'ಲಕ್ಕಿ ಮ್ಯಾನ್' ಸಿನಿಮಾದಲ್ಲಿ ಅಪ್ಪು ಪಾತ್ರಕ್ಕೆ ದನಿ ನೀಡೋದ್ಯಾರು?

ಪುನೀತ್ ರಾಜ್‌ಕುಮಾರ್ ನಟನೆಯ ಮೂರು ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಆದರೆ ಮೂರು ಸಿನಿಮಾಗಳ ಚಿತ್ರೀಕರಣ ಪೂರ್ಣವಾಗುವ ಮೊದಲೇ ಅಪ್ಪು ನಿಧನ ಹೊಂದಿದರು.

ಅಪ್ಪು ಮುಖ್ಯ ಪಾತ್ರದಲ್ಲಿ ನಟಿಸಿದ್ದ 'ಜೇಮ್ಸ್', ಅತಿಥಿ ಪಾತ್ರದಲ್ಲಿ ನಟಿಸಿರುವ 'ಲಕ್ಕಿ ಮ್ಯಾನ್' ಹಾಗೂ ಅಪ್ಪು ಅವರ ಕನಸಿನ ಪ್ರಾಜೆಕ್ಟ್ 'ಗಂಧದ ಗುಡಿ' ಸಿನಿಮಾಗಳು ಬಿಡುಗಡೆ ಆಗಲಿಕ್ಕಿವೆ. ಇವುಗಳಲ್ಲಿ 'ಜೇಮ್ಸ್', 'ಲಕ್ಕಿ ಮ್ಯಾನ್' ಸಿನಿಮಾಗಳಿಗೆ ಪುನೀತ್ ರಾಜ್‌ಕುಮಾರ್ ಡಬ್ಬಿಂಗ್ ಮಾಡಿಲ್ಲ. 'ಗಂಧದ ಗುಡಿ' ಸಿನಿಮಾಕ್ಕೆ ಡಬ್ಬಿಂಗ್ ಅವಶ್ಯಕತೆ ಇಲ್ಲ ಎನ್ನಲಾಗುತ್ತಿದೆ.

ಡಾರ್ಲಿಂಗ್ ಕೃಷ್ಣ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಲಕ್ಕಿ ಮ್ಯಾನ್' ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಅವರದ್ದು ಭಿನ್ನವಾದ ಮಾತ್ರ. ಈ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಅವರು ದೇವರ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಚಿತ್ರೀಕರಣ ಪೂರ್ಣವಾಗಿದ್ದು ಡಬ್ಬಿಂಗ್ ಬಾಕಿ ಇದೆ.

Who Will Give Dubbing For Puneeth Rajkumar In Lucky Man Movie

ಪುನೀತ್ ರಾಜ್‌ಕುಮಾರ್‌ ಪಾತ್ರಕ್ಕೆ ಯಾರ ಕೈಲಿ ಡಬ್ಬಿಂಗ್ ಮಾಡಿಸಲಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿರುವ ನಟ ಡಾರ್ಲಿಂಗ್ ಕೃಷ್ಣ, ''ಚಿತ್ರೀಕರಣದ ಸಮಯದಲ್ಲಿ ರೆಕಾರ್ಡ್ ಮಾಡಿಕೊಳ್ಳಲಾದ ಧ್ವನಿಯನ್ನೇ ಬಹುಪಾಲು ಉಳಿಸಿಕೊಳ್ಳಲಾಗುತ್ತದೆ. ಬಹಳ ಅಡಚಣೆ ಇರುವ ಭಾಗಗಳನ್ನಷ್ಟೆ ಕತ್ತರಿಸಿ ಆ ಭಾಗಕ್ಕೆ ಮಿಮಿಕ್ರಿ ಕಲಾವಿದ ಗೋಪಿ ಅವರಿಂದ ಪುನೀತ್ ಧ್ವನಿಯಲ್ಲಿ ಡಬ್ಬಿಂಗ್ ಮಾಡಿಸುತ್ತೇವೆ'' ಎಂದು ಕೃಷ್ಣ ಹೇಳಿದ್ದಾರೆ.

'ಲಕ್ಕಿ ಮ್ಯಾನ್' ಸಿನಿಮಾದಲ್ಲಿ ಪುನೀತ್ ದೇವರ ಪಾತ್ರದಲ್ಲಿ ನಟಿಸಿರುವ ಜೊತೆಗೆ ಮತ್ತೊಂದು ವಿಶೇಷತೆ ಇದೆ. ಈ ಸಿನಿಮಾದಲ್ಲಿ ಭಾರತದ ಮೈಕಲ್ ಜಾಕ್ಸನ್ ಪ್ರಭುದೇವಾ ಹಾಗೂ ಅಪ್ಪು ಇಬ್ಬರೂ ಒಟ್ಟಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ಡ್ಯಾನ್ಸ್ ನೋಡಲು ನಾಡಿನ ಜನತೆ ಕಾತರರಾಗಿದ್ದಾರೆ.

ಪುನೀತ್ ರಾಜ್‌ಕುಮಾರ್ ನಾಯಕ ನಟನಾಗಿ ನಟಿಸಿರುವ ಕೊನೆಯ ಸಿನಿಮಾ 'ಜೇಮ್ಸ್' ಸಿನಿಮಾದ ಅಂತಿಮ ಕೆಲವು ಭಾಗಗಳ ಚಿತ್ರೀಕರಣ ಅಪ್ಪು ಇಲ್ಲದೆ ಸಾಗುತ್ತಿದೆ. ಸಿನಿಮಾವನ್ನು ಮಾರ್ಚ್ 17ರಂದು ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಬಿಡುಗಡೆ ಮಾಡಬೇಕು ಎಂಬುದು ಅಪ್ಪು ಆಸೆಯಾಗಿತ್ತಂತೆ ಹಾಗಾಗಿ ಅಂದೇ ಸಿನಿಮಾ ಬಿಡುಗಡೆ ಮಾಡಲು ಸತತ ಯತ್ನವನ್ನು ಚಿತ್ರತಂಡ ಮಾಡುತ್ತಿದೆ.

ಒಂದೊಮ್ಮೆ 'ಜೇಮ್ಸ್' ಚಿತ್ರತಂಡವು ಮಾರ್ಚ್ 17 ರಂದು ಸಿನಿಮಾ ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲವಾದರೆ ತಮ್ಮ 'ಲಕ್ಕಿ ಮ್ಯಾನ್' ಸಿನಿಮಾವನ್ನು ಅಂದು ಬಿಡುಗಡೆ ಮಾಡಲು ಡಾರ್ಲಿಂಗ್ ಕೃಷ್ಣ ಹಾಗೂ ತಂಡ ರೆಡಿಯಾಗಿದ್ದಾರೆ.

'ಲಕ್ಕಿ ಮ್ಯಾನ್' ಸಿನಿಮಾವು ಭಿನ್ನವಾದ ಕತೆ ಹೊಂದಿರುವ ಸಿನಿಮಾ ಆಗಿದ್ದು, ಸಿನಿಮಾವನ್ನು ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ 'ಮನಸೆಲ್ಲಾ ನೀನೆ' ಕನ್ನಡ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದರು ನಾಗೇಂದ್ರ ಪ್ರಸಾದ್. 'ಲಕ್ಕಿ ಮ್ಯಾನ್' ಸಿನಿಮಾವು ತಮಿಳಿನ 'ಓ ಮೈ ಕಡವುಲೆ' ಸಿನಿಮಾದ ರೀಮೇಕ್ ಎನ್ನಲಾಗುತ್ತಿದೆ.

More from Filmibeat

English summary
Puneeth Rajkumar acted in Darling Krishna's Lucky Man movie. Darling Krishna said we will keep voice of Puneeth Rajkumar which has been recorded while shooting.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X