'ಜೇಮ್ಸ್': ಅಪ್ಪು ಪಾತ್ರಕ್ಕೆ ಯಾರ ಧ್ವನಿ? ನಿರ್ಮಾಪಕರು ಕೊಟ್ಟರು ಸ್ಪಷ್ಟ ಉತ್ತರ

ಪುನೀತ್ ತಮ್ಮ ಭಾಗದ ಬಹುತೇಕ ಚಿತ್ರೀಕರಣವನ್ನು ಮುಗಿಸಿಕೊಟ್ಟಿದ್ದರು. ಒಂದು ಹಾಡಿನ ಚಿತ್ರೀಕರಣವಷ್ಟೆ ಬಾಕಿ ಇತ್ತು. ಆದರೆ ಆ ಹಾಡನ್ನು ಚಿತ್ರತಂಡ ಸಿನಿಮಾದಿಂದ ಕೈ ಬಿಟ್ಟಿದೆ. ಆದರೆ 'ಜೇಮ್ಸ್' ಸಿನಿಮಾದ ಡಬ್ಬಿಂಗ್ ಕಾರ್ಯವನ್ನು ಪುನೀತ್ ಮಾಡಿರಲಿಲ್ಲ.

'ಜೇಮ್ಸ್' ಸಿನಿಮಾಕ್ಕೆ ಯಾರು ಡಬ್ಬಿಂಗ್ ಮಾಡಲಿದ್ದಾರೆ ಎಂಬುದು ಆರಂಭದಿಂದಲೂ ಕುತೂಹಲ ಮೂಡಿಸಿತ್ತು. ಪುನೀತ್ ಸಹೋದರ ಶಿವರಾಜ್ ಕುಮಾರ್ ಅವರು ಪುನೀತ್ ಪಾತ್ರಕ್ಕೆ ಧ್ವನಿ ನೀಡಲಿದ್ದಾರೆ ಎನ್ನಲಾಗಿತ್ತು. ಆದರೆ ಅದು ಸುಳ್ಳಾಯಿತು. ಇದೀಗ 'ಜೇಮ್ಸ್' ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಪಾತ್ರಕ್ಕೆ ಯಾರು ಧ್ವನಿ ನೀಡಲಿದ್ದಾರೆ ಎಂಬುದಕ್ಕೆ ಸಿನಿಮಾದ ನಿರ್ಮಾಪಕರು ಉತ್ತರ ನೀಡಿದ್ದಾರೆ.

ಸಿನಿಮಾದ ನಿರ್ಮಾಪಕ ಕಿಶೋರ್ ಹೇಳಿರುವಂತೆ, ''ಪುನೀತ್ ರಾಜ್‌ಕುಮಾರ್ ಅವರು 'ಜೇಮ್ಸ್' ಸಿನಿಮಾದ 99% ಭಾಗ ಕಾರ್ಯವನ್ನು ಮೊದಲೇ ಮುಗಿಸಿಕೊಟ್ಟಿದ್ದರು. ಒಂದು ಹಾಡಿನ ಚಿತ್ರೀಕರಣವಷ್ಟೆ ಬಾಕಿ ಉಳಿಸಿದ್ದರು. ಆದರೆ ಆ ಹಾಡನ್ನು ನಾವು ಕೈಬಿಟ್ಟಿದ್ದೇವೆ. ಆ ಹಾಡನ್ನು ಕೈಬಿಡುವುದರಿಂದ ಚಿತ್ರಕ್ಕೆ ಹೊಡೆತವೇನೂ ಬೀಳುವುದಿಲ್ಲ'' ಎಂದಿದ್ದಾರೆ.

ಪುನೀತ್ ಧ್ವನಿ ಅನುಕರಿಸಲು ಸಾಧ್ಯವಿಲ್ಲ: ಕಿಶೋರ್

ಪುನೀತ್ ಧ್ವನಿ ಅನುಕರಿಸಲು ಸಾಧ್ಯವಿಲ್ಲ: ಕಿಶೋರ್

''ಪುನೀತ್ ಅವರ ಪಾತ್ರಕ್ಕೆ ಯಾರು ದನಿ ನೀಡಬೇಕು ಎಂಬುದರ ಬಗ್ಗೆ ನಾವು ಸಾಕಷ್ಟು ಚಿಂತನೆ ನಡೆಸಿದೆವು. ಕೆಲವು ಮಿಮಿಕ್ರಿ ಕಲಾವಿದರನ್ನೂ ಸಹ ಪ್ರಯತ್ನಿಸಿದೆವು. ಆದರೆ ಯಾರೂ ಸಹ ಪುನೀತ್ ಧ್ವನಿಯನ್ನು ಅನುಕರಣೆ ಮಾಡಲು ಸಾಧ್ಯವಾಗಲಿಲ್ಲ. ವೇದಿಕೆ ಮೇಲೆ ಎರಡು ಮೂರು ನಿಮಿಷ ಅಪ್ಪು ಧ್ವನಿ ಅನುಕರಣೆ ಮಾಡುವುದು ಸುಲಭ ಆದರೆ 2:30 ಗಂಟೆ ಅಪ್ಪು ರೀತಿಯಲ್ಲಿಯೇ ಮಾತನಾಡುವುದು ಅಸಾಧ್ಯ'' ಎಂದರು ನಿರ್ಮಾಪಕರು ಕಿಶೋರ್.

ಪುನೀತ್ ಧ್ವನಿ ರೆಕಾರ್ಡ್ ಮಾಡಿಕೊಂಡಿದ್ದೇವೆ: ಕಿಶೋರ್

ಪುನೀತ್ ಧ್ವನಿ ರೆಕಾರ್ಡ್ ಮಾಡಿಕೊಂಡಿದ್ದೇವೆ: ಕಿಶೋರ್

''ಹಾಗಾಗಿ ನಾವು 'ಜೇಮ್ಸ್' ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಧ್ವನಿಯನ್ನೇ ಉಳಿಸಿಕೊಳ್ಳಲು ಯತ್ನಿಸುತ್ತಿದ್ದೇವೆ. ಶೂಟಿಂಗ್ ಸಮಯದಲ್ಲಿ ಪುನೀತ್ ಮಾತನಾಡಿದ ಧ್ವನಿಯನ್ನು ರೆಕಾರ್ಡ್ ಮಾಡಿಕೊಂಡಿದ್ದೇವೆ ಅದನ್ನೇ ಸಿನಿಮಾಕ್ಕೂ ಉಳಿಸಿಕೊಳ್ಳುವ ಯತ್ನ ಮಾಡುತ್ತಿದ್ದೇವೆ'' ಎಂದಿದ್ದಾರೆ ಕಿಶೋರ್.

ಪುಣೆ, ಹೈದರಾಬಾದ್, ಮುಂಬೈ ಹಾಗೂ ಲಂಡನ್‌ ಕಳುಹಿಸಲಾಗಿದೆ

ಪುಣೆ, ಹೈದರಾಬಾದ್, ಮುಂಬೈ ಹಾಗೂ ಲಂಡನ್‌ ಕಳುಹಿಸಲಾಗಿದೆ

''ಚಿತ್ರೀಕರಣದ ಸಮಯದಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ ಪುನೀತ್ ರಾಜ್‌ಕುಮಾರ್ ಧ್ವನಿಯನ್ನು ನಾವು ಈಗಾಗಲೇ ಪುಣೆ, ಹೈದರಾಬಾದ್, ಮುಂಬೈ ಹಾಗೂ ಲಂಡನ್‌ಗೆ ಕಳುಹಿಸಿದ್ದೇವೆ. ಅವರು ಅದೇ ಧ್ವನಿಯನ್ನು ಪರೀಷ್ಕರಿಸಿ ಉತ್ತಮಗೊಳಿಸಿ ನೀಡುತ್ತಾರೆ. ಯಾರು ನೀಡುವ ಧ್ವನಿಯ ಗುಣಮಟ್ಟ ಚೆನ್ನಾಗಿರುತ್ತದೆಯೋ ಆ ಧ್ವನಿಯನ್ನು ನಾವು ಉಳಿಸಿಕೊಳ್ಳಲಿದ್ದೇವೆ'' ಎಂದಿದ್ದಾರೆ ಕಿಶೋರ್.

ಚೇತನ್ ಕುಮಾರ್ ನಿರ್ದೇಶನ ಮಾಡಿದ್ದಾರೆ

ಚೇತನ್ ಕುಮಾರ್ ನಿರ್ದೇಶನ ಮಾಡಿದ್ದಾರೆ

ಪುನೀತ್ ರಾಜ್‌ಕುಮಾರ್ ಪೂರ್ಣ ಪ್ರಮಾಣದ ನಾಯಕ ನಟನಾಗಿ ನಟಿಸಿದ ಕೊನೆಯ ಸಿನಿಮಾ 'ಜೇಮ್ಸ್'. ಈ ಸಿನಿಮಾವನ್ನು ಚೇತನ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾವನ್ನು ಕಿಶೋರ್ ಪಾತಿಕೊಂಡ ನಿರ್ಮಾಣ ಮಾಡಿದ್ದಾರೆ. ನಾಯಕಿಯಾಗಿ ಪ್ರಿಯಾ ಆನಂದ್ ನಟಿಸಿದ್ದಾರೆ. ವಿಲನ್ ಪಾತ್ರದಲ್ಲಿ ತೆಲುಗಿನ ಶ್ರೀಕಾಂತ್, ನಟಿ ಅನು ಪ್ರಭಾಕರ್, ನಟ ಅವಿನಾಶ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಸಿನಿಮಾದ ವಿಶೇಷ ಪೋಸ್ಟರ್ ನಾಳೆ (ಜನವರಿ 26) ಬಿಡುಗಡೆ ಆಗಲಿದೆ. ಈ ಸಿನಿಮಾದ ಬಳಿಕ ಪುನೀತ್ ಅತಿಥಿ ಪಾತ್ರದಲ್ಲಿ ನಟಿಸಿದ್ದ 'ಲಕ್ಕಿ ಮ್ಯಾನ್' ಬಿಡುಗಡೆ ಆಗಲಿದೆ. ಬಳಿಕ ಪುನೀತ್ ನಿರ್ಮಾಣ ಮಾಡಿ ತಾವೂ ಸಹ ಭಾಗಿಯಾಗಿದ್ದ ಟ್ರಾವೆಲ್ ಸಿನಿಮಾ 'ಗಂಧದ ಗುಡಿ' ಬಿಡುಗಡೆ ಆಗಲಿದೆ.

More from Filmibeat

English summary
Who will give voice to Puneeth Rajkumar's character in James movie. Producer Kishore said we are trying to keep Puneeth Rajkumar's voice.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X