ್ ಈಗ ಮತ್ತೆ ತಮ್ಮನ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ.

  ಗಾಂಧಿನಗರದಲ್ಲಿ ಒಂದು ಸುತ್ತು : ಈ ದಿನದ ಟಾಪ್ 5 ಸುದ್ದಿಗಳು

  ಅಂದಹಾಗೆ, ಈಗ ಈ ಸಿನಿಮಾದ ನಿರ್ದೇಶಕರು ಯಾರು ಎಂಬ ಕುತೂಹಲ ಸೃಷ್ಟಿಯಾಗಿದೆ. ನಿರ್ದೇಶಕ ಪವನ್ ಒಡೆಯರ್ ಹಾಗೂ ಎ ಹರ್ಷ ಅವರ ಕಥೆ ಚರ್ಚೆಯ ಹಂತದಲ್ಲಿ ಇವೆಯಂತೆ. ಈ ಇಬ್ಬರು ನಿರ್ದೇಶಕರಲ್ಲಿ ಒಬ್ಬರು ಇಶಾನ್ ಗೆ ಆಕ್ಷನ್ ಕಟ್ ಹೇಳಲಿದ್ದಾರೆ.

  ಇನ್ನು ಈ ಸಿನಿಮಾ ಕನ್ನಡ ಹಾಗು ತೆಲುಗು ಎರಡು ಭಾಷೆಗಳಲ್ಲಿ ಬಿಡುಗಡೆಯಾಗಲಿದೆಯಂತೆ. ಸದ್ಯ, ನಿರ್ದೇಶಕ ಪವನ್ ಒಡೆಯರ್ 'ನಟ ಸಾರ್ವಭೌಮ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ, ಇತ್ತ ಎ ಹರ್ಷ ಕೂಡ ಸೀತಾರಾಮ ಕಲ್ಯಾಣ' ಚಿತ್ರದ ಕೆಲಸದಲ್ಲಿ ತೊಡಗಿದ್ದಾರೆ.

  English summary
  Pawan Wadeyar or A Harsha who will direct kannada actor Ishan's 2nd movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X